ಬಾಲಿವುಡ್ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ಅಗಲಿ ಇಂದಿಗೆ ಸರಿಯಾಗಿ ಒಂದು ವರ್ಷ. ಮುಂಬೈನಲ್ಲಿರುವ ಅವರ ಅಪಾರ್ಟ್ಮೆಂಟ್ನಲ್ಲಿ ಸುಶಾಂತ್ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳಿಗೂ ನಟನ ಸಾವಿನ ಸುದ್ದಿ ಬರಸಿಡಿಲಿನಂತೆ ಬಡಿದಿತ್ತು. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಮೊದಲಿಗೆ ಸುಶಾಂತ್ ಅವರದ್ದು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಆದರೆ ಸುಶಾಂತ್ ಸಾವಿನ ಸುತ್ತ ಘಟಿಸಿದ ಘಟನೆಗಳು ಹಾಗೂ ಹುಟ್ಟಿಕೊಂಡ ಕೆಲವು ಅನುಮಾನಗಳಿಂದ ಅದನ್ನು ಕೊಲೆ ಎಂದು ಹೇಳಾಗುತ್ತಿತ್ತು. ಸುಶಾಂತ್ ಸಾವನ್ನಪ್ಪಿ ಒಂದು ಕಳೇದರೂ ಇನ್ನೂ ನಟನ ಸಾವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂದು ಸ್ಪಷ್ಟವಾಗಿಲ್ಲ. ಸದ್ಯ ಸಿಬಿಐ ಸುಶಾಂತ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದ್ದೆ. ಸುಶಾಂತ್ ಅವರದ್ದು ಆತ್ಮಹತ್ಯೆ ಅಲ್ಲ. ಅದು ಕೊಲೆ ಎಂದು ಸುಶಾಂತ್ ಸಿಂಗ್ ಅವತ ತಂದೆ ಪಾಟ್ನಾದಲ್ಲಿ ದೂರು ದಾಖಲಿಸಿದ್ದರು.
ಇಂದು ಸುಶಾಂತ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ. ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ನಟನನ್ನು ಸ್ಮರಿಸಿದ್ದಾರೆ. ಸುಶಾಂತ್ ಕುರಿತಾಗಿ ನಿನ್ನೆ ರಾತ್ರಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಭಾವುಕರಾಗಿ ಬರೆದುಕೊಳ್ಳುತ್ತಾ ಪೋಸ್ಟ್ ಮಾಡುತ್ತಿದ್ದಾರೆ. ಸುಶಾಂತ್ ಸಿಂಗ್ ಜತೆ ಕೆಲಸ ಮಾಡಿರುವ ನಟ ಪುಲ್ಕಿತ್ ಸಾಮ್ರಾಟ್ ಭಾವುಕರಾಗಿ ಸುಶಾಂತ್ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.
ಸುಶಾಂತ್ ಸಾವಿಗೆ ಕಾರಣ ಬಾಲಿವುಡ್ನಲ್ಲಿರುವ ನೆಪೋಟಿಸಂ ಕಾರಣ ಎಂದು ಹೇಳಲಾಗುತ್ತಿದ್ದು, ನಟನ ಅಗಲಿಕೆಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದು ದೊಡ್ಡ ಅಭಿಯಾನವೇ ನಡೆದಿತ್ತು. ಸ್ಟಾರ್ ಕಿಡ್ಸ್ ಹಾಗೂ ನೆಪೋಟಿಸಂ ಮಾಡುವ ಆರೋಪ ಎದುರಿಸುತ್ತಿರುವ ಕರಣ್ ಜೋಹರ್ ವಿರುದ್ಧ ನೆಟ್ಟಿಗರು ತಿರುಗಿ ಬಿದ್ದಿದ್ದರು. ಸುಶಾಂತ್ ಸಾವನ್ನಪ್ಪಿದ್ದ ನಂತರ ಬಾಯ್ಕಾಟ್ ಸ್ಟಾರ್ ಕಿಡ್ಸ್ ಹಾಗೂ ಕರಣ್ ಜೋಹರ್ ವಿರುದ್ಧ ಸಾಕಷ್ಟು ಪೋಸ್ಟ್ಗಳನ್ನು ಮಾಡಲಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ನಡೆದ ಅಭಿಯಾನದಿಂದಾಗಿ ಕರಣ್ ಜೋಹರ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಜನ ಸೆಲೆಬ್ರಿಟಿಗಳನ್ನು ಅನ್ಫಾಲೋ ಮಾಡಿದ್ದರು. ಇನ್ನು ರಿಯಾ ಚಕ್ರವರ್ತಿ ಅವರ ವಿರುದ್ಧ ಸುಶಾಂತ್ ಸಿಂಗ್ ಅವರ ತಂದೆ ಪಾಟ್ನಾದಲ್ಲಿ ದೂರು ದಾಖಲಿಸಿದ್ದರು. ತನ್ನ ಮಗನ ಸಾವಿಗೆ ರಿಯಾ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನೂ ಓದಿ: Raj Kundra: ಮೊದಲ ಹೆಂಡತಿಗೆ ನನ್ನ ತಂಗಿಯ ಗಂಡನ ಜೊತೆ ಸಂಬಂಧವಿತ್ತು: ಸತ್ಯ ಬಿಚ್ಚಿಟ್ಟ ಶಿಲ್ಪಾ ಶೆಟ್ಟಿ ಗಂಡ ರಾಜ್ ಕುಂದ್ರಾ
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಟನ ತಂದೆ ನಟಿ ರಿಯಾ ಚಕ್ರವರ್ತಿ ವಿರುದ್ಧ ಬಿಹಾರದ ಪಾಟ್ನಾದಲ್ಲಿ ಪ್ರಕರಣ ದಾಖಲಿಸಿದ್ದರು. ಪಾಟ್ನಾದಲ್ಲಿ ನಟ ಸುಶಾಂತ್ ಅವರ ತಂದೆ ನೀಡಿರುವ ದೂರನ್ನು ಆಧರಿಸಿ ನಟಿ ರಿಯಾ ಚಕ್ರವರ್ತಿ ವಿರುದ್ಧ 306 (ಆತ್ಮಹತ್ಯೆಗೆ ಪ್ರಚೋದನೆ), 341 (ತಪ್ಪಾದ ಸಂಯಮಕ್ಕಾಗಿ ಶಿಕ್ಷೆ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ), 380 (ವಾಸಿಸುವ ಮನೆಯಲ್ಲೇ ಕಳ್ಳತನ), 406 (ವಿಶ್ವಾಸಾರ್ಹ ಉಲ್ಲಂಘನೆ) ಮತ್ತು 420 (ಮೋಸ ಮತ್ತು ಅಪ್ರಾಮಾಣಿಕವಾಗಿ ಆಸ್ತಿಯ ವಿತರಣೆ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿತ್ತು.
ಇದನ್ನೂ ಓದಿ: Taapsee Pannu: ಮಕ್ಕಳು ಬೇಕೆನಿಸಿದಾಗ ಮದುವೆಯಾಗ್ತಾರಂತೆ ನಟಿ ತಾಪ್ಸಿ ಪನ್ನು..!
ಸುಶಾಂತ್ ಸಾವಿಗೆ ನಟಿ ರಿಯಾ ಚಕ್ರವರ್ತಿ ಅವರೇ ಕಾರಣ ಎಂದು ಆರೋಪಿಸಿದ್ದ ಅವರ ತಂದೆ ಕೆ.ಕೆ. ಸಿಂಗ್ ಕಳೆದ ವರ್ಷ ಜುಲೈ 28 ರಂದು ಪಾಟ್ನಾದಲ್ಲಿ ಪ್ರತ್ಯೇಕ ದೂರು ಸಲ್ಲಿಸಿದ್ದರು. ಈ ದೂರಿನಲ್ಲಿ ನಟಿ ರಿಯಾ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ, ಕ್ರಿಮಿನಲ್ ಪಿತೂರಿ ಮತ್ತು ವಂಚನೆಗೆ ಸಂಬಂಧಿಸಿದಂತೆ ಆರೋಪಿಸಿದ್ದರು. ಅಲ್ಲದೆ, ಅಲ್ಪಾವಧಿಯಲ್ಲಿಯೇ ರಿಯಾ ಅವರು ಸುಶಾಂತ್ ಅವರ ಖಾತೆಯಿಂದ 15 ಕೋಟಿ ರೂಪಾಯಿಗಳನ್ನು ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಮತ್ತೆ ಕೇಳುತ್ತಿದೆ ಜಸ್ಟೀಸ್ ಫಾರ್ ಸುಶಾಂತ್ ಕೂಗು
ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕೆಂದು ಅಭಿಮಾನಿಗಳು ಕಳೆದ ಒಂದು ವರ್ಷದಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ. ಈಗಲೂ ಸುಶಾಂತ್ ಸಿಂಗ್ ಅವರ ಪುಣ್ಯ ಸ್ಮರಣೆಯಂದು ಮತ್ತೆ ಅಭಿಮಾನಿಗಳು ಜಸ್ಟಿಸ್ ಫಾರ್ ಸುಶಾಂತ್ ಎಂದು ಹ್ಯಾಶ್ಟ್ಯಾ್ಗ್ ಆಗಿ ಪೋಸ್ಟ್ ಮಾಡಲಾರಂಭಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ