Aryan Khan ಬಂಧಿಸಿದ್ದ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಸಿಬಿಐ ಕೇಸ್​!

ಆರ್ಯನ್ ಖಾನ್ ಅನ್ನು ಬಂಧಿಸಿದ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಸಿಬಿಐ ದಾಳಿ!

ಆರ್ಯನ್ ಖಾನ್ ಅನ್ನು ಬಂಧಿಸಿದ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಸಿಬಿಐ ದಾಳಿ!

ಸಿಬಿಐ ಎಫ್ಐಆರ್ ನಲ್ಲಿ ಹೆಸರಿಸಲಾದವರಲ್ಲಿ ಸಮೀರ್ ವಾಂಖೆಡೆ, ಈಗಾಗಲೇ ಗೆದುಹಾಕಿದ ಎನ್‌ಸಿಬಿ ಎಸ್‌ಪಿ ವಿಶ್ವ ವಿಜಯ್ ಸಿಂಗ್, ಎನ್‌ಸಿಬಿಯ ಮಾಜಿ ಗುಪ್ತಚರ ಅಧಿಕಾರಿ ಆಶಿಶ್ ರಂಜನ್, ಕಾರ್ಡೆಲಿಯಾ ದಾಳಿಯ ಆರೋಪಿ ಸಾಕ್ಷಿಗಳಾದ ಕಿರಣ್ ಗೋಸಾವಿ ಮತ್ತು ಸ್ಯಾನ್ವಿಲ್ಲೆ ಡಿಸೋಜಾ ಸೇರಿದ್ದಾರೆ.

ಮುಂದೆ ಓದಿ ...
  • Share this:

ನಿಮಗೆ ಬಾಲಿವುಡ್ ನಟ  ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ ಅವರ ಬಂಧನವಾಗಿದ್ದರ ಬಗ್ಗೆ ನೆನಪಿದ್ದರೆ, ಆಗ ಅಧಿಕಾರಿ ಸಮೀರ್ ವಾಂಖೆಡೆ ಅವರ ಹೆಸರು ನೀವು ಕೇಳಿಯೇ ಇರುತ್ತೀರಿ. 2021 ರ ಅಕ್ಟೋಬರ್ ನಲ್ಲಿ ಮುಂಬೈನಲ್ಲಿ ಕಾರ್ಡೆಲಿಯಾ ಕ್ರೂಸ್ ಹಡಗಿನ ಮೇಲೆ ವಿವಾದಾತ್ಮಕ ದಾಳಿಯ ನೇತೃತ್ವ ವಹಿಸಿದ್ದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಕೇಂದ್ರ ತನಿಖಾ ದಳ (CBI) ಭ್ರಷ್ಟಾಚಾರ ಪ್ರಕರಣ ದಾಖಲಿಸಿದೆ.  ಸಿಬಿಐ ಎಫ್ಐಆರ್ ನಲ್ಲಿ ಯಾರನ್ನೆಲ್ಲಾ ಹೆಸರಿಸಲಾಗಿದೆ ನೋಡಿ.  ಸಿಬಿಐ ಎಫ್ಐಆರ್ ನಲ್ಲಿ ಹೆಸರಿಸಲಾದವರಲ್ಲಿ ಸಮೀರ್ ವಾಂಖೆಡೆ, ಈಗಾಗಲೇ ಗೆದುಹಾಕಿದ ಎನ್‌ಸಿಬಿ ಎಸ್‌ಪಿ ವಿಶ್ವ ವಿಜಯ್ ಸಿಂಗ್, ಎನ್‌ಸಿಬಿಯ ಮಾಜಿ ಗುಪ್ತಚರ ಅಧಿಕಾರಿ ಆಶಿಶ್ ರಂಜನ್, ಕಾರ್ಡೆಲಿಯಾ ದಾಳಿಯ ಆರೋಪಿ ಸಾಕ್ಷಿಗಳಾದ ಕಿರಣ್ ಗೋಸಾವಿ ಮತ್ತು ಸ್ಯಾನ್ವಿಲ್ಲೆ ಡಿಸೋಜಾ ಸೇರಿದ್ದಾರೆ.


ತನಿಖೆಯ ಭಾಗವಾಗಿ ದೆಹಲಿ, ಮುಂಬೈ, ಕಾನ್ಪುರ್ ಮತ್ತು ರಾಂಚಿಯ ನಾಲ್ಕು ನಗರಗಳಲ್ಲಿ ವಾಂಖೆಡೆ ಮತ್ತು ಇತರ 28 ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿದೆ.


ಕಳೆದ ವರ್ಷ ವಿಶೇಷ ತನಿಖಾ ತಂಡ (ಎಸ್ಐಟಿ) ಕಾರ್ಡೆಲಿಯಾ ದಾಳಿಯಲ್ಲಿ ಅಸಂಗತತೆಗಳನ್ನು ಕಂಡು ಹಿಡಿದು ಶಾರುಖ್ ಮಗ ಆರ್ಯನ್ ಖಾನ್ ಗೆ ಕ್ಲೀನ್ ಚಿಟ್ ನೀಡಿದ ನಂತರ ಎನ್‌ಸಿಬಿಯಿಂದ ಹೊರಹಾಕಲ್ಪಟ್ಟ ವಾಂಖೆಡೆ ಅವರನ್ನು ಪ್ರಸ್ತುತ ಚೆನ್ನೈನಲ್ಲಿರುವ ತೆರಿಗೆದಾರರ ಸೇವೆಗಳ ಮಹಾನಿರ್ದೇಶಕರ (ಡಿಜಿಟಿಎಸ್) ಕಚೇರಿಯಲ್ಲಿ ನಿಯೋಜಿಸಲಾಗಿದೆ.


ಕಳೆದ ವಾರ, ಸುದ್ದಿ ಮಾಧ್ಯಮವೊಂದು ವರದಿ ಮಾಡಿದಂತೆ, ಎನ್‌ಸಿಬಿ ಪೊಲೀಸ್ ವರಿಷ್ಠಾಧಿಕಾರಿ ವಿಶ್ವ ವಿಜಯ್ ಸಿಂಗ್ ಅವರನ್ನು ಸಹ ಸೇವೆಯಿಂದ ತೆಗೆದು ಹಾಕಿತ್ತು.


ಕಾರ್ಡೆಲಿಯಾ ಹಡಗಿನ ಮೇಲೆ ದಾಳಿ ನಡೆಸಿದ್ದಾಗ ಏನೆಲ್ಲಾ ವಶಪಡಿಸಿಕೊಳ್ಳಲಾಗಿತ್ತು?


ಎನ್‌ಸಿಬಿಯಿಂದ ವರ್ಗಾವಣೆಗೊಂಡಿರುವ ಭಾರತೀಯ ಕಂದಾಯ ಸೇವೆ ಅಧಿಕಾರಿ ವಾಂಖೆಡೆ ಅವರು 2021 ರ ಅಕ್ಟೋಬರ್ 2 ರ ರಾತ್ರಿ ಮುಂಬೈ ಕರಾವಳಿಯ ಗ್ರೀನ್ ಗೇಟ್ ನಲ್ಲಿರುವ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್ ನಲ್ಲಿ ಕಾರ್ಡೆಲಿಯಾ ಹಡಗಿನ ಮೇಲೆ ದಾಳಿ ನಡೆಸಲು ಸಿಂಗ್ ಮತ್ತು ಕೆಲವು ಸಾಕ್ಷಿಗಳು ಸೇರಿದಂತೆ ಅಧಿಕಾರಿಗಳ ತಂಡವನ್ನು ಮುನ್ನಡೆಸಿದ್ದರು.


ಇದನ್ನೂ ಓದಿ: ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ನಿಶ್ಚಿತಾರ್ಥಕ್ಕೆ ಬರ್ತಿದ್ದಾರೆ ಗಣ್ಯಾತಿಗಣ್ಯರು! ಫುಡ್ ಮೆನು ಏನಿದೆ?

ಈ ದಾಳಿಯಲ್ಲಿ ಅಧಿಕಾರಿಗಳು 13 ಗ್ರಾಂ ಕೊಕೇನ್, 5 ಗ್ರಾಂ ಮೆಫೆಡ್ರೋನ್, 21 ಗ್ರಾಂ ಗಾಂಜಾ, 22 ಎಂಡಿಎಂಎ ಮಾತ್ರೆಗಳು ಮತ್ತು 1.33 ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಗ ಎನ್‌ಸಿಬಿ ಹೇಳಿಕೊಂಡಿತ್ತು. ಅಷ್ಟೇ ಅಲ್ಲದೆ ಆರ್ಯನ್ (24), ಅರ್ಬಾಜ್ ಮರ್ಚೆಂಟ್ (26) ಮತ್ತು ಮುನ್ಮುಮ್ ಧಮೆಚಾ (28) ಅವರನ್ನು ಅಕ್ಟೋಬರ್ 3 ರಂದು ಬಂಧಿಸಲಾಗಿತ್ತು. ತದ ನಂತರ, ದಾಳಿಗೆ ಸಂಬಂಧಿಸಿದಂತೆ ಏಜೆನ್ಸಿ ಇನ್ನೂ 17 ಜನರನ್ನು ಸಹ ಬಂಧಿಸಿತ್ತು.


ವಾಟ್ಸಾಪ್ ಚಾಟ್ ಗಳನ್ನು ಅವಲಂಬಿಸಿ, ವಾಂಖೆಡೆ ಅವರ ತಂಡವು ಈ ಆರೋಪಿಗಳು ದೊಡ್ಡ ಪಿತೂರಿಯ ಭಾಗವಾಗಿದ್ದಾರೆ ಎಂದು ಹೇಳಿತ್ತು. ಶಾರುಖ್ ಮಗ ಆರ್ಯನ್ ಕೆಲವು ವಿದೇಶಿ ಡ್ರಗ್ ಪೂರೈಕೆದಾರರೊಂದಿಗೆ ಸಂಪರ್ಕದಲ್ಲಿದ್ದಾನೆ ಮತ್ತು ಚಾಟ್ ಗಳು "ಹಾರ್ಡ್ ಡ್ರಗ್ಸ್" ಮತ್ತು "ಬೃಹತ್ ಪ್ರಮಾಣಗಳನ್ನು" ಉಲ್ಲೇಖಿಸಿವೆ ಎಂದು ಹೇಳಿದ್ದರು.


ಈ ಪ್ರಕರಣದ ಬಗ್ಗೆ ಬಾಂಬೆ ಹೈಕೋರ್ಟ್ ನ ನ್ಯಾಯಮೂರ್ತಿ ಆಗ ಹೇಳಿದ್ದೇನು?


ಆದರೆ ಎನ್‌ಸಿಬಿಯ ಹೇಳಿಕೆಗಳನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್ ನ ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಅವರ ಏಕಸದಸ್ಯ ಪೀಠವು ಕಳೆದ ವರ್ಷ ಅಕ್ಟೋಬರ್ ನಲ್ಲಿ ಯಾವುದೇ ಪಿತೂರಿ ನಡೆದಿದೆ ಅಂತ ಸೂಚಿಸಲು ಯಾವುದೇ ಪುರಾವೆಗಳಿಲ್ಲ ಎಂದು ಗಮನಿಸಿತು.


ಇದನ್ನೂ ಓದಿ: ಸೂರ್ಯನ ಬೆಳಕಿಂದ ಚಕ್ಕುಲಿ ತಯಾರಿಸಿ! ಭರ್ಜರಿ ಆದಾಯ ಗಳಿಸಿ

ದಾಳಿಯ ಮರು ತನಿಖೆಗಾಗಿ ಎನ್‌ಸಿಬಿ ರಚಿಸಿದ ಉಪ ಮಹಾನಿರ್ದೇಶಕ ಸಂಜಯ್ ಕುಮಾರ್ ಸಿಂಗ್ ನೇತೃತ್ವದ ಎಸ್ಐಟಿ, ಶಾರುಖ್ ನ ಮಗ ದೊಡ್ಡ ಡ್ರಗ್ಸ್ ಪಿತೂರಿ ಅಥವಾ ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಸಿಂಡಿಕೇಟ್ ನ ಭಾಗವಾಗಿದ್ದಾನೆ ಎಂದು ಸೂಚಿಸಲು ಪುರಾವೆಗಳನ್ನು ಕಂಡು ಹಿಡಿಯಲಿಲ್ಲ ಎಂದು ಸುದ್ದಿ ಮಾಧ್ಯಮವೊಂದು ಮೊದಲು ವರದಿ ಮಾಡಿತ್ತು. ಈ ದಾಳಿಯಲ್ಲಿ ಎಸ್ಐಟಿ ಹಲವಾರು ಅಕ್ರಮಗಳನ್ನು ಸಹ ಕಂಡುಕೊಂಡಿದೆ.ಕಳೆದ ವರ್ಷ ಮೇ ತಿಂಗಳಲ್ಲಿ ಎಸ್ಐಟಿ 14 ಜನರ ವಿರುದ್ಧ ಚಾರ್ಜ್‌ಶೀಟ್ ಸಹ ಸಲ್ಲಿಸಿತು ಆದರೆ ಆರ್ಯನ್ ಗೆ ಕ್ಲೀನ್ ಚಿಟ್ ನೀಡಿತು, ನಟನ ಮಗ ಎಂದಿಗೂ ಡ್ರಗ್ಸ್ ಹೊಂದಿಲ್ಲ, ಆದ್ದರಿಂದ ಅವನ ಫೋನ್ ತೆಗೆದುಕೊಂಡು ಅವನ ಚಾಟ್ ಗಳನ್ನು ಪರಿಶೀಲಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಖಾನ್ ಯಾವುದೇ ಅಂತರರಾಷ್ಟ್ರೀಯ ಸಿಂಡಿಕೇಟ್ ನ ಭಾಗವಾಗಿದ್ದಾರೆ ಎಂದು ಚಾಟ್ ಗಳು ಸೂಚಿಸಲಿಲ್ಲ.

top videos
    First published: