`ಕೌನ್​ ಬನೇಗಾ ಕರೋಡ್​ಪತಿ’ ಶೋನಲ್ಲಿ ಕನ್ನಡ ಸಿನಿಮಾ ಹವಾ: ಬಿಗ್​ ಬಿ ಬಾಯಲ್ಲೂ ಇದೇ ಟೈಟಲ್​..!

‘ಫಾರ್ REGN' ಚಿತ್ರದ ನಿರ್ದೇಶಕ‌ ನವೀನ್ ದ್ವಾರಕನಾಥ್  ಕೌನ್ ಬನೇಗಾ ಕರೋಡ್​ಪತಿ (KBC)ಕಾರ್ಯಕ್ರಮದ ನಿರೂಪಕ, ಹಿಂದಿ ಚಿತ್ರರಂಗದ ಪ್ರಖ್ಯಾತ ನಟ, ನಿರ್ಮಾಪಕ, ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು ಭೇಟಿ ಮಾಡಿದ್ದಾರೆ.

ನಿರ್ದೇಶಕ ನವೀನ್​, ಅಮಿತಾಭ್​ ಬಚ್ಚನ್​

ನಿರ್ದೇಶಕ ನವೀನ್​, ಅಮಿತಾಭ್​ ಬಚ್ಚನ್​

  • Share this:
ಕನ್ನಡದಲ್ಲಿ ಮೊದಲಿನಿಂದಲೂ ಭಿನ್ನ, ವಿಭಿನ್ನ ಟೈಟಲ್(Title)​ ಇಟ್ಟುಕೊಂಡು ಹೊಸಬರ ತಂಡ ಗಾಂಧಿನಗರಕ್ಕೆ ಕಾಲಿಡುತ್ತಾರೆ. ಅದೇ ಸಾಲಿಗೆ  ‘ಫಾರ್ REGN’ ತಂಡ ಸೇರಿಕೊಂಡಿತ್ತು. ಟೈಟಲ್​ನಲ್ಲೇ ಮಜಾ ಕೊಟ್ಟಿರೋ ಈ ಚಿತ್ರತಂಡ ಈಗ ಬಿಗ್​ ಬಿ ಅಮಿತಾಭ್​ ಬಚ್ಚನ್​(Amitabh Bachchan)  ಅವರನ್ನು ಭೇಟಿಯಾಗಿದೆ. ಇತ್ತೀಚೆಗಷ್ಟೆ ಫಾರ್ REGN' ತಂಡ ಹಾಡಿನ ರೆಕಾರ್ಡಿಂಗ್ ಮುಗಿಸಿ, ಸಿನಿಮಾ ಪ್ರಿಯರಿಗೆ ಒಳ್ಳೆಯ ಸುದ್ದಿಯನ್ನು ನೀಡಿತ್ತು..ಇದರ ಬೆನ್ನಲ್ಲೆ ಈಗ ಮೊತ್ತೊಂದು ಹೊಸ ಸುದ್ದಿಯನ್ನ ನೀಡಿದೆ‌. ಹೌದು‌ ಫಾರ್ REGN' ಚಿತ್ರದ ನಿರ್ದೇಶಕ‌ ನವೀನ್ ದ್ವಾರಕನಾಥ್  ಕೌನ್ ಬನೇಗಾ ಕರೋಡ್​ಪತಿ (KBC)ಕಾರ್ಯಕ್ರಮದ ನಿರೂಪಕ, ಹಿಂದಿ ಚಿತ್ರರಂಗದ ಪ್ರಖ್ಯಾತ ನಟ, ನಿರ್ಮಾಪಕ, ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು ಭೇಟಿ ಮಾಡಿದ್ದಾರೆ.ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ‘ಫಾರ್ REGN’ ಚಿತ್ರದ ಕುರಿತು ಮಾತನಾಡಿ , ಆಶೀರ್ವಾದ ಪಡೆದುಕೊಂಡದ್ದು ನನ್ನ ಜೀವನದ ಅತ್ಯಂತ ಸಂತೋಷದ ದಿನ ಎಂದು ವ್ಯಕ್ತಪಡಿಸಿದರು.

ಬಹುತಾರಾಂಗಣದ ಚಿತ್ರ ‘ಫಾರ್​ REGN’

ಪೃಥ್ವಿ ಅಂಬರ್ ಹಾಗೂ ಮಿಲನಾ ನಾಗರಾಜ್ ಅಭಿನಯದ 'ಫಾರ್ REGN' ಚಿತ್ರತಂಡ ಮೂರನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ. ಖ್ಯಾತ ಖಳನಟ ರವಿಶಂಕರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಅದೇ ರೀತಿ ಕನ್ನಡದ ಜನಪ್ರಿಯ ಪೋಷಕ ನಟ, ಶಂಕರ್ ನಾಗ್ ಅವರ ಆಪ್ತ ಸ್ನೇಹಿತ ರಮೇಶ್ ಭಟ್ ಚಿತ್ರದಲ್ಲಿ ನಟಿಸಿರುವುದು ಇನ್ನೂ ವಿಶೇಷ. ಸುಧಾ ಬೆಳವಾಡಿ, ಬಾಬು ಹಿರಣ್ಣಯ್ಯ, ತುಳು ನಟ ಉಮೇಶ್ ಮಿಜಾರ್, ಮುಂಬೈ ನಟಿ ಶ್ರದ್ಧಾ ಸಾಲಿಯಾನ್, ತಬಲಾ ನಾಣಿ ಸೇರಿ ಅನೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

For Registration ಸಿನಿಮಾ ಕಥೆಯೇ ಡಿಫ್ರೆಂಟ್​!

'ಫಾರ್‌ ರಿಜಿಸ್ಟ್ರೇಷನ್‌' ಚಿತ್ರದಲ್ಲಿ ಫ್ಯಾಮಿಲಿ ಮತ್ತು ಯುವ ಪೀಳಿಗೆಯ ಕಥೆಯನ್ನು ಬಹಳ ಹ್ಯೂಮರಸ್‌ ಆಗಿ ಹೇಳಲಿದ್ದಾರಂತೆ ನಿರ್ದೇಶಕರು. ಇದುವರೆಗೆ ಇಂಥಹ ಪಾತ್ರದಲ್ಲಿ ಮಿಲನಾ ನಾಗರಾಜ್ ನಟಿಸಿಲ್ಲ, ಸಿಕ್ಕಾಪಟ್ಟೆ ಕಾಮಿಡಿ ಈ ಚಿತ್ರದಲ್ಲಿದೆಯಂತೆ. ಮಿಲನಾ ನಾಗರಾಜ್ ತಾಯಿಯ ಪಾತ್ರದಲ್ಲಿ ಅನುಭವಿ ನಟಿ ಸುಧಾರಾಣಿ ಅಭಿನಯಿಸುತ್ತಿದ್ದಾರೆ. ಹೀಗಾಗಿ ಈ ಸಿನಿಮಾದ ಮೇಲೆ ಇರುವ ನಿರೀಕ್ಷೆ ಇನ್ನಷ್ಟು ಹೆಚ್ಚಿಸಿದೆ. ಲವ್​ ಮಾಕ್​ಟೈಲ್​ ಬಳಿಕ ಮಿಲನ ನಾಗರಾಜ್​ ಈ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ.

ಇದನ್ನು ಓದಿ : ಏನ್​ ಖದರ್​ ಲುಕ್​ ಗುರೂ.. ಗಡ್ಡದಾರಿಗಳಿಗೆ ಯಶ್​ ಅವರೇ ಬಾಸ್​: ನ್ಯೂ ಗೆಟಪ್​ ನೀವೇ ನೋಡಿ..

ಪಾತ್ರದ ಬಗ್ಗೆ ಮಿಲನಾ ಏನು ಹೇಳ್ತಾರೆ?

ನಿರ್ದೇಶಕ ನವೀನ್‌ ದ್ವಾರಕಾನಾಥ್‌ ಹೊಸಬರು, ಬಹಳ ಶಿಸ್ತಿನಿಂದ ಸಿನಿಮಾ ಯೋಜನೆ ಹಾಕುತ್ತಿದ್ದಾರೆ. ಇಂದಿನ ಯುವ ಜನತೆಯ ಆಲೋಚನೆಗೂ ಅವರ ಅಪ್ಪ ಅಮ್ಮನ ಪೀಳಿಗೆಯ ಆಲೋಚನೆಗೂ ಬಹಳ ಅಂತರ ಇದೆ. ಇವತ್ತಿನ ಹುಡುಗರು ತಮಗೆ ಸರಿ ಅನ್ನಿಸಿದ ಹಾಗೆ ಬದುಕುತ್ತಾರೆ. ಆದರೆ, ಪಾಲಕರು ಸಮಾಜ ಏನು ಹೇಳುತ್ತೆ ಎಂದು ತಲೆ ಕೆಡಿಸಿಕೊಳ್ತಾರೆ. ಕುಟುಂಬದ ಕುರಿತು ಈ ಸಿನಿಮಾವಿದೆ" ಎಂದು ಮಿಲನಾ ನಾಗರಾಜ್ ಈ ಹಿಂದೆ ಹೇಳಿದ್ದರು. ಇನ್ನೂ ಈ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲಿದೆ. ಅಂತಿಮ ಹಂತದ ಕೆಲಸಗಳು ನಡೆಯುತ್ತಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಇದನ್ನು ಓದಿ : ರಕ್ತಪಾತದ ದೃಶ್ಯದಲ್ಲಿ ಮಾದಪ್ಪನ ಜಪ: ವಿವಾದದ ಸುಳಿಯಲ್ಲಿ `ಗರುಡ ಗಮನ ವೃಷಭ ವಾಹನ’

ಒಟ್ನಲ್ಲಿ ಬಿಗ್​ ಬಿ ಅಮಿತಾಬ್​ ಬಚ್ಚನ್​ ಅವರನ್ನು ಫಾರ್​ REGN ಸಿನಿಮಾದ ನಿರ್ದೇಶಕ ನವೀನ್ ದ್ವಾರಕನಾಥ್ ಭೇಟಿಯಾಗಿ ಬಂದಿದ್ದಾರೆ. ಅದರಲ್ಲೂ ಬಿಗ್​ ಬಿ ಜೊತೆ ಕನ್ನಡ ಸಿನಿಮಾದ ಬಗ್ಗೆ ವೇದಿಕೆ ಮೇಲೆ ಮಾತನಾಡಿರುವುದು ಸಾಕಷ್ಟು ಸುದ್ಧಿಯಾಗುತ್ತಿದೆ.
Published by:Vasudeva M
First published: