Puneeth Rajkumar: ಲಾಲ್‌ಬಾಗ್‌ನಲ್ಲಿ 'ಫ್ಲವರ್ ಸ್ಟಾರ್' ಆಗಲಿದ್ದಾರೆ ಪವರ್ ಸ್ಟಾರ್! ಪುಷ್ಪೋತ್ಸವದ ಬಗ್ಗೆ ಅಪ್ಪು ಫ್ಯಾಮಿಲಿಗೆ ಮಾಹಿತಿ

Flower Show: ಆಗಸ್ಟ್ 5ರಂದು ಫಲಪುಷ್ಪ ಪ್ರದರ್ಶನ ಆರಂಭವಾಗಲಿದ್ದು, ಆಗಸ್ಟ್​ 15ರ ವರೆಗೆ ನಡೆಯಲಿದೆ. ಹಲವು ವಿಧವಾದ ಹೂವುಗಳನ್ನು ರಾಜ್ಯ, ದೇಶ ಹಾಗೂ ವಿದೇಶಗಳಿಂದಲೂ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.

ಪುನೀತ್​ ರಾಜ್​ಕುಮಾರ್​

ಪುನೀತ್​ ರಾಜ್​ಕುಮಾರ್​

  • Share this:
ಪುನೀತ್ ರಾಜ್​ಕುಮಾರ್​, (Puneet Rajkumar) ಜನರ ಮನದಾಳದಲ್ಲಿ ಇವರ ಹೆಸರು ಅಜರಾಮರ. ಅವರನ್ನು ಅಭಿಮಾನಿಗಳು (Fans) ನೆನೆಯದ ದಿನವಿಲ್ಲ. ಅವರಿಗಾಗಿ ಅಭಿಮಾನಿಗಳು ಸಹ ಸಾಮಾಜಿಕ ಕಾರ್ಯವನ್ನು ಮಾಡುತ್ತಾರೆ. ರಾಜ್ಯ ಸರ್ಕಾರ ಕೂಡ ರಸ್ತೆಗೆ ಅವರ ಹೆಸರಿಟ್ಟಿದೆ. ಈ ಬಾರಿ ಲಾಲ್​ಬಾಗ್​ (Lalbagh) ಪುಷ್ಪೋತ್ಸವವನ್ನು (Flower Show) ದಿವಂಗತ ಪುನೀತ್ ರಾಜ್​ಕುಮಾರ್​ ಹೆಸರಲ್ಲಿ ಆಯೋಜಿಸಲಾಗಿದೆ. ಈ ವಿಚಾರ ಎಲ್ಲರಿಗೂ ಗೊತ್ತಿದೆ. ಇದೀಗ ಈ ಕಾರ್ಯಕ್ರಮಕ್ಕೆ ರಾಜ್​ಕುಮಾರ್ ಕುಟುಂಬವನ್ನು ತೋಟಗಾರಿಕೆ ಇಲಾಖೆ ಆಹ್ವಾನಿಸಿದೆ. 

ಪುನೀತ್ ಕುಟುಂಬವನ್ನು ಭೇಟಿ ಮಾಡಿದ ಅಧಿಕಾರಿಗಳು

ಪುನೀತ್ ಹೆಸರಲ್ಲಿ ಪುಷ್ಪೋತ್ಸವ ನಡೆಸುವ ಬಗ್ಗೆ ಈಗಾಗಲೇ ತೋಟಗಾರಿಕಾ ಸಚಿವ ಮುನಿರತ್ನ ಘೋಷಿಸಿದ್ದು, ಇಲಾಖೆ ಅಧಿಕಾರಿಗಳು ಈ ಕಾರ್ಯಕ್ರಮಕ್ಕೆ ತಯಾರಿ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಪುನೀತ್ ರಾಜ್​ಕುಮಾರ್​ ಹಾಗೂ ಶಿವ ರಾಜ್​ಕುಮಾರ್ ಮನೆಗೆ ಹೋಗಿ ಕುಟುಂಬಕ್ಕೆ ಆಹ್ವಾನ ನೀಡಿದ್ದಾರೆ.  ಡಾ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ಹಾಗೂ ಅವರ ಜೀವನ ಆಧರಿತ ವಿಶೇಷ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲು ಸಿದ್ದತೆ ಮಾಡಿಕೊಳ್ಳಲಾಗಿದ್ದು, ಈ ಹಿನ್ನೆಲೆ ಕುಟುಂಬದವರಿಂದ ಕೆಲ ಸಲಹೆಗಳನ್ನು ಪಡೆದುಕೊಳ್ಳಲು ಅಧಿಕಾರಿಗಳು ಮನೆಗೆ ತೆರಳಿ, ಚರ್ಚೆ ನಡೆಸಿದ್ದಾರೆ.

ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪುನೀತ್ ರಾಜ್​ಕುಮಾರ್ ಅವರ ಪತ್ನಿ ಅಶ್ವಿನಿ, ಸಹೋದರರಾದ ರಾಘವೇಂದ್ರ ರಾಜ್​ಕುಮಾರ್, ಶಿವರಾಜ್ ಕುಮಾರ್ ಅವರ ಮನೆಗೆ ಹೋಗಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಇಲಾಖೆಯ ಯೋಜನೆಗಳನ್ನು ತಿಳಿಸಿ, ಸಲಹೆಗಳನ್ನು ತೆಗೆದುಕೊಂಡು ಬಂದಿದ್ದಾರೆ.

ಆಗಸ್ಟ್ 5ರಂದು ಫಲಪುಷ್ಪ ಪ್ರದರ್ಶನ ಆರಂಭವಾಗಲಿದ್ದು, ಆಗಸ್ಟ್​ 15ರ ವರೆಗೆ ನಡೆಯಲಿದೆ. ಹಲವು ವಿಧವಾದ ಹೂವುಗಳನ್ನು ರಾಜ್ಯ, ದೇಶ ಹಾಗೂ ವಿದೇಶಗಳಿಂದಲೂ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ತೋಟಗಾರಿಕಾ ಸಚಿವ ಮುನಿರತ್ನ  ಈ ಬಾರಿ ಆಗಸ್ಟ್ 5 ರಿಂದ 15 ರವರೆಗೆ ನಡೆಯಲಿದೆ.  ಕರ್ನಾಟಕ ರತ್ನ ದಿವಂಗತ ಪುನೀತ್ ರಾಜ್​​ಕುಮಾರ್ ​ ಹೆಸರಲ್ಲಿ ಈ ಬಾರಿಯ ಫ್ಲವರ್ ಶೋ ಮಾಡಲಾಗುವುದು. ಅಲ್ಲದೇ ಡಾ.ರಾಜ್​​ಕುಮಾರ್​ ಅವರ ಗಾಜನೂರ ಮನೆಯನ್ನು ಹೂಗಳಿಂದ ಅಲಂಕಾರ ಮಾಡಲಾಗುವುದು ಎಂದು ತಿಳಿಸಿದ್ದರು.ಮಾಹಿತಿ ನೀಡಿದ್ದ ಸಚಿವರು

ಇನ್ನು ಕಳೆದ ವರ್ಷ ಕೋವಿಡ್ ಕಾರಣದಿಂದ ಲಾಲ್ ಬಾಗ್​​ನಲ್ಲಿ ಫ್ಲವರ್ ಶೋ ಮಾಡಲು ಆಗಿರಲಿಲ್ಲ. ಆದರೆ ಈ ವರ್ಷ ಆಗಸ್ಟ್​ 5 ರಿಂದ ಫ್ಲವರ್ ಶೋ ಪ್ರಾರಂಭಿಸಲು ನಿರ್ಧರಿಸಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಆ.15 ವರೆಗೆ ಶೋ ನಡೆಯಲ್ಲಿದೆ. ಆದರೆ ಇನ್ನೂ 2 ದಿನ ಶೋ ವಿಸ್ತರಿಸಬೇಕು ಎನ್ನುವ ಚಿಂತನೆ ಇದೆ ಎಂದರು.  ವಿದೇಶಗಳಿಂದ ವಿಶೇಷ ಹೂ ಗಿಡಗಳನ್ನು ತರಿಸುತ್ತಿದ್ದೇವೆ. ದಿ. ಡಾ. ರಾಜ್​​ಕುಮಾರ್​​ ಮತ್ತು ದಿ. ಪುನೀತ್​​ ರಾಜ್​​ಕುಮಾರ್​​ ಅವರ ಪ್ರತಿಮೆಗಳಿಗೆ ಹೂಗಳಿಂದ ಅಲಂಕಾರ ಮಾಡುತ್ತಿದ್ದೇವೆ. ಕೋವಿಡ್ ಕಡಿಮೆ ಆಗಿರುವ ಹಿನ್ನೆಲೆ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಸಚಿವರು ತಿಳಿಸಿದ್ದರು.

ಇದನ್ನೂ ಓದಿ: ಗುಮ್ಮನ ಜೊತೆ ಬಂದ ವಿಕ್ರಾಂತ್ ರೋಣ, ಹೊಸ ಲಿರಿಕಲ್ ಸಾಂಗ್​ ರಿಲೀಸ್​

ಇನ್ನು ಪುನೀತ್ ನಿಧನದ ನಂತರ ಅಭಿಮಾನಿಗಳು ಅವರನ್ನು ಒಂದೆಲ್ಲಾ ಒಂದು ವಿಚಾರವಾಗಿ ನೆನಪಿಸಿಕೊಳ್ಳುತ್ತಾರೆ. ಅವರ ಹೆಸರಿನಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ. ಇತ್ತೀಚೆಗೆ  ಶಿವಮೊಗ್ಗ ಜಿಲ್ಲೆಯ ಸಾಗರ   ತಾಲೂಕಿನ ತಳಗೆರೆ ಗ್ರಾಮದಲ್ಲಿ ಅಭಿಮಾನಿಗಳು ನೆಚ್ಚಿನ ನಟ ಪುನೀತ್ ರಾಜ್​ಕುಮಾರ್ ಸ್ಮಾರಕ ನಿರ್ಮಿಸಿದ್ದಾರೆ. ಅಗಲಿದ ಅಪ್ಪುವಿನ ನೆನಪಿಗೆ ಗ್ರಾಮಸ್ಥರು ಸ್ಮಾರಕ ನಿರ್ಮಾಣ ಮಾಡಿದ್ದು, ವಿಶೇಷ ಗೌರವ ನೀಡಿದ್ದಾರೆ.

Blue Tick Verified Status is back for Late Puneeth Rajkumar s Twitter Page

ಇದನ್ನೂ ಓದಿ: ಫೋಟೋಶೂಟ್​ನಲ್ಲಿ ಮಿಂಚ್ತಿದ್ದಾರೆ ನಭಾ ನಟೇಶ್​, ನೆಕ್ಟ್ಸ್​ ಸಿನ್ಮಾ ಯಾವುದಮ್ಮ ಅಂತಿದ್ದಾರೆ ಫ್ಯಾನ್ಸ್

ವಿಜಯನಗರದ ಹೊಸಪೇಟೆಯಲ್ಲಿ ಸಹ ಅಪ್ಪು ಅಭಿಮಾನಿಗಳು ಪ್ರತಿಮೆ ನಿರ್ಮಿಸಿದ್ದಾರೆ. ಅಪ್ಪುಗೆ ಅಭಿಮಾನಿಗಳು ಎಂದರೆ ಪ್ರಾಣ, ಅದರಲ್ಲೂ ಅವರು ಹೊಸಪೇಟೆಯ ಬಗ್ಗೆ ಹೆಚ್ಚಿನ ಪ್ರೀತಿ ಹೊಂದಿದ್ದರಂತೆ. ಇಲ್ಲಿ ಅಭಿಮಾನಿಗಳು ಅವರ ಪ್ರತಿಮೆ ನಿರ್ಮಿಸಿದ್ದಾರೆ. ಅದರಲ್ಲೂ ಬರೋಬ್ಬರಿ 7.4 ಅಡಿ ಎತ್ತರದ ಪ್ರತಿಮೆ ಇದಾಗಿದ್ದು, ಕರುನಾಡಿಗೆ ಹೆಮ್ಮೆಯ ವಿಚಾರ ಎನ್ನಬಹುದು.
Published by:Sandhya M
First published: