Bigg Boss OTT: 'ನಂಗೆ ನಿನ್ನ ಮೇಲೆ ಫೀಲಿಂಗ್​ ಇದೆ; ಬೇಕು ಅಂದ್ರೆ ಒಪ್ಪಿಕೋ‘, ಸೋನು ಗೌಡ ಅಂಡ್​ ರಾಕೇಶ್ ಲವ್ ಸ್ಟೋರಿ

ರಾಕೇಶ್ ಅವರು ಎಲ್ಲರ ಜತೆಯೂ ಫ್ಲರ್ಟ್ ಮಾಡುತ್ತಿದ್ದಾರೆ. ಸ್ಫೂರ್ತಿ ಗೌಡ ಅವರ ಜತೆ ಅವರು ಕ್ಲೋಸ್ ಆಗಿದ್ದಾರೆ. ಈ ವಿಚಾರಕ್ಕೆ ಸೋನು ಗೌಡ ಹೊಟ್ಟೆಕಿಚ್ಚು ಪಡುತ್ತಿದ್ದು. ಇದನ್ನು ಸೋನು ಅವರೇ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ.

ಸೋನುಗೆ ರಾಕೇಶ್​ ಗೌಡ ಮೇಲೆ ಲವ್​

ಸೋನುಗೆ ರಾಕೇಶ್​ ಗೌಡ ಮೇಲೆ ಲವ್​

  • Share this:
ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss)​ ಈ ಬಾರಿ ಓಟಿಟಿಯಲ್ಲಿ (OTT) ಪ್ರಸಾರವಾಗ್ತಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಜೀವನ ಅನೇಕ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಹೀಗಾಗಿ ಎಲ್ಲೆಲ್ಲೂ ಬಿಗ್​ ಬಾಸ್​ ಸ್ಪರ್ಧಿಗಳ (Bigg Boss Contestants) ಕುರಿತ ಚರ್ಚೆಗಳು ಹೆಚ್ಚಾಗಿದೆ. ರೀಲ್ಸ್​ ಹಾಗೂ ಟಿಕ್​ಟಾಕ್ (Reels and Tiktok)​ ಮಾಡಿಕೊಂಡು ಫೇಮಸ್​ ಆಗಿದ್ದ ಸೋನು ಶ್ರೀನಿವಾಸ ಗೌಡ (Sonu Srinivasa Gowda), ಬಿಗ್​ಬಾಸ್​ ಮನೆಗೆ ಬಂದಾಗಿನಿಂದಲೂ ಫುಲ್​ ಸುದ್ದಿಯಾಗ್ತಿದ್ದಾರೆ. ದೊಡ್ಮನೆಯಲ್ಲಿ ಲವ್ ಸ್ಟೋರಿ ಶುರುವಾಗಿದೆ. ಸೋನುಗೌಡಗೆ ರಾಕೇಶ್ ಅಡಿಗ (Rakesh Adiga) ಮೇಲೆ ಲವ್​ ಆಗಿದ್ದು, ಟ್ರೂ  ಫೀಲಿಂಗ್ಸ್​ ಇದೆ, ಅವನು ನನ್ನವನು ಎಂದು ಹೇಳಿಕೊಂಡಿದ್ದಾರೆ.

ಬಿಗ್​ಬಾಸ್​ ಮನೆಯಲ್ಲಿ ಮೊದಲ ಪ್ರೇಮಕಥೆ


ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಲವ್​ ಸ್ಟೋರಿಗಳು ಹುಟ್ಟಿಕೊಂಡಿವೆ. ಕೆಲವರು ಬಿಗ್ ಬಾಸ್​ ಮನೆಯಲ್ಲಿ ಫೇಮಸ್​ ಆಗಲು ಪ್ರೀತಿ-ಪ್ರೇಮದ ಆಟ ಆಡಿದರೆ ಇನ್ನೂ ಕೆಲವರು, ನಿಜವಾಗಿ ಪ್ರೀತಿಸಿ ಮನೆಯಿಂದ ಹೊರಬಂದು ಮದುವೆ ಆಗಿದ್ದಾರೆ. ಇದೀಗ ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್​ ಗೌಡಗೆ ರಾಕೇಶ್​ ಮೇಲೆ ಲವ್​ ಆಗಿರುವುದಾಗಿ, ಹಾಗೂ ಟ್ರೂ ಫೀಲಿಂಗ್ಸ್​ ಇರುವುದಾಗಿ ಹೇಳಿದ್ದಾರೆ.

 ರಾಕೇಶ್ ಎಲ್ಲರ ಜತೆ ಫ್ಲರ್ಟ್ ಮಾಡುತ್ತಿದ್ದಾರೆ

ಈ ಬಗ್ಗೆ ಸೋನು ಗೌಡ ತುಳು ನಟ ರೂಪೇಶ್ ಜೊತೆ ಹೇಳಿಕೊಂಡಿದ್ದು, ರಾಕೇಶ್ ಅವರು ಎಲ್ಲರ ಜತೆಯೂ ಫ್ಲರ್ಟ್ ಮಾಡುತ್ತಿದ್ದಾರೆ. ಸ್ಫೂರ್ತಿ ಗೌಡ ಅವರ ಜತೆ ಅವರು ಕ್ಲೋಸ್ ಆಗಿದ್ದಾರೆ. ಈ ವಿಚಾರಕ್ಕೆ ಸೋನು ಗೌಡ ಹೊಟ್ಟೆಕಿಚ್ಚು ಪಡುತ್ತಿದ್ದು. ಇದನ್ನು ಸೋನು ಅವರೇ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ.



 ನಿನ್ನ ಮೇಲೆ ನಿಜಕ್ಕೂ ಫೀಲಿಂಗ್ಸ್ ಇದೆ

ಆ ಬಳಿಕ ರಾಕೇಶ್ ಬಳಿ ತೆರಳಿದ ಸೋನು ಗೌಡ, ನಿನ್ನ ಮೇಲೆ ನಿಜಕ್ಕೂ ಫೀಲಿಂಗ್ಸ್ ಇದೆ ಎಂದರು. ಇದಕ್ಕೆ ರಾಕೇಶ್  ಇದು ನಿಜನಾ ಎಂದು ಮರು ಪ್ರಶ್ನೆ ಮಾಡಿದ್ದರು. ನಿನ್ನ ಮೇಲೆ ಫೀಲಿಂಗ್ಸ್ ಇದೆ. ಬೇಕು ಅಂದರೆ ಒಪ್ಪಿಕೋ, ಇಲ್ಲ ಅಂದ್ರೆ ಇಲ್ಲ. ನಾನು ಹೇಳಬೇಕು ಅನ್ನಿಸ್ತು ಹೇಳಿದೆ ಎಂದರು ಸೋನು. ಇದಕ್ಕೆ ರಾಕೇಶ್ ಪ್ರತಿಕ್ರಿಯಿಸಿದ್ದು, ನಿನ್ನ ಫೀಲಿಂಗ್ಸ್ ಜತೆ ಆಡಲ್ಲ ಎಂದಿದ್ದಾರೆ.

 ಶಾಕ್​ ಆಗಿದ್ದಾರಾ ರಾಕೇಶ್​ ಅಡಿಗ

ಸೋನುಗೆ ರಾಕೇಶ್​ ಅಡಿಗ ಮೇಲೆ ಫೀಲಿಂಗ್ ಇದೆ ಎಂದು ಹೇಳಿಕೊಂಡಿದ್ದಾರೆ. ಅವರು ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಈ ವಿಚಾರ ಇದೀಗ ವೈರಲ್​ ಆಗುತ್ತಿದ್ರೆ. ರಾಕೇಶ್ ಅಡಿಗ ಮಾತ್ರ ಹೆಚ್ಚೇನು ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದಾರೆ. ಎಲ್ಲರ ಜೊತೆ ಚೆನ್ನಾಗಿಯೇ ಮಾತಾಡ್ತಿರೋ ರಾಕೇಶ್​ಗೆ ಓಪನ್ ಆಗಿಯೇ ಸೋನುಗೌಡ, ತನ್ನಗೆ ನಿನ್ನ ಮೇಲೆ ಕ್ರಶ್ ಆಗಿದೆ ಎಂದು ಹೇಳಿಕೊಂಡಿರೋದ್ರಿಂದ ಶಾಕ್​ ಆಗಿರೋ ಸೋನುಗೌಡ ಹೆಚ್ಚೇನು ರಿಯಾಕ್ಷನ್​ ನೀಡಿಲ್ಲ.

ಇದನ್ನೂ ಓದಿ: Bigg Boss OTT: ರಾಕೇಶ್​ ಜೊತೆ ಬೇರೆ ಹುಡುಗಿ ಮಾತಾಡಿದ್ರೆ ಈಕೆಗೆ ಉರಿಯುತ್ತಂತೆ, ಜೋಶ್​ ಹುಡುಗನಿಗೆ ಜೋತುಬಿದ್ದ ಸೋನು!

 ನಿನ್ನೆ ಸೋನು ಸ್ಪೂರ್ತಿ ಫೈಟ್​

ಹಿಂದಿನಿಂದ ಹೀಯಾಳಿಸುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ತಕರಾರು ತೆಗೆದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಯಿತು. ಅತ್ತ ಸ್ಪೂರ್ತಿ ಗೌಡ ಕೂಡ ಸೋನುಗೆ ನನ್ನ ವಿಷಯಕ್ಕೆ ಬರದಂತೆ ತಾಕೀತು ಮಾಡಿದರು. ಇದೇ ವೇಳೆ ರಾಕೇಶ್ ಅಡಿಗ ಕೂಡ ಆಗಮಿಸಿದ್ದು, ಸೋನು ಗೌಡರ ಮನವೊಲಿಸಲು ಯತ್ನಿಸಿದರು. ಅಷ್ಟೇ ಅಲ್ಲದೆ ನೀವು ಅಪಾರ್ಥ ಮಾಡಿಕೊಂಡಿದ್ದೀರಿ. ನಾವು ಯಾರನ್ನೂ ಹಿಯಾಳಿಸಿರಲಿಲ್ಲ. ನಾವಿಬ್ಬರೇ ತಮಾಷೆ ಮಾಡಿಕೊಂಡು ನಕ್ಕಿದ್ದೆವು. ನೀನು ತಪ್ಪು ತಿಳಿದುಕೊಂಡಿದ್ದೀಯಾ ಎಂದು ತಿಳಿಸಿದರು.

ಇದನ್ನೂ ಓದಿ: ಬಿಗ್​ ಬಾಸ್ ಮನೆಗೆ ಹೋಗೋಕೆ ಕಾಫಿ ನಾಡು ಚಂದು ನಾನಾ ಕಸರತ್ತು! ಶುರುವಾಯ್ತು ಹೊಸ ಅಭಿಯಾನ

ಇದೇ ವೇಳೆ ನಗುವುದು ಬಿಡುವುದು ನನ್ನ ಇಷ್ಟ ಎಂದು ಸ್ಪೂರ್ತಿ ಗೌಡ ಸೋನು ಗೌಡರ ಬೆಂಡೆತ್ತಿದರು. ಈ ವೇಳೆ ಇಬ್ಬರ ನಡುವಿನ ಜಗಳ ಕೂಡ ತಾರಕ್ಕೇರಿತ್ತು. ಇದೇ ಸಂದರ್ಭದಲ್ಲಿ ಇತರೆ ಸ್ಪರ್ಧಿಗಳು ಇಬ್ಬರನ್ನು ದೂರ ಮಾಡಿದರು.
Published by:Pavana HS
First published: