ಪೂರ್ಣ ಪ್ರಮಾಣದ ಥಿಯೇಟರ್​ ಭರ್ತಿಗೆ ಅವಕಾಶ: ರಿಲೀಸ್ ಆಗಿವೆ 4 ಕನ್ನಡ ಸಿನಿಮಾಗಳು..!

ಶುಭ ಶುಕ್ರವಾರ ಒಟ್ಟು ಕನ್ನಡದ ಐದು ಸಿನಿಮಾಗಳು ರಿಲೀಸ್ ಆಗಿವೆ. ಪ್ರಜ್ವಲ್​ ದೇವರಾಜ್​ ಹಾಗೂ ಭಾವನಾ ಮೆನನ್​ ಅಭಿನಯದ ವಿಕ್ರಂ ಸಿನಿಮಾ ಸಹ ಇಂದೇ ತೆರೆ ಕಂಡಿದೆ. ಡಿಬಾಸ್ ದರ್ಶನ್​ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾ ಮೆಜೆಸ್ಟಿಕ್​ನಲ್ಲಿರುವ ತ್ರಿವೇಣಿ ಚಿತ್ರಮಂದಿರ ಸೇರಿದಂತೆ ಇತರೆಡೆ ತೆರೆ ಕಂಡಿದೆ. 

ತೆರೆ ಕಂಡಿವೆ ಕನ್ನಡ ಸಿನಿಮಾಗಳು

ತೆರೆ ಕಂಡಿವೆ ಕನ್ನಡ ಸಿನಿಮಾಗಳು

  • Share this:
ಹನ್ನೊಂದು ತಿಂಗಳ ಬಳಿಕ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕೊರೋನಾ ಲಾಕ್​ಡೌನ್​ನಿಂದಾಗಿ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. 7 ತಿಂಗಳ ನಂತರ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಲಾಗಿತ್ತಾದರೂ, ಶೇ 50ರಷ್ಟು ಆಸನಗಳ ಭರ್ತಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗದೆ ಹಾಗೆ ಇದ್ದವು. ಆದರೆ ಈಗ ಶೇ 100% ರಷ್ಟು ಸೀಟ್​ಗಳಿಕೆ ಸರ್ಕಾರ ಅವಕಾಶ ಕೊಟ್ಟಿರುವ ಹಿನ್ನಲೆಯಲ್ಲಿ ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲಾಗಿ ಸಿನಿಮಾಗಳು ರಿಲೀಸ್​ಗೆ ನಿಂತಿವೆ.  ಇಂದು ಸಹ ಕನ್ನಡದ ನಾಲ್ಕು ಸಿನಿಮಾಗಳು ತೆರೆಕಂಡಿದೆ. ಪ್ರಜ್ವಲ್​ ದೇವರಾಜ್​ ಹಾಗೂ ಭಾವನಾ ಅಭಿನಯದ ಇನ್​ಸ್ಪೆಕ್ಟರ್​ ವಿಕ್ರಂ, ವಿನೋದ್​ ಪ್ರಭಾಕರ್​ ನಟನೆಯ ಶ್ಯಾಡೋ, ಮಂಗಳವಾರ ರಜಾ ದಿನ ಹಾಗೂ ಮಾಂಜ್ರಾ ಸಿನಿಮಾಗಳು  ಇಂದು ರಿಲೀಸ್ ಆಗಿವೆ. ಈ ಸಿನಿಮಾಗಳಿಗೆ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಅನ್ನೋದು ಮುಂದಿನ ದಿನಗಳಲ್ಲಿ ರಿಲೀಸ್​ ಆಗಲಿರುವ ಚಿತ್ರಗಳ ಭವಿಷ್ಯ ನಿರ್ಧರಿಸಲಿದೆ. 

ಶುಭ ಶುಕ್ರವಾರ ಒಟ್ಟು ಕನ್ನಡದ ನಾಲ್ಕು ಸಿನಿಮಾಗಳು ರಿಲೀಸ್ ಆಗಿವೆ. ಪ್ರಜ್ವಲ್​ ದೇವರಾಜ್​ ಹಾಗೂ ಭಾವನಾ ಮೆನನ್​ ಅಭಿನಯದ ವಿಕ್ರಂ ಸಿನಿಮಾ ಸಹ ಇಂದೇ ತೆರೆ ಕಂಡಿದೆ. ಡಿಬಾಸ್ ದರ್ಶನ್​ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾ ಮೆಜೆಸ್ಟಿಕ್​ನಲ್ಲಿರುವ ತ್ರಿವೇಣಿ ಚಿತ್ರಮಂದಿರ ಸೇರಿದಂತೆ ಇತರೆಡೆ ತೆರೆ ಕಂಡಿದೆ.


ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್​ ಪೆಕ್ಟರ್ ವಿಕ್ರಂ ತಂಡದಿಂದ ಬೈಕ್ ರ್ಯಾಲಿಗೆ ಪ್ಲಾನ್ ಮಾಡಲಾಗಿದೆ. ಆನಂದ್ ರಾವ್ ಸರ್ಕಲ್​ನಿಂದ ತ್ರಿವೇಣಿ ಚಿತ್ರಮಂದಿರದವರೆಗೆ ಬೈಕ್ ರ್ಯಾಲಿ ನಡೆಸಲಾಗುವುದು ಎಂದು ಹೇಳಲಾಗುತ್ತಿದ್ದು, 100-150 ಬೈಕ್​ಗಳ ಮೂಲಕ ಅಭಿಮಾನಿಗಳು ಥಿಯೇಟರ್​ಗೆ ಬರಲಿದ್ದಾರಂತೆ. ಇದರಲ್ಲಿ ಪ್ರಜ್ವಲ್ ದೇವರಾಜ್​ ಸಹ ಭಾಗಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪಟಾಕಿ ಸಿಡಿಸುತ್ತಾ ಚಿತ್ರಮಂದಿರಕ್ಕೆ ಬಂದ ಅಭಿಮಾನಿಗಳು

ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ವಿನೋದ್​ ಪ್ರಭಾಕರ್​ ಅಭಿನಯದ ಶ್ಯಾಡೋ ಸಿನಿಮಾ ರಿಲೀಸ್ ಆಗಿದೆ. 10:15ಕ್ಕೆ ಮೊದಲ ಪ್ರದರ್ಶನ ಆರಂಭವಾಗಿದ್ದು,  ಅಭಿಮಾನಿಗಳು ಸಿನಿಮಾ ನೋಡಲು ಬರುತ್ತಿದ್ದಾರೆ. ಅಲ್ಲದೆ 100%ರಷ್ಟು ಸೀಟ್​ಗಳಿಗೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ಥೀಯೆಟರ್ ಸುತ್ತ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಮಾಡಲಾಯಿತು. ಅಭಿಮಾನಿಗಳೂ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಅಭಿಮಾನಿಗಳೊಂದಿಗೆ ಸಿನಿಮಾ ನೋಡಲು ವಿನೋದ್​ ಪ್ರಭಾಕರ್ ಚಿತ್ರಮಂದಿರಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

Inspector Vikram, Shadow, Prajwal Devaraj, Vinod Prabhakar, Manjra, Mangalavaara Rajadina, Prasanna, Narthaki, 100% occupancy in cinema halls, 100 occupancy in cinema halls from february, film theatres, ಶೇ100ಆಸನ ಭರ್ತಿ, ಚಿತ್ರಮಂದಿರಗಳು, ಫೆಬ್ರವರಿ 1ರಿಂದ ಪೂರ್ಣ ಪ್ರಮಾಣದ ಚಿತ್ರಮಂದಿರಗಳು ಓಪನ್, film theaters, sop for movie release, sop for cinema theaters, guidelines for film theaters, news in kannada, ಚಿತ್ರಮಂದಿರ, ಸಿನಿಮಾ ಥಿಯೇಟರ್ ಓಪನ್, ಥಿಯೇಟರ್​ಗಳಿಗೆ ಮಾರ್ಗಸೂಚಿ
ಪ್ರಸನ್ನ ಚಿತ್ರ ಮಂದಿರದ ಬಳಿ ವಿನೋಕ್​ ಪ್ರಭಾಕರ್​ ಅಭಿಮಾನಿಗಳು


ಖಾಲಿ ಇದೆ ನರ್ತಿಕಿ ಚಿತ್ರಮಂದಿರದ ಆವರಣ

Inspector Vikram, Shadow, Prajwal Devaraj, Vinod Prabhakar, Manjra, Mangalavaara Rajadina, Prasanna, Narthaki, 100% occupancy in cinema halls, 100 occupancy in cinema halls from february, film theatres, ಶೇ100ಆಸನ ಭರ್ತಿ, ಚಿತ್ರಮಂದಿರಗಳು, ಫೆಬ್ರವರಿ 1ರಿಂದ ಪೂರ್ಣ ಪ್ರಮಾಣದ ಚಿತ್ರಮಂದಿರಗಳು ಓಪನ್, film theaters, sop for movie release, sop for cinema theaters, guidelines for film theaters, news in kannada, ಚಿತ್ರಮಂದಿರ, ಸಿನಿಮಾ ಥಿಯೇಟರ್ ಓಪನ್, ಥಿಯೇಟರ್​ಗಳಿಗೆ ಮಾರ್ಗಸೂಚಿ
ನರ್ತಕಿ ಸಿನಿಮಾ ಮಂದಿರದ ಬಳಿಯ ಚಿತ್ರಣ


ಸಿನಿಮಾ ಪ್ರದರ್ಶನಕ್ಕಾಗಿ ಮಧುವಣಗಿತ್ತಿಯಂತೆ ನರ್ತಕಿ ಥಿಯೇಟರ್ ಸಿದ್ದಗೊಂಡಿದೆ. ವಿನೋದ್ ಪ್ರಭಾಕರ್ ಅಭಿನಯದ ಶ್ಯಾಡೊ ಸಿನಿಮಾ ರಿಲೀಸ್ ಆಗಿದ್ದು, ಬೆಳಿಗ್ಗೆ 10;30ಕ್ಕೆ ಮೊದಲ ಶೋ‌ ಪ್ರದರ್ಶನ ಆಗಲಿದೆ. ಆದರೆ 10 ಗಂಟೆಯಾದರೂ ಇನ್ನೂ ಟಿಕೆಟ್​ ಕೌಂಟರ್​ ಸಹ ತೆಗೆದಿಲ್ಲ. ಜೊತೆಗೆ ಚಿತ್ರಮಂದಿರ ಬಳಿಯೂ ಯಾರೊಬ್ಬರೂ ಕಾಣಿಸುತ್ತಿಲ್ಲ. ಖಾಲಿ ಖಾಲಿ ಇದೆ ನರ್ತಕಿ ಚಿತ್ರಮಂದಿರದ ಆವರಣ.
Published by:Anitha E
First published: