Gaalipata 2 Review: ಕಾಮಿಡಿಯೂ, ಎಮೋಷನ್​​ಗಳೂ - ಭಾವನೆಗಳ ಬಣ್ಣ ತುಂಬಿ ಹಾರಿದ ಗಾಳಿಪಟ!

Gaalipata 2 Review: ಬಹುನಿರೀಕ್ಷಿತ ಗಾಳಿಪಟ 2 ಸಿನಿಮಾ ರಿಲೀಸ್ ಆಗಿದೆ. ಸಿನಿಪ್ರಿಯರು ನಿರೀಕ್ಷಿಸಿದಂತೆ ಮತ್ತೊಮ್ಮೆ ಭಾವನೆಗಳ ಗುಚ್ಛವನ್ನು ತುಂಬಿಕೊಂಡು ಬಂದಿರೋ ಸಿನಿಮಾ ಬಗೆಹರಿಯದ ಭಾವನೆಗಳ ಒಳನೋಟವನ್ನು ನೀಡುತ್ತದೆ.

ಗಾಳಿಪಟ 2

ಗಾಳಿಪಟ 2

  • Share this:
ಯೋಗರಾಜ್ ಭಟ್ ಅವರ ಗಾಳಿಪಟ 2  (Gaalipata 2) ಹಾರಾಟ ನಡೆಸುತ್ತಿದೆ. ಸಹಜವಾಗಿಯೇ ಗಾಳಿಪಟ ಸಿನಿಮಾದ ಸೀಕ್ವೆಲ್ ಎಂಬ ಕಾರಣದ ಜೊತೆಗೆ ಯೋಗರಾಜ್ ಭಟ್ (Yogaraj Bhat) ಹಾಗೂ ಗಣೇಶ್ (Ganesh) ಕಾಂಬಿನೇಷನ್ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಈ ಗಾಳಿಪಟ ಕನ್ನಡ ಸಿನಿಪ್ರಿಯರ (Kannada Movie) ನಿರೀಕ್ಷೆಯನ್ನು ಕಾಯ್ದುಕೊಂಡಿದೆ ಎನ್ನುವುದು ಸಂತಸದ ವಿಚಾರ. ಫೈಟ್, ಡ್ರಮಾಟಿಕ್ ಡಯಲಾಗ್​, ಲಾಂಗ್, ಮಚ್ಚು ತುಂಬಿರೋ ಸಿನಿಮಾಗಳ ಮಧ್ಯೆ ಗಾಳಿಪಟ 2 ನಿಮ್ಮೆದೆಯೊಳಗೂ ಹಾರಿ ಚಂದದ ಕಚಗುಳಿ ನೀಡುವುದರಲ್ಲಿ ಸಂದೇಹವೇ ಇಲ್ಲ. ಸವಿ-ಸುಮಧುರ ಬಗೆಹರಿಯದ ಭಾವನೆಗಳ ಗುಚ್ಛವೊಂದು ನಿಮ್ಮೊಳಗೆ ಕೆಲವು ಭಾವಗಳನ್ನು ಉಳಿಸಿಹೋಗುತ್ತದೆ.

ಕಾಮೆಡಿ ಜೊತೆ ಎಮೋಷನ್ಸ್

ನೀರುಕೋಟೆ ಎನ್ನುವ ಊರಿನ ಕಾಲೇಜೊಂದರಲ್ಲಿ ಶುರುವಾಗುವ ಕಥೆ ನಿಮ್ಮನ್ನು ಜೊತೆ ಜೊತೆಗೇ ಕರೆದೊಯ್ಯುತ್ತಾ ಚಂದದ್ದೊಂದು ಪ್ರಯಾಣ ಮಾಡುತ್ತದೆ. ಸಿನಿಮಾದಲ್ಲಿ ಕಾಮೆಡಿಗೆ ನೀಡಲಾಗಿರುವ ಅಷ್ಟೇ ಪ್ರಾಧಾನ್ಯವನನ್ನು ಭಾವನೆಗಳಿಗೂ ನೀಡಲಾಗಿದೆ. ಸಿನಿಮಾ ನೋಡಿ ನೀವೆಷ್ಟೇ ನಕ್ಕರೂ ಒಂದಷ್ಟು ಭಾವನೆಗಳು ನಿಮ್ಮನ್ನು ಮತ್ತೆ ಮತ್ತೆ ಕಾಡುತ್ತದೆ. ಕೆಲವೊಂದು ತಿರುವುಗಳು, ಟ್ವಿಸ್ಟ್​​ಗಳು ನಿಮ್ಮನ್ನು ಭಾವುಕಗೊಳಿಸುತ್ತದೆ.

ಕಾಲೇಜ್ ಲೈಫ್ - ಭಾವುಕವಾಗಿಸುವ ಟ್ವಿಸ್ಟ್

ಸಿನಿಮಾದಲ್ಲಿ ಕಾಲೇಜು ಜೀವನದ ಸುಂದರವಾದ ಚಿತ್ರಣವನ್ನು ನೀವು ಕಾಣಹುದು. ಕಾಲೇಜು, ಶಿಕ್ಷಣ, ತಲೆ, ತುಂಟಾಟ ಎಲ್ಲವೂ ಸೇರಿಕೊಂಡಿರುವ ಸಿನಿಮಾ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತದೆ. ನಂತರದಲ್ಲಿ ಬರುವ ಕೆಲವು ಟ್ವಿಸ್ಟ್​ಗಳು, ಅನಿರೀಕ್ಷಿತ ಟರ್ನಿಂಗ್ ಪಾಯಿಂಟ್​ಗಳು ಪ್ರೇಕ್ಷಕನ ಕಣ್ಣಲ್ಲಿ ನೀರು ತರಿಸುತ್ತದೆ.

ಇದನ್ನೂ ಓದಿ: Gaalipata 2 Movie: ಗಾಳಿಪಟ 2 ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

ದೃಶ್ಯ ವೈಭವದ ಬಗ್ಗೆ ಎರಡು ಮಾತೇ ಇಲ್ಲ

ಲೊಕೇಷನ್, ದೃಶ್ಯಗಳ ವಿಚಾರಕ್ಕೆ ಬಂದಾಗ ಯೋಗರಾಜ್ ಭಟ್ ಅವರ ಕಲ್ಪನೆ, ಸಂಯೋಜನೆಗಳನ್ನು ನಿಮ್ಮನ್ನು ಎಂದೂ ನಿರಾಸೆಗೊಳಿಸದು. ಗಾಳಿಪಟ 2 ಕೂಡಾ ಇದಕ್ಕೆ ಹೊರಾಗಿಲ್ಲ. ಮನಸುಗಳಲ್ಲಿ ಭಾವನೆಗಳನ್ನು ತುಂಬಿಕಳಿಸೋ ಸಿನಿಮಾ ನಿಮ್ಮ ಕಣ್ಣುಗಳಲ್ಲಿ ಮರೆಯಲಾಗದ ದೃಶ್ಯವೈಭವವನ್ನೂ ಕಟ್ಟಿಕೊಡುತ್ತದೆ.

ಒಂದಿಷ್ಟು ಮೊಹಬ್ಬತ್ ಜೊತೆಗೆ ಮತ್ತೊಂದಷ್ಟು ಸ್ನೇಹ

ನಿರ್ದೇಶಕ ಯೋಗರಾಜ್ ಭಟ್ ಎಂದರೆ ಒಂದು ರೀತಿಯ ಡಿಫರೆಂಟ್ ಎಂದು ಹೇಳಬಹುದು. ಅವರ ನಿರ್ದೇಶನದ ಗಾಳಿಪಟ ಚಿತ್ರದ ಸೀಕ್ವೆಲ್ ಆಗಿ ಗಾಳಿಪಟ 2 ತೆರೆಕಂಡಿದೆ. ಈಗಾಗಲೇ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿತ್ತು. ‘ಒಂದಿಷ್ಟು ಮೊಹಬ್ಬತ್ ಜೊತೆಗೆ ಮತ್ತೊಂದಷ್ಟು ಸ್ನೇಹವನ್ನು ಹೊತ್ತು ಇದೇ ಆಗಸ್ಟ್ 12ರಂದು ನಿಮ್ಮ ಮುಂದೆ ಬರ್ತಿದ್ದೀವಿ. ಅದೇ ಹಳೆಯ ಅಕ್ಕರೆ ಮತ್ತು ಪ್ರೀತಿಯನ್ನು ಬಯಸುವ ಗಾಳಿಪಟ 2 ಚಿತ್ರತಂಡ‘ ಎಂದು ಬರೆದು ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್​ ಡೇಟ್​ ಅನೌನ್ಸ್​ ಮಾಡಿದ್ದರು.

ಇದನ್ನೂ ಓದಿ: Gaalipata 2: ಭಟ್ಟರ ಫಿಲ್ಮ್​ ರೆಡಿಯಾಗೋಕೆ ಸುಧಾ ಮೂರ್ತಿ ಕಾರಣವಂತೆ - ಹೀಗೆಂದಿದ್ದೇಕೆ ಅನಂತ್ ನಾಗ್?

ಗಣೇಶ್​, ದಿಗಂತ್, ಪವನ್ ಒಟ್ಟಿಗೆ ನಿಂತಿರುವುದರಿಂದ ಆರಂಭವಾಗುವ ಈ ಟ್ರೈಲರ್​ ನೀರುಕೋಟೆ ಎನ್ನುವ ಊರಿನಲ್ಲಿ ನಡೆಯುವ ಕಥೆಯನ್ನು ಯೋಗರಾಜ್​ ಭಟ್ಟರ ಧ್ವನಿಯಲ್ಲಿ ಕೇಳಬಹುದು. ಶಿಕ್ಷಕರ ಪಾತ್ರದಲ್ಲಿ ಅನಂತ್​ ನಾಗ್ ಎಂದಿನಂತೆ ಸಿನಿಮಾಗೆ ಒಂದು ಲುಕ್. ಮೂವರು ಜನರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದರ ಝಲಕ್​ ಅನ್ನು ನಾವು ಟ್ರೈಲರ್​ನಲ್ಲಿ ನೋಡಿದ್ದೇವೆ. ಟ್ರೈಲರ್ ಹುಟ್ಟುಹಾಕಿದ್ದ ನಿರೀಕ್ಷೆಗಳನ್ನು ಅದ್ಭುತವಾಗಿ ನಿಮ್ಮ ಮುಂದಿಡುತ್ತದೆ ಸಿನಿಮಾ.

kannada actor golden star ganesh movie gaalipata 2 another song release date announced
ಗಾಳಿಪಟ 2


ಅಚ್ಚರಿ ಎಂದರೆ ಬುಕ್​ ಮೈ ಶೋನಲ್ಲಿ ಅಕ್ಷಯ್​ ಕುಮಾರ್​ ಅಭಿನಯದ ‘ರಕ್ಷಾ ಬಂಧನ್​’ ಸಿನಿಮಾಗಿಂತ ಹೆಚ್ಚಿನ ವೋಟ್ಸ್​ ಪಡೆಯುವ ಮೂಲಕ ‘ಗಾಳಿಪಟ 2’ ಸಿನಿಮಾ ಹವಾ ಮಾಡಿತ್ತು.
Published by:Divya D
First published: