• Home
  • »
  • News
  • »
  • entertainment
  • »
  • Puneeth Rajkumar: 'ಗಂಧದ ಗುಡಿ'ಯಲ್ಲಿ ಡ್ಯಾನ್ಸಿಂಗ್ ಕಪ್ಪೆ ಕಂಡು ಅಪ್ಪು ಸಖತ್ ಡೈಲಾಗ್​! ಜನ ಫುಲ್ ಖುಷ್

Puneeth Rajkumar: 'ಗಂಧದ ಗುಡಿ'ಯಲ್ಲಿ ಡ್ಯಾನ್ಸಿಂಗ್ ಕಪ್ಪೆ ಕಂಡು ಅಪ್ಪು ಸಖತ್ ಡೈಲಾಗ್​! ಜನ ಫುಲ್ ಖುಷ್

ಡ್ಯಾನ್ಸಿಂಗ್ ಕಪ್ಪೆ ಕಂಡು ಅಪ್ಪು ಸಖತ್ ಡೈಲಾಗ್

ಡ್ಯಾನ್ಸಿಂಗ್ ಕಪ್ಪೆ ಕಂಡು ಅಪ್ಪು ಸಖತ್ ಡೈಲಾಗ್

ಕರಡಿಗೆ ಕತ್ಲಲ್ಲಿ ಜಾಮೂನು ತಿನಿಸೋಕೆ ಹೋಗಬಾರದು. ಹಗಲಲ್ಲೂ ಆ ಕೆಲಸ ಮಾಡಲೇ ಬಾರದು ಅಂತಲೇ ನಗ್ತಾ ಅಪ್ಪು ಹೇಳಿ ಅಲ್ಲಿಂದ ಮುಂದೆ ಸಾಗುತ್ತಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಪವರ್ ಸ್ಟಾರ್ ಪುನೀತ್ (Puneeth Rajkumar) ರಾಜಕುಮಾರ್ ಅಭಿನಯದ ಗಂಧದ ಗುಡಿ ಸಖತ್ ಆಗಿಯೇ ಓಡ್ತಿದೆ. ಮೊದಲ ದಿನವೇ ಚಿತ್ರಕ್ಕೆ ಭಾರೀ (Response) ರೆಸ್ಪಾನ್ಸ್ ಬಂದಿದೆ. ಪ್ರೇಕ್ಷಕರು ಗಂಧದ (Gandhada Gudi) ಗುಡಿಯನ್ನ ಕಂಡು ತಮ್ಮದೇ ರೀತಿಯಲ್ಲಿಯೇ ಬಣ್ಣಿಸುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ಕೊನೆ ಸಿನಿಮಾ ಅನ್ನೋ ಭಾವನಾತ್ಮಕ (Emotional Connection) ಕನೆಕ್ಷನ್ ಕೂಡ ಅಪ್ಪು ಫ್ಯಾನ್ಸ್​ಗೆ ಇದೆ. ಅಷ್ಟೇ ಯಾಕೆ? ಪ್ರೇಕ್ಷಕರು ಅಪ್ಪು ಅಭಿನಯದ ಈ ಕಟ್ಟ ಕಡೆಯ ಚಿತ್ರವನ್ನ ವೀಕ್ಷಿಸಿ ಭಾವುಕರಾಗಿದ್ದಾರೆ. ಅಪ್ಪು ನೈಜ ಬದುಕಿನ ಚಿತ್ರಣವೇ ಆಗಿರೋ ಗಂಧದ ಗುಡಿ ಪ್ರೇಕ್ಷಕರ ಮನದಲ್ಲಿ ನೆನಪಿನ ಅದ್ಭುತ ಗುಡಿಯನ್ನೆ ಕಟ್ಟುತ್ತಿದೆ. ಇಂತಹ ಈ ಚಿತ್ರದಲ್ಲಿ ಜರ್ನಿಯುದ್ದಕ್ಕೂ ಅಪ್ಪು ಹಾಸ್ಯ ಚಟಾಕಿಗಳನ್ನೂ ಹಾರಿಸುತ್ತಾರೆ. ಆಗ ಪ್ರೇಕ್ಷಕರು ಫುಲ್ ಖುಷ್ ಆಗ್ತಾರೆ. ಅದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.


ಗಂಧದ ಗುಡಿ ಸಿನಿಮಾ ಅಲ್ಲ ಅಪ್ಪು ನೈಜ ಜರ್ನಿ
ಗಂಧದ ಗುಡಿ ಒಂದು ಸಿನಿಮಾ ಅಲ್ಲ. ಈ ರೀತಿಯ ಶೈಲಿಯ ಚಿತ್ರವೂ ಕನ್ನಡದಲ್ಲಿ ಬಂದಿಯೇ ಇಲ್ಲ. ಕನ್ನಡ ಚಿತ್ರರಂಗಕ್ಕೇನೆ ಇದು ಹೊಸ ಪ್ರಯೋಗವೇ ಆಗಿದೆ.
ಈ ಪ್ರಯೋಗದಲ್ಲಿ ನೈಜ ಜೀವನದ ಚಿತ್ರಣವೇ ಇದೆ.


ಒಂದೊಮ್ಮೆ ನಾವೆಲ್ಲ ಟ್ರೆಕ್ಕಿಂಗ್ ಹೋದ್ರೆ, ಆಗುವ ಅನುಭವವೇ ಇಲ್ಲಿ ಸಿನಿಮಾ ರೂಪದಲ್ಲಿ ಬಂದಿದೆ. ಅದನ್ನ ಅಪ್ಪು ಅನುಭವಿಸಿದ್ದಾರೆ. ಖುಷಿ ಪಟ್ಟಿದ್ದಾರೆ. ಕ್ಷಣ ಕ್ಷಣಕ್ಕೂ ಸಂತೋಷ ಪಟ್ಟಿದ್ದಾರೆ. ಕಾಡಿನ ಕೌತುಕಗಳನ್ನ ಕಂಡು ಚಕಿತಗೊಂಡಿದ್ದಾರೆ.


ಅಪ್ಪು ಗಂಧದ ಗುಡಿಯಲ್ಲಿ ನೈಜ ಜೀವನದ ಚಿತ್ರಣ
ಅಪ್ಪು ಬದುಕಿದ್ದೇ ಹಾಗೆ, ಆಫ್ ದಿ ರೆಕಾರ್ಡ್ ಇದ್ದದ್ದೂ ಹಾಗೇ ಅಲ್ವೇ. ಅದುವೇ ಗಂಧದ ಗುಡಿಯಲ್ಲಿ ಚಿತ್ರಣಗೊಂಡಿದೆ. ಆದರೆ ಈ ಒಂದು ಜರ್ನಿಯಲ್ಲಿ ಮಾತುಗಳಿವೆ. ಡೈರೆಕ್ಟರ್ ಅಮೋಘವರ್ಷ ಮತ್ತು ಅಪ್ಪು ಮಾತನಾಡುತ್ತಲೇ ಇರ್ತಾರೆ.


Gandhada Gudi Film is Real Journey of Power Star Puneeth Rajkumar
ಮಾತಿನಲ್ಲಿ ಮಾಹಿತಿ-ಅಪ್ಪು ಹಾಸ್ಯದ ಚಟಾಕಿ


ಮಾತಿನಲ್ಲಿ ಮಾಹಿತಿ-ಅಪ್ಪು ಹಾಸ್ಯದ ಚಟಾಕಿ
ಗಂಧದ ಗುಡಿಯಲ್ಲಿ ಅಪ್ಪು ಜರ್ನಿ ದೊಡ್ಡದಿದೆ. ನಾಗರಹೊಳೆಯಿಂದ ಹಿಡಿದು ದಾಂಡೇಲಿಯ ಕಾಳಿನದಿ ಉಮಗಸ್ಥಾನದವರೆಗೂ ಈ ಪಯಣ ಸಾಗುತ್ತದೆ. ಈ ಪಯಣದಲ್ಲಿ ಎಲ್ಲವೂ ಬಂದು ಹೋಗುತ್ತವೆ. ಆಗಲೇ ಅಪ್ಪು ಹಾಸ್ಯದ ಚಟಾಕಿಯನ್ನೂ ಹಾರಿಸುತ್ತಾರೆ.


ಡ್ಯಾನ್ಸಿಂಗ್ ಕಪ್ಪೆ ಕಂಡು ಅಪ್ಪು ಸಖತ್ ಡೈಲಾಗ್
ಮಲೆನಾಡಿನ ಕಾಡುಗಳಲ್ಲಿ ವಿಶೇಷ ಕಪ್ಪೆಗಳು ಇವೆ. ಈ ಕಪ್ಪೆಗಳ ಜೀವನ ವಿಶೇಷವಾಗಿಯೇ ಇದೆ. ಇದರ ಬಗ್ಗೆ ಹೇಳಲು ವೈಲ್ಡ್ ಲೈಫ್ ಫೋಟೋಗ್ರಾಫರ್, ಅಮೋಘವರ್ಷ ಪುನೀತ್ ರನ್ನ ಕರೆದುಕೊಂಡು ಬರ್ತಾರೆ.


ಬನ್ನಿ, ಇಲ್ಲಿ ನೋಡಿ ಕಪ್ಪೆಯನ್ನ ಅಂತಲೇ ಹೇಳ್ತಾರೆ. ಆಗ ಅಪ್ಪು ಏನ್ರಿ ನೀವು ಕಪ್ಪೆ ನೋಡಲು ಅಲ್ಲಿಂದ ಇಲ್ಲಿವರೆಗೂ ಕರೆದುಕೊಂಡು ಬಂದ್ರಾ ಅಂತಲೇ ಹೇಳ್ತಾರೆ.
ಆಗ ಅಮೋಘವರ್ಷ ಈ ಕಪ್ಪೆ ಬಗ್ಗೆ ಹೇಳ್ತಾ ಹೋಗ್ತಾರೆ. ಈ ಕಪ್ಪೆ ಡ್ಯಾನ್ಸ್ ಮಾಡುತ್ತದೆ ಅಂತಲೇ ಹೇಳ್ತಾರೆ. ಆಗ ಪುನೀತ್ ನಾವೇನೋ ಹೊಟ್ಟೆ ಪಾಡಿಗಾಗಿ ಡ್ಯಾನ್ಸ್ ಮಾಡ್ತಿವೀ. ಇದ್ಯಾಕೆ ಡ್ಯಾನ್ಸ್ ಮಾಡುತ್ತದೆ ಅಂತಲೂ ಕೇಳಿಯೇ ಬಿಡ್ತಾರೆ.


ಇದನ್ನೂ ಓದಿ: Ramachari: ಕಣ್ಣೀರಿನ ಮೂಲಕ ಬದುಕಿರುವ ಸೂಚನೆ ಕೊಟ್ಟ ಚಾರು, ರಾಮಾಚಾರಿ ಚಡಪಡಿಕೆ!


ಈ ಕಪ್ಪೆ ಹೆಣ್ಣು ಕಪ್ಪೆಯನ್ನ ಆಕರ್ಷಿಸಲು ಡ್ಯಾನ್ಸ್ ಮಾಡುತ್ತದೆ ಅಂತಲೇ ಹೇಳ್ತಾರೆ. ಆಗ ಪುನೀತ್ ನಿಜ ಬಿಡಿ, ಹೆಣ್ಣಿಗಾಗಿ ಎಲ್ಲರೂ ಡ್ಯಾನ್ಸ್ ಮಾಡಲೇಬೇಕು ಅಲ್ವೇ? ಅಂತಲೇ ಅಪ್ಪು ಹೇಳಿ ಅಲ್ಲಿಂದ ಹೊರಡ್ತಾರೆ. ಆಗ ಥಿಯೇಟರ್​ನಲ್ಲಿ ಕುಳಿತವ್ರ ಮೊಗದಲ್ಲಿ ಒಂದು ಮಂದಹಾಸ ಮೂಡುತ್ತದೆ.


ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಹೋಗ್ಬಾರ್ದು
ಪರಮಾತ್ಮ ಸಿನಿಮಾದಲ್ಲಿ ಅಪ್ಪು ಈ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆದರೆ ಇದೇ ಅಪ್ಪು ನಿಜವಾದ ಕರಡಿಯನ್ನ ನೋಡಿದಾಗ, ಅದರ ಬಳಿಗೆ ಹೋಗುವ ತವಕದಲ್ಲೂ ಇದ್ದರು.


ಆಗಲೇ ಅಮೋಘವರ್ಷ ಕರಡಿಯ ನೇಚರ್ ಬಗ್ಗೆ ಹೇಳ್ತಾರೆ. ಕರಡಿಯನ್ನ ದೂರದಿಂದಲೇ ನೋಡಬೇಕು. ಹೊರತು ಅದರ ಬಳಿಗೆ ಹೋಗಲೇ ಬಾರದು.
ಕಾರಣ, ಕರಡಿ ಅಟ್ಯಾಕ್ ಮಾಡುತ್ತದೆ. ಅದಕ್ಕೇನೆ ಉತ್ತರ ಕರ್ನಾಟಕದ ಈ ಗುಡ್ಡಗಾಡಿನ ಕರಡಿ ಅಟ್ಯಾಕ್ ಜಾಸ್ತಿನೆ ಅಂತಲೇ ಅಮೋಘವರ್ಷ ಹೇಳ್ತಾರೆ.


ಆಗಲೇ ಅಪ್ಪು ರಿಯ್ಯಾಕ್ಟ್ ಮಾಡುತ್ತಾರೆ. ಕರಡಿಗೆ ಕತ್ಲಲ್ಲಿ ಜಾಮೂನು ತಿನಿಸೋಕೆ ಹೋಗಬಾರದು. ಹಗಲಲ್ಲೂ ಆ ಕೆಲಸ ಮಾಡಲೇ ಬಾರದು ಅಂತಲೇ ನಗ್ತಾ ಅಪ್ಪು ಹೇಳಿ ಅಲ್ಲಿಂದ ಮುಂದೆ ಸಾಗುತ್ತಾರೆ.


Gandhada Gudi Film is Real Journey of Power Star Puneeth Rajkumar
ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಹೋಗ್ಬಾರ್ದು


ಪುನೀತ್ ತಮ್ಮ ಈ ನೈಜ ಜರ್ನಿಯಲ್ಲಿ ಇಂತಹ ಅನೇಕ ಮಾತುಗಳನ್ನ ಆಡ್ತಾರೆ. ಆದರೆ ಇದು ಯಾವುದೂ ಸ್ಕ್ರಿಪ್ಟೆಡ್ ಅಲ್ಲವೇ ಅಲ್ಲ. ಎಲ್ಲವೂ ನಾಚ್ಯೂರಲ್​ ಆಗಿಯೇ ಇದೆ.


ಅಪ್ಪು ಮನೆಯಲ್ಲಿ, ಸ್ನೇಹಿತರ ಜೊತೆಗೆ ಹೇಗೆ ಇರುತ್ತಿದ್ದರೋ ಅದೇ ರೀತಿ ಗಂಧದ ಗುಡಿ ಟೈಮ್ ನಲ್ಲಿ ಇದ್ದರು. ಅದುವೇ ಈಗ ಸಿನಿಮಾ ಆಗಿದೆ ಅಷ್ಟೆ.


ಗಂಧದ ಗುಡಿ ಸಿನಿಮಾ ನೋಡಿದ ಅನೇಕರು ಅಪ್ಪು ನೈಜ ಜೀವನವನ್ನ ಕಂಡು ಖುಷಿ ಪಟ್ಟಿದ್ದಾರೆ. ಇತರರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯುವರಾಜ ಕುಮಾರ್ ಹೀಗೆ ಹೇಳಿದ್ದಾರೆ.


ಇದನ್ನೂ ಓದಿ: Matte Mayamruga: ಹಳೆ-ಹೊಸ ಕಲಾವಿದರ ಸಂಗಮ, ಶುರುವಾಗಲಿದೆ ಮತ್ತೆ ಮಾಯಾಮೃಗದ ಹಂಗಾಮ


ನಮ್ಮ ಚಿಕ್ಕಪ್ಪ ಮನೆಯಲ್ಲಿ ಹೇಗೆ ಇರುತ್ತಿದ್ದರೋ ಅದೇ ರೀತಿನೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಇದ್ದದ್ದೇ ಹಾಗೆ ಎಂದು ಸಿನಿಮಾ ನೋಡಿದ ಬಳಿಕ ಯುವ ರಾಜಕುಮಾರ್ ರಿಯಾಕ್ಟ್ ಮಾಡಿದ್ದಾರೆ.


ಒಟ್ಟಾರೆ, ಗಂಧದ ಗುಡಿ ಸಿನಿಮಾ ಪ್ರೇಕ್ಷಕರಲ್ಲಿ ನಿಜವಾದ ಅಪ್ಪು ಜೀವನವನ್ನ ಕಟ್ಟಿಕೊಟ್ಟಿದೆ. ಪ್ರೇಕ್ಷಕರು ಅಭಿಮಾನಿಗಳು ಅದನ್ನ ಕಂಡು ಮನಸಾರೆ ಹೊಗಳಿದ್ದಾರೆ. ಭಾವುಕರಾಗಿಯೂ ಹೊರಗೆ ನಡೆದಿದ್ದಾರೆ.

First published: