Sarileru Neekevvaru Lyrical Song: ಸರಿಲೇರು ನೀಕೆವ್ವರು ಚಿತ್ರದ ಮೊದಲ ಲಿರಿಕಲ್​ ವಿಡಿಯೋ ಮೈಂಡ್​ ಬ್ಲಾಕ್​ನಲ್ಲಿ ಕೇಳಬಹುದು ಪ್ರಿನ್ಸ್​ ಮಹೇಶ್​ ದನಿ..!

Mind Block Lyrical Video: ಚಿತ್ರತಂಡ ಹೇಳಿದಂತೆ ಇಂದು ಸಿನಿಮಾದ ಮೊದಲ ಲಿರಿಕಲ್​ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದೆ. ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ​ಪಕ್ಕಾ ಮಾಸ್​ ಹಾಡು ಈ ಮೈಂಡ್​ ಬ್ಲಾಕ್​. 

Anitha E | news18-kannada
Updated:December 2, 2019, 5:22 PM IST
Sarileru Neekevvaru Lyrical Song: ಸರಿಲೇರು ನೀಕೆವ್ವರು ಚಿತ್ರದ ಮೊದಲ ಲಿರಿಕಲ್​ ವಿಡಿಯೋ ಮೈಂಡ್​ ಬ್ಲಾಕ್​ನಲ್ಲಿ ಕೇಳಬಹುದು ಪ್ರಿನ್ಸ್​ ಮಹೇಶ್​ ದನಿ..!
ಸರಿಲೇರು ನಿಕೆವ್ವರು ಚಿತ್ರದಲ್ಲಿ ಮಹೇಶ್​ ಬಾಬು
  • Share this:
ಪ್ರಿನ್ಸ್​ ಮಹೇಶ್​ ಬಾಬು ಇದೇ ಮೊದಲ ಬಾರಿಗೆ ಸೇನಾಧಿಕಾರಿಯ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ಸರಿಲೇರು ನೀಕೆವ್ವರು'. ಸಿನಿಮಾ ಬಿಡುಗಡೆಯಾಗುವವರೆಗೂ ಪ್ರತಿ ಸೋಮವಾರ ಇನ್ನು ಮುಂದೆ ಚಿತ್ರದ ಒಂದೊಂದು ಹಾಡುಗಳನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸುವ ಮೂಲಕ ಪ್ರಿನ್ಸ್​ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿತ್ತು.

ಚಿತ್ರತಂಡ ಹೇಳಿದಂತೆ ಇಂದು ಸಿನಿಮಾದ ಮೊದಲ ಲಿರಿಕಲ್​ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದೆ. ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ​ಪಕ್ಕಾ ಮಾಸ್​ ಹಾಡು ಈ 'ಮೈಂಡ್​ ಬ್ಲಾಕ್​'.



ವಿಶೇಷ ಅಂದ್ರೆ ಮಹೇಶ್​ ಬಾಬು ಅವರ ದನಿಯನ್ನೂ ಕೇಳಬಹುದಾಗಿದೆ. ಅಲ್ಲದೆ ಮಹೇಸ್​ ಈ ಹಾಡಿನಲ್ಲಿ ಯಾವ ರೀತಿ ಕಾಣಿಸಲಿದ್ದಾರೆ ಎಂದು ಹಾಡಿನ ಸಾಹಿತ್ಯ ಕೇಳಿದ್ರೆ ಸಾಕು ಅರ್ಥವಾಗುತ್ತದೆ.

ಇದನ್ನೂ ಓದಿ: ನಟಿ ಕಂಗನಾ ಬಳಸುವ ಒಂದು ಹ್ಯಾಂಡ್​ ಬ್ಯಾಗ್​ ಬೆಲೆ ಸಾಮಾನ್ಯನ ವಾರ್ಷಿಕ ಆದಾಯಕ್ಕಿಂತ ಹೆಚ್ಚು..!

ಅನಿಲ್​ ರವಿಪುಡಿ ನಿರ್ದೇಶನದ ಈ ಸಿನಿಮಾಗೆ ಮಹೇಶ್​ ಬಾಬು ಸಹ ಹಣ ಹೂಡಿದ್ದಾರೆ. 'ಮಹರ್ಷಿ' ಸಿನಿಮಾದ ಯಶಸ್ಸಿನ ನಂತರ ಮಹೇಶ್​ ಬಾಬು ಅಭಿನಯಿಸುತ್ತಿರುವ 'ಸರಿಳೇರು ನೀಕೆವ್ವರು' ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ.

Maheshbabu Starrer Sarileru Neekevvaru movie team announced good news to Prince Fans
'ಸರಿಲೇರು ನೀಕೆವ್ವರು' ಸಿನಿಮಾದಲ್ಲಿ ಮಹೇಶ್​ ಬಾಬು

Loading...

ಇದೇ ಮೊದಲ ಬಾರಿಗೆ ಕಿರಿಕ್​ ಹುಡುಗಿ ರಶ್ಮಿಕಾ ಹಾಗೂ ಮಹೇಶ್​ ಬಾಬು ತೆರೆ ಹಂಚಿಕೊಂಡಿದ್ದಾರೆ. ಮಹೇಶ್​ ಬಾಬು ಅವರ ಪತ್ನಿಯ ಪಾತ್ರದಲ್ಲಿ ಫುಲ್​ ಸಾಂಪ್ರದಾಯಿ ಪಾತ್ರದಲ್ಲಿ ಗೃಹಿಣಿಯಾಗಿ ರಶ್ಮಿಕಾ ಮಿಂಚಿದ್ದು, ಈ ಸಿನಿಮಾ ಮುಂದಿನ ತಿಂಗಳು ಅಂದರೆ ಸಂಕ್ರಾತಿ ಹಬ್ಬದ ಸಮಯಕ್ಕೆ ತೆರೆ ಕಾಣಲಿದೆ.

 Pranutan Bahl: ಸಿಕ್ಕಾಪಟ್ಟೆ ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡ ಕಾಜೋಲ್​ ಕುಟುಂಬದ ಉಯೋನ್ಮುಖ ನಟಿ..!

First published:December 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...