Badava Rascal: ಟಾಲಿವುಡ್​ನಲ್ಲೂ ನಟ ರಾಕ್ಷಸನ ಹವಾ, `ಬಡವ ರಾಸ್ಕಲ್‘​ ತೆಲುಗು ಡಬ್ಬಿಂಗ್​ಗೆ ಹೆಚ್ಚಿದ ಡಿಮ್ಯಾಂಡ್​!

ವರ್ಷದ ಕೊನೆಯಲ್ಲಿ ಬಂದ ‘ಬಡವ ರಾಸ್ಕಲ್’ ಚಿತ್ರವನ್ನು ಕನ್ನಡಿಗರು ಹೃದಯ ಸಿಂಹಾಸನದಲ್ಲಿ ಹೊತ್ತು ಮೆರವಣಿಗೆ ಮಾಡಿದರು. ಅಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡಿದ ‘ಬಡವ ರಾಸ್ಕಲ್​’ ಸಾಲ ಮಾಡಿ ಸಿನಿಮಾ ಮಾಡಿದ್ದ ಧನಂಜಯ್ ಜೇಬು ತುಂಬಿಸಿತ್ತು.

ಬಡವ ರಾಸ್ಕಲ್​ ಸಿನಿಮಾದ ಪೋಸ್ಟರ್​

ಬಡವ ರಾಸ್ಕಲ್​ ಸಿನಿಮಾದ ಪೋಸ್ಟರ್​

  • Share this:
    20201 ಡಾಲಿ ಧನಂಜಯ್(Daali Dhananjay)​ಗೆ ಲಕ್ಕಿ(Lucky) ವರ್ಷ ಅಂದ್ರೆ ತಪ್ಪಾಗಲಾರದು. ಕಳೆದ ವರ್ಷದ ಆರಂಭದಲ್ಲೇ ಬಂದ ಆಕ್ಷನ್ ಫ್ರಿನ್ಸ್ ಅಭಿನಯದ ‘ಪೊಗರು’(Pogaru) ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ಧೂಳ್ ಎಬ್ಬಿಸಿತ್ತು. ಈ ಚಿತ್ರದಲ್ಲಿ ಡಾಲಿ ಕೂಡ ನಟಿಸಿದ್ರು ಅನ್ನೋದು ವಿಶೇಷ . ಅಲ್ಲದೆ ಕಳೆದ ವರ್ಷ ಏಪ್ರಿಲ್​ನಲ್ಲಿ ರಿಲೀಸ್ ಆದ ಅಪ್ಪು ಅಭಿನಯ ಪವರ್ ಫುಲ್​ ಸಿನಿಮಾ ‘ಯುವರತ್ನ’(Yuvarathna) ಕೂಡ ಹಿಟ್ ಲಿಸ್ಟ್ ಸೇರಿತ್ತು. ಇನ್ನು ಈ ಚಿತ್ರದಲ್ಲಿ ಕ್ಲಾಸ್ ವಿಲನ್ ಆಗಿ ಅಪ್ಪು ಎದುರು ಡಾಲಿ ಅಬ್ಬರಿಸಿದ್ದರು. ಇವಲ್ಲದೆ ಡಾಲಿ ಅಭಿನಯದ ‘ಸಲಗ’(Salaga), ‘ರತ್ನನ್ ಪ್ರಪಂಚ ’(Rathnan Parapancha) ಸಿನಿಮಾಗಳು ಕೂಡ ಡಾಲಿ ಕೈ ಹಿಡಿದಿದ್ದವು. ಇದನ್ನು ಸೂಕ್ಷಮವಾಗಿ ಗಮನಿಸಿದ್ದ ಗಾಂಧಿನಗರ ಪಂಡಿತರು ನಟ ರಾಕ್ಷಸ ಡಾಲಿ ಧನಂಜಯ್ ಅವರಿಗೆ  2021 ಲಕ್ಕಿ ಇಯರ್ ಎಂದು ಡಿಸೈಡ್ ಮಾಡಿದ್ದರು. 2021ರಲ್ಲಿ ಡಾಲಿ ಮುಟ್ಟಿದೆಲ್ಲ ಚಿನ್ನ ಎಂಬುವಂತೆ  ಆಗಿತ್ತು. ಅದಕ್ಕೆ ಪೂರಕವಾಗಿ ಡಾಲಿ ಧನಂಜಯ್​ಗೆ 2021ರ ಕೊನೆಯಲ್ಲಿ ಕೊನೆಗೂ ನಾಯಕನಾಗಿ ಒಂದು ದೊಡ್ಡ ಸಕ್ಸಸ್ ಸಿಕ್ತು. ಡಾಲಿ ನಿರ್ಮಾಣ ಮಾಡಿ ನಾಯಕನಾಗಿ ಅಭಿನಯಿಸಿದ್ದ ‘ಬಡವ ರಾಸ್ಕಲ್’(Badava Rascal) ಗೆಲುವಿಲ್ಲದೆ ಬಡವಾಗಿದ್ದ ಡಾಲಿಯನ್ನು ಗೆಲ್ಲಿಸಿತ್ತು. ವರ್ಷದ ಕೊನೆಯಲ್ಲಿ ಬಂದ ‘ಬಡವ ರಾಸ್ಕಲ್’ ಚಿತ್ರವನ್ನು ಕನ್ನಡಿಗರು ಹೃದಯ ಸಿಂಹಾಸನದಲ್ಲಿ ಹೊತ್ತು ಮೆರವಣಿಗೆ ಮಾಡಿದರು. ಅಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡಿದ ‘ಬಡವ ರಾಸ್ಕಲ್​’ ಸಾಲ ಮಾಡಿ ಸಿನಿಮಾ ಮಾಡಿದ್ದ ಧನಂಜಯ್ ಜೇಬು ತುಂಬಿಸಿತ್ತು.

    ಟಾಲಿವುಡ್​​ನಲ್ಲೂ ‘ಬಡವ ರಾಸ್ಕಲ್​’ಗೆ ಡಿಮ್ಯಾಂಡ್  

    ಹೌದು ಕನ್ನಡದಲ್ಲಿ ಹಿಟ್ ಲಿಸ್ಟ್ ಸೇರಿರುವ ‘ಬಡವ ರಾಸ್ಕಲ್ ’ ಚಿತ್ರಕ್ಕೆ ತೆಲುಗಿನ ಡಬ್ಬಿಂಗ್​ಗೆ ಡಿಮ್ಯಾಂಡ್ ಬಂದಿದೆಯಂತೆ. ತೆಲುಗಿನಲ್ಲಿ ‘ಪುಷ್ಪ’ ಚಿತ್ರ ಹಿಟ್ ಅದ  ನಂತರ ಡಾಲಿಗೆ ತೆಲುಗು ನಾಡಲ್ಲಿ ಅಭಿಮಾನಿ ಬಳಗ ಬೆಳೆದಿದ್ದು, ಬಡವ ರಾಸ್ಕಲ್ ಸಿನಿಮಾವನ್ನ ತೆಲುಗಿನಲ್ಲಿ ಡಬ್ ಮಾಡಿ ರಿಲೀಸ್ ಮಾಡುವಂತೆ ಟಾಲಿವುಡ್ ಮಂದಿ ಕೇಳ್ತಾ ಇದ್ದಾರಂತೆ. ಅಲ್ಲದೆ ಬಡವ ರಾಸ್ಕಲ್ ಚಿತ್ರತಂಡ ಈಗಾಗಲೇ ತೆಲುಗಿನ ಡಬ್ಬಿಂಗ್ ಕೆಲಸ ಶುರುಮಾಡಿದ್ದು ಫೆಬ್ರವರಿಯಲ್ಲಿ ಸಿನಿಮಾ ರಿಲೀಸ್ ಮಾಡುವ ಅಲೋಚನೆಯಲ್ಲಿದ್ದಾರೆ.

    ಇದನ್ನು ಓದಿ: ಪ್ಯಾನ್​ ಇಂಡಿಯಾ ಸಿನಿಮಾ ಅಖಾಡಕ್ಕೆ ಶಿವಣ್ಣ ಎಂಟ್ರಿ.. ರೆಟ್ರೋ ಗೆಟಪ್​ನಲ್ಲಿ ಮಿಂಚಲಿದ್ದಾರೆ ಸೆಂಚೂರಿ ಸ್ಟಾರ್​!

    ತಮಿಳು ಒಟಿಟಿಗೂ ಸೇಲ್​ ಆದ ಡಾಲಿ ಸಿನಿಮಾ!

    ಇದರ ಜೊತೆಗೆ " ಬಡವ ರಾಸ್ಕಲ್ " ತಮಿಳು ಒಟಿಟಿಗೂ ಸೇಲ್ ಆಗಿದ್ದು ಶೀಘ್ರದಲ್ಲೇ  ಆನ್ ಲೈನ್ ನಲ್ಲಿ ತಮಿಳು ವರ್ಸನ್ " ಬಡವ ರಾಸ್ಕಲ್" ದರ್ಶನ ಕೊಡಲಿದ್ದಾನೆ. ಒಟ್ಟಿನಲ್ಲಿ ಡಾಲಿ ಧನಂಜಯ್ ಒಂದು ದಶಕಕ್ಕೂ  ಹೆಚ್ಚು ಕಾಲ ಚಿತ್ರರಂಗದಲ್ಲಿ ನೆಲೆಯೂರಲು ಮಾಡಿದ್ದ ಹೋರಾಟಕ್ಕೆ ಈಗ ಪ್ರತಿಫಲ ಸಿಗುವ ಸಮಯ ಬಂದಿದ್ದು, ಕನ್ನಡ  ಮಾತ್ರವಲ್ಲ ನೆರೆ ರಾಜ್ಯಗಳಲ್ಲಿಯೂ ನಮ್ಮ ಅರಸಿಕರೆಯ ಹೈದನಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಇದು ನಟ ರಾಕ್ಷಸ ಡಾಲಿಗಷ್ಟೇ ಅಲ್ಲ ಇಡೀ ಕರುನಾಡೆ ಧನಂಜಯನ ವಿಜಯವನ್ನು ಸಂಭ್ರಮಿಸ್ತಿದೆ.

    ಇದನ್ನು ಓದಿ: ರಸ್ತೆಗೆ ಪುನೀತ್​ ಹೆಸರಿಡುವುದಕ್ಕೆ ಅಂಬರೀಷ್​ ಅಭಿಮಾನಿಗಳ ಮನಸ್ತಾಪ, ಅಸಲಿಗೆ ನಡೆದಿದ್ದೇನು?

    ಇಂದಿನಿಂದ ವೂಟ್​ನಲ್ಲಿ ಬಡವ ರಾಸ್ಕಲ್​ ಸ್ಟ್ರೀಮಿಂಗ್​!

    ಸ್ಯಾಂಡಲ್​ವುಡ್​ನಲ್ಲಿ ನೆಲೆಯೂರಲು ಧನಂಜಯ್ ಹರಸಾಹಸ ಪಟ್ಟಿದ್ದಾರೆ. ‘ಟಗರು’ ಸಿನಿಮಾದಲ್ಲೂ ಹಿಟ್​ ಆಗದಿದ್ದರೆ ನಾನು ನಟನೆ  ಮಾಡುವುದನ್ನು ನಿಲ್ಲಿಸಬೇಕು ಎಂದು ಅಂದುಕೊಂಡಿದ್ದೆ ಎಂದು ಡಾಲಿ ಈ ಹಿಂದೆ ಹಲವಾರು ಬಾರಿ ಹೇಳಿದ್ದಾರೆ. ಇನ್ನೂ ‘ಬಡವ ರಾಸ್ಕಲ್​’ ಮಧ್ಯಮ ವರ್ಗದ ಕುಟುಂಬದ ಕಥೆಯಾಗಿತ್ತು. ಹೀಗಾಗಿ ಬಹುಬೇಗನೆ ಎಲ್ಲರಿಗೂ ಇಷ್ಟವಾಗಿತ್ತು. ಇದೀಗ ಇಂದಿನಿಂದ ಈ ಸಿನಿಮಾ ವೂಟ್​ನಲ್ಲಿ ಲಭ್ಯವಿದೆ.

    (ವರದಿ - ಸತೀಶ್​)
    Published by:Vasudeva M
    First published: