Annatha First Look| ಸೂಪರ್ ಸ್ಟಾರ್ ರಜಿನಿ ಅಭಿನಯದ ಅಣ್ಣಾತ್ತ ಚಿತ್ರದ ಫಸ್ಟ್ ಲುಕ್ ರಿಲೀಸ್!
ಶಿವ ನಿರ್ದೇಶನದಲ್ಲಿ ಬಿಡುಗಡೆಯಾದ ವೀರಂ, ವಿಶ್ವಾಸಂ ಚಿತ್ರಗಳಂತೆಯೇ ಅಣ್ಣಾತ್ತ ಚಿತ್ರವೂ ಸಹ ದೊಡ್ಡ ಕುಟುಂಬದ ಹಿನ್ನೆಲೆಯಲ್ಲಿ ನಡೆಯುವ ಕಥೆಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ. ಅಣ್ಣ-ತಂಗಿಯ ಪ್ರೀತಿ ಚಿತ್ರದ ಪ್ರಮುಖ ಎಳೆ.
ಕಳೆದ ವರ್ಷ ಮುರುಗದಾಸ್ ನಿರ್ದೇಶನದ ದರ್ಬಾರ್ ಚಿತ್ರದ ನಂತರ ಸೂಪರ್ ಸ್ಟಾರ್ ರಜಿನಿಕಾಂತ್ (Super Star Rajinikanth) ಚಿರುಥೈ ಶಿವ (Director Shiva) ನಿರ್ದೇಶನದ ಅಣ್ಣಾತ್ತ (Annaatthe) ಚಿತ್ರದಲ್ಲಿ ತೊಡಗಿಕೊಂಡಿದ್ದರು. ಹೈದ್ರಾಬಾದ್ನಲ್ಲಿ ನಡೆಯುತ್ತಿರುವ ಈ ಶೂಟಿಂಗ್ಗೆ ಕೊರೋನಾ (CoronaVirus) ನಿರಂತರ ಕಾಟ ನೀಡುತ್ತಿತ್ತು. ಈ ನಡುವೆ ಲಾಕ್ಡೌನ್ ಚಿತ್ರ ತಂಡವನ್ನು ಸಂಕಷ್ಟಕ್ಕೂ ಈಡುಮಾಡಿತ್ತು. ಆದರೆ, ಈ ಎಲ್ಲಾ ಸಮಸ್ಯೆಗಳನ್ನೂ ಮೀರಿ ಸೂಪರ್ಸ್ಟಾರ್ ಅಭಿನಯದ ಅಣ್ಣಾತ್ತ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರದ ಬಹುತೇಕ ಕೆಲಸಗಳು ಮುಕ್ತಾಯವಾಗಿದ್ದು, ಮುಂದಿನ ದೀಪಾವಳಿಗೆ ಚಿತ್ರ ತೆರೆಗೆ ಬರುವುದು ಖಚಿತವಾಗಿದೆ. ಈ ನಡುವೆ ಇಂದು "ಅಣ್ಣಾತ್ತ" ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ ಈ ಚಿತ್ರದಲ್ಲಿನ ರಜಿನಿಯ ಲುಲ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ ಎನ್ನಲಾಗುತ್ತಿದೆ.
ಈ ಚಿತ್ರದಲ್ಲಿ ರಜಿನಿಗೆ ಜೋಡಿಯಾಗಿ ನಯನತಾರಾ ನಟಿಸುತ್ತಿದ್ದರೆ, ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ರಜಿನಿಯ ತಂಗಿಯಾಗಿ ಅಭಿನಯಿಸುತ್ತಿದ್ದಾರೆ. ಇವರಿಗೆ ಸಂಬಂಧಿಸಿದ ಪ್ರಮುಖ ಕಥಾ ಪಾತ್ರಗಳಲ್ಲಿ ನಟಿ ರಾಜಕಾರಣಿ ಕುಷ್ಭೂ ಸುಂದರ್, ಮೀನಾ, ಪ್ರಕಾಶ್ ರಾಜ್, ಲಿವಿಂಗ್ಸ್ಟನ್, ಜಾರ್ಜ್ ಮರಿಯನ್, ಸತೀಶ್ ಮತ್ಉ ಸೂರಿ ನಟಿಸಿದ್ದಾರೆ. ಅಣ್ಣತ್ತ ಚಿತ್ರದಲ್ಲಿ ಖಳನಾಯಕನಾಗಿ ತೆಲುಗಿನ ಜಗಪತಿಬಾಬು ನಟಿಸಿದ್ದರೆ, ಡಿ. ಇಮಾನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಚಿತ್ರದ ಚಿತ್ರೀಕರಣವನ್ನು ಹೈದರಾಬಾದ್, ಚೆನ್ನೈ, ಲಕ್ನೋ ಮತ್ತು ಕೊಲ್ಕತ್ತಾದಲ್ಲಿ ನಡೆಸಲಾಗಿದೆ.
ಶಿವ ನಿರ್ದೇಶನದಲ್ಲಿ ಬಿಡುಗಡೆಯಾದ ವೀರಂ, ವಿಶ್ವಾಸಂ ಚಿತ್ರಗಳಂತೆಯೇ ಅಣ್ಣಾತ್ತ ಚಿತ್ರವೂ ಸಹ ದೊಡ್ಡ ಕುಟುಂಬದ ಹಿನ್ನೆಲೆಯಲ್ಲಿ ನಡೆಯುವ ಕಥೆಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ. ಅಣ್ಣ-ತಂಗಿಯ ಪ್ರೀತಿ ಚಿತ್ರದ ಪ್ರಮುಖ ಎಳೆ. ಚಿತ್ರದ ತಾಂತ್ರಿಕ ಕೆಲಸವಷ್ಟೇ ಬಾಕಿ ಇದ್ದು, ನವೆಂಬರ್ 4ಕ್ಕೆ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ.
ಇತ್ತೀಚಿನ ಗಣೇಶ ಚತುರ್ಥಿಯನ್ನು ಮುಂದಿಟ್ಟುಕೊಂಡು ಅಣ್ಣಾತ್ತ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಮತ್ತು ಮೋಶನ್ ಪೋಸ್ಟರ್ ಅನ್ನು ಇಂದು ಪ್ರಕಟಿಸಲಾಗಿದೆ. ಅದರ ಪ್ರಕಾರ, ಬೆಳಿಗ್ಗೆ 11 ಗಂಟೆಗೆ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಯಿತು.