OTT Movies: ಈ ವಾರ ಒಟಿಟಿ ಪ್ರೀಮಿಯರ್‌ನಲ್ಲಿ ಬಿಡುಗಡೆಗೊಳ್ಳುತ್ತಿದೆ ಈ 4 ತೆಲುಗು ಚಿತ್ರಗಳು..!

ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ತೆಲುಗು ಚಿತ್ರಗಳು ಏಪ್ರಿಲ್ ತಿಂಗಳ ಮೊದಲಾರ್ಧದಲ್ಲಿ ಒಟಿಟಿ ಪ್ರೀಮಿಯರ್‌ಗಳಿಗೆ ಸಜ್ಜಾಗುತ್ತಿವೆ. ಇವೆಲ್ಲವೂ ಚಿತ್ರ ಮಂದಿರಗಳಲ್ಲಿ ಈಗಾಗಲೇ ಬಿಡುಗಡೆಯಾಗಿದ್ದು, ಗಲ್ಲಾ ಪೆಟ್ಟಿಗೆಯನ್ನು ತುಂಬಲು ವಿಫಲವಾದ ಚಿತ್ರಗಳು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ಎರಡು ವರ್ಷಗಳಿಂದ ಕೋವಿಡ್-19 (Covid 19) ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ದೇಶಾದ್ಯಂತ ಬಹುತೇಕ ಎಲ್ಲಾ ಚಿತ್ರ ಮಂದಿರಗಳಿಗೆ ಬೀಗ ಜಡಿಯಲಾಗಿತ್ತು. ಬಹುತೇಕ ದೊಡ್ಡ ಬಜೆಟ್ ಚಿತ್ರಗಳು ಪ್ರೇಕ್ಷಕರಿಗಾಗಿ ಸಿನಿಮಾ (Movie) ಮಂದಿರಗಳಲ್ಲಿಯೇ ಬಿಡುಗಡೆ ಮಾಡಲು ತುಂಬಾ ದಿನಗಳವರೆಗೆ ಕಾದು ಕುಳಿತು, ನಂತರ ಅನೇಕ ಚಿತ್ರಗಳ ತಯಾರಕರು ಸಿನಿಮಾ ಮಂದಿರದಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವ ಆಸೆಯನ್ನು ಕೈ ಬಿಟ್ಟು, ನಂತರ ಒಟಿಟಿ (OTT) ಪ್ಲಾಟ್‌ಫಾರ್ಮ್​ ಗಳನ್ನು ನಂಬಿಕೊಂಡು ಅದರಲ್ಲಿ ಬಿಡುಗಡೆ ಮಾಡಿದ್ದನ್ನು ನಾವು ನೋಡಿದ್ದೇವೆ. ಈ ಎರಡು ವರ್ಷಗಳಲ್ಲಿ ಬರೀ ಚಿತ್ರದ ತಯಾರಕರಲ್ಲದೆ (Film Producers), ಪ್ರೇಕ್ಷಕರು ಸಹ ಸಿನೆಮಾ ಮಂದಿರಗಳಿಗೆ ಬೀಗ ಹಾಕಿದ್ದರಿಂದ ಅವರು ತಮ್ಮ ಮನೋರಂಜನೆಗಾಗಿ ಅನೇಕ ಚಿತ್ರಗಳನ್ನು ತಮ್ಮ ಮನೆಯಲ್ಲಿ ಕುಳಿತು ಈ ಒಟಿಟಿ ಮಾಧ್ಯಮಗಳಲ್ಲಿಯೇ ನೋಡಿ ಆನಂದಿಸಿದರು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೀಗೆ ಈಗ ಚಿತ್ರ ತಯಾರಕರಿಗೂ ಸಹ ಒಟಿಟಿ ಮಾಧ್ಯಮದ ಬಗ್ಗೆ ಸಾಕಷ್ಟು ಅರಿವು ಬಂದಿದೆ ಮತ್ತು ಇತ್ತೀಚೆಗೆ ಸಣ್ಣ ಪುಟ್ಟ ಬಜೆಟ್‌ನ ಚಿತ್ರಗಳನ್ನು ಮತ್ತು ಸಿನಿಮಾ ಮಂದಿರಗಳು ಖಾಲಿ ಇರದೇ ಇದ್ದಾಗ ಈ ಒಟಿಟಿ ಕಡೆಗೆ ಮುಖ ಮಾಡುತ್ತಿದ್ದಾರೆ.

ಇನ್ನೊಂದು ವಿಷಯ ಎಂದರೆ ಯಾವ ಸಿನಿಮಾ ಚಿತ್ರ ಮಂದಿರಗಳಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುವುದಿಲ್ಲವೋ, ಅಂತಹ ಚಿತ್ರಗಳನ್ನು ಸಹ ಚಿತ್ರ ತಯಾರಕರು ಒಟಿಟಿ ಪ್ರೀಮಿಯರ್‌ಗಳಿಗೆ ಬಿಡುತ್ತಾರೆ ಎಂದು ಹೇಳಬಹುದು. ಅರೆ ಈ ಒಟಿಟಿಗಳ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಅಂತ ನೀವು ಕೇಳಬಹುದು.

ಓಟಿಟಿ ಅಲ್ಲಿ ಬಿಡುಗಡೆ ಆಗುತ್ತಿದೆ 4 ಚಿತ್ರಗಳು:

ಏಕೆಂದರೆ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ತೆಲುಗು ಚಿತ್ರಗಳು ಏಪ್ರಿಲ್ ತಿಂಗಳ ಮೊದಲಾರ್ಧದಲ್ಲಿ ಒಟಿಟಿ ಪ್ರೀಮಿಯರ್‌ಗಳಿಗೆ ಸಜ್ಜಾಗುತ್ತಿವೆ. ಇವೆಲ್ಲವೂ ಚಿತ್ರ ಮಂದಿರಗಳಲ್ಲಿ ಈಗಾಗಲೇ ಬಿಡುಗಡೆಯಾಗಿದ್ದು, ಗಲ್ಲಾ ಪೆಟ್ಟಿಗೆಯನ್ನು ತುಂಬಲು ವಿಫಲವಾದ ಚಿತ್ರಗಳು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಪಟ್ಟಿಯಲ್ಲಿ ಬಾಹುಬಲಿ ಚಿತ್ರದಿಂದ ಜನಪ್ರಿಯವಾದ ನಟ ಪ್ರಭಾಸ್ ಅವರ ರಾಧೆ ಶ್ಯಾಮ್, ರಾಜ್ ತರುಣ್ ಅವರ ಸ್ಟ್ಯಾಂಡ್ ಅಪ್ ರಾಹುಲ್, ನಟ ಶರ್ವಾನಂದ್ ಅವರ ಆಡ್ಡವಾಳು ಮೀಕು ಜೋಹಾರ್ಲು ಮತ್ತು ಹೇ ಸಿನಾಮಿಕಾ ಚಿತ್ರಗಳು ಸೇರಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Radhe Shyam Review: ಆಕಳಿಕೆ ಹುಟ್ಟಿಸುವ ರಾಧೆ ಶ್ಯಾಮ್, ಬಹುನಿರೀಕ್ಷಿತ ಸಿನಿಮಾ ಎಡವಿದ್ದೆಲ್ಲಿ?

ಅಮೇಜಾನ್​ನಲ್ಲಿ ರಾಧೆ ಶ್ಯಾಮ್ ಬಿಡುಗಡೆ:

ನಟ ಪ್ರಭಾಸ್ ಅವರ ಅಭಿನಯದ ಚಿತ್ರವಾದ ರಾಧೆ ಶ್ಯಾಮ್ ಏಪ್ರಿಲ್ 1 ರಂದು ಅಮೆಜಾನ್ ಪ್ರೈಮ್ ವೀಡಿಯೋಗೆ ಆಗಮಿಸಲಿದೆ. ಚಲನಚಿತ್ರವನ್ನು ಅದ್ದೂರಿ ಬಜೆಟ್‌ನಲ್ಲಿ ಮಾಡಲಾಗಿದ್ದು, ಹೀಗಾಗಿ ಈ ಚಿತ್ರಕ್ಕೆ ಸಂಬಂಧಪಟ್ಟಂತ ಹಕ್ಕುಗಳನ್ನು ನಿಜವಾಗಿಯೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಯಿತು.

ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಆರಂಭದ ನಂತರ, ಚಿತ್ರದ ಹವಾ ನಾಟಕೀವಾಗಿ ಕಡಿಮೆಯಾಯಿತು. ಇದು ಈಗ ಭಾರತೀಯ ಚಿತ್ರರಂಗದ ಅತಿದೊಡ್ಡ ಸೋಲಿನಲ್ಲಿಒಂದಾಗಿದೆ ಎಂದು ಪರಿಗಣಿಸಲಾಗಿದೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ಈ ಪ್ರೇಮ ಕತೆಯನ್ನು ಒಳಗೊಂಡಿರುವ ಚಿತ್ರವನ್ನು ರಾಧಾ ಕೃಷ್ಣ ಅವರು ನಿರ್ದೇಶಿಸಿದ್ದಾರೆ.

ಯಾವ ಚಿತ್ರ ಯಾವ ಓಟಿಟಿ ಅಲ್ಲಿ ಬಿಡುಗಡೆ:

ಇನ್ನು ಸ್ಟ್ಯಾಂಡ್ ಅಪ್ ರಾಹುಲ್ ಮಾರ್ಚ್ 18 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ಸರಿಯಾಗಿ 3 ವಾರಗಳ ನಂತರ, ಇದು ಒಟಿಟಿ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ ಎನ್ನುವ ವಿಷಯವೇ ಜನರಿಗೆ ತಿಳಿದಿಲ್ಲ ಎಂದು ಹೇಳಲಾಗುತ್ತಿದೆ. ಈ ಚಿತ್ರವು ಈಗ ಏಪ್ರಿಲ್ 8 ರಂದು ಆಹಾ ವಿಡಿಯೋದಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Breaking: ಮಕಾಡೆ ಮಲಗಿದ ರಾಧೆ-ಶ್ಯಾಮ್​ ಸಿನಿಮಾ.. ಇದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ರವಿ ತೇಜ

ಹೇ ಸಿನಾಮಿಕಾ ವಿಷಯದಲ್ಲೂ ಇದೇ ಆಗಿದ್ದು, ಈ ಚಿತ್ರದಲ್ಲಿ ಸಲ್ಮಾನ್, ಅದಿತಿ ರಾವ್ ಮತ್ತು ಕಾಜಲ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಇದು ಸಾಮಾನ್ಯ ಪ್ರೇಕ್ಷಕರ ಗಮನವನ್ನು ಸೆಳೆಯಲು ಸಾಧ್ಯವಾಗಲಿಲ್ಲ ಮತ್ತು ಗಲ್ಲಾ ಪೆಟ್ಟಿಗೆಯಲ್ಲಿ ದುರಂತವಾಗಿ ಕೊನೆಗೊಂಡಿತು. ಈ ಚಿತ್ರವು ಏಪ್ರಿಲ್ 1 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತದೆ. ಶರ್ವಾನಂದ್ ಅವರ ಚಿತ್ರ ಆಡವಾಳ್ಳು ಮೀಕು ಜೋಹಾರ್ಲು ಈ ಪಟ್ಟಿಯಲ್ಲಿ ಮತ್ತೊಂದು ದೊಡ್ಡ ಚಿತ್ರವಾಗಿತ್ತು. ಈ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಆದಾಯವನ್ನು ಸಹ ಗಳಿಸಲು ಸಾಧ್ಯವಾಗಲಿಲ್ಲ. ಈ ಚಿತ್ರವು ಈಗ ಏಪ್ರಿಲ್ 2 ರಂದು ಸೋನಿ ಲಿವ್ ನಲ್ಲಿ ಬಿಡುಗಡೆಯಾಗಿದೆ.
Published by:shrikrishna bhat
First published: