Kurukshetra: ಮೊದಲ ದಿನ ದುರ್ಯೋಧನನಿಗೆ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..?

'ಕುರುಕ್ಷೇತ್ರ'ದಲ್ಲಿ ದರ್ಶನ್​

'ಕುರುಕ್ಷೇತ್ರ'ದಲ್ಲಿ ದರ್ಶನ್​

Kurukshetra: ದರ್ಶನ್ ದುರ್ಯೋಧನನಾಗಿ, ಅಂಬಿ ಭೀಷ್ಮನಾಗಿ, ಕ್ರೇಜಿಸ್ಟಾರ್ ಶ್ರೀಕೃಷ್ಣನಾಗಿ, ಅರ್ಜುನ್ ಸರ್ಜಾ ಕರ್ಣನಾಗಿ ಮಹಾನ್ ಪಾತ್ರಗಳಲ್ಲಿ ಮೋಡಿ ಮಾಡಿರೋ 'ಕುರುಕ್ಷೇತ್ರ' ಭರ್ಜರಿ 3ಡಿ ಹಾಗೂ 2ಡಿಯಲ್ಲಿ ಬಿಡುಗಡೆಯಾಗಿ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ತೆರೆಕಂಡ 'ಕುರುಕ್ಷೇತ್ರ' ದರ್ಶನ್ ಅಭಿಮಾನಿಗಳಿಗೆ ನಿಜವಾದ ಹಬ್ಬದಂತಿತ್ತು.

ಮುಂದೆ ಓದಿ ...
  • News18
  • 5-MIN READ
  • Last Updated :
  • Share this:

ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ 'ಕುರುಕ್ಷೇತ್ರ' ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ದರ್ಶನ್ ದುರ್ಯೋಧನನಾಗಿ ನಟಿಸಿರುವ ಚಿತ್ರ ಕನ್ನಡದ ಜೊತೆ ತೆಲುಗಿನಲ್ಲೂ ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನ ಕಂಡಿದೆ.

ದರ್ಶನ್ ದುರ್ಯೋಧನನಾಗಿ, ಅಂಬಿ ಭೀಷ್ಮನಾಗಿ, ಕ್ರೇಜಿಸ್ಟಾರ್ ಶ್ರೀಕೃಷ್ಣನಾಗಿ, ಅರ್ಜುನ್ ಸರ್ಜಾ ಕರ್ಣನಾಗಿ ಮಹಾನ್ ಪಾತ್ರಗಳಲ್ಲಿ ಮೋಡಿ ಮಾಡಿರೋ 'ಕುರುಕ್ಷೇತ್ರ' ಭರ್ಜರಿ 3ಡಿ ಹಾಗೂ 2ಡಿಯಲ್ಲಿ ಬಿಡುಗಡೆಯಾಗಿ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ತೆರೆಕಂಡ 'ಕುರುಕ್ಷೇತ್ರ' ದರ್ಶನ್ ಅಭಿಮಾನಿಗಳಿಗೆ ನಿಜವಾದ ಹಬ್ಬದಂತಿತ್ತು.

 



ರಾಜ್ಯಾದ್ಯಂತ ಮಳೆ ಭೋರ್ಗರೆಯುತ್ತಿದ್ದರೆ, ಚಿತ್ರಮಂದಿರಗಳಲ್ಲಿ ದುರ್ಯೋಧನನ ಅಬ್ಬರ.  ದರ್ಶನ್ ಅಭಿಮಾನಿಗಳು ಮತ್ತು ಚಿತ್ರಪ್ರೇಮಿಗಳು 'ಕುರುಕ್ಷೇತ್ರ' ಚಿತ್ರವನ್ನು ಕಣ್ತುಂಬಿಕೊಂಡರು.


ಹೊಸಕೋಟೆಯಲ್ಲಿ ಸಾಧನಾ ಚಿತ್ರಮಂದಿರದಲ್ಲಿ ದರ್ಶನ್​ ಅಭಿಮಾನಿಗಳು ದುರ್ಯೋಧನನ ದೊಡ್ಡ ಕಟೌಟ್​ ನಿಲ್ಲಿಸಿದ್ದು, ಅದಕ್ಕೆ ಹೆಲಿಕಾಪ್ಟರ್​ನಲ್ಲಿ ಹೂವಿನ ಮಳೆ ಸುರಿಸಿದ್ದು ವಿಶೇಷವಾಗಿತ್ತು.

 


 


 

ಇನ್ನು ನರ್ತಕಿ ಚಿತ್ರಮಂದಿರದ ಬಳಿ ಇರುವ ಕಟೌಟ್​ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದರು. ಇನ್ನು ರಾಜ್ಯದ ನಾನಾ ಭಾಗಗಳಲ್ಲಿ ಸಿನಿಮಾ ನೋಡಲು ಬಂದವರಿಗೆ ಅನ್ನದಾನ ಸಹ ಮಾಡಲಾಯಿತು.

Happy Birthday Mahesh Babu: ಹುಟ್ಟುಹಬ್ಬದ ಸಂಭ್ರಮದಲ್ಲಿ ಮಹೇಶ್​ ಬಾಬು: ಹಬ್ಬ ಆಚರಿಸುತ್ತಿರುವ ಅಭಿಮಾನಿಗಳು

First published: