First Rank Raju: ರಾಜು ಜೇಮ್ಸ್ ಬಾಂಡ್ ಈಗ ಕೂಲ್ ಕೂಲ್, ಇದ್ರ ಹಿಂದಿದ್ಯಂತೆ ಇಂಟ್ರೆಸ್ಟಿಂಗ್​ ಕಹಾನಿ!

ಫಸ್ಟ್ Rank ರಾಜು ಸಿನಿಮಾದ ಡೈರೆಕ್ಟರ್ ನರೇಶ್ ಇದ್ದಾರೆ ಅಲ್ವೇ ? ಅವರ ಜೊತೆಗೇನೆ ಗುರು ಈ ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಹೆಸರು ಗುರು ಅಂತಲೇ ಇರೋದ್ರಿಂದಲೇ, ಆ ಗುರುವನ್ನ ಇಲ್ಲಿ ಕೂಲ್ ಮಾಡಿದ್ದಾರೆ.

ಗುರು ಕೂಲ್ ಹೆಸರಿನ ಸಿನಿಮಾದಲ್ಲಿ ರಾಜು

ಗುರು ಕೂಲ್ ಹೆಸರಿನ ಸಿನಿಮಾದಲ್ಲಿ ರಾಜು

  • Share this:
ಕನ್ನಡದ ಫಸ್ಟ್ Rank ರಾಜು ಎಲ್ಲಿ ಹೋದರು. ಇತ್ತೀಚಿಗೆ ಯಾಕೋ ಅವರ ಸಿನಿಮಾಗಳೇ ಬರುತ್ತಿಲ್ವೇ? ಸಿನಿಮಾರಂಗದಿಂದ ದೂರ ಏನಾದರೂ ಉಳಿದು ಬಿಟ್ರಾ ? ಹಾಗಾದ್ರೆ ಅವರ ರಾಜು ಜೇಮ್ಸ್ ಬಾಂಡ್ (James Bond) ಸಿನಿಮಾ ಎಲ್ಲಿಗೆ ಬಂತು ? ಹರಿಪ್ರಿಯಾ ಜೊತೆಗೆ ಅಭಿನಯಸಿದ ಹ್ಯಾಪಿ ಎಂಡಿಂಗ್ (Happy Ending) ಯಾವ ಹಂತದಲ್ಲಿ ಇದೆ ? ಈ ಪ್ರಶ್ನೆಗಳಿಗೆ ಕುತೂಹಲದ ಉತ್ತರವೇ ಸಿಕ್ಕಿದೆ. ಇನ್ನೂ ಒಂದು ವಿಷಯ ಏನ್​ ಗೊತ್ತಾ ? ಇವರೆಡು ಸಿನಿಮಾಗಳು ಎಲ್ಲ ಕೆಲಸಗಳನ್ನ ಮುಗಿಸಿಕೊಂಡಿವೆ. ರಿಲೀಸ್ (Release) ಹಂತಕ್ಕೂ ಈಗ ಬಂದಿವೆ. ಈ ಚಿತ್ರಗಳ ಜೊತೆಗೆ ಅದೇ ರಾಜು ಕೂಲ್ ಆಗಿಯೇ ಇದ್ದಾರೆ. ಕೂಲ್ (Cool) ಅನ್ನೋ ಪದವನ್ನ ಇಲ್ಲಿ ಯಾಕೆ ಬಳಸಿದೆ ಗೊತ್ತೆ ? ಅದಕ್ಕೆ ಇಲ್ಲೊಂದು ಇಂಟ್ರಸ್ಟಿಂಗ್ (Interesting) ವಿಚಾರವೂ ಇದೆ. ಅದನ್ನ ರಾಜು ರಿವೀಲ್ ಮಾಡಿದ್ದಾರೆ.

ಫಸ್ಟ್ Rank ರಾಜು ಚಿತ್ರ ಖ್ಯಾತಿಯ ನಟ ಗುರು ಎಲ್ಲರ ಫೇವರಿಟ್. ಈ ನಟನ ಮ್ಯಾನರಿಸಂ ವಿಭಿನ್ನವಾಗಿಯೇ ಇದೆ. ಹ್ಯಾಂಡ್ಸಮ್ ಆಗಿರೋ ರಾಜುನನ್ನ ಪೆದ್ದು-ಮದ್ದು ಆಗಿಯೇ ಜನ ನೋಡೊಕೆ ಇಷ್ಟಪಡ್ತಾರೆ. ಕೊಂಚ ಕಾಮಿಡಿ ಟಚ್ ಇದ್ದರಂತೂ ರಾಜು ನಿಜಕ್ಕೂ ರಾಕ್ ಸ್ಟಾರೇ ಬಿಡಿ. ಈ ರಾಜು ಅದ್ಯಾಕೋ ಇತ್ತೀಚಿಗೆ ತುಂಬಾ ಕೂಲ್ ಆಗಿ ಬಿಟ್ಟಿದ್ದಾರೆ.

ಜೇಮ್ಸ್ ಬಾಂಡ್ ರಾಜು ಅದ್ಯಾಕೆ ಇಷ್ಟು ಕೂಲ್ ಅಂತ ಅನಿಸಬಹುದು. ಆದರೆ ಅದಕ್ಕೆ ಕಾರಣವೂ ಇದೆ. ನಿಜ, ಜೇಮ್ಸ್ ಬಾಂಡ್ ರಾಜು ಈಗ ಒಂದು ಸಿನಿಮಾ ಮಾಡುತ್ತಿದ್ದಾರೆ. ಕಥೆಯನ್ನ ಕೂಡ ಕೇಳಿದ್ದಾರೆ. ಕಥೆಯಲ್ಲಿ ದಮ್ ಇದೆ. ಅದನ್ನ ಇಷ್ಟಪಟ್ಟಿರೋ ನಟ ಗುರು, ಆ ಸಿನಿಮಾ ಮಾಡೋಕೆ ಒಪ್ಪಿಕೊಂಡಿದ್ದಾರೆ.

First Rank Raju New Project with First Rank Raju Director Naresh
ರಾಜು ಕನ್ನಡ ಮೀಡಿಯಂ ಹೀರೋ ಹೊಸ ಸಿನಿಮಾ


ನಮ್ಮಲ್ಲಿಯೇ ಈ ವಿಷಯ ಫಸ್ಟ್ ಟೈಮ್ ಹೇಳಿಕೊಂಡಿದ್ದಾರೆ. ಅಂದ್ಹಾಗೆ ಆ ಸಿನಿಮಾ ಹೆಸರು ಏನೂ ಗೊತ್ತೇ. ಹೌದು, ಈ ಚಿತ್ರದ ಹೆಸರು "ಗುರು ಕೂಲ್" ಅಂತಲೇ ಇದೆ.ಇದರ ಕೆಲಸ ಇನ್ನೂ ಶುರು ಆಗಬೇಕಿದೆ. ಈಗಷ್ಟೇ ಕಥೆ ಕೇಳಿರೋ ಗುರು ಈ ಗುರು ಕೂಲ್ ಬಗ್ಗೆ ತುಂಬಾ ಉತ್ಸಾಹದಲ್ಲಿಯೇ ಮಾತನಾಡುತ್ತಾರೆ.

ಗುರು ಕೂಲ್ ಸಿನಿಮಾದ ನಿರ್ದೇಶಕರು ಯಾರು?
ಫಸ್ಟ್ Rank ರಾಜು ಸಿನಿಮಾದ ಡೈರೆಕ್ಟರ್ ನರೇಶ್ ಇದ್ದಾರೆ ಅಲ್ವೇ ? ಅವರ ಜೊತೆಗೇನೆ ಗುರು ಈ ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಹೆಸರು ಗುರು ಅಂತಲೇ ಇರೋದ್ರಿಂದಲೇ, ಆ ಗುರು ವನ್ನ ಇಲ್ಲಿ ಕೂಲ್ ಮಾಡಿದ್ದಾರೆ. ಪಾಸಿಟಿವ್ ವೈಬ್ಸ್ ಕ್ರಿಯೇಟ್ ಮಾಡೋ ಈ ಕಥೆಯಲ್ಲಿ ಒಂದು ಅದ್ಭುತ ಸಂದೇಶ ಕೂಡ ಇರುತ್ತದೆ. ಅದಕ್ಕೆನೆ ಗುರು ಈ ಚಿತ್ರ ಒಪ್ಪಿಕೊಂಡಿದ್ದಾರೆ.

ಗುರು ಕೂಲ್ ನಿರ್ಮಾಪಕರು ಯಾರು?
ಗುರು ಕೂಲ್ ಸಿನಿಮಾದ ಅಧಿಕೃತಕ ಮಾಹಿತಿ ಇನ್ನು ಕೆಲವೇ ದಿನಗಳಲ್ಲಿ ಹೊರ ಬೀಳುತ್ತದೆ. ಅದಕ್ಕೂ ಮೊದಲೇ ತಮ್ಮ ಈ ಸಿನಿಮಾದ ಕುರಿತು ನಾಯಕ ನಟ ಗುರು ಇಲ್ಲಿ ಹೇಳಿಕೊಂಡಿದ್ದಾರೆ. ಒಂದ್ ಒಳ್ಳೆ ಕಥೆ ಕೇಳಿದ ಮತ್ತು ನರೇಶ್ ಮತ್ತು ತಮ್ಮ ಸಿನಿಮಾ ಫಸ್ಟ್ Rank ರಾಜು ಹಿಟ್ ಆದ್ಮೇಲೆ ಮತ್ತೊಂದು ಹಿಟ್ ಕೊಡಲು ಇವರು ಇಲ್ಲಿ ಜೋಡಿ ಆಗುತ್ತಿದ್ದಾರೆ.

First Rank Raju New Project with First Rank Raju Director Naresh
ಗುರ ಕೂಲ್ ಸಿನಿಮಾದಲ್ಲಿ ಕನ್ನಡ ಮೀಡಿಯಂ ರಾಜು


ರಾಜು ಜೇಮ್ಸ್ ಬಾಂಡ್ ಸಿನಿಮಾ ಏನ್ ಆಯ್ತು?
ನಟ ಗುರು ಅಭಿನಯದ ರಾಜು ಜೇಮ್ಸ್ ಬಾಂಡ್ ಸಿನಿಮಾ ಭಾರೀ ಸುದ್ದಿ ಮಾಡಿತ್ತು. ಅದ್ಯಾಕೋ ಮತ್ತೆ ಸೌಂಡ್ ಮಾಡಲೇ ಇಲ್ಲ. ಆದರೆ ಆ ಚಿತ್ರ ಕೊರೊನಾ ಟೈಮ್ ಅಲ್ಲಿಯೇ ಬಹುತೇಕ ರೆಡಿ ಆಗಿದೆ. ಕೋವಿಡ್ ಕಾರಣಕ್ಕೆ ಆಗ ರಿಲೀಸ್ ಆಗಿಲ್ಲ ಅಷ್ಟೆ. ಈಗ ಇದೆ ವರ್ಷದ ನವೆಂಬರ್ ಹೊತ್ತಿಗೆ ರಾಜು ಜೇಮ್ಸ್ ಬಾಂಡ್ ರಿಲೀಸ್ ಆಗುತ್ತದೆ ಅಂತವ್ರೆ ಜೇಮ್ಸ್ ಬಾಂಡ್ ರಾಜು.

ಹರಿಪ್ರಿಯಾ ಮತ್ತು ಗುರು ಕಾಂಬಿನೇಷನ್​ ನಲ್ಲಿ ಕೂಡ ಒಂದು ಸಿನಿಮಾ ಸೆಟ್ಟೇರಿತ್ತು. ಆ ಚಿತ್ರದ ಹೆಸರು ಹ್ಯಾಪಿ ಎಂಡಿಂಗ್. ಈ ಚಿತ್ರ ಕೂಡ ಏನ್ ಆಯಿತು ಅನ್ನೋ ಪ್ರಶ್ನೆಗೆ ಗುರು ಉತ್ತರ ಕೊಟ್ಟಿದ್ದಾರೆ. ತಮ್ಮ ಚಿತ್ರದ ಜೀವನದಲ್ಲಿ ಬಂದ ಸಿನಿಮಾಗಳಲ್ಲಿ ಈ ಚಿತ್ರವೂ ವಿಶೇಷವಾಗಿಯೇ ಇದೆ. ಇದು ಕೂಡ ಕಂಪ್ಲೀಟ್ ಆಗಿದೆ. ಇನ್ನೆನು ಈ ಚಿತ್ರ ರಿಲೀಸ್ ಆಗುತ್ತದೆ ಅಂತಲೆ ನಾಯಕ ನಟ ಗುರು ಹೇಳಿಕೊಂಡಿದ್ದಾರೆ.
First published: