Gaalipata-2: ಹಾರೋಕೆ ರೆಡಿಯಾಯ್ತು ಗಾಳಿಪಟ! ಮತ್ತೆ ಮ್ಯಾಜಿಕ್ ಮಾಡ್ತಾರಾ ಗಣಿ-ಭಟ್ರು?

ಗಣೇಶ್‌ ಹಾಗೂ ಯೋಗರಾಜ್‌ ಭಟ್‌ ಕಾಂಬಿನೇಷನ್‌ ಮತ್ತೊಮ್ಮೆ ವರ್ಕೌಟ್‌ ಆಗುತ್ತಿದೆ. ಸದ್ಯ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಚಲನ ಸೃಷ್ಟಿಸಿರುವ ಸಿನಿಮಾಗಳ ಸಾಲಿನಲ್ಲಿ 'ಗಾಳಿಪಟ-2' ಕೂಡ ಒಂದು.

ಗಾಳಿಪಟ 2

ಗಾಳಿಪಟ 2

  • Share this:
ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ರೊಮ್ಯಾಂಟಿಕ್ ಸಿನಿಮಾ ಗಾಳಿಪಟ-2 (Gaalipata-2) ಬಿಡುಗಡೆಗೆ ಸಿದ್ಧವಾಗಿದೆ. ಶುಭಶುಕ್ರವಾರ ಸಿನಿಮಾ  (Cinema) ಬಿಡುಗಡೆಯಾಗುತ್ತಿದ್ದು ಟ್ರೈಲರ್ ಮೂಲಕ ಈಗಾಗಲೇ ಸಾಕಷ್ಟು ಹವಾ ಸೃಷ್ಟಿಸಿದೆ. ಸೌತ್ ಸಿನಿಮಾಗಳು (South Cinema) ಬ್ಲಾಕ್‌ ಬಸ್ಟರ್‌ ಪಟ್ಟಿಗೆ ಸೇರುತ್ತಿದ್ದರೆ, ಕೆಜಿಎಫ್, ವಿಕ್ರಾಂತ್ ರೋಣದಂತ (Vikrant Rona)  ಕನ್ನಡ ಸಿನಿಮಾಗಳು ಹೊಸ ದಾಖಲೆಗಳನ್ನೇ ಬರೆಯುತ್ತಿವೆ. ಮತ್ತೊಂದು ಕಡೆ ಬಾಲಿವುಡ್‌ನ ಸಾಲು ಸಾಲು ಸಿನಿಮಾಗಳು ಫ್ಲಾಪ್‌ ಲಿಸ್ಟ್‌ಗೆ ಸೇರುತ್ತಿವೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸ್ಯಾಂಡಲ್​ವುಡ್​ನ (Sandalwood) ಸಿನಿ ಪ್ರಿಯರ್ ಹಾಟ್ ಫೇವರೇಟ್ ಸಿನಿಮಾ ಗಾಳಿಪಟದ ಸೀಕ್ವೆಲ್ ಬಿಡುಗಡೆಗೆ ಸಿದ್ಧವಾಗಿದೆ.

ಗೋಲ್ಡನ್‌ ಸ್ಟಾರ್ ‌ಗಣೇಶ್‌ ಹಾಗೂ ಯೋಗರಾಜ್‌ ಭಟ್‌ ಕಾಂಬಿನೇಷನ್‌ ಮತ್ತೊಮ್ಮೆ ವರ್ಕೌಟ್‌ ಆಗುತ್ತಿದೆ. ಸದ್ಯ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಚಲನ ಸೃಷ್ಟಿಸಿರುವ ಸಿನಿಮಾಗಳ ಸಾಲಿನಲ್ಲಿ 'ಗಾಳಿಪಟ-2' ಕೂಡ ಒಂದು. ಆಗಸ್ಟ್​ 12ರಂದು  ಅಂದರೆ ನಾಳೆ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಈಗಾಗಲೇ ಬುಕಿಂಗ್​ ಆರಂಭ ಆಗಿದ್ದು ಜನರು ಮೊದಲ ದಿನವೇ ಸಿನಿಮಾ ನೋಡಲು ಆಸಕ್ತಿ ತೋರಿಸಿದ್ದಾರೆ.

ಅಕ್ಷಯ್ ಕುಮಾರ್ ಸಿನಿಮಾಗಿಂತ ಜೋರಿದೆ ಹವಾ

ಯೋಗರಾಜ್​ ಭಟ್​ ನಿರ್ದೇಶನದ ಈ ಚಿತ್ರದಲ್ಲಿ ‘ಗೋಲ್ಡನ್​ ಸ್ಟಾರ್​’ ಗಣೇಶ್​, ಪವನ್​ ಕುಮಾರ್​, ದಿಗಂತ್​ ನಟಿಸಿದ್ದಾರೆ. ಅಚ್ಚರಿ ಎಂದರೆ ಬುಕ್​ ಮೈ ಶೋನಲ್ಲಿ ಅಕ್ಷಯ್​ ಕುಮಾರ್​ ಅಭಿನಯದ ‘ರಕ್ಷಾ ಬಂಧನ್​’ ಸಿನಿಮಾಗಿಂತ ಹೆಚ್ಚಿನ ವೋಟ್ಸ್​ ಪಡೆಯುವ ಮೂಲಕ ‘ಗಾಳಿಪಟ 2’ ಸಿನಿಮಾ ಹವಾ ಮಾಡುತ್ತಿದೆ.

ಇದನ್ನೂ ಓದಿ: Gaalipata 2 Movie: ಗಾಳಿಪಟ 2 ಸಿನಿಮಾದ ಮತ್ತೊಂದುGalipata 2: ಕಜಕಿಸ್ತಾನದಲ್ಲಿ ಗಾಳಿಪಟ 2 ಚಿತ್ರತಂಡ: ಇವರೇ ಸಿನಿಮಾದ ನಾಯಕಿಯರು..! ಸಾಂಗ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

ಈಗಾಗಲೇ ಹಾಡುಗಳು ಹಾಗೂ ಟೀಸರ್‌ ಮೂಲಕ ಈ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದ್ದು ಭಟ್ಟರ 'ಗಾಳಿಪಟ' ಸೀಕ್ವೆಲ್ ಸ್ಕ್ರೀನ್​ಗೆ ಅಪ್ಪಳಿಸಲಿದೆ.‌

ಗಾಳಿಪಟಕ್ಕೆ ಲೈಕ್ಸ್ ಜಾಸ್ತಿ

ಅಕ್ಷಯ್​ ಕುಮಾರ್​ ನಟನೆಯ ರಕ್ಷಾ ಬಂಧನ್’ ಚಿತ್ರಕ್ಕೆ ಬುಕ್​ ಮೈ ಶೋನಲ್ಲಿ ಆಗಸ್ಟ್​ 10ರ ಬೆಳಗ್ಗೆ 10 ಗಂಟೆವರೆಗೆ 39 ಸಾವಿರ ಜನರು ಲೈಕ್ಸ್​ ಮಾಡುವ ಮೂಲಕ ಇಂಟರೆಸ್ಟ್​ ತೋರಿಸಿದ್ದಾರೆ. ‘ಗಾಳಿಪಟ 2’ ಚಿತ್ರಕ್ಕೆ 63 ಸಾವಿರ ಲೈಕ್ಸ್​ ಬಂದಿವೆ. ಆ ಮೂಲಕ ಕನ್ನಡದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಓಪನಿಂಗ್​ ಪಡೆದುಕೊಳ್ಳುವ ಸೂಚನೆ ಸಿಕ್ಕಿದೆ.

ಹಾಡು ಬಿಡುಗಡೆ ಮಾಡಿದ ಕಿಚ್ಚ ಸುದೀಪ್

ಪ್ರಾಯಶಃ ಎಂದು ಹೆಸರಿರುವ ಈ ಹಾಡನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಹಾಡಿನ ಕುರಿತು ಮಾತನಾಡಿದ ಅವರು, ಒಂದೊಳ್ಳೆ ಸಿನಿಮಾ ಇದಾಗಲಿದೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ನಾವು ಬದುಕಿರಬಹುದು ಇಲ್ಲ ಪ್ರಾಯಶಃ ಕನಸಿರಬಹುದು ಎಂದು ಆರಂಭವಾಗುವ ಈ ಹಾಡನ್ನು ಸೋನು ನಿಗಮ್ ಹಾಡಿದ್ದು, ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: Gaalipata 2 Movie: ಗಾಳಿಪಟ 2 ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಸಂಚಲನ ಮೂಡಿಸಿತ್ತು.
ಗಣೇಶ್​, ದಿಗಂತ್, ಪವನ್ ಒಟ್ಟಿಗೆ ನಿಂತಿರುವುದರಿಂದ ಆರಂಭವಾಗುವ ಈ ಟ್ರೈಲರ್​ ನೀರುಕೋಟೆ ಎನ್ನುವ ಊರಿನಲ್ಲಿ ನಡೆಯುವ ಕಥೆಯನ್ನು ಯೋಗರಾಜ್​ ಭಟ್ಟರ ಧ್ವನಿಯಲ್ಲಿ ಕೇಳಬಹುದು.



ಶಿಕ್ಷಕರ ಪಾತ್ರದಲ್ಲಿ ಅನಂತ್​ ನಾಗ್ ಎಂದಿನಂತೆ ಸಿನಿಮಾಗೆ ಒಂದು ಲುಕ್. ಮೂವರು ಜನರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದರ ಝಲಕ್​ ಅನ್ನು ನಾವು ಟ್ರೈಲರ್​ನಲ್ಲಿ ನೋಡಬಹುದು.
Published by:Divya D
First published: