Gajanana And Gang: ಥಿಯೇಟರ್​ಗೆ ಬರ್ತಿದ್ದಾರೆ ಗಜಾನನ ಆ್ಯಂಡ್​ ಗ್ಯಾಂಗ್​, ಹೆವ್ವಿ ಕ್ವಾಟ್ಲೆ ಕೊಡ್ತಾರೆ ಅಂದ ಅದಿತಿ

Sandalwood: ನಾಯಕ ಶ್ರೀ ಮಹಾದೇವ್​ ಕೂಡ ಮಾತನಾಡಿ ಸಾಕಷ್ಟು ಪ್ರಯತ್ನ ಮಾಡಿ, ಕಲಿತು ಈ ಪಾತ್ರ ಮಾಡಿದ್ದೇನೆ. ನಿರ್ಮಾಪಕರು, ನಿರ್ದೇಶಕರು, ಕಥೆ ನಂಬಿ, ನನ್ನನ್ನು ನಂಬಿ ದುಡ್ಡು ಹಾಕಿದ್ದಾರೆ. ನನಗೆ ಇವರೆಲ್ಲಾ ತಂದೆ-ತಾಯಿ‌ ಸಮಾನ. ನನ್ನ ಕನಸಿನ ಈ ಸಿನಿಮಾ ನನಸಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಗಜಾನನ ಆ್ಯಂಡ್ ಗ್ಯಾಂಗ್

ಗಜಾನನ ಆ್ಯಂಡ್ ಗ್ಯಾಂಗ್

  • Share this:
ಸ್ಯಾಂಡಲ್​ವುಡ್​ನಲ್ಲಿ (Sandalwood)  ಹೊಸ ಚಿತ್ರಗಳ ಪರ್ವ ಆರಂಭವಾಗಿದೆ. ಕಳೆದ ವಾರವಷ್ಟೇ  ಸರಿ ಸುಮಾರು 1 ಡಜನ್ ಚಿತ್ರಗಳು ರಿಲೀಸ್​ ಆಗಿದ್ದವು. ಪ್ರೇಕ್ಷಕ ಪ್ರಭುಗಳು ಯಾವ ಚಿತ್ರವನ್ನು ಕೈ ಹಿಡಿದಿದ್ದರು ಎಂಬುದು ಮುಂದಿನ ಮಾತು. ಆದರೆ ಕೊರೊನಾ (Corona) ನಂತರ ಚಿತ್ರ ಪ್ರೇಮಿಗಳು ಸಹ ಥಿಯೇಟರ್(Theater) ​ ಕಡೆ ಮುಖ ಮಾಡುತ್ತಿದ್ದಾರೆ. ಈಗ ಮತ್ತೊಂದು ಬಹು ನಿರೀಕ್ಷಿತ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.  ಹೌದು, ಗಜಾನನ ಆ್ಯಂಡ್ ಗ್ಯಾಂಗ್ (Gajanana And Gang)  ಚಿತ್ರ ಇದೇ ಜೂನ್ 3 ರಂದು ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ಮೇಲೆ ಸಿನಿ ರಸಿಕರ ನಿರೀಕ್ಷೆ ಹೆಚ್ಚಿದೆ.

ಕನ್ನಡ ಚಿತ್ರರಂಗದ ತನ್ನ ನಟನೆಯ ಮೂಲಕ ಭರವಸೆ ಮೂಡಿಸಿರುವ ನಾಯಕ ನಟ ಶ್ರೀಮಹದೇವ್ ಹಾಗೂ ಶಾನೆ ಟಾಪ್ ಬೆಡಗಿ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಈ  'ಗಜಾನನ ಅಂಡ್ ಗ್ಯಾಂಗ್' ಈಗಾಗಲೇ ಬರ್ಜರಿ ಪ್ರಚಾರ ಕಾರ್ಯ ಆರಂಭಿಸಿದ್ದು, ಹಾಡು ಹಾಗೂ ಟ್ರೇಲರ್​ಗಳಿಂದ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ.  ಈಗಾಗಲೇ ಚಿತ್ರದ ಟ್ರೇಲರ್ ಬಹಳ ಸದ್ದು ಮಾಡಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಟ್ರೆಂಡ್​ ಆಗಿದೆ. ಇನ್ನು ಇದರ ಪ್ರೀ ರಿಲೀಸ್​ ಇವೆಂಟ್​ ಕೂಡ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಈ ಚಿತ್ರದ ತಂಡ, ತಮ್ಮ ಹೊಸ ಪ್ರಯತ್ನಕ್ಕೆ ಸಹಕೋರಿದ್ದಲ್ಲದೇ, ಮರೆಯದೇ ಬಂದು ಚಿತ್ರ ನೋಡಲು ಮನವಿ ಮಾಡಿದೆ.

ಚಿತ್ರ ಸೂಪರ್ ಆಗಿದೆ

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಅಭಿಷೇಕ್ ಶೆಟ್ಟಿ ಮಾತನಾಡಿ, ಹೊಸತನದ ಹಂಬಲದಲ್ಲಿ ಚಿತ್ರತಂಡವಿದೆ.ಇದು ಎರಡು ವರ್ಷದ ಜರ್ನಿ. ಸಿನಿಮಾ ಸೂಪರ್ ಆಗಿದೆ ಎನ್ನುವ ವಿಶ್ವಾಸವಿದೆ. 80% ಸಿನಿಮಾಗಳನ್ನು ಮಾಡುತ್ತಿರುವವರು ನಮ್ಮಂತವರು. 20% ಸ್ಟಾರ್ ಸಿನಿಮಾಗಳು ಆಗ್ತಿವೆ. 80% ಪ್ರೋತ್ಸಾಹ ಕೊಟ್ರೆ 20 40 ಆಗುತ್ತದೆ. ಪ್ರತಿಯೊಬ್ಬರು ಸಿನಿಮಾಗೆ ಸಪೋರ್ಟ್ ಮಾಡಿ. ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಗೆಲ್ಲುತ್ತದೆ. ನಿರ್ಮಾಪಕ ಗೆಲ್ಲುತ್ತಾರೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಈ ಚಿತ್ರದ ನಾಯಕಿ ಅದಿತಿ ಪ್ರಭುದೇವ್ ಮಾತನಾಡಿ, ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಒಂದು ಅದ್ಭುತವಾದ ಸಿನಿಮಾ ಹಾಗೂ 2 ವರ್ಷಗಳ ಅನುಭವ ವಿಭಿನ್ನ. ಅಲ್ಲದೇ , ಕನ್ನಡದಲ್ಲಿ ಕಾಲೇಜ್ ಗ್ಯಾಂಗ್ ಸ್ಟೋರಿ ಆಧಾರಿತ ಚಿತ್ರ ಬಂದು ಬಹಳ ದಿನಗಳೇ ಆಗಿದೆ. ಈ ಕೊರತೆಯನ್ನು ನಮ್ಮ ಸಿನಿಮಾ ನೀಗಿಸಲಿದೆ. ನಿರ್ಮಾಪಕರು ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಪ್ರತಿಯೊಬ್ಬರು ಸಿನಿಮಾ ನೋಡಿ, ದಯವಿಟ್ಟು ಸಪೋರ್ಟ್ ಮಾಡಿ ಎಂದಿದ್ದಾರೆ.

ನನ್ನ ಕನಸು ನನಸಾಗಿದೆ ಎಂದ ನಾಯಕ

ನಾಯಕ ಶ್ರೀ ಮಹಾದೇವ್​ ಕೂಡ ಮಾತನಾಡಿ ಸಾಕಷ್ಟು ಪ್ರಯತ್ನ ಮಾಡಿ, ಕಲಿತು ಈ ಪಾತ್ರ ಮಾಡಿದ್ದೇನೆ. ನಿರ್ಮಾಪಕರು, ನಿರ್ದೇಶಕರು, ಕಥೆ ನಂಬಿ, ನನ್ನನ್ನು ನಂಬಿ ದುಡ್ಡು ಹಾಕಿದ್ದಾರೆ. ನನಗೆ ಇವರೆಲ್ಲಾ ತಂದೆ-ತಾಯಿ‌ ಸಮಾನ. ನನ್ನ ಕನಸಿನ ಈ ಸಿನಿಮಾ ನನಸಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಅಪ್ಪು ಸರ್ ಕಂಠದಲ್ಲಿ ಮೂಡಿ ಬಂದಿರುವ ಹಾಡಿನ ಬಗ್ಗೆಯೂ ಮಾತನಾಡಿದ ಶ್ರೀ, ಪ್ರತಿಯೊಬ್ಬರು ಸಿನಿಮಾ ನೋಡಿ ಬೆಂಬಲ ಕೊಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೆಕೆ ಬದುಕೇ ರೋಚಕ, ಉಸಿರು ಚೆಲ್ಲುವಾಗಲೂ ಗುನುಗುತ್ತಿತ್ತು ಹಾಡು

ಗಜಾನನ & ಗ್ಯಾಂಗ್' ಈ ಚಿತ್ರದ ಟೈಟಲ್​ ಹೇಳುವಂತೆ ಇದು ಒಂದು ಹುಡುಗರ ಗ್ಯಾಂಗ್ ಅದರಲ್ಲೂ ಕಾಲೇಜು ಆಧರಿತ ಚಿತ್ರವಾಗಿದ್ದು, ಕಾಮಿಡಿ, ಸೆಂಟಿಮೆಂಟ್ ಎಲ್ಲದರ ಮಿಶ್ರಣ ಇದು ಎನ್ನಬಹುದು. ನಮ್ ಗಣಿ ಬಿಕಾಂ ಪಾಸ್‌’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿರ್ದೇಶಕ, ನಟ ಅಭಿಷೇಕ್‌ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಇದರಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಸಹ ನಟಿಸಿದ್ದಾರೆ.

ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಜೂನ್ 3ರಂದು ರಾಜ್ಯಾದ್ಯಂತ ಬರೋಬ್ಬರಿ 300ಕ್ಕೂ ಥಿಯೇಟರ್ ಗಳಲ್ಲಿ ರಿಲೀಸ್ ಆಗ್ತಿದೆ. ಈ ಬಗ್ಗೆ ಸಿನಿಮಾ ತಂಡ ಅಧಿಕೃತ ಘೋಷಣೆ ಮಾಡಿದೆ ನಟಿಸಿದ್ದಾರೆ. ಯು ಎಸ್‌ ನಾಗೇಶ್‌ ಕುಮಾರ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ: ಡಾ ರಾಜ್ ಗೆ ಇಷ್ಟವಾಗಿದ್ದ ಚಿತ್ರವನ್ನು ಆಮಿರ್ ಖಾನ್ ಹಾಳು ಮಾಡಿದ್ರಾ? ಇದು ಅಪ್ಪು ಹೇಳಿದ್ದಂತೆ

ಪ್ರದ್ಯುತನ್‌ ಸಂಗೀತ, ಉದಯ ಲೀಲಾ ಕ್ಯಾಮೆರಾ ಚಿತ್ರಕ್ಕಿದೆ. ಬಿಗ್‌ಬಾಸ್‌ ಖ್ಯಾತಿಯ ರಘು ಗೌಡ, ಚೇತನ್‌ ದುರ್ಗ, ನಾಟ್ಯರಂಗ, ಅಶ್ವಿನ್‌ ಹಾಸನ್‌ ಹಾಗೂ ಶಮಂತ್‌ ಅಲಿಯಾಸ್‌ ಬ್ರೋ ಗೌಡ ಚಿತ್ರದಲ್ಲಿ ನಟಿಸಿದ್ದಾರೆ. ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುತ್ತಿರೋ ಚಿತ್ರಕ್ಕೆ ಪ್ರೇಕ್ಷಕ ಮಹಾಪ್ರಭುಗಳು ಏನು ಹೇಳುತ್ತಾರೆ ಅಂತ ಕಾದುನೋಡಬೇಕಿದೆ.
Published by:Sandhya M
First published: