• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಗೂಢಚಾರಿಯಾಗಿ ಸಲ್ಮಾನ್ ಖಾನ್: ನಟನ 32 ವರ್ಷಗಳ ಸಿನಿ ಜರ್ನಿಯಲ್ಲಿ ಇದೇ ಮೊದಲ ಬಯೋಪಿಕ್​..!

ಗೂಢಚಾರಿಯಾಗಿ ಸಲ್ಮಾನ್ ಖಾನ್: ನಟನ 32 ವರ್ಷಗಳ ಸಿನಿ ಜರ್ನಿಯಲ್ಲಿ ಇದೇ ಮೊದಲ ಬಯೋಪಿಕ್​..!

ಸಲ್ಮಾನ್​ ಖಾನ್​

ಸಲ್ಮಾನ್​ ಖಾನ್​

ತಮ್ಮ 32 ವರ್ಷಗಳ ಸಿನಿಮಾ ಜರ್ನಿಯಲ್ಲಿ ಮೊದಲ ಬಾರಿ ಸಲ್ಮಾನ್ ಖಾನ್ ಬಯೋಪಿಕ್‌ವೊಂದರಲ್ಲಿ ನಟಿಸಲು ಉತ್ಸುಕರಾಗಿದ್ದಾರೆ.

  • Share this:

ಕಾಮಿಡಿ, ಆ್ಯಕ್ಷನ್, ಡ್ರಾಮಾ ಹೀಗೆ ವಿವಿಧ ಜಾನರ್‌ನಲ್ಲಿ ಸಿನಿಮಾ ಮಾಡಿ, ಯಶಸ್ಸು ಪಡೆದವರಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಸಹ ಒಬ್ಬರು. ಸದ್ಯ ಈಗಿರುವ ಸುದ್ದಿ ಎಂದರೆ, ತಮ್ಮ 32 ವರ್ಷಗಳ ಸಿನಿಮಾ ಜರ್ನಿಯಲ್ಲಿ ಮೊದಲ ಬಾರಿ ಸಲ್ಮಾನ್ ಖಾನ್ ಬಯೋಪಿಕ್‌ವೊಂದರಲ್ಲಿ ನಟಿಸಲು ಉತ್ಸುಕರಾಗಿದ್ದಾರೆ. ಈಗಾಗಲೇ ಬಾಲಿವುಡ್‌ನಲ್ಲಿ ಬಯೋಪಿಕ್ ಆಧರಿಸಿ, ಸಾಕಷ್ಟು ಸಿನಿಮಾಗಳು ತೆರೆಕಂಡಿವೆ. ಅವುಗಳಲ್ಲಿ ಅತಿ ಹೆಚ್ಚು ಕ್ರೀಡಾಪಟುಗಳ ಜೀವನ ಕಥೆಯನ್ನು (ಭಾಗ್ ಮಿಲ್ಕಾ ಭಾಗ್, ಎಂ.ಎಸ್.ದೋನಿ, ದಂಗಲ್) ಆಧರಿಸಿದ ಸಿನಿಮಾಗಳೇ ಆಗಿವೆ. ಆದರೆ, ಭಾರತೀಯ ಗೂಢಾಚಾರಿಯ ಬಯೋಪಿಕ್ ಆಧಾರಿತ ಇದೇ ಮೊದಲು. ಭಾರತೀಯ ಗೂಢಚಾರ್ಯದ ಕುರಿತು ಈ ಮೊದಲು ಆಲಿಯಾ ಭಟ್ ಅಭಿನಯದ ರಾಜಿ ತೆರೆಕಂಡಿತ್ತು.


ನೈಜ ಕಥೆ ಆಧರಿಸಿದ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾಗಾಗಿ ನಟ ಸಲ್ಮಾನ್ ಖಾನ್, ನೋ ಒನ್ ಕಿಲ್ಡ್ ಜೆಸಿಕಾ, ರೇಡ್ ಖ್ಯಾತಿಯ ನಿರ್ದೇಶಕ ರಾಜ್‌ಕುಮಾರ್ ಗುಪ್ತಾ ಹಾಗೂ ನಿರ್ಮಾಪಕ ಸಾಜಿದ್ ನಾಡಿಯಾದ್​ವಾಲಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.


ಯಾರು ರವೀಂದ್ರ ಕೌಶಿಕ್?


ಭಾರತದ ಗುಪ್ತಚರ ರವೀಂದ್ರ ಕೌಶಿಕ್ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಪಾಕಿಸ್ತಾನವನ್ನೇ ನಡುಗಿಸಿದ ರವೀಂದ್ರ ಅವರು ಭಾರತದ 'ಬ್ಲ್ಯಾಕ್ ಟೈಗರ್' ಎಂದೇ ಪ್ರಸಿದ್ಧರಾಗಿದ್ದರು. ರಾಜಸ್ಥಾನದಲ್ಲಿ ಹುಟ್ಟಿದ ಈತ ಭಾರತಕ್ಕಾಗಿ ಪಾಕಿಸ್ತಾನಿ ಸೈನ್ಯವನ್ನು ಸೇರಿ ತನ್ನ ಹೆಸರನ್ನು ಮುಸ್ಲಿಂ ಹೆಸರಾಗಿ ಪರಿವರ್ತಿಸಿಕೊಂಡಿದ್ದರು. ಭಾರತಕ್ಕಾಗಿ ಗುಪ್ತಚರ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತ ರವೀಂದ್ರ ಕೌಶಿಕ್, ಪಾಕಿಸ್ತಾನ ಸೈನ್ಯದ ಮಧ್ಯೆ ಪತ್ತೆದಾರಿ ಕೆಲಸ ಮಾಡುತ್ತಿದ್ದರಲ್ಲದೆ, ಪಾಕಿಸ್ತಾನದ ಸಾಕಷ್ಟು ಸೀಕ್ರೆಟ್ ವಿಚಾರಗಳನ್ನು ಭಾರತಕ್ಕೆ ಒದಗಿಸುತ್ತಿದ್ದರು.


ಇದನ್ನೂ ಓದಿ: ಕೆಜಿಎಫ್​ ಚಾಪ್ಟರ್​ 2 ತಂಡದ ಕಡೆಯಿಂದ ಸಿಕ್ತು ಹೊಸ ಅಪ್ಡೇಟ್..!​


'ರವೀಂದ್ರ ಅವರ ಜೀವನದ ಕುರಿತು ಮಾಹಿತಿ ಸಂಗ್ರಹಿಸಲು ನಿರ್ದೇಶಕ ರಾಜ್‌ಕುಮಾರ್ ಗುಪ್ತಾ ಅವರು ಕಳೆದ 5 ವರ್ಷಗಳಿಂದ ಹುಡುಕಾಟ ನಡೆಸುತ್ತಿದ್ದರು. ಕೊನೆಗೂ ಅವರ ಸಾಧನೆ ಮತ್ತು ಪರಂಪರೆಗೆ ನ್ಯಾಯ ಒದಗಿಸುವ ಚಿತ್ರಕಥೆ ಸಿದ್ಧಗೊಳಿಸುವಲ್ಲಿ ಯಶ್ವಸಿಯಾಗಿದ್ದಾರೆ. ಗುಪ್ತಾರೊಂದಿಗೆ ಸಿನಿಮಾ ಮಾಡುವುದಾಗಿ ಮೊದಲೇ ಒಪ್ಪಿದ್ದ ಸಲ್ಮಾನ್‌ಗೆ ಈ ಕಥೆಯನ್ನು ಹೇಳಿದರು. ಭಾರತೀಯ ಗುಪ್ತಚರ ಇತಿಹಾಸದಲ್ಲೇ ನಡೆದಿರುವ ಅತ್ಯಂತ ವೀರ ಮತ್ತು ರೋಚಕ ಕಥೆಗಳಲ್ಲಿ ಇದು ಒಂದಾಗಿದೆ' ಎಂದು ಮೂಲಗಳು ಬಹಿರಂಗಪಡಿಸಿವೆ.


'ನಿಜಕ್ಕೂ ಇದೊಂದು ಉತ್ತಮ ಥ್ರಿಲ್ಲರ್ ಕಥೆಯಾಗಿದ್ದು, ಜೊತೆಗೆ ಒಂದಿಷ್ಟು ಆ್ಯಕ್ಷನ್ ಸಹ ಇರಲಿದೆ. ಇದೇ ಮೊದಲ ಬಾರಿ ಸಲ್ಮಾನ್ ನೈಜ ಪಾತ್ರವೊಂದರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನರು ನಿರೀಕ್ಷಿಸುವಂತೆ ಇದಕ್ಕೆ ಬ್ಲ್ಯಾಕ್ ಟೈಗರ್ ಎಂದು ಹೆಸರಿಡುವುದಿಲ್ಲ, ಬೇರೊಂದು ಸೂಕ್ತ ಹೆಸರಿಗಾಗಿ ಚಿತ್ರತಂಡ ಹುಡುಕಾಟ ನಡೆಸುತ್ತಿದೆ. 70 ಮತ್ತು 80ರ ದಶಕದ ಕಥೆ ಇದಾಗಿರುವುದರಿಂದ, ಕೌಶಿಕ್ ಅವರ ಜೀವನದ ಬಗ್ಗೆ ಸಂಶೋಧನೆ ಮಾಡುವುದರ ಹೊರತಾಗಿ, ಚಿತ್ರತಂಡ ಆ ಕಾಲಘಟ್ಟವನ್ನು ಮರುಸೃಷ್ಟಿಸಲು ಸಹ ಸಾಕಷ್ಟು ಅಧ್ಯಯನ ನಡೆಸಿದೆ' ಎಂದು ತಿಳಿದುಬಂದಿದೆ.


ಕುತೂಹಲಕಾರಿ ಸಂಗತಿಯೆಂದರೆ, 2012ರಲ್ಲಿ, ಕಬೀರ್ ಖಾನ್ ನಿರ್ದೇಶನದ, ಸಲ್ಮಾನ್ ಅಭಿನಯದ ಏಕ್ ಥಾ ಟೈಗರ್ ಸಿನಿಮಾವೂ ರವೀಂದ್ರ ಕೌಶಿಕ್ ಅವರ ಜೀವನವನ್ನು ಆಧರಿಸಿದ್ದಾಗಿ ಎಂಬ ವದಂತಿಗಳಿದ್ದವು. ಆದರೂ ಅಂತಿಮವಾಗಿ ಅದೊಂದು ಭಾರತೀಯ ಗೂಢಚಾರ್ಯದ ಕಾಲ್ಪನಿಕ ಕಥೆಯಾಗಿ ಮೂಡಿಬಂದಿತ್ತು.


ಇದನ್ನೂ ಓದಿ: Kiara Advani: ಕ್ಯಾಲೆಂಡರ್​ ಫೋಟೋಶೂಟ್​ಗಾಗಿ ಮತ್ತೊಮ್ಮೆ ಟಾಪ್​ಲೆಸ್​ ಆದ ನಟಿ ಕಿಯಾರಾ ಅಡ್ವಾಣಿ..!


ಇನ್ನು ಸಲ್ಮಾನ್​ ಖಾನ್​ ಅಭಿನಯದ ರಾಧೆ ಸಿನಿಮಾ ಈದ್​ ಅಂಗವಾಗಿ ಒಟಿಟಿ ಹಾಗೂ ಚಿತ್ರಮಂದಿರಗಳಲ್ಲಿ ಏಕ ಕಾಲದಲ್ಲಿ ರಿಲೀಸ್​ ಆಗಿತ್ತು. ಆದರೆ, ಈ ಸಿನಿಮಾ ಊಹಿಸಿದ ಮಟ್ಟಕ್ಕೆ ಪ್ರೇಕ್ಷಕರ ಮನ ಗೆಲ್ಲಲಿಲ್ಲ.

First published: