- ಅನಿತಾ ಈ,
'ಕೆ.ಜಿ.ಎಫ್ ಚಾಪ್ಟರ್-2' ಸಿನಿಮಾ ಮುಹೂರ್ತ ಏನೋ ನೆರವೇರಿಸಿಕೊಂಡು ಬಿಡ್ತು. ಆದರೆ ಚಿತ್ರೀಕರಣ ಮಾತ್ರ ಯಾವಾಗ ಅನ್ನೋ ಪ್ರಶ್ನೆ ಮಾತ್ರ ಹಾಗೇ ಉಳಿದಿತ್ತು. ಅಲ್ಲದೆ ಈ ಚಿತ್ರಕ್ಕಾಗಿಯೇ ಬೆಂಗಳೂರಿನ ಮಲ್ಲೇಶ್ವರದಲ್ಲಿ ಇತ್ತೀಚೆಗೆ ಆಡಿಷನ್ ಕೂಡ ನಡೆಸಲಾಗಿತ್ತು. ಇದಾದ ನಂತರವೂ ಸಿನಿಮಾದ ಚಿತ್ರೀಕರಣದ ಬಗ್ಗೆ ಯಾರೂ ಉಸಿರು ಬಿಟ್ಟಿರಲಿಲ್ಲ.
ಕಳೆದ ಕೆಲ ವಾರಗಳಿಂದ ಈ ಚಿತ್ರ ಇನ್ನೂ ಚಿತ್ರೀಕರಣ ಏಕೆ ಆರಂಭಿಸಿಲ್ಲ ಅನ್ನೋ ಪ್ರಶ್ನೆಗೆ ಸೆಟ್ ನಿರ್ಮಾಣ ಸಮಯ ತೆಗೆದುಕೊಳ್ತಿದೆ ಅನ್ನೋ ಸುದ್ದಿ ಕೇಳಿ ಬಂದಿತ್ತು. ಆದರೆ ಈಗ ರಾಕಿ ಭಾಯ್ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ.
ಇದನ್ನೂ ಓದಿ: KGF Chapter 2: ಹೊಸ ದಾಖಲೆಯತ್ತ 'ಕೆ.ಜಿ.ಎಫ್ ಚಾಪ್ಟರ್ 2': ಇದರ ಬಜೆಟ್ ಕೇಳಿದ್ರೆ ದಂಗಾಗುತ್ತೀರಾ..!
'ಕೆ.ಜಿ.ಎಫ್ ಚಾಪ್ಟರ್-2' ಶೂಟಿಂಗ್ ಯಾವಾಗ ? ಶೂಟಿಂಗ್ ಯಾವಾಗ ಅನ್ನೋ ಪ್ರಶ್ನೆಯನ್ನೇ ಎಲ್ಲರೂ ಕೇಳುತ್ತಿದ್ದರು. ಈಗ ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ 'ಕೆ.ಜಿ.ಎಫ್' ಚಿತ್ರೀಕರಣಕ್ಕೆ ಕಿಕ್ ಸ್ಟಾರ್ಟ್ ಸಿಕ್ಕಿದೆ. ಚಿತ್ರೀಕರನದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಛಾಯಾಗ್ರಾಹಕ ಭುವನ್ ಗೌಡ ಅವರ ಫೊಟೋಗಳು ಸದ್ಯ ವೈರಲ್ ಆಗಿವೆ. ಪ್ರಶಾಂತ್ ನೀಲ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ