ಗೋಲ್ಡನ್​ ಸ್ಟಾರ್​ ದೇವದಾಸ್​ ಆಗೊರೀದ್ಯಾಕೆ: ಅದಕ್ಕೂ 99ಗೂ ಎಲ್ಲಿನ ಸಂಬಂಧ...!

Anitha E | news18
Updated:January 31, 2019, 4:27 PM IST
ಗೋಲ್ಡನ್​ ಸ್ಟಾರ್​ ದೇವದಾಸ್​ ಆಗೊರೀದ್ಯಾಕೆ: ಅದಕ್ಕೂ 99ಗೂ ಎಲ್ಲಿನ ಸಂಬಂಧ...!
  • News18
  • Last Updated: January 31, 2019, 4:27 PM IST
  • Share this:
ಇಷ್ಟುದಿನ ತಮ್ಮ ಕಾಮಿಡಿ ಸಿನಿಮಾಗಳ ಮೂಲಕ ಎಲ್ಲರನ್ನ ನಕ್ಕು ನಗಿಸುತ್ತಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಇದೀಗ ಮೌನ ತಾಳಿದ್ದಾರೆ. ಉದ್ದ ಗಡ್ಡ, ಮೀಸೆ ಬಿಟ್ಟು ದೇವದಾಸ್​ನಂತೆ ಎಲ್ಲಿಗೋ ಪಯಣ... ಯಾವುದೋ ದಾರಿ... ಅಂತ ಸುತ್ತುತ್ತಿದ್ದಾರೆ. ಅರೆ ಈ ರೊಮ್ಯಾಂಟಿಕ್ ಹೀರೋಗೆ ಆಗಿರೋದಾದರು ಏನು ಅಂತ ಯೋಚಿಸ್ತಾ ಇದ್ದೀರಾ, ಹಾಗಿದ್ದರೆ ಈ ವರದಿ ಓದಿ...

ಇದನ್ನೂ ಓದಿ: ಬೆಳ್ಳಿ ತೆರೆಗೆ ಕಿಚ್ಚ ಸುದೀಪ್​ ಸವೆಸಿದ ಹಾದಿಗೆ ಇಂದು 23ರ ಪ್ರಾಯ..!

ಗೋಲ್ಡನ್ ಸ್ಟಾರ್ ಗಣೇಶ್ ಅಂದ್ರೆ ಅಲ್ಲೊಂತರ ಮಜಾ... ತನ್ನ ಮಾತಿನ ಶೈಲಿ, ಹಾವ ಭಾವ, ಕಾಮಿಡಿ ಟೈಮಿಂಗ್ ಮೂಲಕವೇ ಎಲ್ಲರನ್ನ ತನ್ನತ್ತ ಸೆಳೆಯೋ ಗಣಿ ಈಗಾಗಲೇ ಎಲ್ಲ ಬಗೆಯ ಪಾತ್ರಗಳ ಮೂಲಕ ರಂಜಿಸಿದ್ದಾರೆ. ಅಲ್ಲದೇ ಕಳೆದ ವರ್ಷ ಬಂದ 'ಚಮಕ್', 'ಆರೆಂಜ್' ಸಿನಿಮಾಗಳಲ್ಲೂ ಮೋಡಿ ಮಾಡಿದ್ದ ಗಣಿ ಇದೀಗ ಯಾಕೋ ಉದ್ದುದ್ದ ಗಡ್ಡ ಮೀಸೆ ಬಿಟ್ಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಹಾಗಿದ್ದರೆ ಗಣಿ ಯಾಕೆ ಹೀಗೆಲ್ಲ ಆಗಿದ್ದಾರೆ ಅಂತ ಕೆದಕುತ್ತಾ ಹೋದಾಗ ಸಿಕ್ಕಿದ್ದು '99' ವಿಷಯ. ಅಂದರೆ ಗಣಿ ಅಭಿನಯಿಸುತ್ತಿರುವ '99' ಸಿನಿಮಾದ ಸುದ್ದಿ.

ಹೌದು, ತಮಿಳಿನ ಹಿಟ್ '96' ಸಿನಿಮಾ ಕನ್ನಡಕ್ಕೆ ರಿಮೇಕ್ ಆಗುತ್ತಿದ್ದು, ಗೋಲ್ಡನ್ ಸ್ಟಾರ್ ಗಣೇಶ್, ವಿಜಯ್ ಸೇತುಪತಿ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದೆಯೇ ಈ ಕುರಿತ ಸುದ್ದಿ ಬಂದಿತ್ತಾದರೂ ಇತ್ತೀಚೆಗೆ ಫಸ್ಟ್ ಲುಕ್ ರಿಲೀಸ್ ಆಗೋವರೆಗೂ ಯಾರಿಗೂ ಹೆಚ್ಚಾಗಿ ತಿಳಿದಿರಲಿಲ್ಲ.. ಸಿನಿಮಾದ ಪೋಸ್ಟರ್​ಗೆಂದು ಕ್ಲಿಕ್ಕಿಸಿರೋ ಫೊಟೋಗಳು ಇದಾಗಿದ್ದು, ಮುಖದ ತುಂಬ ಗಡ್ಡ ಮೀಸೆ ಬಿಟ್ಟಿರೋ ಗಣಿಯ ದೇವದಾಸ ಲುಕ್ ನೋಡಿ, ಹಿಂಗಾಗೋದ್ರಲ್ಲ ಲವರ್​ಬಾಯ್​ ಅಂತ ಮರುಗುತ್ತಿದ್ದಾರೆ.

 '99', ಲವ್ ಜಾನರ್ ಹೊತ್ತು ವಿಭಿನ್ನವಾಗಿ ಮೂಡಿ ಬರುತ್ತಿರೋ ಸಿನಿಮಾವಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿರೋ ಚಿತ್ರದ ಫಸ್ಟ್ ಲುಕ್‍ಗೆ ಮೆಚ್ಚುಗೆ ವ್ಯಕ್ತವಾಗ್ತಿದ್ದು, ಸಿನಿಮಾ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಹಾಗೇ ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೇ ತ್ರಿಶಾ ಸಿನಿಮಾದಲ್ಲಿ ಮೋಡಿ ಮಾಡಿದ್ದು, ಹಾಗೇ ಕನ್ನಡದಲ್ಲಿ ಗಣಿ ಮತ್ತು ಜಾಕಿ ಭಾವನ ಒಟ್ಟಾಗಿ ಅಭಿನಯಿಸುತ್ತಿದ್ದಾರೆ. 'ರೋಮಿಯೋ'ದಲ್ಲಿ ಒಂದಾಗಿದ್ದ ಈ ಜೋಡಿ '99' ಮೂಲಕ ಮತ್ತೆ ಕಮಾಲ್ ಮಾಡಲಿದೆ.

ಈ ಸಿನಿಮಾದಲ್ಲಿ ಗಣೇಶ್​ ಜತೆ ಕಿರುತೆರೆ ನಟಿ ಅಮೃತಾಮೂರ್ತಿ ಸಹ ತೆರೆ ಹಂಚಿಕೊಂಡಿದ್ದು, ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಗಣೇಶ್​ ಜತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.

 
ಇನ್ನು ಈ ಸಿನಿಮಾಗಾಗಿ ದೇಹದ ತೂಕವನ್ನು ಹೆಚ್ಚಿಸಿಕೊಂಡಿರೋದು ಗಣೇಶ್ ಮತ್ತಷ್ಟು ವಿಭಿನ್ನವಾಗಿ ಕಾಣುವಂತೆ ಮಾಡಿದೆ. ಹಾಗೇ ಭಾವನ ಈ ಸಿನಿಮಾಗಿ ಸ್ವಲ್ಪ ಸ್ಲಿಮ್ ಆಗಿದ್ದಾರೆ. ಪ್ರೀತಂ ಗುಬ್ಬಿ '99'ರ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

'ಮಳೆಯಲಿ ಜೊತೆಯಲಿ', 'ದಿಲ್ ರಂಗೀಲಾ' ಚಿತ್ರದ ನಂತರದಲ್ಲಿ ಗಣಿ-ಪ್ರೀತಂ ಕಾಂಬಿನೇಷನ್‍ನ 3ನೇ ಚಿತ್ರ ಇದಾಗಿದ್ದು, ಹ್ಯಾಟ್ರಿಕ್ ಖುಷಿಯಲ್ಲಿದ್ದಾರೆ ಈ ಜೋಡಿ. ಉಳಿದಂತೆ ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದ್ದು, ಮೇನಲ್ಲಿ '99' ತೆರೆಕಾಣೋ ಸಾಧ್ಯತೆ ಇದೆ. ಒಟ್ಟಾರೆ ಇಷ್ಟು ದಿನ ಗಣೇಶ್‍ರನ್ನ ಕಾಮಿಡಿ ಜಾನರ್​ನಲ್ಲೆ ನೋಡುತ್ತಿದ್ದ ಮಂದಿ, ಈ ಸಿನಿಮಾದಲ್ಲಿ ಗಣಿ ಲುಕ್ಕು, ಅಭಿನಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

First published:January 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading