• Home
  • »
  • News
  • »
  • entertainment
  • »
  • Gandhadagudi: ಗಂಧದಗುಡಿ ರಿಲೀಸ್​ ಸಂಭ್ರಮ, ಥಿಯೇಟರ್​ಗೆ ಆನೆ ಕರೆತಂದ ಫ್ಯಾನ್ಸ್

Gandhadagudi: ಗಂಧದಗುಡಿ ರಿಲೀಸ್​ ಸಂಭ್ರಮ, ಥಿಯೇಟರ್​ಗೆ ಆನೆ ಕರೆತಂದ ಫ್ಯಾನ್ಸ್

ಅಪ್ಪು ಅಭಿನಯದ ಗಂಧದಗುಡಿ

ಅಪ್ಪು ಅಭಿನಯದ ಗಂಧದಗುಡಿ

ತುಮಕೂರಿನ ಜೈ ಭಾರತ್ ಚಿತ್ರಮಂದಿರದಲ್ಲಿ ಶುಭಾರಂಭಕ್ಕೆ ಅಭಿಮಾನಿಗಳು ಆನೆಯನ್ನು ಕರೆತಂದಿದ್ದಾರೆ. ಜೈ ಭಾರತ್ ಚಿತ್ರ ಮಂದಿರ ಆವರಣದಲ್ಲಿ ಆನೆ ಕುಣಿತ ಇದ್ದು ವಿಡಿಯೋ ವೈರಲ್ ಆಗಿದೆ.

  • News18 Kannada
  • Last Updated :
  • Bangalore, India
  • Share this:

ರಾಜ್ಯದೆಲ್ಲೆಡೆ ಅಪ್ಪು (Appu) ಅವರ ಕೊನೆಯ ಸಿನಿಮಾ ಗಂಧದ ಗುಡಿ (Gandhadagudi) ರಿಲೀಸ್ (Release)ಆಗಿದ್ದು ಅಭಿಮಾನಿಗಳ ಸಂಭ್ರ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಪುನೀತ್ ರಾಜ್​ಕುಮಾರ್ ಅಭಿನಯದ ಕೊನೆಯ ಸಿನಿಮಾ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್ ಪುನೀತ ಪರ್ವ (Puneetha Parva) ಅದ್ಧೂರಿಯಾಗಿ ನಡೆದಿತ್ತು. ಇಂದು ಸಿನಿಮಾ ಬಿಡುಗಡೆಯಾಗಿದ್ದು ರಾಜ್ಯದ್ಯಂತ ಅಪ್ಪು ಅಭಿಮಾನಿಗಳು (Appu Fans) ಈ ಸಂದರ್ಭವನ್ನು ಸಂಭ್ರಮಿಸಿದ್ದಾರೆ. ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದ್ದು ವಿದೇಶದಲ್ಲಿಯೂ ಗಂಧದ ಗುಡಿ ಹವಾ ಜೋರಾಗಿದೆ. ರಾಜ್ಯಾದ್ಯಂತ ಥಿಯೇಟರ್​ಗಳಲ್ಲಿ (Theater) ಅವರ ಅಭಿಮಾನಿಗಳು ಕಟೌಟ್​ಗಳನ್ನು ನಿಲ್ಲಿಸಿ ಹಾರ ಹಾಕಿ ಸಂಭ್ರಮಿಸಿದ್ದಾರೆ. ಕೋಲಾರದಲ್ಲಿ  (Kolara) ವಿದ್ಯಾರ್ಥಿಗಳು ಕ್ಲಾಸ್ ಬಂಕ್ ಮಾಡಿ ಸಿನಿಮಾ ನೋಡಿದ್ದಾರೆ. ಅಂತೂ ಸಿನಿಮಾ ಅಬ್ಬರ ಜೋರಾಗಿದೆ.


ತುಮಕೂರಿನಲ್ಲಿ ಗಂಧದ ಗುಡಿ ಸಿನಿಮಾ‌ ಬಿಡುಗಡೆ ಹಿನ್ನೆಲೆ ಜೈ ಭಾರತ್ ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳ ಅಬ್ಬರ ಜೋರಾಗಿದೆ. ಅಪ್ಪು ಕಟೌಟ್ ಗೆ ಹಾರ ತುರಾಯಿ ಹಾಕಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವ ಅಪ್ಪು ಫ್ಯಾನ್ಸ್ ಸಿನಿಮಾ ಬಿಡುಗಡೆಯನ್ನು ಹಬ್ಬದಂತೆ ಆಚರಿಸಿದ್ದಾರೆ.


ಥಿಯೇಟರ್​ಗೆ ಬಂತು ಆನೆ


ತುಮಕೂರಿನ ಜೈ ಭಾರತ್ ಚಿತ್ರಮಂದಿರದಲ್ಲಿ ಶುಭಾರಂಭಕ್ಕೆ ಅಭಿಮಾನಿಗಳು ಆನೆಯನ್ನು ಕರೆತಂದಿದ್ದಾರೆ. ಜೈ ಭಾರತ್ ಚಿತ್ರ ಮಂದಿರ ಆವರಣದಲ್ಲಿ ಆನೆ ಕುಣಿತ ಇದ್ದು ವಿಡಿಯೋ ವೈರಲ್ ಆಗಿದೆ.


ಕೋಲಾರದಲ್ಲಿ ವಿದ್ಯಾರ್ಥಿಗಳ ಕ್ಲಾಸ್ ಬಂಕ್


ಕೋಲಾರದಲ್ಲಿ ವಿದ್ಯಾರ್ಥಿಗಳು ಕ್ಲಾಸ್ ಬಂಕ್ ಮಾಡಿದ್ದು ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ. ಗಂಧದ ಗುಡಿ ಸಿನಿಮಾ ನೋಡಲು ಬಂದ ವಿದ್ಯಾರ್ಥಿಗಳು ಬ್ಯಾಕ್ ಬಚ್ಚಿಡಲು ಪರದಾಡಿದ ಘಟನೆಯೂ ನಡೆದಿದೆ. ಅಂತೂ ಥಿಯೇಟರ್​​ನಲ್ಲಿ ಟಿಕೆಟ್ ಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.


ಇದನ್ನೂ ಓದಿ: Gandhadagudi: ಅಪ್ಪು ಅವರ ಇದೊಂದು ಡೈಲಾಗ್​ ಎಂಥವರ ಕಣ್ಣಲ್ಲೂ ನೀರು ತರಿಸುತ್ತೆ, ಪುನೀತ್ ರಾಜ್​ಕುಮಾರ್​​ 'ವಿಶ್ವಮಾನವ'!


ಕಂಠೀರವ ಸ್ಟುಡಿಯೋ ಬಳಿ ಅಪ್ಪು ಕಟೌಟ್


ಕಂಠೀರವ ಸ್ಟುಡಿಯೋ ಸಮೀಪ ರಸ್ತೆಯುದ್ದಕ್ಕೂ ಅಪ್ಪು ಕಟೌಟ್​​ಗಳನ್ನು ಹಾಕಲಾಗಿದೆ. ಸುಮಾರು 30 ಅಡಿ ಎತ್ತರದ 40 ಕ್ಕೂ ಹೆಚ್ಚು ಕಟೌಟ್​ಗಳನ್ನು ಹಾಕಲಾಗಿದ್ದು ಇದಕ್ಕೆ ಹಾರಗಳನ್ನು ಹಾಕಿ ಅಲಂಕಾರ ಮಾಡಲಾಗಿದೆ. ಈ ಫೋಟೋಗಳು ಕೂಡಾ ವೈರಲ್ ಆಗಿವೆ. ಅಪ್ಪು ಮೃತಪಟ್ಟು ನಾಳೆಗೆ ಒಂದು ವರ್ಷ ಆಗುತ್ತಿದ್ದು ಅವರ ಅಭಿಮಾನಿಗಳು ದೂರದೂರುಗಳಿಂದ ಅಪ್ಪು ಸಮಾಧಿಗೆ ಭೇಟಿ ಕೊಟ್ಟು  ನಮನ ಸಲ್ಲಿಸುತ್ತಿದ್ದಾರೆ.




ವಿದೇಶದಲ್ಲಿ 100 ಸ್ಕ್ರೀನ್​ನಲ್ಲಿ ಸಿನಿಮಾ ಬಿಡುಗಡೆ


ವಿದೇಶದಲ್ಲಿ ಸುಮಾರು 100 ಸ್ಕ್ರೀನ್​ನಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದು ವಿದೇಶದಲ್ಲಿಯೂ ಗಂಧದ ಗುಡಿ ಜವಾ ಜೋರಾಗಿದೆ. ರಾಜ್ಯಾದ್ಯಂತ ಇಂದು ಭರ್ಜರಿಯಾಗಿ ಗಂಧದ ಗುಡಿ ರಿಲೀಸ್ ಆಗುತ್ತಿದ್ದು 200ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಗಂಧದಗುಡಿ ಬಿಡುಗಡೆಯಾಗಿದೆ. 150 ಚಿತ್ರಮಂದಿರಗಳು,50-60 ಮಲ್ಟಿಪ್ಲೆಕ್ಸ್ ಗಳಲ್ಲಿ ಪರಮಾತ್ಮನ ದರ್ಶನವಾಗಿದ್ದು ವಿದೇಶಗಳಲ್ಲಿ ಸುಮಾರು 100 ಸ್ಕ್ರೀನ್ ಗಳಲ್ಲಿ ಗಂಧದಗುಡಿ ಪ್ರದರ್ಶನವಾಗುತ್ತಿದೆ.




ಇದನ್ನೂ ಓದಿ: Gandhadagudi: ತಮ್ಮ ಊಟದ ತಟ್ಟೆಯನ್ನ ತಾವೇ ತೊಳೆಯುತ್ತಿದ್ದ ಅಪ್ಪು! ಇದು ಗಂಧದಗುಡಿಯ ಮಹಾನಾಯಕನ ಸರಳ ಜೀವನ


ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಸಿನಿಮಾ ನೋಡಲಿದ್ದಾರೆ. ಅಣ್ಣಾವ್ರ ಕುಟುಂಬದ ಎಲ್ಲರೂ ನರ್ತಕಿ ಚಿತ್ರಮಂದಿರದಲ್ಲಿ ಗಂಧದಗುಡಿ ವೀಕ್ಷಣೆ ಮಾಡಲಿದ್ದಾರೆ.


ಶಿವ ರಾಜ್​ಕುಮಾರ್ ಅವರು ತಮ್ಮನ ಕೊನೆಯ ಚಿತ್ರವನ್ನು ಇಂದು ಸಂಜೆ ನೋಡಲಿದ್ದಾರೆ. ಒರಾಯನ್ ಮಾಲ್ ನ ಗೋಲ್ಡ್ ಕ್ಲಾಸ್ ನಲ್ಲಿ ಸಿನಿಮಾ ನೋಡಲಿರುವ ಶಿವಣ್ಣ ಸಂಜೆ  6 ಗಂಟೆಗೆ ಸಿನಿಮಾ ವೀಕ್ಷಿಸಲಿದ್ದಾರೆ.

Published by:Divya D
First published: