• Home
  • »
  • News
  • »
  • entertainment
  • »
  • Gandhada Gudi: ಪುನೀತ್ ರಾಜ್​ಕುಮಾರ್ ಕನಸಿನ ಗಂಧದಗುಡಿ ರಿಲೀಸ್, ಅಪ್ಪು ನೋಡಲು ಜನಸಾಗರ!

Gandhada Gudi: ಪುನೀತ್ ರಾಜ್​ಕುಮಾರ್ ಕನಸಿನ ಗಂಧದಗುಡಿ ರಿಲೀಸ್, ಅಪ್ಪು ನೋಡಲು ಜನಸಾಗರ!

ಅಪ್ಪು ನೋಡಲು ಜನಸಾಗರ!

ಅಪ್ಪು ನೋಡಲು ಜನಸಾಗರ!

Gandhada Guri Release: ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಗಂಧದ ಗುಡಿ ವೀಕ್ಷಿಸಲು ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಹೌದು 200ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಗಂಧದಗುಡಿ ಬಿಡುಗಡೆ ಆಗಿದ್ದು, 150 ಚಿತ್ರಮಂದಿರಗಳು,50-60 ಮಲ್ಟಿಪ್ಲೆಕ್ಸ್ ಗಳಲ್ಲಿ ಪರಮಾತ್ಮನ ದರ್ಶನವಾಗಿದೆ. ಅಪ್ಪು ತಮ್ಮ ಕೊನೆಯ ಚಿತ್ರದಲ್ಲಿ ಕನ್ನಡ ನಾಡು, ನುಡಿಯ ಮಹತ್ವ ಸಾರಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Bangalore, India
  • Share this:

ಬೆಂಗಳೂರು(ಅ.28): ಪುನೀತ್ ರಾಜ್​ಕುಮಾರ್ (Puneeth Rajkumar) ನಮ್ಮನ್ನಗಲಿ ಇಂದಿಗೆ ಒಂದು ವರ್ಷ. ಪುನೀತ್ ರಾಜ್ ಕುಮಾರ್ ಕನಸಿನ ಗಂಧದಗುಡಿ (Gandhada Gudi) ರಿಲೀಸ್ ಆಗಿದೆ. ಸ್ಯಾಂಡಲ್​ವುಡ್​ನ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಗಂಧದ ಗುಡಿ ವೀಕ್ಷಿಸಲು ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಹೌದು 200ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಗಂಧದಗುಡಿ ಬಿಡುಗಡೆ ಆಗಿದ್ದು, 150 ಚಿತ್ರಮಂದಿರಗಳು,50-60 ಮಲ್ಟಿಪ್ಲೆಕ್ಸ್ ಗಳಲ್ಲಿ ಪರಮಾತ್ಮನ ದರ್ಶನವಾಗಿದೆ. ಅಪ್ಪು ತಮ್ಮ ಕೊನೆಯ ಚಿತ್ರದಲ್ಲಿ ಕನ್ನಡ ನಾಡು, ನುಡಿಯ ಮಹತ್ವ ಸಾರಿದ್ದಾರೆ.


ಅಪ್ಪು ನಟಿಸಿದ ಕೊನೆಯ ಚಿತ್ರ ಗಂಧದ ಗುಡಿ ಫಸ್ಟ್ ಡೇ ಫಸ್ಟ್ ಶೋ ನೋಡ್ಬೇಕು ಎಂಬ ಧಾವಂತದಲ್ಲಿ ಅಭಿಮಾನಿಗಳು ಥಿಯೇಟರ್ ಮುಂದೆ ಜಮಾಯಿಸುತ್ತಿದ್ದಾರೆ. ಇಂದಿನ ಬಹುತೇಕ ಎಲ್ಲಾ ಟಿಕೆಟ್​ಗಳು ಸೋಲ್ಡ್​ ಆಗಿವೆ. ಈಗಾಗಲೇ ಪ್ರೀಮಿಯರ್ ಶೋಗೆ ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿದ್ದು, ಇದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.


ಇದನ್ನೂ ಓದಿ: Gandhada Gudi: ದೊಡ್ಮನೆ ದೊರೆಗೆ ಕ್ರಿಕೆಟಿಗರ ಅಭಿಮಾನದ ಪ್ರೀತಿ, ಗಂಧದಗುಡಿಗೆ ಟೀಂ ಇಂಡಿಯಾ ಆಟಗಾರರ ಶುಭಹಾರೈಕೆ!


ಚಿತ್ರಮಂದಿರದ ಬಳಿ ನೆರೆದ ಅಪ್ಪು ಫ್ಯಾನ್ಸ್


ಚಿತ್ರಮಂದಿರದ ಬಳಿ ಬಂದಿರುವ ನೂರಾರು ಅಪ್ಪು ಫ್ಯಾನ್ಸ್ ಪಟಾಕಿ ಸಿಡಿಸಿ ಗಂಧದಗುಡಿ ಚಿತ್ರವನ್ನು ವೆಲ್ ಕಮ್ ಮಾಡುತ್ತಿದ್ದಾರೆ. ಅಲ್ಲದೇ ಪರದೆ ಮೇಲೆ ಪುನೀತ್ ರಾಜ್ ಕಂಡು ಶಿಳ್ಳೆ ಹಾಕಿ ಕಣ್ತುಂಬಿದ್ದಾರೆ. ಮತ್ತೊಂದೆಡೆ ಅಪ್ಪು ಕಟ್ಔಟ್ ಅಭಿಮಾನಿಗಳು ಆರತಿಯನ್ನೂ ಬೆಳಗಿದ್ದಾರೆ. ಕಾಯಿ ಒಡೆದು ಅಪ್ಪುಗೆ ಜೈಕಾರ ಹಾಕಿದ್ದಾರೆ.


ಗಂಧದಗುಡಿಗೆ ಪೋಸ್ಟರಿಗೆ ಕ್ಷೀರಾಭಿಷೇಕ


ಬೆಂಗಳೂರಿನ ಪ್ರಸನ್ನ ಥಿಯೇಟರ್ ಮುಂದೆ ಪಟಾಕಿ ಹೊಡೆದು ಸಂಭ್ರಮಿಸಿದ ಅಭಿಮಾನಿಗಳು ಕ್ಯಾಂಡಲ್ ಹಚ್ಚಿ ತಮ್ಮ ನೆಚ್ಚಿನ ನಾಯಕನಿಗೆ ನಮನ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಗಂಧದಗುಡಿಗೆ ಪೋಸ್ಟರಿಗೆ ಕ್ಷೀರಾಭಿಷೇಕ ಮತ್ತು ತೆಂಗಿನ ಕಾಯಿ ಒಡೆದು, ಸಿನಿಮಾ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ.


power star puneeth rajkumar last movie gandhada gudi his fear of snakes and how met king cobra in agumbe full inside story details exclusive
ಗಂಧದ ಗುಡಿ ಪೋಸ್ಟರ್


ಕಂಠೀರವ ಸ್ಟುಡಿಯೋ ಬಳಿ ರಸ್ತೆಯುದ್ದಕ್ಕೂ ಕಟೌಟ್ ಗಳು 


ಇತ್ತ ಕಂಠೀರವ ಸ್ಟುಡಿಯೋ ಬಳಿ ರಸ್ತೆಯುದ್ದಕ್ಕೂ ಪುನೀತ್ ರಾಜ್​ಕುಮಾರ್ ಅವರ 40ಕ್ಕೂ ಅಧಿಕ ಕಟೌಟ್ ಗಳು ರಾರಾಜಿಸುತ್ತಿವೆ. ಒಂದೊಂದು ಕಟೌಟ್ 30 ಅಡಿ ಎತ್ತರವಿದ್ದು, ಎಲ್ಲ ಕಟೌಟ್ ಗೆ ದೊಡ್ಡ ದೊಡ್ಡ ಹೂವಿನ ಹಾರ ಹಾಕಿ ಅಲಂಕರಿಸಲಾಗಿದೆ. ಅಪ್ಪು ಕಟೌಡ್​ಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.


ಇದನ್ನೂ ಓದಿ: Gandhadagudi Review: ಹುಟ್ಟಿದ ಮೇಲೆ ಸಾಯಲೇಬೇಕು, ಸಾಯೋದ್ರೊಳಗೆ ಗಂಧದಗುಡಿ ನೋಡ್ಲೇಬೇಕು! ಪರಮಾತ್ಮನ ಸಾಹಸಕ್ಕೆ ಫ್ಯಾನ್ಸ್ ಫಿದಾ


ನರ್ತಕಿ ಚಿತ್ರಮಂದಿರದಲ್ಲಿ ಗಂಧದಗುಡಿ ವೀಕ್ಷಿಸಲಿರುವ ಅಣ್ಣಾವ್ರ ಕುಟುಂಬ‘


ಬೆಳಗ್ಗೆ 8 ಗಂಟೆಗೆ  ಬೆಂಗಳೂರಿನ ಕೆಜಿ ರಸ್ತೆಯ ನರ್ತಕಿ ಚಿತ್ರ ಮಂದಿರದಲ್ಲಿ ಮೊದಲ ಶೋ ಆರಂಭವಾಗಲಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಸೇರಿದಂತೆ ಅಣ್ಣಾವ್ರ ಕುಟುಂಬದ ಎಲ್ಲರೂ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳೊಡನೆ ಗಂಧದ ಗುಡಿ ವೀಕ್ಷಿಸಲಿದ್ದಾರೆ.

Published by:Precilla Olivia Dias
First published: