OTT Movies: ಈ ವೀಕೆಂಡ್​ಗೆ ಮನೆಯಲ್ಲೇ ಕೂತು ಈ 4 ಸಿನಿಮಾಗಳನ್ನು ನೋಡಿ ಎಂಜಾಯ್​ ಮಾಡಿ..!

ಪ್ರತಿ ವಾರದಂತೆ ಸಹ ಈ ವಾರ ಕೂಡ ಓಟಿಟಿ ಅಲ್ಲಿ ಹೊಸ ಚಲನಚಿತ್ರಗಳು ಬಿಡುಗಡೆಯಾಗಲಿವೆ. ಈ ವಾರ ಬಿಡುಗಡೆಯಾಗುತ್ತಿರುವುದು ಒಂದಲ್ಲ, ಎರಡಲ್ಲ ಬರೋಬ್ಬರಿ 4 ಚಿತ್ರಗಳು.

ತುಳಸಿದಾಸ್ ಜೂನಿಯರ್

ತುಳಸಿದಾಸ್ ಜೂನಿಯರ್

  • Share this:
ಈಗಂತೂ ಜನರಿಗೆ ಓಟಿಟಿ (OTT) ಮಾಧ್ಯಮಗಳಲ್ಲಿ ಪ್ರತಿ ವಾರ ಬಿಡುಗಡೆಯಾಗುವ ಚಲನಚಿತ್ರಗಳನ್ನು (Movie's) ಮನೆಯಲ್ಲಿಯೇ ಕುಳಿತುಕೊಂಡು ವೀಕ್ಷಿಸುವ ರೂಢಿಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಪ್ರತಿ ವಾರದಂತೆ ಸಹ ಈ ವಾರ (Week) ಕೂಡ ಹೊಸ ಚಲನಚಿತ್ರಗಳು ಬಿಡುಗಡೆಯಾಗಲಿವೆ. ಈ ವಾರ ಬಿಡುಗಡೆಯಾಗುತ್ತಿರುವುದು ಒಂದಲ್ಲ, ಎರಡಲ್ಲ ಬರೋಬ್ಬರಿ 4 ಚಿತ್ರಗಳು. ನೀವು ವಾರಾಂತ್ಯದಲ್ಲಿ ಕೆಲಸ ಮಾಡಿ ಸುಸ್ತಾಗಿದ್ದೀವಿ, ಸ್ವಲ್ಪ ಮನಸ್ಸು ಬಿಚ್ಚಿ ನಗೋಣ ಅಂತ ಅಂದುಕೊಂಡಿದ್ದರೆ, ಹಾಸ್ಯಭರಿತ ಚಿತ್ರ ‘ರಷ್ಯನ್ ಡಾಲ್ ಸೀಸನ್ 2’ (RUSSIAN DOLL SEASON 2) ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗುತ್ತಿದೆ. ಈ ಮಧ್ಯೆ, ನೀವು ಬಾಲಿವುಡ್ ಪ್ರಿಯರಾಗಿದ್ದರೆ, ಸಂಜಯ್ ದತ್ ಮತ್ತು ದಿವಂಗತ ರಾಜೀವ್ ಕಪೂರ್ ಅಭಿನಯದ ತುಲ್ಸಿದಾಸ್ ಜೂನಿಯರ್ ಚಿತ್ರವಿದೆ.

ಐತಿಹಾಸಿಕ ಕಥೆ ಇರುವ ಚಿತ್ರವನ್ನು ನೀವು ನೋಡುವವರಾಗಿದ್ದರೆ, ಈ ವಾರ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಪ್ರದರ್ಶನಗೊಳ್ಳುವ ‘ಎ ವೆರಿ ಬ್ರಿಟಿಷ್ ಸ್ಕ್ಯಾಂಡಲ್’ (ಸೀಸನ್ 2) ಅನ್ನು ನೀವು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಲೇ ಬೇಡಿ. ಇದೆಲ್ಲವೂ ಮತ್ತು ಇನ್ನೂ ಹೆಚ್ಚಿನವು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಇತರವುಗಳಲ್ಲಿ ಈ ವಾರ ಬಿಡುಗಡೆಗಳ ಸಂಪೂರ್ಣ ಪಟ್ಟಿಯನ್ನು ನಾವು ಇಲ್ಲಿ ನಿಮಗಾಗಿ ನೀಡುತ್ತಿದ್ದೇವೆ.

ಈ ವಾರ ಓಟಿಟಿ ಅಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳು

1. ತುಲ್ಸಿದಾಸ್ ಜೂನಿಯರ್ - ಏಪ್ರಿಲ್ 19 ನೆಟ್‌ಫ್ಲಿಕ್ಸ್:

ಈ ವಾರ ಒಟಿಟಿ ಯಲ್ಲಿ ಬಿಡುಗಡೆಯಾದ ಬಾಲಿವುಡ್ ನಟ ಸಂಜಯ್ ದತ್ ಮತ್ತು ದಿವಂಗತ ರಾಜೀವ್ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಸ್ಪೋರ್ಟ್ಸ್ ಡ್ರಾಮಾ, ತುಲ್ಸಿದಾಸ್ ಜೂನಿಯರ್ ಅನ್ನು ಆಶುತೋಷ್ ಗೋವಾರಿಕರ್ ಅವರೊಂದಿಗೆ ಮೃದುಲ್ ನಿರ್ದೇಶಿಸಿದ್ದಾರೆ. 1994 ರಲ್ಲಿ ಸೆಟ್ ಮಾಡಲಾದ ಈ ಚಿತ್ರವು ಸ್ನೂಕರ್ ಆಟದ ಬಗ್ಗೆ ಉತ್ಸುಕತೆ ಹೊಂದಿರುವ ಮತ್ತು ತನ್ನ ತಂದೆಯೊಂದಿಗೆ ಭಾವನಾತ್ಮಕ ಮತ್ತು ಪ್ರೀತಿಯ ಸಂಬಂಧವನ್ನು ಹೊಂದಿರುವ ಒಬ್ಬ ಚಿಕ್ಕ ಹುಡುಗನ ಕಥೆಯನ್ನು ಚಿತ್ರಿಸುತ್ತದೆ. ಒಂದು ಪರಿಪೂರ್ಣ ಕೌಟುಂಬಿಕ ಮನರಂಜನೆ, ಈ ಚಿತ್ರವು ಏಪ್ರಿಲ್ 19 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ: RRR: ಆರ್​ಆರ್​ಆರ್​ ಸಿನಿಮಾದ ಒಟಿಟಿ ರಿಲೀಸ್ ಡೇಟ್​ ಫಿಕ್ಸ್​.. ಅಂದುಕೊಂಡಿದ್ದಕ್ಕಿಂತ ಮುಂಚೆಯೇ ಬರ್ತಿದೆ!

2. ರಷ್ಯನ್ ಡಾಲ್ ಸೀಸನ್ 2 - ಏಪ್ರಿಲ್ 20 ನೆಟ್‌ಫ್ಲಿಕ್ಸ್:

ನತಾಶಾ ಲಿಯೋನ್, ಲೆಸ್ಲಿ ಹೆಡ್‌ಲ್ಯಾಂಡ್ ಮತ್ತು ಆಮಿ ಪೋಹ್ಲರ್ ರಚಿಸಿದ ಅಮೆರಿಕನ್ ಹಾಸ್ಯಭರಿತ ಸೀರೀಸ್ ರಷ್ಯನ್ ಡಾಲ್ ಸೀಸನ್ 2 ನ್ಯೂಯಾರ್ಕ್ ನಗರದಲ್ಲಿ ನಡೆದ ಪಾರ್ಟಿಯೊಂದರಲ್ಲಿ ಭಾಗವಹಿಸುವಾಗ ಟೈಮ್ ಲೂಪ್‌ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಗೇಮ್ ಡೆವಲಪರ್‌ನ ಜೀವನದ ಸುತ್ತ ಸುತ್ತುತ್ತದೆ. ಅವಳು ರಹಸ್ಯವನ್ನು ಪರಿಹರಿಸಲು ಪ್ರಯತ್ನಿಸುತ್ತಿರುವಾಗ, ಪದೇ ಪದೇ ಅಪಾಯವನ್ನು ಕಂಡುಕೊಳ್ಳುತ್ತಾಳೆ.

ಈ ಪ್ರಕ್ರಿಯೆಯಲ್ಲಿ, ಅವಳು ಚಾರ್ಲಿ ಬಾರ್ನೆಟ್ ನಿರ್ವಹಿಸಿದ ಅಲನ್ ಜವೇರಿ ಎಂಬ ವ್ಯಕ್ತಿಯನ್ನು ಭೇಟಿಯಾಗುತ್ತಾಳೆ, ಅವನು ಸಹ ಇದೇ ರೀತಿಯ ಅನುಭವಗಳನ್ನು ಅನುಭವಿಸುತ್ತಿರುತ್ತಾನೆ, ಆದರೆ ಸ್ವಲ್ಪ ಭಿನ್ನವಾಗಿರುತ್ತದೆ. 2019 ರಲ್ಲಿ ಬಿಡುಗಡೆಯಾದ ರಷ್ಯನ್ ಡಾಲ್ ಮೊದಲ ಋತುವಿಗೆ ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ ಮತ್ತು ಅತ್ಯುತ್ತಮ ಸಮಕಾಲೀನ ವೇಷಭೂಷಣಗಳಿಗಾಗಿ ಮೂರು ಪ್ರಶಸ್ತಿಗಳನ್ನು ನೀಡಲಾಗಿತ್ತು.

3. ಎ ವೆರಿ ಬ್ರಿಟಿಷ್ ಸ್ಕ್ಯಾಂಡಲ್ (ಸೀಸನ್ 2) - ಏಪ್ರಿಲ್ 22 ಅಮೆಜಾನ್ ಪ್ರೈಮ್ ವಿಡಿಯೋ:

ಇದು ಒಂದು ಐತಿಹಾಸಿಕ ಕಥೆಯನ್ನು ಹೊಂದಿದ್ದು, ಎ ವೆರಿ ಬ್ರಿಟಿಷ್ ಸ್ಕ್ಯಾಂಡಲ್ (ಸೀಸನ್ 2) ಮಾರ್ಗರೆಟ್ ಕ್ಯಾಂಪ್ಬೆಲ್ ಮತ್ತು ಇಯಾನ್ ಕ್ಯಾಂಪ್ಬೆಲ್, 11 ನೇ ಡ್ಯೂಕ್ ಆಫ್ ಆರ್ಗಿಲ್ ಮತ್ತು ಕ್ಲಾನ್ ಕ್ಯಾಂಪ್ಬೆಲ್ ಅವರ ಜೀವನವನ್ನು ತೋರಿಸುತ್ತದೆ. ಈ ಪ್ರದರ್ಶನವು ಅವರ ವಿಫಲ ವಿವಾಹ ಮತ್ತು ಅವರ ಮಾನಹಾನಿಕರ ವಿಚ್ಛೇದನ ಪ್ರಕರಣದ ಸುತ್ತಲಿನ ಮಾಧ್ಯಮ ಉನ್ಮಾದವನ್ನು ತೋರಿಸುತ್ತದೆ, ಇದು ವ್ಯಭಿಚಾರ, ಫೋರ್ಜರಿ, ಕಳ್ಳತನ, ಹಿಂಸಾಚಾರ, ಮಾದಕವಸ್ತುಗಳ ಬಳಕೆ ಮತ್ತು ಲಂಚದ ಆರೋಪಗಳನ್ನು ಒಳಗೊಂಡಿದೆ.

ಇದನ್ನೂ ಓದಿ: OTT Movies: ಈ ವಾರ ಒಟಿಟಿ ಪ್ರೀಮಿಯರ್‌ನಲ್ಲಿ ಬಿಡುಗಡೆಗೊಳ್ಳುತ್ತಿದೆ ಈ 4 ತೆಲುಗು ಚಿತ್ರಗಳು..!

ಈ ವಾರ ಓಟಿಟಿಯ ಬಿಡುಗಡೆಗಳಲ್ಲಿ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಏಪ್ರಿಲ್ 22 ರಂದು ಪ್ರೀಮಿಯರ್ ಪ್ರದರ್ಶನಗೊಳ್ಳುತ್ತಿದೆ, ಈ ಸೀರಿಸ್‌ನ ಸೀಸನ್ 2 ರಲ್ಲಿ ಈ ಎರಡು ಪಾತ್ರಗಳು ತಮ್ಮ ಅತಿ ಕೆಟ್ಟ ವಿಚ್ಛೇದನದ ಮೂಲಕ ಹೇಗೆ ಹಾದು ಹೋಗುತ್ತಾರೆ ಎಂಬುದರ ಬಗ್ಗೆ ಇದೆ.

4. ಲಂಡನ್ ಫೈಲ್ಸ್ - ಏಪ್ರಿಲ್ 21 ವೂಟ್ ಸೆಲೆಕ್ಟ್:

ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಮತ್ತು ಪೂರಬ್ ಕೊಹ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಲಂಡನ್ ಫೈಲ್ಸ್ ನರಹತ್ಯೆ ಪತ್ತೇದಾರಿ (ರಾಮ್ ಪಾಲ್ ನಿರ್ವಹಿಸಿದ ಪಾತ್ರ) ಯ ರೋಮಾಂಚಕ ಕಥೆಯನ್ನು ಹೇಳುತ್ತದೆ. ಲಂಡನ್‌ನಲ್ಲಿ ಕಾಣೆಯಾದ ಹುಡುಗಿಯ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಓಂ ಸಿಂಗ್ ಅವರ ಕಥೆಯನ್ನು ಇದರಲ್ಲಿ ನೋಡಬಹುದು. ತನ್ನ ಸ್ವಂತ ಸಮಸ್ಯೆಗಳೊಂದಿಗೆ ವ್ಯವಹರಿಸುವಾಗ, ಅವರು ನಿಗೂಢವಾದ ಭೂತಕಾಲವನ್ನು ಬಹಿರಂಗಪಡಿಸುವ ಕರಾಳ ರಹಸ್ಯಗಳನ್ನು ತಿಳಿದುಕೊಳ್ಳುತ್ತಾರೆ.
Published by:shrikrishna bhat
First published: