ಎಸ್ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಆರ್ಆರ್ಆರ್ ಸಿನಿ (RRR Movie) ರಸಿಕರ ಮೆಚ್ಚುಗೆಯನ್ನು ಪಡೆದುಕೊಂಡು ವಿಶ್ವದಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿ ಎಂದೆನಿಸಿದೆ. ಗೇಮ್ ಆಫ್ ಥ್ರೋನ್ಸ್ ಖ್ಯಾತಿಯ ನಥಾಲಿ ಇಮ್ಯಾನುವಲ್ (Nathalie Emmanuel) ಆರ್ಆರ್ಆರ್ ಚಿತ್ರದ ಬಗ್ಗೆ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಚಿತ್ರವನ್ನು ನೋಡಿದಷ್ಟೂ ಇನ್ನೂ ನೋಡಬೇಕು ಎನ್ನುವ ತುಡಿತವನ್ನು ಹೆಚ್ಚಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
ನಥಾಲಿ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದು ಪಾತ್ರವರ್ಗದ ಪರಿಶ್ರಮವನ್ನು ಹೊಗಳಿದ್ದಾರೆ. ನಟಿ ಚಿತ್ರದ ಕೆಲವೊಂದು ಸ್ಟಿಲ್ಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಪ್ರತಿಯೊಂದಕ್ಕೂ ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ಗಳನ್ನು ನೀಡಿದ್ದಾರೆ. ಇದರಿಂದ ಚಿತ್ರದ ಪ್ರತಿಯೊಂದು ದೃಶ್ಯಗಳನ್ನು ನಥಾಲಿ ಹೆಚ್ಚು ಮೆಚ್ಚಿಕೊಂಡಿದ್ದಾರೆ ಎಂಬುದು ತಿಳಿದು ಬರುತ್ತದೆ.
ಆಲಿಯಾರನ್ನು ಹೊಗಳಿರುವ ಗೇಮ್ಸ್ ಆಫ್ ಥ್ರೋನ್ ನಟಿ
ಚಿತ್ರದಲ್ಲಿ ಸೀತಾ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿರುವ ಆಲಿಯಾ ಭಟ್ರನ್ನು ಹೊಗಳಿರುವ ನಥಾಲಿ ಆಲಿಯಾರ ಅಭಿನಯ ಅಮೋಘವಾಗಿದೆ ಎಂದು ತಿಳಿಸಿದ್ದಾರೆ. ಆಸ್ಕರ್ 2023 ನಾಮನಿರ್ದೇಶನ ಪರಿಗಣನೆಗೆ ಚಲನಚಿತ್ರವನ್ನು ಸಲ್ಲಿಸಲಾಗಿರುವ ಸಮಯದಲ್ಲಿಯೇ ನಥಾಲಿ ಸಿನಿಮಾದ ಕುರಿತು ಧನಾತ್ಮಕವಾಗಿ ಅನಿಸಿಕೆ ಹಂಚಿಕೊಂಡಿದ್ದಾರೆ.
ಎನ್ಟಿಆರ್ ಹಾಗೂ ರಾಮ್ಚರಣ್ ನೃತ್ಯ ಅದ್ಭುತ
RRR ಒಂದು ರೀತಿಯಲ್ಲಿ ಇನ್ನೂ ಇನ್ನೂ ನೋಡಬೇಕು ಎಂಬಂತೆ ಮಾಡುವ ಸಿನಿಮಾ ಆಗಿದೆ ಎಂದು ನಥಾಲಿ ತಿಳಿಸಿದ್ದು, ಪ್ರತಿಯೊಬ್ಬರೂ ಇಷ್ಟಪಡುವ ರೀತಿಯಲ್ಲಿ ಚಿತ್ರ ಮೂಡಿಬಂದಿದೆ ಎಂದು ತಿಳಿಸಿದ್ದಾರೆ.
ಜೂನಿಯರ್ ಎನ್ಟಿಆರ್ ಹಾಗೂ ರಾಮ್ಚರಣ್ ನಡುವಿನ ನೃತ್ಯ ಹಾಗೂ ಅಮೋಘ ಅಭಿನಯವನ್ನು ಮನಸಾರೆ ಮೆಚ್ಚಿಕೊಂಡಿರುವ ನಥಾಲಿ ನನ್ನನ್ನು ಕುಣಿಯುವಂತೆ ಮಾಡಿದೆ ಎಂದು ಹೊಗಳಿದ್ದಾರೆ. ಎನ್ಟಿಆರ್ ಹಾಗೂ ರಾಮ್ಚರಣ್ ಜೋಡಿಯ ನೃತ್ಯವು ಅತ್ಯಂತ ಮನೋಜ್ಞವಾಗಿದೆ ಎಂದು ತಿಳಿಸಿದ್ದಾರೆ.
ಆಲಿ ಜೆನ್ನಿ, ಸಾಹಸ ಸಂಯೋಜಕ ಕಿಂಗ್ ಸೊಲೊಮನ್ ಮತ್ತು ಸಾಹಸ ದೃಶ್ಯಗಳಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ನಥಾಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಾಗಿಯೇ ಈ ಚಿತ್ರವನ್ನು ನೋಡಿದಾಗ ಮನಸ್ಸು ಗಟ್ಟಿಯಾಗಿರದೆ ಮತ್ತೆ ಮತ್ತೆ ವೀಕ್ಷಿಸಬೇಕೆಂದು "ದುರ್ಬಲಗೊಳ್ಳುವುದಾಗಿ" ಪ್ರಶಂಸೆಯ ನುಡಿಯನ್ನಾಡಿದ್ದಾರೆ ನಥಾಲಿ.
ಕ್ರಾಂತಿಕಾರಿ ಚಲನಚಿತ್ರ
ಎಸ್ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಭಾರತೀಯ ಕ್ರಾಂತಿಕಾರಿಗಳ ಕಾಲ್ಪನಿಕ ಕಥೆಯನ್ನೊಳಗೊಂಡ ಚಿತ್ರವೆಂದೆನಿಸಿದೆ. ಅಲ್ಲೂರಿ ಸೀತಾರಾಮ ರಾಜು ಪಾತ್ರವನ್ನು ರಾಮ್ ಚರಣ್ ಮತ್ತು ಕೋಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್ಟಿಆರ್ ಅಮೋಘವಾಗಿ ಅಭಿನಯಿಸಿದ್ದಾರೆ.
ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿದ್ದ ಸಂದರ್ಭದಲ್ಲಿ ಅಂದರೆ 1920 ರ ದಶಕದ ಸನ್ನಿವೇಶಗಳನ್ನು ಆಧರಿಸಿಕೊಂಡು ಚಲನಚಿತ್ರವನ್ನು ನಿರ್ಮಿಸಲಾಗಿದೆ.
ಚಿತ್ರದಲ್ಲಿ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಸುಮಾರು 1200 ಕೋಟಿ ರೂಪಾಯಿ ಗಳಿಸಿತ್ತು.
ಆಸ್ಕರ್ 2023 ನಾಮನಿರ್ದೇಶನ ಪರಿಗಣನೆ
ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಚಿತ್ರ ಸೇರಿದಂತೆ 14 ವಿಭಾಗಗಳಲ್ಲಿ ಆಸ್ಕರ್ 2023 ನಾಮನಿರ್ದೇಶನ ಪರಿಗಣನೆಗೆ ಚಲನಚಿತ್ರವನ್ನು ಸಲ್ಲಿಸಲಾಗಿದೆ. ಚಿತ್ರದ ಹಾಡು 'ನಾಟು ನಾಟು' ಅತ್ಯುತ್ತಮ ಹಾಡು ವಿಭಾಗದಲ್ಲಿ ಶಾರ್ಟ್ಲಿಸ್ಟ್ ಆಗಿದೆ.
ಇದರ ನಡುವೆಯೇ ನಾಟು ನಾಟು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದೆ ಎಂದು ಮೊದಲೇ ಘೋಷಿಸಲಾಗಿದೆ.
ಇದನ್ನೂ ಓದಿ: Alia Bhatt-Ranbir Kapoor: ಆಲಿಯಾ ಭಟ್ಗೆ ರಣಬೀರ್ ಕಪೂರ್ ಪ್ರಪೋಸ್ ಮಾಡಿದ ಫೋಟೋ ವೈರಲ್!
ಇದಲ್ಲದೆ, ಚಿತ್ರವು ವಿಮರ್ಶಕರ ಆಯ್ಕೆ ಪ್ರಶಸ್ತಿಗಳಲ್ಲಿ ಐದು ನಾಮನಿರ್ದೇಶನಗಳನ್ನು ಸಹ ಪಡೆದುಕೊಂಡಿದೆ. ಇದಕ್ಕೂ ಮೊದಲು, RRR ನ ಸಂಗೀತ ನಿರ್ದೇಶಕ, MM ಕೀರವಾಣಿ ಅವರು ಲಾಸ್ ಏಂಜಲೀಸ್ ಫಿಲ್ಮ್ಸ್ ಕ್ರಿಟಿಕ್ಸ್ ಅಸೋಸಿಯೇಷನ್ನಲ್ಲಿ ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ಸ್ಕೋರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ