ಫಸ್ಟ್​ ಲುಕ್ ಮೂಲಕ​ ಸಿನಿಪ್ರಿಯರ ಸನಿಹಕೆ ಬಂದ ಅಣ್ಣಾವ್ರ ಮೊಮ್ಮಗಳು

NINNA SANIHAKE : ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸ ಮುಗಿಸಿರುವ ನಿನ್ನ ಸನಿಹಕೆ ತಂಡ ಶೀಘ್ರದಲ್ಲೇ ಚಿತ್ರೀಕರಣವನ್ನು ಆರಂಭಿಸಲಿದ್ದಾರೆ.  ಈ ಚಿತ್ರಕ್ಕೆ ಸಂಗೀತ ನೀಡಲು ರಾಕ್​ ಸ್ಟಾರ್ ರಘು ದೀಕ್ಷಿತ್ ಸಹ ರೆಡಿಯಾಗಿದ್ದಾರೆ.

zahir | news18-kannada
Updated:August 7, 2019, 7:28 PM IST
ಫಸ್ಟ್​ ಲುಕ್ ಮೂಲಕ​ ಸಿನಿಪ್ರಿಯರ ಸನಿಹಕೆ ಬಂದ ಅಣ್ಣಾವ್ರ ಮೊಮ್ಮಗಳು
Ninna-Sanihake
  • Share this:
ಕನ್ನಡಿಗರ ಕಣ್ಮಣಿ ವರನಟ ಡಾ.ರಾಜ್​ಕುಮಾರ್​ ಅವರ ಮೊಮ್ಮಗಳು ಧನ್ಯಾ ರಾಮ್​ಕುಮಾರ್ ಸಿನಿರಂಗಕ್ಕೆ ಎಂಟ್ರಿ ಕೊಡುವ ವಿಚಾರ ಗೊತ್ತೇ ಇದೆ. ಇದೇ ಮೊದಲ ಬಾರಿಗೆ ರಾಜ್​ ಕುಟುಂಬದಿಂದ ಹಿರೋಯಿನ್ ರಂಗ ಪ್ರವೇಶಿತ್ತಿದ್ದು, ಹೀಗಾಗಿ ಅದು  ಯಾವ ಸಿನಿಮಾ, ಚಿತ್ರಕ್ಕೆ ನಾಯಕ ಯಾರೆಂಬ ಪ್ರಶ್ನೆಗಳು ಸಿನಿಪ್ರಿಯರಲ್ಲಿ ಮನೆಮಾಡಿತ್ತು.

ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಧನ್ಯಾ ರಾಮ್​ಕುಮಾರ್ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರಕ್ಕೆ 'ನಿನ್ನ ಸನಿಹಕೆ' ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಹಾಗೆಯೇ ಈ ಸಿನಿಮಾದಲ್ಲಿ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಹೀರೋ ಸೂರಜ್ ಗೌಡ ನಾಯಕನಾಗಿ ಕಾಣಿಸಲಿದ್ದಾರೆ.'ರಸಿಕರ ರಾಜ'ನ ಮೊಮ್ಮಗಳ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಕೂಡ ಹೊಸ ನಿರ್ದೇಶಕ ಸುಮನ್ ಜಾದುಗರ್. ಕನಡದ 'ಸಿಲಿಕಾನ್ ಸಿಟಿ', ತಮಿಳಿನ 'ಉತ್ತಮ ವಿಲನ್' ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ದುಡಿದಿರುವ ಸುಮನ್, ಹೊಸ ಕಥೆಯೊಂದಿಗೆ ಡೈರೆಕ್ಟರ್ ಕ್ಯಾಪ್ ಧರಿಸಲು ರೆಡಿಯಾಗಿದ್ದಾರೆ.

ಇದೀಗ ಚಿತ್ರದ ಫಸ್ಟ್​ ಲುಕ್ ಬಿಡುಗಡೆ ಮಾಡಿರುವ ಸುಮನ್ ಮತ್ತು ತಂಡ, ಆಕರ್ಷಕ ಡಿಸೈನ್ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಚಿತ್ರದ ಪೋಸ್ಟರ್ ಹಾಗೂ ಟೈಟಲ್ ಗಮನಿಸಿದರೆ ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ.ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸ ಮುಗಿಸಿರುವ 'ನಿನ್ನ ಸನಿಹಕೆ' ತಂಡ ಶೀಘ್ರದಲ್ಲೇ ಚಿತ್ರೀಕರಣವನ್ನು ಆರಂಭಿಸಲಿದ್ದಾರೆ.  ಈ ಚಿತ್ರಕ್ಕೆ ಸಂಗೀತ ನೀಡಲು ರಾಕ್​ ಸ್ಟಾರ್ ರಘು ದೀಕ್ಷಿತ್ ಸಹ ರೆಡಿಯಾಗಿದ್ದು, ವೈಟ್ ಅಂಡ್ ಗ್ರೇ ಮೀಡಿಯಾ ಹೊಸಬರ ಕನಸಿಗೆ ಬಂಡವಾಳ ಹೂಡಲಿದೆ. ಒಟ್ಟಿನಲ್ಲಿ ರಾಜ್​ ಕುಟುಂಬದ ಹೀರೋಗಳ ಎಡೆಯಲ್ಲಿ ಇದೇ ಮೊದಲ ಬಾರಿಗೆ ಹೀರೋಯಿನ್ ಒಬ್ಬರು ಎಂಟ್ರಿಯಾಗುತ್ತಿರುವ ಬಗ್ಗೆ ಗಾಂಧಿನಗರದಲ್ಲಿ ಹೊಸ ಹಲ್​ಚಲ್ ಸೃಷ್ಟಿಯಾಗಿದೆ.


First published:August 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ