ಕಿರುಚಿತ್ರ ಮಾಡುವ ಕಲೆ ನಿಮಗಿದೆಯಾ? ಸುನೀಲ್​ ಶೆಟ್ಟಿ ನೀಡುತ್ತಿದ್ದಾರೆ ಹಿಗೋಂದು ಅವಕಾಶ

FTC shortfim challenge: ಲಾಕ್​ಡೌನ್​ ವೇಳೆಯಲ್ಲಿ ಪ್ರತಿಭೆಗಳಿಗೆ ಹೊಸದೊಂದು ಅವಕಾಶವನ್ನು ನೀಡಲು ಸುನಿಲ್​ ಶೆಟ್ಟಿ ‘ಎಫ್​ಟಿಸಿ ಶಾರ್ಟ್ಸ್​​​‘ ಚಾಲೆಂಜ್​ ಆರಂಭಿಸಿದ್ದಾರೆ. ಸೃಜನಶೀಲನೆಯನ್ನು ಬಳಸಿಕೊಂಡು ಉತ್ತಮವಾದ ಕಿರುಚಿತ್ರ ಸಿದ್ಧಪಡಿಸಿ ಕಳುಹಿಸಿಕೊಡಿ ಎಂದು ಕೇಳಿದ್ದಾರೆ.

FTC

FTC

 • Share this:
  ಬಾಲಿವುಡ್​ನ ಖ್ಯಾತ ನಟ ಸುನೀಲ್​ ಶೆಟ್ಟಿ ಸೂಪರ್​ ಆಫರ್​ರೊಂದನ್ನು ನೀಡಿದ್ದಾರೆ. ಲಾಕ್​ಡೌನ್​ ಅವಧಿಯಲ್ಲಿ ಮನೆಯಲ್ಲಿ ಇದ್ದುಕೊಂಡು ಕಾಲ ಕಳೆಯುತ್ತಿರುವರಿಗೆ ಕಿರುಚಿತ್ರವನ್ನು ಸಿದ್ಧಪಡಿಸಿ ಕಳುಹಿಸುವಂತೆ ಕೋರಿದ್ದಾರೆ.

  ಲಾಕ್​ಡೌನ್​ ವೇಳೆಯಲ್ಲಿ ಪ್ರತಿಭೆಗಳಿಗೆ ಹೊಸದೊಂದು ಅವಕಾಶವನ್ನು ನೀಡಲು ಸುನಿಲ್​ ಶೆಟ್ಟಿ ‘ಎಫ್​ಟಿಸಿ ಶಾರ್ಟ್ಸ್​​​‘ ಚಾಲೆಂಜ್​ ಆರಂಭಿಸಿದ್ದಾರೆ. ಸೃಜನಶೀಲನೆಯನ್ನು ಬಳಸಿಕೊಂಡು ಉತ್ತಮವಾದ ಕಿರುಚಿತ್ರ ಸಿದ್ಧಪಡಿಸಿ ಕಳುಹಿಸಿಕೊಡಿ ಎಂದು ಕೇಳಿದ್ದಾರೆ.

  ಹಾಗೆಂದ ಮಾತ್ರಕ್ಕೆ ಮನೆಯಿಂದ ಹೊರ ಹೋಗಿ ಕಿರುಚಿತ್ರವನ್ನು ನಿರ್ಮಿಸುವಂತಿಲ್ಲ. ಮನೆಯಲ್ಲಿದ್ದುಕೊಂಡು ಒಳ್ಳೆಯ ಕಾನ್ಸೆಪ್ಟ್​​ ಸಿದ್ಧಪಡಿಸಿ ಕಿರುಚಿತ್ರವನ್ನು ತಯಾರಿಸಬೇಕು. ಅದಕ್ಕೂ ಮೊದಲು www.FTCtalent.com ನಲ್ಲಿ ಲಾಗಿನ್​​ ಮಾಡಿಕೊಂಡು ರಿಜಿಸ್ಟರ್​ ಮಾಡಬೇಕು. ರಿಜಿಸ್ಟರ್​​ ಮಾಡಿಕೊಂಡ ನಂತರ ಕಿರುಚಿತ್ರ ಹೇಗಿರಬೇಕು? ಅದರ ಮಾನದಂಡಗಳೇನು? ಎಂಬ ಮಾಹಿತಿ ಸಿಗಲಿದೆ.

  ಪ್ರತಿಭೆಗಳಿಗೆ ಒಂದೊಳ್ಳೆ ಅವಕಾಶ ನೀಡಲು ಸುನಿಲ್​ ಶೆಟ್ಟಿ ಲಾಕ್​ಡೌನ್​ ಅವಧಿಯಲ್ಲಿ ಇಂತಹದೊಂದು ಕಾಸ್ಸೆಫ್ಟ್​ ಹೊರತಂದಿದ್ದಾರೆ. ಇನ್ನು ಕಿರುಚಿತ್ರ ಸಿದ್ಧ ಪಡಿಸುವವರು ತಮ್ಮ ಫೋನ್​ನಲ್ಲಿ ಸೆರೆ ಹಿಡಿಯಬಹುದಾಗಿದೆ. ಕಿರುಚಿತ್ರಕ್ಕೆ ಎಡಿಟಿಂಗ್​ ಮತ್ತು ಸೌಂಡಿಂಗ್​​ ನೀಡಬಹುದಾಗಿದೆ.

  ಇಷ್ಟೇ ಅಲ್ಲದೆ, ಕಿರುಚಿತ್ರದಲ್ಲಿ ಮನೆಯವರನ್ನು ಮತ್ತು ಸಾಕು ಪ್ರಾಣಿಗಳನ್ನು ಕೂಡ ಬಳಸಲು ಅವಕಾಶವಿದೆ. ಉತ್ತಮವಾಗಿ ಮೂಡಿ ಬಂದ ಮೂರು ಕಿರುಚಿತ್ರಗಳಿಗೆ ದೊಡ್ಡ ಮೊತ್ತದ ಬಹುಮಾನವನ್ನು ಸುನಿಲ್​ ಶೆಟ್ಟಿ ನೀಡಲಿದ್ದಾರೆ. ಬೆಸ್ಟ್​ ಡೈರೆಕ್ಟರ್​​, ಬೆಸ್ಟ್​ ಆ್ಯಕ್ಟರ್​​​, ಬೆಸ್ಟ್​ ಸೌಂಡ್​​​, ಬೆಸ್ಟ್​​ ಎಡಿಟಿಂಗ್​​​​ ಬಹುಮಾನ ಕೂಡ ಸಿಗಲಿದೆ. ಅದರ ಜೊತೆಗೆ ಬೆಸ್ಟ್​ 3 ಕಿರುಚಿತ್ರಗಳನ್ನು ಟಿವಿ ಅಥವಾ ಒಟಿಟಿ ಫ್ಲಾಟ್​ಫಾರ್ಮ್​ನಲ್ಲೂ ಬಿಡುಗಡೆ ಮಾಡಲಿದ್ದಾರೆ.

  iPhone SE: ಅತಿ ಕಡಿಮೆ ಬೆಲೆಗೆ ಸಿಗಲಿಗೆ ಐಫೋನ್​ ಎಸ್​ಇ; ಹೇಗೆ ಖರೀದಿಸಬಹುದು ಗೊತ್ತಾ?
  First published: