ಖಳನಾಯಕ್ ಮುಂದೆ ಸಲ್ಲು ಡಲ್ಲು: 'ಸಂಜು' ತೆರೆಕಂಡ ಮೂರು ದಿನದಲ್ಲೇ 120 ಕೋಟಿ ಗಳಿಕೆ!

news18
Updated:July 2, 2018, 3:29 PM IST
ಖಳನಾಯಕ್ ಮುಂದೆ ಸಲ್ಲು ಡಲ್ಲು: 'ಸಂಜು' ತೆರೆಕಂಡ ಮೂರು ದಿನದಲ್ಲೇ 120 ಕೋಟಿ ಗಳಿಕೆ!
news18
Updated: July 2, 2018, 3:29 PM IST
ನ್ಯೂಸ್​ 18 ಕನ್ನಡ 

ಬಿ-ಟೌನ್‍ನಲ್ಲಿ ಸಲ್ಲು- ಸಂಜು ಇಬ್ಬರೂ ಆಪ್ತ ಸ್ನೇಹಿತರು. ಒಬ್ಬರು ಬ್ಯಾಡ್ ಬಾಯ್ ಆದರೆ ಮತ್ತೊಬ್ಬರು ಖಳನಾಯಕ್. ಇನ್ನು ಈ ಇಬ್ಬರೂ ಒಟ್ಟಾಗಿ ಸಿನಿಮಾವನ್ನೂ ಮಾಡಿದ್ದಾರೆ. ಆದರೆ ಇವತ್ತಿಗೂ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಅನಿಸಿಕೊಳ್ಳೋ ಸಲ್ಲು ಮುಂದೆ ಸಿನಿಮಾ ವಿಚಾರದಲ್ಲಿ ಸಂಜೂನೇ ಕೊಂಚ ಡಲ್ಲು. ಆದರೆ ಈಗ ಬಾಕ್ಸಾಫೀಸ್ ಸುಲ್ತಾನ್ ಸಲ್ಲೂವನ್ನು 'ಸಂಜು' ಸೋಲಿಸಿದ್ದಾನೆ.

'ಸಂಜು' ಸಿನಿಮಾ ಗೆದ್ದಿದೆ ಅಂತ ವಿಮರ್ಶೆಗಳೇ ಹೇಳಿದ್ದವು. ಶುಕ್ರವಾರದಿಂದಲೇ ಉಳಿದಿರೋ ಕುತೂಹಲವೇನಿದ್ದರೂ ಕಲೆಕ್ಷನ್ ಎಷ್ಟಾಗುತ್ತೆ ಅನ್ನೋದರ ಮೇಲಿತ್ತು. ಸಂಜು ಕಥೆ ಕಲೆಕ್ಷನ್‍ನಲ್ಲೂ ಕಮಾಲ್ ಮಾಡಿದೆ. ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಕೂಡ ದಂಗು ಬಡಿಯುವಂತೆ 'ಸಂಜು' ಗೆದ್ದು ಬಂದಿದ್ದಾನೆ. 'ಸಂಜು' ಮೊದಲ ದಿನವೇ 35 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

 


Loading...ಅಷ್ಟೇ ಅಲ್ಲದೆ ತೆರೆಕಂಡ ಮೂರು ದಿನಗಳಲ್ಲೇ 120 ಕೋಟಿ ಗಳಿಸಿದೆ ಈ ಸಿನಿಮಾ. ಸಂಜಯ್​ ಲೀಲಾ ಬನ್ಸಾಲಿ ಅವರ 'ಪದ್ಮಾವತ್​' ಸಿನಿಮಾ ತೆರೆಕಂಡ ಮೊದಲ ವಾರದಲ್ಲಿ 114 ಕೋಟಿ ಹಾಗೂ ಸಲ್ಮಾನ್​ ಅಭಿನಯದ 'ರೇಸ್​-3' ಸಿನಿಮಾ 106.47 ಕೋಟಿ ಗಳಿಸಿತ್ತು. ಈ ಮೂಲಕ ಮೊದಲ ವಾರದಲ್ಲೇ ಈ ವರ್ಷ ಅತಿ ಹೆಚ್ಚು ಗಳಿಸಿದ ಸಿನಿಮಾವಾಗಿ 'ಸಂಜು' ಹೊರಹೊಮ್ಮಿದೆ.ರಾಜ್‍ಕುಮಾರ್ ಹಿರಾನಿ ಮತ್ತೊಂದು ಮಾಸ್ಟರ್​ ಪೀಸ್​ ರೆಡಿ ಮಾಡಿದ್ದಾರೆ. ಈ ಮಾಸ್ಟರ್ ಪೀಸ್​ ಮೊದಲ ದಿನವೇ ಈ ವರ್ಷದ ಬಾಲಿವುಡ್‍ನ ಅಷ್ಟೂ ಸಿನಿಮಾಗಳ ಮೊದಲ ದಿನದ ಕಲೆಕ್ಷನ್‍ನನ್ನು ಮೀರಿಸಿ ನಿಂತಿದೆ. ಅಂದಹಾಗೆ 'ಸಂಜು' ಸಿನಿಮಾದ ಮೊದಲ ದಿನದ ಕಲೆಕ್ಷನ್ 35 ಕೋಟಿ.

ಈ ವರ್ಷ ತೆರೆಕಂಡ ಸಿನಿಮಾಗಳಲ್ಲೇ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ್ದು 'ರೇಸ್-3'. ಮೊದಲ ದಿನದ 'ರೇಸ್-3' ಕಲೆಕ್ಷನ್ 29 ಕೋಟಿ ಆಗಿತ್ತು. ಆದರೆ 'ಸಂಜು' ಈ ವರ್ಷದ ಸಲ್ಮಾನ್ ಸಿನಿಮಾದ ದಾಖಲೆಯನ್ನು ದೂಳು ಮಾಡಿದ್ದಾನೆ. ರಾಜ್‍ಕುಮಾರ್ ಹಿರಾನಿ ಸಂಜು ಜೀವನ ಚರಿತ್ರೆಯನ್ನು ನಿರೂಪಿಸಿರೋ ರೀತಿ ಚಿತ್ರ ಪ್ರೇಮಿಗಳಿಗೆ ಮೋಡಿ ಮಾಡಿದೆ.

'ಸಂಜು' ಪಾತ್ರವನ್ನು ಸಂಜಯ್ ದತ್ ಕೂಡ ದಂಗು ಬಡಿಯುವಂತೆ ನಟಿಸಿದ್ದಾರೆ ರಣಬೀರ್ ಕಪೂರ್. ಮತ್ತೊಮ್ಮೆ ರಣಬೀರ್ ತಾನೊಬ್ಬ ಅದ್ಭುತ ನಟ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಅದ್ಭುತ ನಟನೆಗೆ ದೊಡ್ಡ ಉಡುಗೊರೆ ಸಂಜು ಪಾಲಾಗಿದೆ. ಗಿಫ್ಟ್ ಅಂದರೆ ರಣಬೀರ್​ ಸಿನಿ ಜೀವನದಲ್ಲೇ ಸಂಜು ಬಿಗ್ ಓಪನಿಂಗ್ ಪಡೆದುಕೊಂಡ ಚಿತ್ರವಾಗಿದೆ.

ರಣಬೀರ್​ ಜೀವನದಲ್ಲಿ 'ಬೇಷರಮ್' ಮತ್ತು 'ಎ ಜವಾನಿ ಹೈ ದಿವಾನಿ' ಅತ್ಯಂತ ದೊಡ್ಡ ಕಲೆಕ್ಷನ್ ಮಾಡಿದ್ದ ಚಿತ್ರಗಳಾಗಿದ್ದವು. 'ಬೇಷರಮ್' ಮೊದಲ ದಿನ 21 ಕೋಟಿ ಕಲೆಕ್ಷನ್ ಮಾಡಿದ 'ಎ ಜವಾನಿ ಹೈ ದಿವಾನಿ' 19 ಕೋಟಿ ಕಲೆಕ್ಷನ್ ಮಾಡಿತ್ತು.

ಈ ವರ್ಷದಲ್ಲಿ ಗೆದ್ದ ಸಿನಿಮಾಗಳ ಪಟ್ಟಿ ಸೇರಿದ್ದ 'ಪದ್ಮಾವತ್' ಮೊದಲ ದಿನ ಗಳಿಸಿದ್ದು ಕೂಡ 29 ಕೋಟಿ. ತನ್ನ ಮಾಜಿ ಪ್ರೇಯಸಿ ದೀಪಿಕಾ ಸಿನಿಮಾವನ್ನೂ ಕೂಡ ರಣಬೀರ್ 'ಸಂಜು' ಮೂಲಕ ಹಿಮ್ಮೆಟ್ಟಿಸಿದ್ದಾನೆ. ದೊಡ್ಡ ದೊಡ್ಡ ಸಿನಿಮಾಗಳೆಲ್ಲ ಮಕಾಡೆ ಮಲಗುತ್ತಿರೋದr ನಡುವೆ 'ಸಂಜು' ಸಿನಿಮಾ ಮಾತ್ರ ನೂರು ಕೋಟಿಯತ್ತ ನಿರಾಳವಾಗಿ ಮುನ್ನುಗ್ಗುತ್ತಿದೆ.

ಸಂಜಯ್ ದತ್ ಬದುಕಿನ ಪುಟಗಳನ್ನು ಅತ್ಯಂತ ರೋಚಕವಾಗಿ ತೋರಿಸುವಲ್ಲಿ ಎಲ್ಲೂ ಒಂಚೂರು ನಾಟಕೀಯವಾಗದಂತೆ ನೋಡಿಕೊಂಡಿರುವ ನಿರ್ದೇಶಕ ರಾಜ್‍ಕುಮಾರ್ ಹಿರಾನಿ, ಅಮೋಘ ಅಭಿನಯ ನೀಡಿರುವ ರಣಬೀರ್ ಕಪೂರ್ ಮತ್ತು ತಂದೆಯ ಪಾತ್ರದಲ್ಲಿ ಪರೇಶ್ ರಾವಲ್, ಗೆಳೆಯನ ಪಾತ್ರದಲ್ಲಿ ವಿಕ್ಕಿ ಕೌಶಲ್. 'ಸಂಜು' ಸಿನಿಮಾ ಚಿತ್ರಮಂದಿರದತ್ತ ಸಿನಿರಸಿಕರನ್ನು ಆಯಸ್ಕಾಂತದಂತೆ ಸೆಳೆಯುತ್ತಿದೆ.

 

 

 

 
First published:July 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...