Video: ಅಕ್ಟೋಬರ್​ 18ರಂದು ತೆರೆಗೆ ಬರಲಿದೆ ಬಹು ನಿರೀಕ್ಷಿತ 'ದಿ ವಿಲನ್​' ಸಿನಿಮಾ..!

news18
Updated:September 14, 2018, 3:38 PM IST
Video: ಅಕ್ಟೋಬರ್​ 18ರಂದು ತೆರೆಗೆ ಬರಲಿದೆ ಬಹು ನಿರೀಕ್ಷಿತ 'ದಿ ವಿಲನ್​' ಸಿನಿಮಾ..!
news18
Updated: September 14, 2018, 3:38 PM IST
ನ್ಯೂಸ್​ 18 ಕನ್ನಡ

ರಾಜ್ಯಾದ್ಯಂತ ವಿಘ್ನ ವಿನಾಶಕ ಗಣೇಶನ ಆರಾಧನೆ ನಡೆಯುತ್ತಿದೆ. ಸ್ಯಾಂಡಲ್‍ವುಡ್ ಕೂಡ ಇದಕ್ಕೆ ಹೊರತಲ್ಲ. 'ದಿ ವಿಲನ್​' ಚಿತ್ರತಂಡ ಪರಿಸರ ಪ್ರಿಯ ಗಣೇಶನನ್ನು ಸ್ಥಾಪಿಸಿ, ಪೂಜಿಸಿದ್ದಾರೆ.



ಇನ್ನು ಬಹುನಿರೀಕ್ಷಿತ 'ದಿ ವಿಲನ್' ಚಿತ್ರ ರಿಲೀಸ್ ಅಕ್ಟೋಬರ್ 18ಕ್ಕೆ ಅನ್ನೋದನ್ನೂ ಚಿತ್ರತಂಡ ನಿನ್ನೆ (ಸೆ.13) ಅಧಿಕೃತವಾಗಿ ಘೋಷಿಸಿದೆ. ಈ ಸಿನಿಮಾ ಯಾವಾಗ ತೆರೆ ಕಾಣುತ್ತೋ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿ ಪಾಯಸ ಸಿಕ್ಕಂತಾಗಿದೆ.

ಇನ್ನು ಮಣ್ಣು ತೆಂಗಿನ ನಾರು ಮತ್ತು ಹಸಿರು ಪೈರಿನಿಂದ ಮಾಡಿದ್ದ ಗಣೇಶ ಹಬ್ಬದ ಕೇಂದ್ರ ಬಿಂದುವಾಗಿತ್ತು. 'ದಿ ವಿಲನ್' ಚಿತ್ರದ ಬಿಡುಗಡೆಗೆ ತಯಾರಿಯಲ್ಲಿರುವ ನಿರ್ದೇಶಕ ಪ್ರೇಮ್ ಮಾತನಾಡಿ, ಈ ಸಿನಿಮಾದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಬೇರೆ ಸಿನಿಮಾಗಳಂತೆಯೇ ಇದನ್ನೂ ಚಿತ್ರಮಂದಿರಕ್ಕೆ ಬಂದು ನೋಡಿ ಎಂದಿದ್ದಾರೆ.
First published:September 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ