Gaalipata 2 Movie: ಗಾಳಿಪಟ 2 ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

Prayashaha Song: ನಿರ್ದೇಶಕ ಯೋಗರಾಜ್ ಭಟ್ ಎಂದರೆ ಒಂದು ರೀತಿಯ ಡಿಫರೆಂಟ್ ಎಂದು ಹೇಳಬಹುದು. ಅವರ ನಿರ್ದೇಶನದ ಗಾಳಿಪಟ ಚಿತ್ರದ ಸೀಕ್ವೆಲ್ ಆಗಿ ಗಾಳಿಪಟ 2 ತೆರೆಕಾಣಲು ಸಿದ್ದವಾಗಿದೆ.

ಗಾಳಿಪಟ 2

ಗಾಳಿಪಟ 2

  • Share this:
ಮೂವರು ಜಾಲಿ ಹುಡುಗರ ಕಥೆ ಮೂಲಕ ಗಾಳಿಪಟವನ್ನು (Gaalipata) ಹಾರಿಸಿದ್ದ ಯೋಗರಾಜ್​ ಭಟ್​ (Yograj Bhatt) ಮತ್ತೊಮ್ಮೆ ಈಗ ತಮ್ಮ ಗಾಳಿಪಟ ಹಾರಿಸಲು ಸಜ್ಜಾಗಿದ್ದಾರೆ. ಸುಮಾರು ವರ್ಷದ ಬಳಿಕ ಯೋಗರಾಜ್​ ಭಟ್​ ಮತ್ತೊಮ್ಮೆ ಗಾಳಿಪಟ 2 (Gaalipata 2) ಚಿತ್ರ ನಿರ್ದೇಶಿಸಲು ಸಿದ್ದರಾಗಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಈಗಾಗೇ ಈ ಸಿನಿಮಾದ ಟ್ರೈಲರ್, (Trailer) ಕೆಲ ಹಾಡುಗಳು (Songs) ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಈ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ.  

ಪ್ರಾಯಶಃ ಹಾಡು ಬಿಡುಗಡೆ

ಪ್ರಾಯಶಃ ಎಂದು ಹೆಸರಿರುವ ಈ ಹಾಡನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಹಾಡಿನ ಕುರಿತು ಮಾತನಾಡಿದ ಅವರು, ಒಂದೊಳ್ಳೆ ಸಿನಿಮಾ ಇದಾಗಲಿದೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ನಾವು ಬದುಕಿರಬಹುದು ಇಲ್ಲ ಪ್ರಾಯಶಃ ಕನಸಿರಬಹುದು ಎಂದು ಆರಂಭವಾಗುವ ಈ ಹಾಡನ್ನು ಸೋನು ನಿಗಮ್ ಹಾಡಿದ್ದು,  ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.


ನಿರ್ದೇಶಕ ಯೋಗರಾಜ್ ಭಟ್ ಎಂದರೆ ಒಂದು ರೀತಿಯ ಡಿಫರೆಂಟ್ ಎಂದು ಹೇಳಬಹುದು. ಅವರ ನಿರ್ದೇಶನದ ಗಾಳಿಪಟ ಚಿತ್ರದ ಸೀಕ್ವೆಲ್ ಆಗಿ ಗಾಳಿಪಟ 2 ತೆರೆಕಾಣಲು ಸಿದ್ದವಾಗಿದೆ. ಈಗಾಗಲೇ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ‘ಒಂದಿಷ್ಟು ಮೊಹಬ್ಬತ್ ಜೊತೆಗೆ ಮತ್ತೊಂದಷ್ಟು ಸ್ನೇಹವನ್ನು ಹೊತ್ತು ಇದೇ ಆಗಸ್ಟ್ 12ರಂದು ನಿಮ್ಮ ಮುಂದೆ ಬರ್ತಿದ್ದೀವಿ. ಅದೇ ಹಳೆಯ ಅಕ್ಕರೆ ಮತ್ತು ಪ್ರೀತಿಯನ್ನು ಬಯಸುವ ಗಾಳಿಪಟ 2 ಚಿತ್ರತಂಡ‘ ಎಂದು ಬರೆದು ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್​ ಡೇಟ್​ ಅನೌನ್ಸ್​  ಮಾಡಿದ್ದರು.

ಇದನ್ನೂ ಓದಿ: ಬಿಗ್​ಬಾಸ್​ ಮನೆಗೆ ಕಾಫಿನಾಡು ಚಂದು? ಕುತೂಹಲದಿಂದ ಕಾಯ್ತಿದ್ದಾರೆ ಫ್ಯಾನ್ಸ್

ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಸಂಚಲನ ಮೂಡಿಸಿತ್ತು.
ಗಣೇಶ್​, ದಿಗಂತ್, ಪವನ್ ಒಟ್ಟಿಗೆ ನಿಂತಿರುವುದರಿಂದ ಆರಂಭವಾಗುವ ಈ ಟ್ರೈಲರ್​ ನೀರುಕೋಟೆ ಎನ್ನುವ ಊರಿನಲ್ಲಿ ನಡೆಯುವ ಕಥೆಯನ್ನು ಯೋಗರಾಜ್​ ಭಟ್ಟರ ಧ್ವನಿಯಲ್ಲಿ ಕೇಳಬಹುದು. ಶಿಕ್ಷಕರ ಪಾತ್ರದಲ್ಲಿ ಅನಂತ್​ ನಾಗ್ ಎಂದಿನಂತೆ ಸಿನಿಮಾಗೆ ಒಂದು ಲುಕ್. ಮೂವರು ಜನರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದರ ಝಲಕ್​ ಅನ್ನು ನಾವು ಟ್ರೈಲರ್​ನಲ್ಲಿ ನೋಡಬಹುದು.

kannada actor golden star ganesh movie gaalipata 2 another song release date announced
ಗಾಳಿಪಟ 2


ಆಗಸ್ಟ್​ 12ರಂದು ತೆರೆಗೆ

ಇನ್ನು, ನಿರ್ದೇಶಕ ಯೋಗರಾಜ್ ಭಟ್‌ ಹಾಗೂ ಗಣೇಶ್‌ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ‘ಗಾಳಿಪಟ’ ಚಿತ್ರ ಸೂಪರ್ ಹಿಟ್‌ ಆಗಿತ್ತು. ಈಗ ಮತ್ತದೇ ಜೋಡಿ ಮತ್ತೂಮ್ಮೆ 'ಗಾಳಿಪಟ-2' ಚಿತ್ರವನ್ನು ಸಿದ್ಧಗೊಳಿಸಿದ್ದಾರೆ. ಹೀಗಾಗಿ ಇವರಿಬ್ಬರ ಮೇಲೆ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯಿದೆ. ಅಲ್ಲದೇ ಈಗಾಗಲೇ ಬಿಡುಗಡೆಯಾಗಿರುವ ಎಕ್ಸಾಂ ಲಿರಿಕಲ್ ವಿಡಿಯೋ ಸಾಂಗ್ ಸಖತ್ ಸದ್ದು ಮಾಡುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಚಿತ್ರವನ್ನು ರಮೇಶ್‌ ರೆಡ್ಡಿ ನಿರ್ಮಾಣ ಮಾಡಿದ್ದು, ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ ಎನ್ನಲಾಗಿದೆ.

gaalipata 2 film trailer released today watch here
ಗಾಳಿಪಟ 2


ಇದನ್ನೂ ಓದಿ: ನಾನು ಬಿಗ್​ಬಾಸ್​ ಮನೆಗೆ ಹೋಗಲ್ಲ ಎಂದ ನಿರ್ದೇಶಕ, ನೀವಿದ್ರೆ ಒಂದ್ ಗತ್ತು ಇರುತ್ತೆ ಅಂತಿದ್ದಾರೆ ನೆಟ್ಟಿಗರು

ಚಿತ್ರದಲ್ಲಿ ಗಣೇಶ್‌, ದಿಗಂತ್‌ ಹಾಗೂ ಪವನ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿ‌ಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್‌ ನಾಗ್‌, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾಡಿದ್ದಾರೆ.
Published by:Sandhya M
First published: