ಮೊದಲ ಬಾರಿಗೆ ವೆಬ್​ ಸರಣಿಗೆ ಎಂಟ್ರಿಯಾದ ರಿಯಲ್​ ಸ್ಟಾರ್​ ಉಪ್ಪಿ..!

news18
Updated:August 13, 2018, 1:30 PM IST
ಮೊದಲ ಬಾರಿಗೆ ವೆಬ್​ ಸರಣಿಗೆ ಎಂಟ್ರಿಯಾದ ರಿಯಲ್​ ಸ್ಟಾರ್​ ಉಪ್ಪಿ..!
news18
Updated: August 13, 2018, 1:30 PM IST
ನ್ಯೂಸ್​ 18 ಕನ್ನಡ 

ಈಗ ಸಿನಿಮಾಗಳಿಗಿಂತಲೂ ವೆಬ್​ ಸರಣಿಗಳದ್ದೇ ಹೆಚ್ಚು ಸದ್ದು. ಹೌದು ಬಿ-ಟೌನ್​ನ ಸ್ಟಾರ್​ಗಳೇ ಈಗ ವೆಬ್​ ಸರಣಿಗಳಲ್ಲಿ ಅಭಿನಯಿಸುತ್ತಿದ್ದಾರೆ ಎಂದರೆ ಅದಕ್ಕೆ ಎಷ್ಟು ಪ್ರಾಮುಖ್ಯತೆ ಎಂದು ನೀವೇ ಯೋಚಿಸಿ.

ಈ ಮೊದಲು ಅನಿಲ್​ ಕಪೂರ್​, ಮಾಧವನ್​, ಸೈಫ್​ ಅಲಿಖಾನ್​, ನವಾಜುದ್ದೀನ್​ ಸಿದ್ಧಿಕಿ ಈಗಾಗಲೇ ವೆಬ್​ ಸರಣಿಗಳಲ್ಲಿ ಅಭಿನಯಿಸಿ ಹೆಸರು ಮಾಡಿದ್ದಾರೆ. ಈಗ ಸರತಿ ನಮ್ಮ ಚಂದನವನದ ಮಂದಿಯದ್ದು. ಹೌದು ಸದಾ ವಿಭಿನ್ನ ಸಿನಿಮಾಗಳನ್ನು ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸುವ ನಮ್ಮ ರಿಯಲ್​ ಸ್ಟಾರ್​ ಉಪ್ಪಿ ಈಗ ಕನ್ನಡದ ವೆಬ್​ ಸರಣಿಯೊಂದರಲ್ಲಿ ಮೊದಲ ಬಾರಿಗೆ ಅಭಿನಯಿಸುತ್ತಿದ್ದಾರೆ.

ವಿನಾಯಕ್​ ಜೋಷಿ ನಿರ್ದೇಶಿಸಿ, ನಿರ್ಮಿಸುತ್ತಿರುವ 'ಜೋಷಿಲೆ' ವೆಬ್​ ಸರಣಿಯಲ್ಲಿ ವಿನಾಯಕ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ, ಉಪ್ಪಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ವೆಬ್​ ಸರಣಿ ಗಣೇಶನ ಹಬ್ಬಕ್ಕೆ ಕೊಡುಗೆಯಾಗಿ ಸಿಗಲಿದೆಯಂತೆ.

ವಿನಾಯಕ್​ ಈ ಹಿಂದೆಯೇ ಈ ವೆಬ್​ ಸರಣಿ ಕುರಿತಾಗಿ ಪ್ರಕಟಿಸಿದ್ದರು. ಇದು ಯೂಟ್ಯೂಬ್​ನಲ್ಲಿ ಪ್ರಸಾರಗೊಳ್ಳಲಿದ್ದು, ಇದನ್ನು ಜನರು ಉಚಿತವಾಗಿ ನೋಡಬಹುದಾಗಿದೆ.

 
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...