'ವೀರ ಮದಕರಿ' ವಿವಾದ: ಮೌನ ಮುರಿದ ಸುದೀಪ್​ ಬರೆದರು ಅಭಿಮಾನಿಗಳಿಗೊಂದು ಪತ್ರ..!

Anitha E | news18
Updated:October 11, 2018, 5:29 PM IST
'ವೀರ ಮದಕರಿ' ವಿವಾದ: ಮೌನ ಮುರಿದ ಸುದೀಪ್​ ಬರೆದರು ಅಭಿಮಾನಿಗಳಿಗೊಂದು ಪತ್ರ..!
Anitha E | news18
Updated: October 11, 2018, 5:29 PM IST
ನ್ಯೂಸ್​ 18 ಕನ್ನಡ 

'ವೀರ ಮದಕರಿ' ಸಿನಿಮಾ ವಿವಾದದ ಕುರಿತು ನಟ ಸುದೀಪ್ ಮೌನ ಮುರಿದಿದ್ದಾರೆ. ಸದ್ಯ ಸಿನಿಮಾವೊಂದರ ಚಿತ್ರೀಕರಣಕ್ಕೆಂದು ವಿದೇಶಕ್ಕೆ ತೆರೆಳಿರುವ ಸುದೀಪ್​ ಅಲ್ಲಿಂದಲೇ  ಪತ್ರ ಬರೆದಿದ್ದಾರೆ. ಅಷ್ಟಕ್ಕೂ ಕಿಚ್ಚ ಬರೆದ ಪತ್ರದಲ್ಲೇನಿದೆ. ಜಾತಿ ಕಿಚ್ಚಿಗೆ ಕಿಚ್ಚ ಕೊಟ್ಟ ಉತ್ತರ ಏನು? ಅಂತ ತಿಳಿಯೋಕೆ ಈ ವರದಿ ಓದಿ...

'ವೀರ ಮದಕರಿ' ಸಿನಿಮಾ ವಿವಾದ ಆರಂಭವಾಗಿ ಒಂದು ವಾರವೇ ಕಳೆದೋಗಿದೆ. ಮೊದಲಿಗೆ ದೋಸ್ತಿಗಳ ಪ್ರತಿಷ್ಠೆಯ ಫೈಟ್‍ನಂತಿದ್ದ ಈ ಕದನಕ್ಕೆ ಜಾತಿಯ ಕಲೆ ಅಂಟಿಕೊಂಡಿತ್ತು. ಅದು ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಾ, ದೊಡ್ಡ ಚರ್ಚೆಗೆ ವೇದಿಕೆಯೊಂದನ್ನ ಒದಗಿಸಿತ್ತು. ಆದರೆ ಈ ಕುರಿತು ಸುದೀಪ್ ತುಟಿ ಬಿಚ್ಚಿರಲಿಲ್ಲ. ಅದಕ್ಕೆ ಕಾರಣ ಸುದೀಪ್ ಮದಕರಿ ವಿವಾದದ ಬಿಸಿಯೇರುವ ಸಮಯದಲ್ಲಿಯೇ ಊರು ಬಿಟ್ಟಿದ್ದರು. ದೂರದ ಜಾರ್ಜಿಯಾದಲ್ಲಿ ತಮ್ಮ ಪಾಡಿಗೆ ತಾವು ಶೂಟಿಂಗ್‍ನಲ್ಲಿದ್ದರು. ಆದರೆ ಮದಕರಿ ಜಾತಿ ಜಗಳ ಎಲ್ಲೋ ಒಂದು ಕಡೆ, ಕಲೆಗೆ, ಕಲಾವಿದರ ನಡುವೆ ಬೇರೆನೋ ಪರಿಣಾಮ ಬೀರಬಹುದು ಎನ್ನುವಾಗ ಮೌನ ಮುರಿದಿದ್ದಾರೆ.

ಮದಕರಿ ವಿವಾದದ ಕುರಿತು ಯಾವುದೇ ರೀತಿಯ ಚರ್ಚೆ ನಡೆಸದಂತೆ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಅಲ್ಲದೆ ಸಿನಿಮಾವನ್ನು ಸಿನಿಮಾವನ್ನಾಗಿ ಇರಲಿ ಬಿಡಿ. ಸಿನಿಮಾದಲ್ಲಿ ನಂಬಿಕೆ ಇರಲಿ. ಇದು ಎಲ್ಲ ಧರ್ಮವನ್ನೂ ಒಂದೇ ಸೂರಿನಡಿಗೆ ತರುವ ಒಂದು ಸುಂದರ ಮಾಧ್ಯಮವೇ ಈ ಸಿನಿಮಾ. ರಾಕ್​ಲೈನ್​ ವೆಂಕಟೇಶ್​ ಅವರಿಗೆ ಒಳ್ಳೆಯದಾಗಲಿ ಎಂದು ಶುಭಕೋರಿ ಟ್ವೀಟ್​ ಮಾಡಿದ್ದಾರೆ.

This request also applies to my frnz n fans ,,, that this debate itslf isn’t required.ಅಷ್ಟೇ ಅಲ್ಲದೆ ಈ ವಿವಾದದ ಕುರಿತು ಒಂದು ಪತ್ರವನ್ನೂ ಬರೆದಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್​ನಲ್ಲಿ ಈ ಪತ್ರವನ್ನು ಬರೆದಿರುವ ಸುದೀಪ್​ ಅದನ್ನೂ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅದರ ಪ್ರತಿ ಇಲ್ಲಿದೆ ಓದಿ...

 

 2009ರಲ್ಲಿ 'ವೀರ ಮದಕರಿ' ಸಿನಿಮಾದಲ್ಲಿ ಸುದೀಪ್ಮ ಅಭಿನಯಿಸಿದ್ದರು. ಮದಕರಿ, ವೀರ ಮದಕರಿ ಅಂತ ಮೀಸೆ ತಿರುವಿದಾಗಲೇ.. ಮದಕರಿ ಅಂದ್ರೆ ಸುದೀಪ್ ಎನ್ನುವಷ್ಟರ ಮಟ್ಟಿಗೆ ಅವರ ಅಭಿಮಾನಿಗಳು ಸುದೀಪ್‍ರನ್ನ ಮದಕರಿಯಾಗಿ ನೋಡೋ ಆಸೆ ಇಟ್ಟುಕೊಂಡಿದ್ದರು. ಯಾವಾಗ ದರ್ಶನ್, ಮದಕರಿಯ ಪಾತ್ರ ಮಾಡುತ್ತಾರೆ ಅಂತ ಗೊತ್ತಾಯಿತೋ, ಆಗ ಸುದೀಪ್ ಮಾತ್ರ ಮದಕರಿ ಪಾತ್ರವನ್ನ ಮಾಡಬೇಕು ಅಂತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳಲು ಶುರು ಮಾಡಿದ್ದರು.

ಸುದೀಪ್ ಅಭಿಮಾನಿಗಳ ಒತ್ತಾಯಕ್ಕೆ, ಅವರ ಮಾತಿಗೆ ಇನ್ನಷ್ಟು ಬಲ ನೀಡಿದ್ದು ವಾಲ್ಮಿಕಿ ಪೀಠದ ಸ್ವಾಮಿಜಿಗಳು. ಅವರು ದಾವಣೆಗೆರೆಯ ಯಾವುದೋ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸುದೀಪ್ ನಮ್ಮ ಸಮಾಜದವರು, ಮದಕರಿ ಪಾತ್ರವನ್ನ ಅವರೇ ಮಾಡಬೇಕು.. ದರ್ಶನ್ ಏನಾದರೂ ಈ ಪಾತ್ರ ಮಾಡೋದಾದರೆ ಪ್ರತಿಭಟನೆ ಹಾಗೂ ಕಾನೂನಿನ ಸಮರಕ್ಕೆ ಇಳಿಯಬೇಕಾಗುತ್ತೆ ಅಂತ ಹೇಳಿಬಿಟ್ಟರು. ಅಲ್ಲಿಂದ ಕೇವಲ ಅಭಿಮಾನಿಗಳ ಜಗಳವಾಗಿದ್ದ ಈ ವಿವಾದಕ್ಕೆ ಜಾತಿಯ ಕಲೆ ಅಂಟಿಕೊಂಡಿತು.

ವಾಲ್ಮೀಕಿ ಸ್ವಾಮೀಜಿ ಹೀಗೆ ಹೇಳಿದ್ದೇ ತಡ. ದರ್ಶನ್ ಅಭಿಮಾನಿಗಳು ಸಿಡಿದೆದ್ದರು. ಕಲೆಗೆ ಜಾತಿಯನ್ನ ಅಂಟಿಸೋದು ಎಷ್ಟರ ಮಟ್ಟಿಗೆ ಸರಿ? ಡಾ.ರಾಜ್‍ಕುಮಾರ್ ರಾಯರ ಪಾತ್ರ ಮಾಡಿದಾಗ, ಭಕ್ತಕನಕ ದಾಸ ಸಿನಿಮಾ ಮಾಡಿದಾಗ ಯಾರಾದರೂ ಪ್ರಶ್ನಿಸಿದರಾ? ಶಿವರಾಜ್‍ಕುಮಾರ್ 'ಕುರುಬನ ರಾಣಿ' ಸಿನಿಮಾ ಮಾಡಿದ್ರು, ಸುದೀಪ್ 'ಕೆಂಪೇಗೌಡ' ಶೀರ್ಷಿಕೆಯನ್ನ ತಮ್ಮ ಸಿನಿಮಾಗೆ ಇಟ್ಟಿದ್ದರು. ಆಗೆಲ್ಲ ಇಲ್ಲದ ಜಾತಿ ಪ್ರಶ್ನೆ ಈಗ ಏಕೆ ಅಂತ ಅಭಿಯಾನ ಶುರು ಮಾಡಿದ್ದರು.

ದರ್ಶನ್ ಅಭಿಮಾನಿಗಳಲ್ಲದೆ ನಿರ್ಮಾಪಕ ಮುನಿರತ್ನ ಸಹ ವಾಲ್ಮೀಕಿ ಸ್ವಾಮೀಜಿಗಳ ಹೇಳಿಕೆ ಖಂಡಿಸಿದರು. ಕಲೆಗೆ ಜಾತಿಯನ್ನ ಎಳೆದು ತರೋದು ಸರಿಯಲ್ಲ ಅನ್ನೋ ಮೂಲಕ, ಯಾರು ಯಾವ ಪಾತ್ರವನ್ನ ಬೇಕಾದರೂ ಮಾಡಬಹುದು ಅಂತ ಪರೋಕ್ಷವಾಗಿ ದರ್ಶನ್‍ಗೆ ಬೆಂಬಲಿಸಿದರು.

ಇಂತಹ ಸಮಯದಲ್ಲಿ ಸುದೀಪ್ ಏನಾದ್ರೂ ಮಾತನಾಡಿದ್ರೆ, ಈ ವಿವಾದ ಬಗೆಹರಿಯಬಹುದೆನೋ ಅಂತ ಸಿನಿಮಾ ಪ್ರೇಮಿಗಳು ಕಾಯ್ತಿದ್ರು.. ಈಗ ಕೊನೆಗೂ ಸುದೀಪ್ ಮೌನ ಮುರಿದಿದ್ದಾರೆ.ಈ ಪತ್ರ ಬರೆದಿದ್ದಾರೆ. ಅವರ ಪತ್ರದ ಪ್ರತಿಕ್ರಿಯೆ ಈ ವಿವಾದವನ್ನ ಸದ್ಯಕ್ಕೆ ತಣ್ಣಗಾಗಿಸೋ ಪ್ರಯತ್ನದಲ್ಲಿ ಸಫಲವಾಗಿದ್ದರೂ, ಪೂರ್ಣವಾಗಿ ವಿವಾದದ ಬೆಂಕಿ ಇನ್ನು ಆರಿಲ್ಲ.ಎಲ್ಲೋ ಒಂದು ಕಡೆ ಸಣ್ಣ ಕಿಡಿಯೊಂದು ಹಾಗೆಯೇ ಇದೆ.ಅದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆಯೋ ಕಾದು ನೋಡಬೇಕು.
First published:October 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...