Gaalipata 2 Trailer: ಭಾನು ಭೂಮಿಗೆ ಸೇತುವೆ ಕಟ್ಟಿದವರ ಸಂಕಟ-ಸಂತಸದ ಕಥೆ! ಗಾಳಿಪಟ 2 ಟ್ರೈಲರ್‌ನಲ್ಲಿ ಏನಿದೆ?

Golden Star Ganesh: ಚಿತ್ರದಲ್ಲಿ ಗಣೇಶ್‌, ದಿಗಂತ್‌ ಹಾಗೂ ಪವನ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿ‌ಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಗಾಳಿಪಟ 2

ಗಾಳಿಪಟ 2

  • Share this:
ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಮತ್ತು ನಿರ್ದೇಶಕ ಯೋಗರಾಜ್‌ ಭಟ್‌ (Director Yograj Bhat) ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ 'ಗಾಳಿಪಟ-2' (Gaalipata 2) ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಸಿನಿಮಾದ ಹಾಡುಗಳು ಎಲ್ಲೆಡೆ ಸದ್ದು ಮಾಡುತ್ತಿದೆ. ಇದೀಗ ಈ ಸಿನಿಮಾ ಟ್ರೈಲರ್ ರಿಲೀಸ್​ ಆಗಿದ್ದು, ಬಿಡುಗಡೆಯಾದ ಕೇವಲ ನಿಮಿಷಗಳಲ್ಲಿ ಉತ್ತಮ ವೀವ್ಸ್​ ಪಡೆದುಕೊಂಡಿದೆ.

ಟ್ರೈಲರ್ ರಿಲೀಸ್​

ಗಣೇಶ್​, ದಿಗಂತ್, ಪವನ್ ಒಟ್ಟಿಗೆ ನಿಂತಿರುವುದರಿಂದ ಆರಂಭವಾಗುವ ಈ ಟ್ರೈಲರ್​ ನೀರುಕೋಟೆ ಎನ್ನುವ ಊರಿನಲ್ಲಿ ನಡೆಯುವ ಕಥೆಯನ್ನು ಯೋಗರಾಜ್​ ಭಟ್ಟರ ಧ್ವನಿಯಲ್ಲಿ ಕೇಳಬಹುದು. ಶಿಕ್ಷಕರ ಪಾತ್ರದಲ್ಲಿ ಅನಂತ್​ ನಾಗ್ ಎಂದಿನಂತೆ ಸಿನಿಮಾಗೆ ಒಂದು ಲುಕ್. ಮೂವರು ಜನರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದರ ಝಲಕ್​ ಅನ್ನು ನಾವು ಟ್ರೈಲರ್​ನಲ್ಲಿ ನೋಡಬಹುದು. ಭೈರೇಗೌಡರ ಮಗ ಗಣೇಶ್, ಮುಗಿಲ್ ಪೇಟೆ ದಿಗಂತ, ವಿಧೇಯ ವಿದ್ಯಾರ್ಥಿ ಭೂಷಣ್ ಹೀಗೆ ಮೂರು ವಿಚಿತ್ರ ಕ್ಯಾರೆಕ್ಟರ್ಗಳು, ಅವರ ತರಲೆಗಳಿರುವ ಈ ಟ್ರೈಲರ್ ಸಿನಿಮಾ ಎಷ್ಟು ಮಜಾವಾಗಿರಬಹುದು ಎಂಬುದರ ಬಗ್ಗೆ  ಐಡಿಯಾ ಕೊಡುತ್ತದೆ.

ಮೂವರು ಜೀವನ ಮೊದಲು ಹೇಗಿರುತ್ತೆ, ಹುಡುಗಿಯರು ಬಂದ ಮೇಲೆ ಹೇಗೆ ಬದಲಾಗುತ್ತದೆ ಎಂಬುದನ್ನು ಸಹ ನಾವು ಸಣ್ಣದಾಗಿ ತಿಳಿಯಬಹುದು. ಯೋಗರಾಜ್​ ಭಟ್ಟರ ಧ್ವನಿಯಲ್ಲಿ ಇದು ಭಾನು ಭೂಮಿಗೆ ಸೇತುವೆ ಕಟ್ಟಿದವರು ಸಂಕಟದ ಕಥೆ, ಸಂಕಟದ ಕಥೆ ಎಂಬ ಮಾತು ಕೇಳಿದಾಗ ಸಿನಿಮಾ ಬಗ್ಗೆ ನಿರೀಕ್ಷೆ ಇನ್ನೂ ಹೆಚ್ಚಾಗುತ್ತದೆ ಹಾಗೂ ಮನಸ್ಸಿಗೆ ನಾಟುತ್ತದೆ. ಕಾಮಿಡಿ ದೃಶ್ಯಗಳ ಜೊತೆ ಎಮೋಷನ್​ಗಳು ಸಹ ಇದ್ದು, ಕೊನೆಯಲ್ಲಿ ಗಣೇಶ್​ ನಾನು ಯಾವಾಗಲೂ ನಗುತ್ತಿರುತ್ತೇನೆ, ಅಳುವುದಿಲ್ಲ ಎಂಬ ಮಾತು ಕಾಡುತ್ತದೆ. ಈ ಟ್ರೈಲರ್ ನಿಮ್ಮನ್ನ ನಗಿಸುವುದಲ್ಲದೇ, ಅಳಿಸುತ್ತದೆ ಎಂದರೆ ತಪ್ಪಲ್ಲ.
View this post on Instagram


A post shared by Ganesh (@goldenstar_ganesh)


ಇದನ್ನೂ ಓದಿ: ರಾಕೆಟ್ರಿ ಸಿನಿಮಾ ಇಷ್ಟಪಟ್ಟ ರಜನಿ; ಹೀರೋ ಮಾಧವನ್, ರಿಯಲ್ ಹೀರೋ ನಂಬಿ ನಾರಾಯಣನ್​ಗೆ ತಲೈವಾ ಸನ್ಮಾನ

ನಿರ್ದೇಶಕ ಯೋಗರಾಜ್ ಭಟ್ ಎಂದರೆ ಒಂದು ರೀತಿಯ ಡಿಫರೆಂಟ್ ಎಂದು ಹೇಳಬಹುದು. ಅವರ ನಿರ್ದೇಶನದ ಗಾಳಿಪಟ ಚಿತ್ರದ ಸೀಕ್ವೆಲ್ ಆಗಿ ಗಾಳಿಪಟ 2 ತೆರೆಕಾಣಲು ಸಿದ್ದವಾಗಿದೆ. ಈಗಾಗಲೇ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ‘ಒಂದಿಷ್ಟು ಮೊಹಬ್ಬತ್ ಜೊತೆಗೆ ಮತ್ತೊಂದಷ್ಟು ಸ್ನೇಹವನ್ನು ಹೊತ್ತು ಇದೇ ಆಗಸ್ಟ್ 12ರಂದು ನಿಮ್ಮ ಮುಂದೆ ಬರ್ತಿದ್ದೀವಿ. ಅದೇ ಹಳೆಯ ಅಕ್ಕರೆ ಮತ್ತು ಪ್ರೀತಿಯನ್ನು ಬಯಸುವ ಗಾಳಿಪಟ 2 ಚಿತ್ರತಂಡ‘ ಎಂದು ಬರೆದು ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್​ ಡೇಟ್​ ಅನೌನ್ಸ್​  ಮಾಡಿದ್ದರು.


ಆಗಸ್ಟ್​ 12ರಂದು ತೆರೆಗೆ

ಇನ್ನು, ನಿರ್ದೇಶಕ ಯೋಗರಾಜ್ ಭಟ್‌ ಹಾಗೂ ಗಣೇಶ್‌ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ‘ಗಾಳಿಪಟ’ ಚಿತ್ರ ಸೂಪರ್ ಹಿಟ್‌ ಆಗಿತ್ತು. ಈಗ ಮತ್ತದೇ ಜೋಡಿ ಮತ್ತೂಮ್ಮೆ 'ಗಾಳಿಪಟ-2' ಚಿತ್ರವನ್ನು ಸಿದ್ಧಗೊಳಿಸಿದ್ದಾರೆ. ಹೀಗಾಗಿ ಇವರಿಬ್ಬರ ಮೇಲೆ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯಿದೆ. ಅಲ್ಲದೇ ಈಗಾಗಲೇ ಬಿಡುಗಡೆಯಾಗಿರುವ ಎಕ್ಸಾಂ ಲಿರಿಕಲ್ ವಿಡಿಯೋ ಸಾಂಗ್ ಸಖತ್ ಸದ್ದು ಮಾಡುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಚಿತ್ರವನ್ನು ರಮೇಶ್‌ ರೆಡ್ಡಿ ನಿರ್ಮಾಣ ಮಾಡಿದ್ದು, ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ: ನೂರು ಕೋಟಿ ಕ್ಲಬ್ ಸೇರಿದ ವಿಕ್ರಾಂತ್ ರೋಣ, ಕಿಚ್ಚನ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್!

ಚಿತ್ರದಲ್ಲಿ ಗಣೇಶ್‌, ದಿಗಂತ್‌ ಹಾಗೂ ಪವನ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿ‌ಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್‌ ನಾಗ್‌, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾಡಿದ್ದಾರೆ.
Published by:Sandhya M
First published: