ಮೋಸಗಾರ ರಣಬೀರ್: ಕೊನೆಗೂ ಸತ್ಯ ಹೇಳಿದ ದೀಪಿಕಾ ಪಡುಕೋಣೆ !

news18
Updated:July 28, 2018, 11:55 AM IST
ಮೋಸಗಾರ ರಣಬೀರ್: ಕೊನೆಗೂ ಸತ್ಯ ಹೇಳಿದ ದೀಪಿಕಾ ಪಡುಕೋಣೆ !
news18
Updated: July 28, 2018, 11:55 AM IST
ನ್ಯೂಸ್​ 18 ಕನ್ನಡ

ನೀಳಕಾಯ ಸುಂದರಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್​ ಅವರ ವಿವಾಹದ ಸುದ್ದಿ ಎಲ್ಲೆಡೆ ಓಡಾಡುತ್ತಿದೆ. ಅದರಲ್ಲೂ ಈ ವರ್ಷಾಂತ್ಯಕ್ಕೆ ಇವರ ಮದುವೆ ನಡೆಯಲಿದೆ ಅನ್ನೋ ಗಾಳಿಮಾತು ಹರಿದಾಡುತ್ತಿದೆ. ಆದರೆ ಈ ಸಮಯದಲ್ಲೇ ದಿಪ್ಪಿ ತನ್ನ ಹಳೇ ಪ್ರೇಮ್​ಕಹಾನಿ ಕುರಿತು ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ.

ಈ ಹಿಂದೆ ದೀಪಿಕಾ ಹೆಸರು ರಣಬೀರ್​ ಜತೆ ಗಂಟು ಹಾಕಿಕೊಂಡಿತ್ತು. ಇವರಿಬ್ಬರ ಲವ್​ ಸ್ಟೋರಿ ಯಾರಿಗೂ ತಿಳಿಯದ್ದಲ್ಲ. ಆದರೆ ಇದ್ದಕ್ಕಿದ್ದಂತೆ ಇಬ್ಬರ ನಡುವೆ ಬಿರುಕು ಕಾಣಿಸಿಕೊಂಡಿತ್ತು. ಆದರೆ ಈ ಪ್ರೀತಿಯ ಸಂಬಂಧದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದ ದೀಪಿಕಾ ಒಮ್ಮೆಯೂ ಎಲ್ಲೂ ಬ್ರೇಕಪ್​ ಬಗ್ಗೆ ಮಾತನಾಡಿರಲಿಲ್ಲ.

ಆದರೆ ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ದೀಪಿಕಾ ತಮ್ಮ ಹಳೆಯ ಪ್ರೀತಿ ಹಾಗೂ ಬ್ರೇಕಪ್​ಗೆ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಆದರೆ ತನಗೆ ಮೋಸ ಮಾಡಿದ ಪ್ರಿಯಕರನ ಹೆಸರು ಹೇಳದೆ ಆತ ಮಾಡಿದ ದ್ರೋಹವನ್ನು ನೋವಿನಿಂದ ನುಡಿದಿದ್ದಾರೆ.

'ಹೌದು ಅವರು ನನಗೆ ಮೋಸ ಮಾಡಿದ್ದಾರೆ. ಅವರು ನಮ್ಮ ಪ್ರೀತಿಯ ಸಂಬಂಧಕ್ಕೆ ನಿಷ್ಠರಾಗಿರಲಿಲ್ಲ. ಅವರು ನನಗೆ ಮೋಸ ಮಾಡುತ್ತಿದ್ದಾರೆ ಎಂದು ಸಾಕಷ್ಟು ಜನರು ಹೇಳಿದರೂ ನಾನು ನಂಬಿರಲಿಲ್ಲ. ಆದರೆ ಅವರು ಪತ್ಯಕ್ಷವಾಗಿ ನನ್ನ ಕೈಗೆ ಸಿಕ್ಕಿಬಿದ್ದಾಗ ಅವರಿಂದ ದೂರಾಗುವ ನಿರ್ಧಾರ ಮಾಡಿದೆ. ಅವರು ನನಗೆ ಮೋಸ ಮಾಡಿದ್ದಾರೆ. ಇಷ್ಟಾದ ಮೇಲೂ ಅವರು ಸಂಬಂಧ ಮುರಿಯದಂತೆ ಹಲವು ಬಾರಿ ಭಿಕ್ಷೆ ಬೇಡಿದ್ದಕ್ಕೆ ಅವರಿಗೆ ಸಾಕಷ್ಟು ಬಾರಿ ಅವಕಾಶ ನೀಡಿದೆ. ಆದರೂ ಅವರು ಬದಲಾಗಲಿಲ್ಲ. ಇದರಿಂದಾಗಿ ನನಗೆ ಸಿಕ್ಕಿದ್ದು ಕೇವಲ ಮೋಸ ಹಾಗೂ ನೋವು. ಅದಕ್ಕೆ ದೂರಾದೆ' ಎಂದು ದೀಪಿಕಾ ತಮಗಾಗಿದ್ದ ನೋವಿನ ಅನುಭವವನ್ನು ಹೊರಹಾಕಿದ್ದಾರೆ.

ಅಷ್ಟೇಅಲ್ಲ ದೀಪಿಕಾ ಆ ವ್ಯಕ್ತಿಯೊಂದಿಗೆ ಇದ್ದ ಸಂಬಂಧಕ್ಕೆ ಎಂದೂ ಮೋಸ ಮಾಡಿರಲಿಲ್ಲವಂತೆ. ಆದರೆ ಆ ವ್ಯಕ್ತಿ ಮಾಡಿದ ಮೋಸದಿಂದ ದಿಪ್ಪಿ ಮನಸ್ಸು ಚೂರುಚೂರಾಗಿ ಹೋಗಿತ್ತಂತೆ.
Loading...

ಆದರೆ ಸದ್ಯ ದೀಪಿಕಾ ರಣವೀರ್​ ಸಿಂಗ್​ ಜತೆ ಸದ್ಯದಲ್ಲೆ ಹಸೆಮಣೆ ಏರಲಿದ್ದಾರೆ.

 

 
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...