ರೋಹಿತ್ ಪದಕಿ ನಿರ್ದೇಶನದಲ್ಲಿ ಡಾಲಿ ಧನಂಜಯ್ (Dhananjaya) ನಟಿಸಿರುವ ರತ್ನನ್ ಪ್ರಪಂಚ (Rathnan Prapancha) ಸಿನಿಮಾ ಒಟಿಟಿ ಮೂಲಕ ರಿಲೀಸ್ ಆಗಿದೆ. ಅಮೆಜಾನ್ ಪ್ರೈಂನಲ್ಲಿ ಪ್ರದರ್ಶನ ಕಾಣುತ್ತಿರುವ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗತ್ತಿದೆ. ಧನಂಜಯ ಜತೆ ಉಮಾಶ್ರೀ, ಶ್ರುತಿ, ಪ್ರಮೋದ್, ಅನು ಪ್ರಭಾಕರ್, ರೆಬಾ ಮೋನಿಕಾ ಸಹ ಈ ಚಿತ್ರದಲ್ಲಿದ್ದಾರೆ. ಈ ಸಿನಿಮಾ ನೋಡಿದ ಸೆಲೆಬ್ರಿಟಿಗಳು ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಪುನೀತ್ ರಾಜ್ಕುಮಾರ್, ಎಸ್.ನಾರಾಯಣ್ ಸೇರಿದಂತೆ ಸಾಕಷ್ಟು ಮಂದಿ ಈ ಸಿನಿಮಾ ನೋಡಿದ ಸಾಕಷ್ಟು ಮಂದಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ನಟಿ ರಮ್ಯಾ ಸಹ ಈ ಸಿನಿಮಾ ನೋಡಿದ್ದಾರೆ. ಜೊತೆಗೆ ಈ ಸಿನಿಮಾ ಕುರಿತಾದ ಆಸಕ್ತಿಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸಿನಿಮಾಗಳಿಂದ ದೂರ ಉಳಿದಿರುವ ರಮ್ಯಾ ಈ ಹಿಂದೆಯೇ ಇನ್ನು ಮುಂದೆ ಬಣ್ಣದ ಲೋಕಕ್ಕೆ ಕಾಲಿಡುವುದಿಲ್ಲ ಎಂದು ಹೇಳಿದ್ದಾರೆ. ಸಿನಿಮಾ ತನ್ನ ಜೀವನದಲ್ಲಿ ಮುಗಿದ ಅಧ್ಯಾಯ ಎಂದು ಹೇಳಿದ್ದರು. ಸಿನಿಮಾಗೆ ಬರಬಾರದು ಅಂತ ನಿರ್ಧರಿಸಿಕೊಂಡಿರುವ ನಟಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತಂತೆ.
ಹೌದು, ರತ್ನನ್ ಪ್ರಪಂಚ ಸಿನಿಮಾದಲ್ಲಿ ಧನಂಜಯ್ ಅವರ ನಾಯಕಿ ಪಾತ್ರಕ್ಕೆ ರಮ್ಯಾ ಅವರನ್ನು ಮೊದಲು ಸಂಪರ್ಕಿಸಲಾಗಿತ್ತಂತೆ. ಹೀಗೆಂದು ಖುದ್ದು ರಮ್ಯಾ ಹೇಳಿದ್ದಾರೆ. ಮೊದಲು ನಾಯಕಿ ಪಾತ್ರಕ್ಕೆ ನನನ್ನ ಸಂಪರ್ಕಿಸಲಾಗಿತ್ತು. ಈಗ ನಾನು ಸಿನಿಮಾ ವೀಕ್ಷಿಸುತ್ತಿದ್ದೇನೆ. ಏನು ಮಿಸ್ ಮಾಡಿಕೊಂಡೆ ಅಂತ ನೋಡೋಕೆ ಸಿನಿಮಾ ನೋಡುತ್ತಿದ್ದೇನೆ ಎಂದು ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಡಾಲಿ ಧನಂಜಯ ಅಭಿನಯದ Rathnan Prapancha ಸಿನಿಮಾ ಒಟಿಟಿಯಲ್ಲಿ ರಿಲೀಸ್: ದಿನಾಂಕ ಪ್ರಕಟಿಸಿದ ಚಿತ್ರತಂಡ
ಸಿನಿಮಾ ನೋಡಿದ ನಂತರ ಮತ್ತೊಂದು ಸ್ಟೋರಿ ಹಂಚಿಕೊಂಡಿರುವ ನಟಿ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರ ತುಂಬಾ ಸ್ವೀಟ್ ಆಗಿದೆ. ಧನಂಜಯ್, ಶ್ರುತಿ, ಉಮಾಶ್ರೀ, ನಾಯಕಿ ರೆಬಾ ಮೋನಿಕಾ, ಅನು ಪ್ರಭಾಕರ್ ಸೇರಿದಂತೆ ಎಲ್ಲ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ರೆಬಾ ನಟನೆ ತುಂಬಾ ಚೆನ್ನಾಗಿದೆ. ನಾನು ಇಷ್ಟು ಚೆನ್ನಾಗಿ ಅಭಿನಯಿಸಲು ಆಗುತ್ತಿತ್ತೋ ಇಲ್ಲವೋ ಎಂದು ಬರದುಕೊಂಡಿದ್ದಾರೆ ರಮ್ಯಾ. ಜೊತೆಗೆ ನಿರ್ಮಾಪಕರು ಹಾಗೂ ನಿರ್ದೇಶಕರ ಬಗ್ಗೆಯೂ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಈ ಸಿನಿಮಾವನ್ನು ನೋಡುವ ಮುನ್ನ ಟಿಶ್ಯೂ ಪೇಪರ್ ಅನ್ನು ಮೊದಲೇ ತೆಗೆದುಕೊಂಡಿರಿ. ಕೊನೆಯಲ್ಲಿ ಮನಸಾರೆ ಕಣ್ನೀರಿಟ್ಟು ಹಗುರವಾಗಿ ಅಂತಲೂ ಹೇಳಿದ್ದಾರೆ.
![First Ramya was approached by Rathnan Prapancha team to play female lead in the movie ae]()
ನಟಿ ದಿವ್ಯಾ ಸ್ಪಂದನ ಮಾಡಿರುವ ಇನ್ಸ್ಟಾ ಸ್ಟೋರೀಸ್ ಸ್ಕ್ರೀನ್ ಶಾಟ್
ಸಿನಿಮಾ ಹಾಗೂ ರಾಜಕೀಯದಲ್ಲಿ ಸಕ್ರಿಯವಾಗಿದ್ದ ರಮ್ಯಾ ಅವರು ಚಂದನವನದಲ್ಲಿ ಮೋಹತಾರೆ ಎಂದು ಕರೆಸಿಕೊಳ್ಳುತ್ತಾರೆ. ಕನ್ನಡದ ಪ್ರತಿಭಾನ್ವಿತ ನಟಿ. ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಈ ನಟಿ 2003ರಲ್ಲಿ ತೆರೆಕಂಡ ಅಭಿ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ಕನ್ನಡದಲ್ಲಿ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಯಶ್ಸಿನ ಉತ್ತುಂಗದಲ್ಲಿರುವಾಗಲೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು.
ಇದನ್ನೂ ಓದಿ: Sandalwood: ಸಿನಿರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಸಿನಿಮಾಗಳಿಂದ ದೂರ ಉಳಿದ ಸ್ಟಾರ್ಗಳು..!
ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿ ಜಯಗಳಿಸಿದರು. ಆಗ ಅವರು ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ನಂತರ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ವಿಂಗ್ನ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿದರು. ಆದರೆ, ಈಗ ಸಿನಿಮಾ ಹಾಗೂ ರಾಜಕೀಯ ಎರಡರಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಒಮ್ಮೆ ಅವರನ್ನು ಅಭಿಮಾನಿಗಳು ಸಿನಿಮಾಗೆ ರೀ-ಎಂಟ್ರಿ ಯಾವಾಗ ಎಂದು ಪ್ರಶ್ನಿಸಿದ್ದಕ್ಕೆ ಅದು ಮುಗಿದು ಹೋದ ಅಧ್ಯಾಯ ಎಂದಿದ್ದರು. ಆದರೆ, ಈಗಲೂ ರಮ್ಯಾ ಅವರನ್ನು ತೆರೆ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ