Gaalipata Neethu Shetty: ಭಟ್ಟರ ಗಾಳಿಪಟದ ಹುಡುಗಿ ಎಲ್ಲಿ ಮರೆಯಾದರು; ನೀತು ಕೊಟ್ಟಿದ್ದಾರೆ ಉತ್ತರ

ಗಾಳಿಪಟದ ರಾಧಾ ಪಾತ್ರಧಾರಿ ನೀತು ಶೆಟ್ಟಿಯಂತೂ ಸಿನಿಮಾದಿಂದಲೇ ದೂರವೇ ಉಳಿದ್ರೆ ಅನ್ನೋ ಅನುಮಾನವೂ ಇದೆ. ಆದರೆ ಅದೇ ನೀತು ಪರಿಶುದ್ಧಂ ಹೆಸರಿನ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದರ ಬಗ್ಗೆ ನಮ್ಮ ಜೊತೆಗೆ ಡಿಟೈಲ್ ಆಗಿಯೇ ಕೂಡ ಮಾತನಾಡಿದ್ದಾರೆ.

ಗಾಳಿಪಟ ನೀತು ಶೆಟ್ಟಿ ಎಲ್ಲಿ ಹೋದ್ರು ?

ಗಾಳಿಪಟ ನೀತು ಶೆಟ್ಟಿ ಎಲ್ಲಿ ಹೋದ್ರು ?

  • Share this:
ಸ್ಯಾಂಡಲ್​ವುಡ್ ಗಾಳಿಪಟ (Gaalipata) ಚಿತ್ರವನ್ನ ಎಲ್ಲರೂ ಇಷ್ಟಟ್ಟಿದ್ದಾರೆ. ಗಾಳಿಪಟ-2 ಸಿನಿಮಾವನ್ನೂ (Gaalipata-2) ಅನೇಕ ಜನ ಇಷ್ಟಪಟ್ಟು ನೋಡಿದರು. ಆದರೆ ಗಾಳಿಪಟ ಪಾರ್ಟ್​ 1 ನಲ್ಲಿ ಯಾವ ನಟಿಯೂ ಪಾರ್ಟ್​-2 ದಲ್ಲಿ ಮುಂದುವರೆಯಲಿಲ್ಲ. ಇಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಇದ್ದರು, ದೂದ್ ಪೇಡಾ ದಿಗಂತ್ ಕೂಡ ಇದ್ದರು. ಆದರೆ ರಾಜೇಶ್ ಕೃಷ್ಣನ್ ಇದರಲ್ಲಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಆ ಜಾಗಕ್ಕೆ ಡೈರೆಕ್ಟರ್ ಪವನ್ ಕುಮಾರ್ ಬಂದಿದ್ದರು. ಆದರೆ ನಾಯಕಿಯರ ಲೆಕ್ಕದಲ್ಲಿ ಪಾರ್ಟ್​-1 ನಟಿಯರು ಯಾರ ಎಲ್ಲೂ ಒಂದು ಝಲಕ್ ಕೂಡ ಇರಲೇ ಇಲ್ಲ. ಅದರಂತೆ ಪಾವನಿ ಪಾತ್ರಧಾರಿಯೂ ಇರಲಿಲ್ಲ. ರಾಧಾ ಪಾತ್ರಧಾರಿ ನೀತು ಶೆಟ್ಟಿಯಂತೂ (Neethu Shetty) ಸಿನಿಮಾದಿಂದಲೇ ದೂರವೇ ಉಳಿದ್ರೆ ಅನ್ನೋ ಅನುಮಾನವೂ ಇದೆ.

ಆದರೆ ಅದೇ ನೀತು ಪರಿಶುದ್ಧಂ ಹೆಸರಿನ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದರ ಬಗ್ಗೆ ನಮ್ಮ ಜೊತೆಗೆ ಡಿಟೈಲ್ ಆಗಿಯೇ ಕೂಡ ಮಾತನಾಡಿದ್ದಾರೆ.

ಕನ್ನಡದ ನಟಿ ನೀತು ಶೆಟ್ಟಿ ಅಂದ್ರೆ ಸಡನ್ ಆಗಿ ಯಾರಿಗೂ ಗೊತ್ತೇ ಆಗೋದಿಲ್ಲ. ಆದರೆ ಅದೇ ಬೆದರು ಬೊಂಬೆ ಹಾಡಿನ ಹಡುಗಿ, ಎತ್ತರದ ಬೆಡಗಿ, ಗಾಳಿಪಟದ ಚೆಲುವೆ ಅಂದ್ರೆ ಸಾಕು, ತಟ್ ಅಂತ ಗಾಳಿಪಟದ ಆ ಹಾಡು ನಮ್ಮ ಕಣ್ಮುಂದೆ ಬಂದೇ ಬಿಡುತ್ತದೆ.

ಇದನ್ನೂ ಓದಿ: Niveditha Gowda - Chandan Shetty: ಪತ್ನಿ ನಿವೇದಿತಾ ಜೊತೆ ಚಂದನ್ ಶೆಟ್ಟಿ ಕೊಕ್ಕರೆ ಡ್ಯಾನ್ಸ್! ನೀವೂ ಮಾಡಬೇಕಂತೆ

ಗಾಳಿಪಟದ ಎತ್ತರದ ಚೆಲುವೆ ನೀತು ಶೆಟ್ಟಿ ಎಲ್ಲಿ ಹೋದರು ?
ನಿಜ, ಇದೇ ಪರಿಶುದ್ಧಂ ಚಿತ್ರದಲ್ಲಿಯೇ ನೀತು ಬಹಳ ದಿನಗಳ ಬಳಿಕ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಪಾತ್ರಕ್ಕೆ ಮೊದಲು ನೀತು ಒಪ್ಪಿಕೊಂಡಿರಲೇ ಇಲ್ಲ. ಆದರೆ ನಿರ್ದೇಶಕ ಆರೋನ್ ಕಾರ್ತಿಕ್ ವೆಂಕಟೇಶ್ ಇವರನ್ನ ಒಪ್ಪಿಸಿದ್ದಾರೆ. ನಿರ್ದೇಶಕ ಆರೋನ್ ಕಾರ್ತಿಕ್ ವೆಂಕಟೇಶ್​ ಅವರಿಗೆ ಇದ್ದ ಸಿನಿಮಾ ಫ್ಯಾಷನ್​ ಗೆ ನೀತು ಈ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

Gaalipata Heroin Neethu Shetty talks about her new film
ಗಾಳಿಪಟದ ನೀತು ಆ ದಿನಗಳ ಪೋಸ್


ಪರಿಶುದ್ಧಂ ಸಿನಿಮಾದಲ್ಲಿ ಗಾಳಿಪಟದ ನೀತು ಸೆಲೆಬ್ರಿಟಿ ಗೆಸ್ಟ್
ಅಂದ್ಹಾಗೆ ನೀತು ಬಹಳ ದಿನಗಳ ಬಳಿಕ ನಟಿಸಿದ ಈ ಚಿತ್ರದಲ್ಲಿ ನೀತು ಒಂದು ವಿಶೇಷ ಹಾಡಿನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಇದನ್ನ ಗೆಸ್ಟ್ ರೋಲ್​ ನಲ್ಲಿ ಅಂದ್ರೂ ತಪ್ಪಿಲ್ಲ. ಅಂತಹ ಹಾಡಿನ ಬಗ್ಗೆ ಒಂದಷ್ಟು ಹೇಳಿಕೊಂಡಿರೋ ನೀತು, ಈ ಒಂದು ಹಾಡಲ್ಲಿ ತಾವು ಸೆಲೆಬ್ರಿಟಿ ಗೆಸ್ಟ್ ರೋಲ್​ ನಲ್ಲಿಯೇ ಅಭಿನಯಸಿರೋದಾಗಿಯೇ ತಿಳಿಸಿದ್ದಾರೆ.

ಇದನ್ನೂ ಓದಿ: Real Star Upendra Kabzaa: ರಿಯಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಕಬ್ಜ ಗಿಫ್ಟ್! ಖಡಕ್ ಟೀಸರ್‌ಗೆ ಉಪ್ಪಿ ಫ್ಯಾನ್ಸ್ ಫಿದಾ

ಆರೋನ್ ಕಾರ್ತಿಕ್ ವೆಂಕಟೇಶ್ ನಿರ್ದೇಶನದ ಈ ಚಿತ್ರ ಒಂದು ಸಸ್ಪೆನ್ಸ್ ಸಿನಿಮಾನೇ ಆಗಿದೆ. ಸೈಕೋ ಸ್ಯಾಮ್ ಪಾತ್ರದ ಸುತ್ತವೇ ಇಡೀ ಸಿನಿಮಾ ಇದ್ದಂತೆ ಕಾಣುತ್ತದೆ. ಅಂತಹ ಈ ಚಿತ್ರದಲ್ಲಿ ಒಂದು ನಿಶ್ಚಿತಾರ್ಥದ ಸನ್ನಿವೇಶ ಬರುತ್ತದೆ. ಅದೇ ಸನ್ನಿವೇಶದಲ್ಲಿಯೇ ನೀತು ಕಾಣಿಸಿಕೊಂಡಿದ್ದಾರೆ.

ಮದುವೆ ನಿಶ್ಚಿತಾರ್ಥದ ಸೀನ್​ ನಲ್ಲಿ ಗಾಳಿಪಟದ ನೀತು ರೋಲ್
ನೀತು ಶೆಟ್ಟಿ ಸೆಲೆಬ್ರಿಟಿ ಗೆಸ್ಟ್ ಆಗಿಯೇ ಅಭಿನಯಿಸಿರೋ ಈ ರೋಲ್ ವಿಶೇಷ ಏನೂ ಗೊತ್ತೇ? ನಿಜ, ಈ ಸೆಲೆಬ್ರಿಟಿ ಗೆಸ್ಟ್ ಆಗಿ ಬರೋ ನೀತು ಪಾತ್ರ ಇಲ್ಲಿ ಮದುವೆ ಆಗಲಿರೋ ಹುಡುಗ-ಹುಡುಗಿಗೆ ಹಾಡುವ ಮೂಲಕ ವಿಶ್ ಮಾಡುತ್ತದೆ.

Gaalipata Heroin Neethu Shetty talks about her new film
ಗಾಳಿಪಟ ನೀತು ಶೆಟ್ಟಿ ಸಖತ್ ಪೋಸ್


ಇಂತಹ ಈ ಹಾಡನ್ನ ಚಿತ್ರದ ನಿರ್ದೇಶಕ ಆರೋನ್ ಕಾರ್ತಿಕ್ ವೆಂಕಟೇಶ್ ಕಂಪೋಜ್ ಮಾಡಿದ್ದಾರೆ. ಸೂಫಿ ಸಂಗೀತವೇ ಇದಾಗಿರೋದ್ರಿಂದ ನೀತು ಇದನ್ನ ತುಂಬಾ ಚೆನ್ನಾಗಿಯೇ ಎಂಜಾಯ್ ಮಾಡಿಯೇ ಹಾಡಿದ್ದಾರೆ.

ಡೈರೆಕ್ಟರ್ ಆರೋನ್ ಕಾರ್ತಿಕ್ ವೆಂಕಟೇಶ್ ಒಬ್ಬ ಮ್ಯೂಸಿಕ್ ಡೈರೆಕ್ಟರ್
ಚಿತ್ರೀಕರಣದ ಸಮಯದಲ್ಲಿದ್ದ ಜೊತೆಗೆ ಇದ್ದ ಟೀಮ್ ಕೂಡ ಸಂಗೀತವನ್ನ ತಿಳಿದುಕೊಂಡಿದ್ದ ಟೀಮ್ ಆಗಿತ್ತು. ಹಾಗಾಗಿಯೇ ನೀತು ಕೆಲಸ ಮಾಡೋವಾಗ ತುಂಬಾ ಎಂಜಾಯ್ ಮಾಡಿದ್ದಾರೆ. ಪರಿಶುದ್ಧಂ ಸಿನಿಮಾದ ಡೈರೆಕ್ಟರ್ ಆರೋನ್ ಕಾರ್ತಿಕ್ ವೆಂಕಟೇಶ್ ಒಬ್ಬ ಸಂಗೀತ ನಿರ್ದೇಶಕರಾಗಿದ್ದೋರು, ನೀತು ಅಭಿನಯದ ಅಮೃತಘಳಿಗೆ ಸಿನಿಮಾಕ್ಕೆ ಸಂಗೀತ ಕೊಟ್ಟಿದ್ದರು.

ಅದೇ ಆರೋನ್ ಕಾರ್ತಿಕ್ ವೆಂಕಟೇಶ್ ಪರಿಶುದ್ಧಮಂ ಸಿನಿಮಾ ಮಾಡಿದ್ದಾರೆ. ಇನ್ನೇನೂ ಶೀಘ್ರದಲ್ಲಿಯೇ ಈ ಸಿನಿಮಾ ರಿಲೀಸ್ ಕೂಡ ಆಗುತ್ತದೆ. ಉಳಿದಂತೆ ಪರಿಶುದ್ಧಂ ಸಿನಿಮಾ ಮೂಲಕ ನೀತು ಶೆಟ್ಟಿ ಬೆಳ್ಳಿ ತೆರೆ ಮೇಲೆ ವಿಭಿನ್ನವಾಗಿಯೇ ಮಿಂಚಲಿದ್ದಾರೆ. ನೀತು ಶೆಟ್ಟಿ ಕಾಣಿಸಿಕೊಂಡ ಈ ಒಂದು ಚಿತ್ರದಲ್ಲಿ ಸ್ಪರ್ಶ ಚಿತ್ರದ ರೇಖಾ ಇದ್ದಾರೆ. ರಮೇಶ್ ಪಂಡಿತ್ ಇದ್ದಾರೆ. ಇನ್ನೂ ಅನೇಕರು ಈ ಚಿತ್ರದಲ್ಲಿ ಅಭಿನಯಸಿದ್ದಾರೆ.
First published: