Pailwaan Song: ಲೋಕಾರ್ಪಣೆಗೊಳ್ಳಲಿದೆ ಪೈಲ್ವಾನನ ನಾಲ್ಕನೇ ಲಿರಿಕಲ್​ ವಿಡಿಯೋ

Pailwaan Song: ಹೌದು, ಸುದೀಪ್​ ಅಭಿನಯದ ಪೈಲ್ವಾನ್​ ಸಿನಿಮಾ ಕುರಿತಾದ ಒಂದು ವಿಷಯವನ್ನು ಕಿಚ್ಚ ಟ್ವೀಟ್​ ಮಾಡಿದ್ದಾರೆ. ನಾಳೆ 73ನೇ ಸ್ವಾತಂತ್ರ್ಯ ದಿನಾಚರಣೆ. ಇದರ ಅಂಗವಾಗಿ ಪೈಲ್ವಾನ್​ ಚಿತ್ರತಂಡ ಲಿರಿಕಲ್​ ವಿಡಿಯೋವನ್ನು ಬಿಡುಗಡೆ ಮಾಡಲಿದೆ.

Anitha E | news18
Updated:August 14, 2019, 3:55 PM IST
Pailwaan Song: ಲೋಕಾರ್ಪಣೆಗೊಳ್ಳಲಿದೆ ಪೈಲ್ವಾನನ ನಾಲ್ಕನೇ ಲಿರಿಕಲ್​ ವಿಡಿಯೋ
ನಾಳೆ ಪೈಲ್ವಾನ್​ ಸಿನಿಮಾದ ಲಿರಿಕಲ್ ಹಾಡು
  • News18
  • Last Updated: August 14, 2019, 3:55 PM IST
  • Share this:
ಕರುನಾಡಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಸದ್ಯ ತಾವು ಮಾಡಿರುವ ಟ್ವೀಟ್​ನಿಂದಾಗಿ ಸಖತ್​ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಅವರು ಬಳಸಿರುವ ಖಾರವಾದ ಪದಗಳು ಸಾಮಾಜಿಕ ಜಾಲತಾಣ ಹಾಗೂ ಸ್ಯಾಂಡಲ್​ವುಡ್​ನಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಆದರೆ ಅದನ್ನೂ ಮೀರಿಸುವಂತ ಸುದ್ದಿಯನ್ನು ಕಿಚ್ಚ ಈಗ ಕೊಟ್ಟಿದ್ದಾರೆ.

ಹೌದು, ಸುದೀಪ್​ ಅಭಿನಯದ 'ಪೈಲ್ವಾನ್​' ಸಿನಿಮಾ ಕುರಿತಾದ ಒಂದು ವಿಷಯವನ್ನು ಕಿಚ್ಚ ಟ್ವೀಟ್​ ಮಾಡಿದ್ದಾರೆ. ನಾಳೆ 73ನೇ ಸ್ವಾತಂತ್ರ್ಯ ದಿನಾಚರಣೆ. ಇದರ ಅಂಗವಾಗಿ 'ಪೈಲ್ವಾನ್​' ಚಿತ್ರತಂಡ ಲಿರಿಕಲ್​ ವಿಡಿಯೋವನ್ನು ಬಿಡುಗಡೆ ಮಾಡಲಿದೆ.

ಈಗಾಗಲೇ ಮೂರು ಲಿರಿಕಲ್​ ವಿಡಿಯೋ ಹಾಡುಗಳನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಈಗ ನಾಲ್ಕನೇ ಲಿರಿಕಲ್​ ಹಾಡನ್ನು ನಾಳೆ (ಆ.15) ಬೆಳಿಗ್ಗೆ 10.35ಕ್ಕೆ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ: Sudeep: ಕಿಚ್ಚ ಸುದೀಪ್​ ಖಾರವಾಗಿ ಬರೆದ ಟ್ವೀಟ್​ ಯಾವ ಸ್ಟಾರ್​ ನಟನಿಗೆ ಗೊತ್ತಾ..?

ಆಡಿಯೋ ಬಿಡುಗಡೆ ಹಾಗೂ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋದ ಕಾರಣದಿಂದ ಬೇಸರಗೊಂಡಿದ್ದ ಅಭಿಮಾನಿಗಳಿಗೆ ಈಗ ಕೊಂಚ ಖುಷಿಯಾಗಿದೆ. ಅಲ್ಲದೆ ಇಷ್ಟರಲ್ಲೇ ಸಿನಿಮಾದ ಆಡಿಯೋ ಬಿಡುಗಡೆ ದಿನಾಂಕ ಪ್ರಕಟಿಸಲು ಚಿತ್ರತಂಡ ಸಿದ್ದತೆ ಮಾಡಿಕೊಳ್ಳುತ್ತಿದೆ.

Ileana Dcruz: ಸೂರ್ಯನ ಕಣ್ಣನ್ನೇ ಕುಕ್ಕಿದ ಬಳುಕುವ ಬಳ್ಳಿ ಇಲಿಯಾನಾರ ಬಿಕಿನಿ ಪೋಸ್​

First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ