ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ನಿರ್ದೇಶನದಲ್ಲಿ ಬಹುಭಾಷಾ ತಾರೆ ಫಹಾದ್ ಫಾಸಿಲ್ (Fahadh Faasil) ನಟಿಸುತ್ತಿರುವ ‘ಧೂಮಂ’ಚಿತ್ರದ (Dhoomam Movie ) ಫಸ್ಟ್ ಲುಕ್ ರಿಲೀಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹೊಂಬಾಳೆ ಫಿಲ್ಮ್ಸ್ (Hombale Films) ಫಸ್ಟ್ ಲುಕ್ (Dhoomam Firstlook) ರಿವೀಲ್ ಮಾಡಿದೆ. ನಿರ್ದೇಶಕ ಪವನ್ ಕುಮಾರ್ ಇದೇ ಮೊದಲ ಬಾರಿಗೆ ಮಲಯಾಳಂನಲ್ಲಿ ಸಿನಿಮಾ ಮಾಡುತ್ತಿದ್ದಾರೆ.
ಧೂಮಂ ಫಸ್ಟ್ ಲುಕ್ ರಿಲೀಸ್
ಕೆಜಿಎಫ್ ಹಾಗೂ ಕಾಂತಾರದಂತಹ ಸೂಪರ್ ಹಿಟ್ ಸಿನಿಮಾ ನೀಡಿದ ಹೊಂಬಾಳೆ ಫಿಲ್ಮ್ಸ್ ಮುಂದಿನ ಸಿನಿಮಾಗಳ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಇದೆ. ಕನ್ನಡ ಅಷ್ಟೇ ಅಲ್ಲದ ಇದೀಗ ಹೊಂಬಾಳೆ ತೆಲುಗು, ಮಲಯಾಳಂ ಸಿನಿಮಾ ಮಾಡುತ್ತಿದ್ದು, ಹಿಂದಿಯಲ್ಲೂ ಸಿನಿಮಾ ಮಾಡಲಿದೆ. ಇದೀಗ ಮಲಯಾಳಂ ಸಿನಿಮಾ ಧೂಮಂ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಧೂಮಂ ಫಸ್ಟ್ ಲುಕ್ ನೋಡಿದ ಜನರಲ್ಲಿ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.
ಫಹಾದ್ ಫಾಸಿಲ್,ಅಪರ್ಣ ಜೋಡಿ
ಮಲಯಾಳಂ ಖ್ಯಾತ ನಟ ಫಹಾದ್ ಫಾಸಿಲ್ ಹಾಗೂ ಅಪರ್ಣ ಬಾಲಮುರಳಿ ಜೋಡಿಯಾಗಿ ನಟಿಸುತ್ತಿರುವ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತ್ತು. ಧೂಮಂ ಸಿನಿಮಾ ಶೂಟಿಂಗ್ ಆರಂಭವಾಗಿರುವ ಬಗ್ಗೆ ಹೊಂಬಾಳೆ ನಿರ್ಮಾಣ ಸಂಸ್ಥೆ ಟ್ವಿಟ್ಟರ್ ನಲ್ಲಿ ಅಧಿಕೃತ ಘೋಷಣೆ ಮಾಡಿತ್ತು.
View this post on Instagram
ಹೊಂಬಾಳೆ ಬ್ಯಾನರ್‌ನಲ್ಲಿ ‘ಧೂಮಂ’ ಸಿನಿಮಾ ಮೂಡಿ ಬರುತ್ತಿದೆ. ಮಲಯಾಳಂ ನಟ ಫಹಾದ್ ಫಾಸಿಲ್‌ಗೆ ಪವನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಭಿನ್ನ ಕಥೆಯನ್ನ ತೆರೆಯ ಮೇಲೆ ತೋರಿಸಲು ಚಿತ್ರತಂಡ ಸಜ್ಜಾಗಿದೆ. ಫಸ್ಟ್ ಲುಕ್ ರಿಲೀಸ್ ಮಾಡಿದ ಹೊಂಬಾಳೆ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ. ಇದು ಮೊದಲ ಕಿಡಿ ಎಂದು ಬರೆದುಕೊಂಡಿದೆ.
"ಫಹಾದ್ ಮತ್ತು ಅಪರ್ಣಾ ಅವರು ನಮ್ಮ ನಿರ್ಮಾಣ ಸಂಸ್ಥೆಯ ಸಿನಿಮಾಗೆ ಜೊತೆಯಾಗಿರುವುದು ಸಂತಸ ತಂದಿದೆ, ಧೂಮಂ ಸಾಂಪ್ರದಾಯಿಕ ಸಿನಿಮಾದ ಎಲ್ಲಾ ಪ್ರಕಾರಗಳಿಗಿಂತ ವಿಭಿನ್ನವಾದ ವಿಶಿಷ್ಟವಾದ ಕಥಾಹಂದರವನ್ನು ಹೊಂದಿದೆ. ನಿರ್ದೇಶಕ ಪವನ್ ಕುಮಾರ್ ಹಲವಾರು ತಿಂಗಳುಗಳ ಕಾಲ ಸ್ಕ್ರಿಪ್ಟ್‌ನಲ್ಲಿ ಕೆಲಸ ಮಾಡಿದ್ದಾರೆ. ಪವನ್ ಹಾಗೂ ಫಹಾದ್ ಅಭಿಮಾನಿಗಳಿಗೆ ಖಂಡಿತಾ ಇಷ್ಟವಾಗುತ್ತೆ ಎಂದು ಹಿಂದೆ ವಿಜಯ್ ಕಿರಗಂದೂರು ಹೇಳಿದ್ದಾರೆ.
4 ಭಾಷೆಗಳಲ್ಲಿ ರಿಲೀಸ್ ಆಗಲಿದೆ ಧೂಮಂ
'ಧೂಮಂ', ಥ್ರಿಲ್ಲರ್, ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ 4 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಫಹದ್ ಮತ್ತು ಅಪರ್ಣಾ ಅವರಲ್ಲದೆ, ಅಚ್ಯುತ್ ಕುಮಾರ್, ಜಾಯ್ ಮ್ಯಾಥ್ಯೂ, ದೇವ್ ಮೋಹನ್, ಅನು ಮೋಹನ್ ಮತ್ತು ನಂದು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸೆಪ್ಟೆಂಬರ್ 30ರಂದು ಘೋಷಣೆಯಾಗಿದ್ದ ಈ ಸಿನಿಮದ ಮುಹೂರ್ತ ಅಕ್ಟೋಬರ್ 9ರಂದು ನಡೆಯಿತು. ಮಲಯಾಳಂ, ಕನ್ನಡ, ತಮಿಳು ತೆಲುಗು ಭಾಷೆಯ ಹೆಸರು ಹಾಕಿರುವುದರಿಂದ ಮೂಲ ಮಲಯಾಳಂನಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಹಾಗೂ ಪ್ರೀತಾ ಜಯರಾಮನ್ ಛಾಯಾಗ್ರಹಣ "ಧೂಮಂ" ಚಿತ್ರಕ್ಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ