Ganesh: ವಿದೇಶದಲ್ಲಿ ಗಾಳಿಪಟದ ಹಬ್ಬದಲ್ಲಿ ಗೋಲ್ಡನ್​ ಸ್ಟಾರ್ ಗಣೇಶ್​..!

Galipata Habba:ಗಾಳಿಪಟ 2 ಸಿನಿಮಾದ ಚಿತ್ರೀಕರಣಕ್ಕೆಂದು ವಿದೇಶಕ್ಕೆ ಹೋಗಿರುವ ಗೋಲ್ಡನ್​ ಸ್ಟಾರ್​ ಗಣೇಶ್​ ಅಲ್ಲಿ ಜಿನವಾಗಿಯೂ ಗಾಳಿಪಟ ಹಾರಿಸಿದ್ದಾರೆ. ಅದರಲ್ಲೂ ಅವರೊಂದಿಗೆ ಅವರ ಮಗ ವಿಹಾನ್​ ಇದ್ದಾರಂತೆ. ಹೀಗೆಂದು ಅವರೇ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಗಾಳಿಪಟ ಹಬ್ಬದಲ್ಲಿ ನಟ ಗಣೇಶ್​

ಗಾಳಿಪಟ ಹಬ್ಬದಲ್ಲಿ ನಟ ಗಣೇಶ್​

  • Share this:
ಗೋಲ್ಡನ್​ ಸ್ಟಾರ್​ ಗಣೇಶ್​ ಸದ್ಯ ವಿದೇಶದಲ್ಲಿ ಗಾಳಿಪಟ 2 ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಗಣೇಶ್​ ಅವರೊಂಗಿದೆ ದಿಗಂತ್​, ಪವನ್​ ಕುಮಾರ್​, ಶರ್ಮಿಳಾ ಮಾಂಡ್ರೆ ಸೇರಿದಂತೆ ಇಡೀ ಚಿತ್ರತಂಡವಿದೆ. ಗಾಳಿಪಟ 2 ಸಿನಿಮಾ ಶೂಟಿಂಗ್​ಗಾಗಿ ವಿದೇಶಕ್ಕೆ ಹೋದಾಗಿನಿಂದ ಈ ಸ್ಟಾರ್ ನಟರು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಒಂದೊಂದು ಅಪ್ಡೇಟ್​ ಹಾಗೂ ಅಲ್ಲಿ ಚಿತ್ರೀಕರಣದಿಂದ ಬ್ರೇಕ್​ ಪಡೆದಾಗ ಹೇಗೆಲ್ಲ ಸಮಯ ಕಳೆಯುತ್ತಿರುವ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೆ ಕೊರೆವ ಚಳಿಗೆ ಬಿಸಿ ಬಿಸಿ ಕಾಫಿ ಕುಡಿಯುತ್ತಿದ್ದ ಗಣೇಶ್​ ಕಾಫಿ ಟೈಮ್​ ಎಂದು ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಪವ್ನ್​ ಕುಮಾರ್ ಸಹ ಸಿನಿಮಾದ ನಾಯಕಿಯರು ಹಾಗೂ  ದಿಗಂತ್​ ಜೊತೆ ತೆಗೆಸಿಕೊಂಡಿದ್ದ ಫೋಟೋವನ್ನು ಪೋಸ್ಟ್​ ಮಾಡಿದ್ದರು. ಈಗ ಗಣೇಶ್​  ವಿದೇಶದಲ್ಲಿ ಬಿಡುವಿನ ವೇಳೆಯಲ್ಲಿ ಏನೆಲ್ಲ ಮಾಡುತ್ತಿದ್ದಾರೆ ಅಂತ ಮತ್ತೊಂದು ಅಪ್ಡೇಟ್​ ಕೊಟ್ಟಿದ್ದಾರೆ. 

ಹೌದು, ಗಾಳಿಪಟ 2 ಸಿನಿಮಾದ ಚಿತ್ರೀಕರಣಕ್ಕೆಂದು ವಿದೇಶಕ್ಕೆ ಹೋಗಿರುವ ಗೋಲ್ಡನ್​ ಸ್ಟಾರ್​ ಗಣೇಶ್​ ಅಲ್ಲಿ ಜಿನವಾಗಿಯೂ ಗಾಳಿಪಟ ಹಾರಿಸಿದ್ದಾರೆ. ಅದರಲ್ಲೂ ಅವರೊಂದಿಗೆ ಅವರ ಮಗ ವಿಹಾನ್​ ಇದ್ದಾರಂತೆ. ಹೀಗೆಂದು ಅವರೇ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Ganesh, Shilpa Ganesh, Ganesh-Shilpa Wedding Anniversary, ಗಣೇಶ್​, ಶಿಲ್ಪಾ, ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಶಿಲ್ಪಾ-ಗಣೇಶ್​, ganesh, golden star ganesh, sandalwood, Ganesh's Upcoming Movie, Ganesh's Upcoming Movie Tribble Riding, kannada movie Tribble Riding, Tribble Riding director, ಗಣೇಶ್ ಮುಂದಿನ ಸಿನಿಮಾ, ತ್ರಿಬಲ್ ರೈಡಿಂಗ್, ತ್ರಿಬಲ್ ರೈಡಿಂಗ್ ಕನ್ನಡ ಸಿನಿಮಾ
ಕುಟುಂಬದೊಂದಿಗೆ ಗಣೇಶ್​


ಅಷ್ಟಕ್ಕೂ ಸ್ಟಾರ್​ಗಳು ಸಿನಿಮಾ ಚಿತ್ರೀಕರಣಕ್ಕೆಂದು ವಿದೇಶಕ್ಕೆ ಹೋದಾಗ ಕೆಲವೊಮ್ಮೆ ಕುಟುಂಬವನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಗಣೇಶ್ ಅವರ ಪೋಸ್ಟ್​ ನೋಡಿದವರು ಮೊದಲಿಗೆ ಹಾಗೇ ತಿಳಿಯುತ್ತಾರೆ. ಆದರೆ ಗಣೇಶ್ ಅವರ ಜೊತೆ ಇಲ್ಲಿ ಅವರ ಕುಟುಂಬವಿಲ್ಲ. ಮಗನನ್ನು ಮಿಸ್​ ಮಾಡಿಕೊಳ್ಳುತ್ತಿರುವ ಗಣೇಶ್​, ಮಗನ ಪೋಟೋ ಇರುವ ಗಾಳಿಪಟವನ್ನು ಕೈಟ್​ ಫೆಸ್ಟಿವಲ್​ನಲ್ಲಿ ಹಾರಿಸಿದ್ದಾರೆ.
View this post on Instagram


A post shared by Ganesh (@goldenstar_ganesh)


ಚಿತ್ರೀಕರಣದಿಂದ ಬಿಡುವು ಮಾಡಿಕೊಂಡು ಅಲ್ಲಿನ ಗಾಳಿಪಟ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಮಗನ ಫೋಟೋ ಇರುವ ಗಾಳಿಪಟವನ್ನು ಹಾರಿಸಿದ್ದಾರೆ. ಮಗನ ಜೊತೆಗೆ ಗಾಳಿಪಟ ಹಬ್ಬದಲ್ಲಿ ಅಂತ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಗಣೇಶ್​.

ಇದನ್ನೂ ಓದಿ: Roberrt: ಬಾಸು​ ಕೊಂಚ ಕೇಡಿ... ತುಂಬಾ ರಫ್​ ರೌಡಿ... ರಾಬರ್ಟ್​ ಬರ್ತಿದ್ದಾನೆ ನೋಡಿ..!

ಫೆ. ಮೂರನೇ ವಾರದಲ್ಲಿ ಯೋಗರಾಜ್​ ಭಟ್​ ಹಾಗೂ ಗಾಳಿಪಟ 2 ಸಿನಿಮಾ ತಂಡ ಕಜಕಿಸ್ತಾನಕ್ಕೆ ಹೋಗಿದ್ದು. ಕೊರೆವ ಚಳಿಯಲ್ಲಿ ಸಿನಿಮಾದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಜೊತೆಗೆ ಸ್ಟಾರ್​ಗಳು ಬಿಡುವಿನವೇಳೆಯಲ್ಲಿ ಫನ್ನಿ ವಿಡಿಯೋಗಳನ್ನು ಮಾಡುತ್ತಾ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.


View this post on Instagram


A post shared by Ganesh (@goldenstar_ganesh)

View this post on Instagram


A post shared by Ganesh (@goldenstar_ganesh)


ಗಾಳಿಪಟ ಚಿತ್ರದ ಸೀಕ್ವೆಲ್​ ಗಾಳಿಪಟ 2 ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಈಗ ಗಾಳಿಪಟ 2 ಚಿತ್ರತತಂಡ ಕಜಕಿಸ್ತಾನದಲ್ಲಿ ಶೂಟಿಂಗ್​ ಮಾಡುತ್ತಿದೆ. ಗಾಳಿಪಟ 2 ಸಿನಿಮಾದಲ್ಲಿ ಅದೇ ಗಣೇಶ್​, ದಿಗಂತ್​ ಇದ್ದಾರೆ. ರಾಜೇಶ್​ ಕೃಷ್ಣನ್​ ಬದಲಾಗಿ ಪವನ್​ ಕುಮಾರ್​ ಜಾಗ ಗಿಟ್ಟಿಸಿಕೊಂಡಿದ್ದಾರೆ. ಶರ್ಮಿಳಾ ಮಾಂಡ್ರೆ ಜೊತೆ ಸಂಯುಕ್ತಾ ಮೆನನ್​ ಹಾಗೂ ವೈಭವಿ ಶಾಂಡಿಲ್ಯ ಸಹ ಜೊತೆಯಾಗಿದ್ದಾರೆ. ಯೋಗರಾಜ್​ ಭಟ್​ ಅವರ ಈ ಗಾಳಿಪಟ 2 ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಇದೆ.
Published by:Anitha E
First published: