• Home
 • »
 • News
 • »
 • entertainment
 • »
 • Puneeth Rajkumar: 'ರಾಜರತ್ನ' ಮರೆಯಾಗಿ ಕಳೆದೇ ಹೋಯ್ತು 1 ವರ್ಷ! ಇಂದು ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ

Puneeth Rajkumar: 'ರಾಜರತ್ನ' ಮರೆಯಾಗಿ ಕಳೆದೇ ಹೋಯ್ತು 1 ವರ್ಷ! ಇಂದು ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ

ಪುನೀತ್​ ರಾಜ್​ಕುಮಾರ್

ಪುನೀತ್​ ರಾಜ್​ಕುಮಾರ್

ನಮ್ಮ ಪ್ರೀತಿಯ ಪವರ್ ಸ್ಟಾರ್ ಅವರನ್ನು ನಾವು ಕಳೆದುಕೊಂಡಿದ್ದೀವಿ. ಹೃದಯಾಘಾತದಿಂದ ಅಪ್ಪು ಬಾರದ ಲೋಕಕ್ಕೆ ಹೊರಟಿದ್ದರು. ಆ ಕರಾಳ ದಿನ ಮತ್ತೆ ಬಂದಿದೆ. ಇಂದು ಅಪ್ಪು ಅವರ ಮೊದಲ ಪುಣ್ಯ ಸ್ಮರಣೆ.

 • News18 Kannada
 • Last Updated :
 • Karnataka, India
 • Share this:

  ಅಪ್ಪು (Appu), ಅಭಿ (Abhi), ಆಕಾಶ್(Akash)​, ವೀರ ಕನ್ನಡಿಗ (Veera Kannadiga), ಮೌರ್ಯ (Mourya), ಆಕಾಶ್ ​(Akash), ನಮ್ಮ ಬಸವ (Namma Basava), ಅಜಯ್ (Ajay)​, ಅರಸು (Arasu), ಮಿಲನ (Milana), ಬಿಂದಾಸ್ (Bindas)​​, ವಂಶಿ(Vamsi), ರಾಜ್ (Raaj)​, ಪೃಥ್ವಿ (Pruthvi), ರಾಮ್ ​(Ram), ಜಾಕಿ (Jackie), ಹುಡುಗರು (Hudugaru), ಪರಮಾತ್ಮ (Paramathma), ಅಣ್ಣಾ ಬಾಂಡ್ (Anna Bond), ಯಾರೇ ಕೂಗಾಡಲಿ (Yaree Koogadali), ನಿನ್ನಿಂದಲೇ  (Ninnindale), ಮೈತ್ರಿ (Mythri), ಪವರ್ (Power)​, ರಣ ವಿಕ್ರಮ (Rana Vikram), ಚಕ್ರವ್ಯೂಹ (Chakravyuha), ದೊಡ್ಮನೆ ಹುಡುಗ (Dodamane Huduga), ರಾಜಕುಮಾರ (Rajakumar), ಅಂಜನಿ ಪುತ್ರ (Anjani Putra), ನಟಸಾರ್ವಭೌಮ (Natasarvabouma), ಯುವರತ್ನ (Yuvarathna), ಜೇಮ್ಸ್ ​(James), ಲಕ್ಕಿ ಮ್ಯಾನ್​ (Lucky Man) , ಗಂಧದ ಗುಡಿ(Gandadhagudi), ಮುಂದೆ ಮತ್ತೆ ಇನ್ನು ಯಾವುದಾದರೂ ಸಿನಿಮಾ ಬಂದು ಬಿಡಲಿ ಅಂತ ನೀವು ಅಂದುಕೊಂಡಿಲ್ಲ ಅಂತ ಮನಸ್ಸು ಮುಟ್ಟಿಕೊಂಡು ಹೇಳಿ.


  ಅಪ್ಪು ಇಲ್ಲದೇ ಒಂದು ವರ್ಷ!


  ನೀವು ಮಾತ್ರ ಅಲ್ಲ, ಕರುನಾಡಿನ ಪ್ರತಿಯೊಬ್ಬರು ಕೂಡ ಅಂದುಕೊಂಡಿರುತ್ತಾರೆ. ಯಾಕೆಂದರೆ ನಮಗ್ಯಾರಿಗೂ ಅಪ್ಪು ನಮ್ಮ ಜೊತೆ ಇಲ್ಲ ಎಂದು ನೆನೆಪಿಸಿಕೊಳ್ಳುವುದಕ್ಕೂ ಇಷ್ಟವಿಲ್ಲ. ಪವರ್​ ಸ್ಟಾರ್ ​(Power Star) ಪುನೀತ್​ ರಾಜ್​ಕುಮಾರ್​ ಇನ್ನೂ ನಮ್ಮ ಜೊತೆಯೆ ಇದ್ದಾರೆ. ಅಭಿಮಾನಿಗಳ ಹೃದಯ ಸಿಂಹಾಸನವೇರಿ ಕೂತಿದ್ದಾರೆ. ಕಳೆದ ವರ್ಷ ಈ ದಿನದಂದು ರಾಜ್ಯಕ್ಕೆ ಬರಸಿಡಿಲು ಬಡಿದಿತ್ತು.


  ನಮ್ಮ ಪ್ರೀತಿಯ ಪವರ್ ಸ್ಟಾರ್ ಅವರನ್ನು ನಾವು ಕಳೆದುಕೊಂಡಿದ್ದೀವಿ. ಹೃದಯಾಘಾತದಿಂದ ಅಪ್ಪು ಬಾರದ ಲೋಕಕ್ಕೆ ಹೊರಟಿದ್ದರು. ಆ ಕರಾಳ ದಿನ ಮತ್ತೆ ಬಂದಿದೆ. ಇಂದು ಅಪ್ಪು ಅವರ ಮೊದಲ ಪುಣ್ಯ ಸ್ಮರಣೆ.


  ರಾತ್ರಿಯಿಂದಲೇ ಅಪ್ಪು ಸಮಾಧಿಗೆ ಹರಿದು ಬರ್ತಿರೋ ಜನಸಾಗರ!


  ಇನ್ನೂ ಅಪ್ಪು ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ರಾತ್ರಿಯಿಂದಲೇ ಅಪ್ಪು ಸಮಾಧಿ ಬಳಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನಸಾಗರವೇ ಅಪ್ಪು ಸಮಾಧಿಗೆ ಹರಿದು ಬರ್ತಿದೆ. ಅಪ್ಪು ಸಮಾಧಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ಸಮಾಧಿ ಪೂರ್ತಿ ಹಸಿರು ಶ್ವೇತಾಂಬರಿ ವರ್ಣದ ಹೂಗಳಿಂದ ಸಿಂಗಾರಕೊಂಡಿದೆ. ಇನ್ನೂ ಅಪ್ಪು ಸಮಾಧಿ ಬಳಿ  ನಿನ್ನೆ ರಾತ್ರಿಯಿಂದಲೇ 24 ಗಂಟೆಗಳ ಸಂಗೀತ ನಮನ ಕಾರ್ಯಕ್ರಮ ನಡೆಯುತ್ತಿದೆ. ಕರ್ನಾಟಕ ಫಿಲಂ ಮ್ಯೂಸಿಕ್ ಅಸೋಸಿಯೇಷನ್ ವತಿಯಿಂದ ಕಾರ್ಯಕ್ರಮ ನಡೆಯುತ್ತಿದೆ.


  ಇದನ್ನೂ ಓದಿ: ನಾನು ಪುನೀತ್​ ವ್ಯಕ್ತಿತ್ವದ ಅಭಿಮಾನಿ, ಅಪ್ಪು ವಿಶ್ವಮಾನವ- ಜೇಮ್ಸ್ ಡೈರೆಕ್ಟರ್ ಚೇತನ್


  ಅಪ್ಪು ಅಭಿಮಾನಿಗಳ ಕಣ್ಣೀರು!


  ಗಂಧದ ಗುಡಿ ಥೀಮ್ ನಲ್ಲಿ ನಾಲ್ಕು ದಿಕ್ಕಿನಲ್ಲಿ ಮರ  ಇಟ್ಟು, ಮರದ ಸುತ್ತಲೂ ಬಿಳಿ ಹಸಿರಿನ ಹೂವಿನ ತೋರಣ ಹಾಕಲಾಗಿದೆ.  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮೊದಲ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಅಪ್ಪು ಸಮಾಧಿಗೆ ಅಣ್ಣಾವ್ರ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ಬೆಳಗ್ಗೆ 9ಗಂಟೆಗೆ ಅಪ್ಪು ಸಮಾಧಿಗೆ  ಅಶ್ವಿನಿ ಪುನೀತ್​ ರಾಜ್​ಕುಮಾರ್​ ಪೂಜೆ ಸಲ್ಲಿಸಲ್ಲಿದ್ದಾರೆ. ಇನ್ನೂ ಅಪ್ಪು ಸಮಾಧಿಗೆ ಪೂಜೆ ಸಲ್ಲಿ ಅನ್ನದಾನಕ್ಕೆ ಚಾಲನೆ ಕೊಡಲಿದ್ದಾರೆ.


  3 ಲಕ್ಷ ಅಭಿಮಾನಿಗಳಿಗೆ ಅನ್ನದಾನದ ವ್ಯವಸ್ಥೆ!


  ನಿನ್ನೆಯಷ್ಟೇ ಅಪ್ಪು ಅಭಿನಯದ, ಅಭಿನಯಕ್ಕಿಂತ ಹೆಚ್ಚು ಜೀವಿಸಿದ ಗಂಧದ ಗುಡಿ ಸಿನಿಮಾ ರಿಲೀಸ್ ಆಗಿದೆ. ಅಭಿಮಾನಿಗಳು ಅಪ್ಪು ಜರ್ನಿಯನ್ನು ಕಂಡು ಭಾವುಕರಾಗುತ್ತಿದ್ದಾರೆ. ಇಂದು ಅಪ್ಪು ಅಭಿಮಾನಿಗಳಿಗೆ ಸಮಾಧಿ ಬಳಿ ಅನ್ನದಾನದ ವ್ಯವಸ್ಥೆ ಕೂಡ ಮಾಡಲಾಗಿದೆ.  2-3 ಲಕ್ಷ ಅಭಿಮಾನಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಿದ್ದಾರೆ ಅಶ್ವಿನಿ ಪುನೀತ್​ ರಾಜ್​ಕುಮಾರ್​.


  ಇದನ್ನೂ ಓದಿ: ನಂದಿನಿ ಹಾಲಿನ ಪ್ಯಾಕೇಟ್​ನಲ್ಲಿ ಗಂಧದಗುಡಿ ಹೆಸರು; ಅಪ್ಪುಗೆ ಕೆಎಂಎಫ್​ನಿಂದ ವಿಶೇಷ ಗೌರವ!


  ಅಪ್ಪು ಹೆಜ್ಜೆಗುರುತು ಹೆಸರಲ್ಲಿ ಅಪ್ಪುನ ಅರಾಧಿಸಲಿದ್ದಾರೆ. ಕಂಠೀರವ ಸ್ಟೂಡಿಯೋ ಬಳಿ 75 ಅಪ್ಪುಕಟೌಟ್ ಗಳ ಕಟ್ಟಿ ಹೂವಿನ ಅಲಂಕಾರ ಮಾಡಕಲಾಗಿದೆ. ಅಪ್ಪು ಸ್ಮಾರಕದ ಬಳಿ ಅನ್ನದಾನ, ರಕ್ತದಾನ, ನೇತ್ರದಾನದಂತಹ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9 ಗಂಟೆಗೆ ಸಮಾಧಿ ಬಳಿ ಶಿವಣ್ಣ ಹಾಗೂ ರಾಘಣ್ಣ  ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.

  Published by:ವಾಸುದೇವ್ ಎಂ
  First published: