ಬಿರುಕು ಮೂಡಿದ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದ ರಕ್ಷಿತ್​ ಶೆಟ್ಟಿ..!

news18
Updated:September 11, 2018, 8:25 PM IST
ಬಿರುಕು ಮೂಡಿದ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದ ರಕ್ಷಿತ್​ ಶೆಟ್ಟಿ..!
  • News18
  • Last Updated: September 11, 2018, 8:25 PM IST
  • Share this:
ನ್ಯೂಸ್ 18 ಕನ್ನಡ

ರಕ್ಷಿತ್​ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಮುರಿದು ಬಿದ್ದ ಸುದ್ದಿ ಎಲ್ಲೆಡೆ ವೈರಲ್​ ಆಗುತ್ತಿದೆ. ಈ ವಿಷಯ ಈ ಹಿಂದೆಯೂ ಸಾಕಷ್ಟು ಸುದ್ದಿ ಮಾಡಿತ್ತು. ಆಗ ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಅವರ ತಾಯಿ ಬ್ರೇಕ್​ಅಪ್​ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದರು.

ಆದರೆ ಕಳೆದೆರಡು ದಿನಗಳಿಂದ ಮತ್ತೆ ಈ ಸಿಂಪಲ್​ ಜೋಡಿಯ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂದು ಮತ್ತೆ ಸುದ್ದಿಯಾಗಿದೆ. ಇದರಿಂದಾಗಿ ಎಲ್ಲೆಡೆ ರಶ್ಮಿಕಾ ಅವರ ವಿರುದ್ಧ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ. ಇದರಿಂದಾಗಿ ಇದೇ ಮೊದಲ ಬಾರಿಗೆ ರಕ್ಷಿತ್​ ಶೆಟ್ಟಿ ತಮ್ಮ ಮೌನ ಮುರಿದಿದ್ದಾರೆ.

ಹೌದು, 'ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ನಂಬಬೇಡಿ. ಅದೆಲ್ಲ ಸುಳ್ಳು ಸುದ್ದಿ. ಯಾರ ಬಳಿಯೂ ಅಧಿಕೃತ ಮಾಹಿತಿ ಇಲ್ಲ. ನಾನು ಎರಡು ವರ್ಷಗಳಿಂದ ರಶ್ಮಿಕಾರನ್ನು ಬಲ್ಲೆ. ಅವರನ್ನು ನನಗಿಂತ ಹೆಚ್ಚು ಅರ್ಥ ಮಾಡಿಕೊಳ್ಳಲು ಬೇರೆಯವರಿಗೆ ಸಾಧ್ಯವಿಲ್ಲ. ಸುಳ್ಳು ಸುದ್ದಿಗಳಿಂದಾಗಿ ಅವರ ಬಗ್ಗೆ ನೀವೇ ತಿರ್ಮಾನಕ್ಕೆ ಬರಬೇಡಿ. ಇದರಿಂದ ಅವರಿಗೆ ನೋವು ನೀಡಬೇಡಿ. ಸರಿಯಾದ ಸಮಯ ಬಂದಾಗ ಎಲ್ಲದಕ್ಕೂ ಉತ್ತರ ನೀಡುತ್ತೇನೆ. ಅದಕ್ಕಾಗಿ ಸ್ವಲ್ಪ ದಿನ ಕಾಯಿರಿ. ರಶ್ಮಿಕಾರನ್ನು ನೆಮ್ಮದಿಯಿಂದ ಇರಲು ಬಿಡಿ' ಎಂದು ರಕ್ಷಿತ್​ ಶೆಟ್ಟಿ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಇಷ್ಟೆಲ್ಲ ಹೇಳಿಕೊಂಡರೂ ರಕ್ಷಿತ್​ ಮಾತ್ರ ತಮ್ಮ ಸಂಬಂಧದಲ್ಲಿ ಮೂಡಿರುವ ಬಿರುಕಿನ ಕುರಿತು ಮಾತ್ರ ಎಲ್ಲೂ ಹೇಳಿಕೊಂಡಿಲ್ಲ.
First published:September 11, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading