Saaho: ಸಾಹೋ ಸಿನಿಮಾ ಕದ್ದ ಮಾಲಾ? ರೊಚ್ಚಿಗೆದ್ದಿದ್ದೇಕೆ ಫ್ರೆಂಚ್ ನಿರ್ದೇಶಕ ?

Saaho: ಸಾಹೋ ಸಿನಿಮಾ ರಿಲೀಸ್ ಆದಮೇಲೂ ಜೈಹೋ ಅಂತಾರಾ ಅಂದ್ರೆ, ಪ್ರೇಕ್ಷಕರು ಓಹೋ ಅಂತ ಥಿಯೇಟರ್​ಗಳಿಂದ ಓಟ ಕಿತ್ತಿದ್ದಾರೆ. ಸಾವಿರ ಕೋಟಿ ಪಕ್ಕಾ ಎನ್ನುತ್ತ ಲೆಕ್ಕ ಹಾಕುತ್ತಿದ್ದರೆ, 500 ಕೋಟಿ ದಾಟೋದೂ ಕಷ್ಟ ಎನಿಸುವಷ್ಟರ ಮಟ್ಟಿಗೆ ಹೀನಾಯ ಪರಿಸ್ಥಿತಿ ಚಿತ್ರತಂಡದ್ದು. ಆ್ಯಕ್ಷನ್ ಹೊರತುಪಡಿಸಿದರೆ ಸಿನಿಮಾದಲ್ಲಿ ಏನೇನೂ ಇಲ್ಲ, ಬೋರಿಂಗ್ ಅನ್ನೋ ಮಾತುಗಳ ನಡುವೆಯೇ ಮತ್ತೊಂದು ಶಾಕಿಂಗ್ ನ್ಯೂಸ್ ದೊರೆತಿದೆ.

Anitha E | news18-kannada
Updated:September 6, 2019, 9:44 AM IST
Saaho: ಸಾಹೋ ಸಿನಿಮಾ ಕದ್ದ ಮಾಲಾ? ರೊಚ್ಚಿಗೆದ್ದಿದ್ದೇಕೆ ಫ್ರೆಂಚ್ ನಿರ್ದೇಶಕ ?
ಸಾಹೋ ಸಿನಿಮಾದ ಪೋಸ್ಟರ್​
  • Share this:
ಈ ವರ್ಷದ ಬಹು ನಿರೀಕ್ಷಿತ ಭಾರತೀಯ ಸಿನಿಮಾ ಎನಿಸಿಕೊಂಡಿದ್ದ 'ಸಾಹೋ', ಮಕಾಡೆ ಮಲಗಿದೆ. ಎಲ್ಲರ ನಿರೀಕ್ಷೆಗಳನ್ನೂ ಹುಸಿಗೊಳಿಸಿ, ಕಲೆಕ್ಷನ್ ವಿಷಯದಲ್ಲೂ ಹಿಂದೆ ಬಿದ್ದಿದೆ. ಇನ್ನು 'ಸಾಹೋ'ಗೆ ಪ್ರೇಕ್ಷಕರು ಜೈಹೋ ಅನ್ನೋದು ಕಷ್ಟ ಎನ್ನುತ್ತಿರುವಾಗಲೇ, ಪ್ರಭಾಸ್ ಮತ್ತು ತಂಡಕ್ಕೆ ಫ್ರೆಂಚ್ ನಿರ್ದೇಶಕನೊಬ್ಬರು ಶಾಕ್ ನೀಡಿದ್ದಾರೆ. 'ನನ್ನ ಸಿನಿಮಾ ಕತೆ ಕದ್ದಿದ್ದೀರಾ, ಹೋಗಲಿ ಅದನ್ನಾದರೂಸರಿಯಾಗಿ ಮಾಡಿ' ಎಂದು ಚಾಟಿ ಬೀಸಿದ್ದಾರೆ.

'ಸಾಹೋ' ಸುಜಿತ್ ನಿರ್ದೇಶನದ ಅದ್ಧೂರಿ ಸಿನಿಮಾ. 'ಬಾಹುಬಲಿ' ಪ್ರಭಾಸ್ ಮತ್ತು ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್ ನಟಿಸಿರುವ ಹೈಫೈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಬಹುತಾರಾಗಣದ ಬಹುಕೋಟಿ ಅರ್ಥಾತ್ ಬರೋಬ್ಬರಿ 350 ಕೋಟಿ ರೂಪಾಯಿ ಬಜೆಟ್‍ನಲ್ಲಿ ನಿರ್ಮಾಣವಾಗಿರುವ ಭರ್ಜರಿ ಸಿನಿಮಾ. ವಿಶ್ವದಾದ್ಯಂತ 5 ಸಾವಿರಕ್ಕೂ ಹೆಚ್ಚು ತೆರೆಗಳಲ್ಲಿ ರಿಲೀಸ್ ಆದ ಚಿತ್ರ. ಹೀಗೆ ಸಾಹೋ ರಿಲೀಸ್‍ಗೂ ಮುನ್ನ ಮೂಡಿಸಿದ್ದ ನಿರೀಕ್ಷೆ, ಕುತೂಹಲಗಳನ್ನು ನೋಡಿದರೆ, ಜೈಹೋ ಅನ್ನದವರೇ ಇಲ್ಲ.

It seems this second "freemake" of Largo Winch is as bad as the first one. So please Telugu directors, if you steal my work, at least do it properly?

ಆದರೆ ಸಿನಿಮಾ ರಿಲೀಸ್ ಆದಮೇಲೂ ಜೈಹೋ ಅಂತಾರಾ ಅಂದ್ರೆ, ಪ್ರೇಕ್ಷಕರು ಓಹೋ ಅಂತ ಥಿಯೇಟರ್​ಗಳಿಂದ ಓಟ ಕಿತ್ತಿದ್ದಾರೆ. ಸಾವಿರ ಕೋಟಿ ಪಕ್ಕಾ ಎನ್ನುತ್ತ ಲೆಕ್ಕ ಹಾಕುತ್ತಿದ್ದರೆ, 500 ಕೋಟಿ ದಾಟೋದೂ ಕಷ್ಟ ಎನಿಸುವಷ್ಟರ ಮಟ್ಟಿಗೆ ಹೀನಾಯ ಪರಿಸ್ಥಿತಿ ಚಿತ್ರತಂಡದ್ದು. ಆ್ಯಕ್ಷನ್ ಹೊರತುಪಡಿಸಿದರೆ ಸಿನಿಮಾದಲ್ಲಿ ಏನೇನೂ ಇಲ್ಲ, ಬೋರಿಂಗ್ ಅನ್ನೋ ಮಾತುಗಳ ನಡುವೆಯೇ ಮತ್ತೊಂದು ಶಾಕಿಂಗ್ ನ್ಯೂಸ್ ದೊರೆತಿದೆ.

ಇದನ್ನೂ ಓದಿ: ಕ್ಷಮೆಯಾಚಿಸಿದ ಅಮೀರ್​ ಖಾನ್​: ಹಣ ವಾಪಸ್​ ಕೇಳಿದ ಜನರು..!

ಫ್ರೆಂಚ್‍ನ ಲಾರ್ಗೊ ವಿಂಚ್, ಭಾರತದಲ್ಲಿ ಸಾಹೋ

ಫ್ರೆಂಚ್ ನಿರ್ದೇಶಕ ಜರೊಮೆ ಸಲ್ಲೆ, ಈಗ 'ಸಾಹೋ' ಟೀಂ ವಿರುದ್ಧ ಕಿಡಿಕಾರಿದ್ದಾರೆ. ಈ ಹಿಂದೆ ಟಾಲಿವುಡ್ ಪವರ್​ಸ್ಟಾರ್​ ಪವನ್ ಕಲ್ಯಾಣ್ ಅವರ ಅಜ್ಞಾತವಾಸಿ ಚಿತ್ರತಂಡದ ಮೇಲೂ ನನ್ನ ಸಿನಿಮಾ ಕಾಪಿ ಮಾಡಿದ್ದೀರಾ ಅಂತ ಆಕ್ರೋಶ ವ್ಯಕ್ತಪಡಿಸಿದ್ದ ಜರೊಮೆ, ಈಗ 'ಸಾಹೋ' ವಿರುದ್ಧ ಸಿಡಿದಿದ್ದಾರೆ. ನನ್ ಸಿನಿಮಾ ಕಾಪಿ ಮಾಡೋದೇನೋ ಮಾಡ್ತೀರಾ, ಆದರೆ ಅದನ್ನು ಸರಿಯಾಗಿ ಮಾಡಲಿಲ್ಲವಲ್ಲ ಅಂತ ಪ್ರಶ್ನಿಸಿದ್ದಾರೆ. ಹಾಗೆ ನನಗೆ ಭಾರತದಲ್ಲಿ ಒಳ್ಳೆಯ ಭವಿಷ್ಯವಿದೆ ಅಂತಲೂ ಕಾಲೆಳೆದಿದ್ದಾರೆ.

ಯಾರು ಈ ಜೆರೊಮೆ ಸಲ್ಲೆ? ಅವರ ಯಾವ ಸಿನಿಮಾ ಕಾಪಿ ಮಾಡಿದ್ದಾರೆ ? ಅದಕ್ಕೆ ಉತ್ತರ 'ಲಾರ್ಗೊ ವಿಂಚ್' ಸಿನಿಮಾ. 2008ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ಅಷ್ಟೇನೂ ಸಕ್ಸಸ್ ಆಗಿರಲಿಲ್ಲ. ಬಳಿಕ 2011ರಲ್ಲಿ 'ದಿ ಬರ್ಮ ಕಾನ್​ಸ್ಪಿರಸಿ' ಅನ್ನೋ ಸೀಕ್ವಲ್ ಬಂತಾದ್ರೂ, ಅದು ಥಿಯೇಟರ್​ಗೆ ಬಾರದೇ ನೇರ ಡಿವಿಡಿ ವರ್ಷನ್‍ನಲ್ಲಿ ಲಾಂಚ್ ಆಯ್ತು. ಈ ಸೀಕ್ವಲ್ ಅಂತೂ ಮೊದಲ ಚಿತ್ರಕ್ಕಿಂತಲೂ ಕೆಟ್ಟದಾಗಿ ಸೋತಿತ್ತು. ಆದರೆ ಸೋತೆತ್ತಿನ ಬಾಲ ಹಿಡಿದ 'ಸಾಹೋ' ಮಂದಿ, ಈಗ ತಾವೂ ಸೋಲುವಂತಾಗಿದೆ.

ಇದನ್ನೂ ಓದಿ: ಮತ್ತೊಂದು ಬೋಲ್ಡ್ ​ಫೋಟೋಶೂಟ್​ನಲ್ಲಿ ಕಿರಿಕ್​ ಹುಡುಗಿ: ಬ್ಯಾಕ್​ಲೆಸ್​ ಡ್ರೆಸ್​ನಲ್ಲಿ ರಶ್ಮಿಕಾ ಮಂದಣ್ಣ

ಬರೀ ಚಿತ್ರದ ಕಥೆ ಮಾತ್ರವಲ್ಲ, ಕಲಾವಿದ ಶಿಲೋಶಿವ್ ಸುಲೇಮಾನ್ ಅವರು ನಿರ್ಮಿಸಿದ್ದ ಒಂದು ಆರ್ಟ್‍ ಅನ್ನೂ 'ಸಾಹೋ' ಸಾಂಗ್‍ ಒಂದರಲ್ಲಿ ಮರುನಿರ್ಮಿಸಲಾಗಿದೆ. ಈ ಕುರಿತು ತಮ್ಮ ಇನ್‍ಸ್ಟಾಗ್ರಾಮ್ ಪೇಜ್‍ನಲ್ಲಿ ಮಾರುದ್ದ ಓಪನ್ ಲೆಟರ್ ಬರೆದಿರುವ ಸುಲೇಮಾನ್, ಒಬ್ಬರ ಸ್ವತ್ತನ್ನು ಅವರ ಅನುಮತಿ ಪಡೆಯದೇ ಹೇಗೆ ಬಳಸುತ್ತೀರಿ ಅಂತ ಪ್ರಶ್ನಿಸಿದ್ದಾರೆ?

French Director Accuses Saaho Makers of Stealing His Film Largo Says At Least Do it Properly
'ಸಾಹೋ' ಸಿನಿಮಾದ ಪೋಸ್ಟರ್​


ಹಾಗಂತ 'ಸಾಹೋ' ಕದ್ದ ಕತೆ ಇಲ್ಲಿಗೇ ಮುಗಿಯಲ್ಲ. ಯಾಕಂದರೆ ಚಿತ್ರದ ಪೋಸ್ಟರ್ ಡಿಸೈನ್‍ ಅನ್ನೂ ಕಳವು ಮಾಡಲಾಗಿದೆ ಅನ್ನೋ ಆರೋಪ ಎದುರಾಗಿತ್ತು. ಆರು ಪೋಸ್ಟರ್​ಗಳೂ ಒಂದೊಂದು ಚಿತ್ರದ ಪೋಸ್ಟರ್​ಗಳ ಕಾಪಿ. ಅದೇನೇ ಇರಲಿ, ಕತೆ ಕದ್ದು ಸಿನಿಮಾ ಮಾಡಿ ಗೆದ್ದಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ಕಥೆ, ಪೋಸ್ಟರ್ ಡಿಸೈನ್ ಸೇರಿದಂತೆ ಹಲವು ವಿಷಯಗಳಲ್ಲಿ ಬೇರೆ ಬೇರೆ ಸಿನಿಮಾಗಳ ಸ್ಫೂರ್ತಿ ಪಡೆದು ಮಾಡಿರುವ 'ಸಾಹೋ' ಸೋತಿರೋದನ್ನು ನೋಡಿ, ಎಲ್ಲರೂ ಮುಸಿಮುಸಿ ನಗುವಂತಾಗಿದೆ.

Rashmi Gautham: ಕಣ್ಣೋಟದಿಂದಲೇ ಪಡ್ಡೆಗಳ ನಿದ್ದೆ ಕದ್ದಿರುವ ರಶ್ಮಿ ಗೌತಮ್​..!

First published: September 5, 2019, 6:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading