ಕಾಯಕವೇ ಕೈಲಾಸ ಅಂತ ನಂಬಿದವನು ನಾನು ಎಂದು ಬಸವಣ್ಣನ ವಚನ ಹೇಳಿ ಸುದ್ದಿಗೋಷ್ಠಿ ಆರಂಭಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಕೊನೆಗೂ ಹೊಸ ಪಕ್ಷ ಘೋಷಣೆ ನೀಡಿದ್ದಾರೆ. ಇದೇ ವೇಳೆ ಯಡಿಯೂರಪ್ಪ ಬಗ್ಗೆ ಮಾತಾಡಿದ ಜನಾರ್ದನ ರೆಡ್ಡಿ, ಬಿಎಸ್ವೈ ಅವರನ್ನು ಕೊಂಡಾಡಿದ್ದಾರೆ. ಬಿಜೆಪಿ (BJP) ವಿರುದ್ಧ ಕಿಡಿಕಾರಿದ ಜನಾರ್ದನ ರೆಡ್ಡಿ (Yediyurappa) ಅವರು ನೀವು ಯಡಿಯೂರಪ್ಪ ಅಧಿಕಾರ ಕಿತ್ತುಕೊಳ್ಳಬಹುದು ಆದ್ರೆ ಅವರ ಶಕ್ತಿ ಕಿತ್ತುಕೊಳ್ಳಲು ಆಗಲ್ಲ
ನಾನು ಮಂತ್ರಿ ಸ್ಥಾನ ತಿರಸ್ಕರಿಸಲು ಶ್ರೀರಾಮುಲು ಕಾರಣ
2008ರಲ್ಲಿ ಯಡಿಯೂರಪ್ಪ ನನ್ನ ಜೊತೆ ಚರ್ಚಿಸಿದ್ರು. ಸರ್ಕಾರ ರಚನೆ ಸಂಬಂಧ ಕೆಲಸ ಮಾಡಲು ಸೂಚಿಸಿದ್ರು ಬಳಿಕ ಸಮ್ಮಿಶ್ರ ಸರ್ಕಾರ ರಚನೆ ಆಯ್ತು.. ಈ ವೇಳೆ ನನಗೂ ಬಿಎಸ್ವೈ ಮಂತ್ರಿ ಸ್ಥಾನ ಕೊಡ್ತೀನಿ ಅಂದ್ರು
ಈ ವೇಳೆ ನಾನು ಎಂಎಲ್ಸಿ ಆಗಿದ್ದೆ. ನಾನು ಮಂತ್ರಿ ಸ್ಥಾನ ತಿರಸ್ಕರಿಸಲು ಶ್ರೀರಾಮುಲು ಕಾರಣ ಎಂದು ರೆಡ್ಡಿ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದ ನಿಯಮ ಪಾಲನೆ ಆಗಿಲ್ಲ
ಶ್ರೀರಾಮುಲುಗೆ ಮಂತ್ರಿ ಸ್ಥಾನ ಮಾಡಿ ಅಂತ ಮನವಿ ಮಾಡಿದ್ದೆ ಬಳಿಕ ಶ್ರೀರಾಮುಲು ಅವರನ್ನ ಮಂತ್ರಿ ಮಾಡಿದ್ರು. ಸಮ್ಮಿಶ್ರ ಸರ್ಕಾರದ ನಿಯಮ ಪಾಲನೆ ಆಗಿಲ್ಲ ಅಂತ ಆರೋಪಿಸಿದ್ರು. ನನ್ನನ್ನು ಬಿಜೆಪಿಯಿಂದ ಅಮಾನತು ಮಾಡಿದ್ರು. ನಿಮ್ಮನ್ನು ಉಚ್ಛಾಟಿಸಬಹುದು ಅಂತ ಅಂದೇ ಕೆಲವ್ರು ಹೇಳಿದ್ರು
ಆಗ ಬಸವರಾಜ ಬೊಮ್ಮಾಯಿ ಜೆಡಿಯು ಪಕ್ಷದಲ್ಲಿದ್ರು. ಬಸವರಾಜ ಬೊಮ್ಮಾಯಿ ನನ್ನ ಜೆಡಿಯುಗೆ ಆಹ್ವಾನ ನೀಡಿದ್ರು. ಆದರೆ ತುಂಬಾ ವಿನಯದಿಂದ ಅವರ ಆಹ್ವಾನ ತಿರಸ್ಕರಿಸಿದ್ದೆ ಎಂದು ಹೇಳಿದ್ದಾರೆ.
ಬಿಎಸ್ವೈಗೆ ಅಧಿಕಾರ ಸಿಗಲಿಲ್ಲ
ಸಮ್ಮಿಶ್ರ ಸರ್ಕಾರದ ವೇಳೆ ಬಿಎಸ್ವೈಗೆ ಅಧಿಕಾರ ಸಿಗಲಿಲ್ಲ. ಬಳಿಕ ಯಡಿಯೂರಪ್ಪ ಅವರು ನನ್ನ ಆಹ್ವಾನ ನೀಡಿದ್ರು. 224 ಕ್ಷೇತ್ರಗಳಲ್ಲಿ ಯಡಿಯೂರಪ್ಪ ಜೊತೆ ಸಂಚಾರ ಮಾಡಿದೆ. ಇವೆಲ್ಲಾ 18 ವರ್ಷಗಳ ಹಿಂದೆ ನಡೆದ ಘಟನೆಗಳು ಇಂದಿನ ಯುವ ಪೀಳಿಗೆಗೆ ಈ ವಿಚಾರಗಳು ತಿಳಿಯಬೇಕು
ಯಡಿಯೂರಪ್ಪ ಅವರನ್ನ ಸಿಎಂ ಮಾಡಲು ಕೆಲಸ ಮಾಡಿದೆ.
2008ರಲ್ಲಿ 110 ಸೀಟು ಬಿಜೆಪಿಗೆ ಬಂದಿತ್ತು. ಕಲ್ಯಾಣ ಕರ್ನಾಟಕದಲ್ಲಿ 30 ಕ್ಷೇತ್ರ ಬಿಜೆಪಿ ಗೆದ್ದಿತ್ತು. ನನ್ನ ಮೇಲಿನ ವಿಶ್ವಾಸದಿಂದ ನಾಲ್ವರು ಪಕ್ಷೇತರರು ಬಂದಿದ್ರು. ನಂತರ ಯಡಿಯೂರಪ್ಪ ಸರ್ಕಾರ ರಚನೆ ಸಾಧ್ಯವಾಯ್ತು. ಶ್ರೀರಾಮುಲು, ಕರುಣಾಕರ ರೆಡ್ಡಿ ಜೊತೆ ನನಗೂ ಮಂತ್ರಿ ಸ್ಥಾನ ಎಂದ್ರು ಹೇಳಿದ್ದಾರೆ.
ನನ್ನ ಕುಟುಂಬಕ್ಕೆ ಧೈರ್ಯ ತುಂಬಿದ್ರು
ನಾನು ಬೇಡ ಅಂದ್ರು ಯಡಿಯೂರಪ್ಪ ಮಂತ್ರಿ ಮಾಡಿದ್ರು. ಕೃತಜ್ಞತಾ ಭಾವದಿಂದ ನನಗೆ ಮಂತ್ರಿ ಸ್ಥಾನ ನೀಡಿದ್ರು. ನಾನು ಮಂತ್ರಿ ಆದ್ಮೇಲೆ ಹಲವು ಅಭಿವೃದ್ಧಿ ಕೆಲಸ ಮಾಡಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡಿದ್ದು, ನನ್ನವರು ಅಂತ ಭಾವಿಸಿದವ್ರು ನನ್ನಿಂದ ದೂರ ಆದ್ರು
ನನ್ನ ಕಷ್ಟದ ದಿನಗಳಲ್ಲಿ ನನ್ನ ಆಪ್ತರ ಯಾರು ಅಂತ ತಿಳೀತು
ಪಕ್ಷದ ಹಿರಿಯರು ಬಿಎಸ್ವೈ, ಶೆಟ್ಟರ್ ನನ್ನ ಕುಟುಂಬಕ್ಕೆ ಧೈರ್ಯ ತುಂಬಿದ್ರು.
ಬೇರೆ ಯಾವೊಬ್ಬ ನಾಯಕರೂ ನಮ್ಮ ಮನೆಗೆ ಬಂದಿರಲಿಲ್ಲ
ನನ್ನ ರಾಜಕೀಯ ಶತೃಗಳು ನನ್ನ ವಿರುದ್ಧ ಅಪಪ್ರಚಾರ ಮಾಡಿದ್ರು
ನಾನು ಮಾಡಿದ ಅಭಿವೃದ್ಧಿ ಕೆಲಸಗಳು ಮರೆಮಾಚಿದ್ರು.
ಇದನ್ನೂ ಓದಿ: Janardhan Reddy: ಬಿಜೆಪಿಗೆ ಬಿಸಿ ತುಪ್ಪವಾದ ಜನಾರ್ದನ ರೆಡ್ಡಿ; ಶ್ರೀರಾಮುಲುಗೆ ‘ಹೈ’ ಟಾಸ್ಕ್
2018ರ ಘಟನೆ ಬಳಿಕ ಕೆಲ ನಿರ್ಧಾರ ಕೈಗೊಳ್ಳಬೇಕಿತ್ತು. ಆದ್ರೆ ಯಾಕೆ ಕೈಗೊಳ್ಳಲ್ಲ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ. ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ರು. ಅಲ್ಲಿ ಕೆಲಸ ಮಾಡೋದು ಬೇಡ ಅಂತ ಹೇಳಬಹುದಿತ್ತು. ಪಕ್ಷದ ಹಿರಿಯರು ಈ ಮಾತನ್ನು ಹೇಳಬಹುದಿತ್ತು
ಮೊಳಕಾಲ್ಮೂರಲ್ಲಿ ರಾಮುಲು ಪರ ಕ್ಯಾಂಪೇನ್ ಮಾಡ್ತಿದ್ದೆ, ನಾಮಿನೇಷನ್ಗೆ 5 ನಿಮಿಷ ಮೊದಲು ಘೋಷಿಸಿದ್ರು. BSY ಮಗ ವಿಜಯೇಂದ್ರ ಅಭ್ಯರ್ಥಿ ಅಲ್ಲ ಅಂತ ಘೋಷಿಸಿದ್ರು. ಅವರಿಗೆ ಏನು ಒತ್ತಡವಿತ್ತೋ ಗೊತ್ತಿಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ