ನಾಗರಹಾವು ಮೊದಲ ದಿನ ಗಳಿಸಿದ್ದೆಷ್ಟು: ಎರಡನೇ ದಿನವೂ ಚಿತ್ರಮಂದಿರಗಳು ಬಹುತೇಕ ಹೌಸ್‍ಫುಲ್..!

news18
Updated:July 21, 2018, 2:07 PM IST
ನಾಗರಹಾವು ಮೊದಲ ದಿನ ಗಳಿಸಿದ್ದೆಷ್ಟು: ಎರಡನೇ ದಿನವೂ ಚಿತ್ರಮಂದಿರಗಳು ಬಹುತೇಕ ಹೌಸ್‍ಫುಲ್..!
news18
Updated: July 21, 2018, 2:07 PM IST
ಓಂ ಸಕಲೇಶಪುರ, ನ್ಯೂಸ್ 18 ಕನ್ನಡ

ಕನ್ನಡ ಚಿತ್ರಪ್ರೇಮಿಗಳಿಗೆ ಮತ್ತೆ ನಾಗರಹಾವಿನ ಕ್ರೇಜ್ ಶುರುವಾಗಿದೆ. 45 ವರ್ಷದ ನಂತರ ರೀಕ್ರಿಯೇಷನ್ ಕಮಾಲ್‍ನ ಮೂಲಕ ಹೊಸ ರೂಪದಲ್ಲಿ ಹೊರಬಂದಿರುವ ರಾಮಾಚಾರಿ ರಂಗಿಗೆ ಚಿತ್ರಪ್ರೇಮಿಗಳು ಮೊದಲ ದಿನವೇ ಫಿದಾ ಆಗಿದ್ದಾರೆ. 200ಕ್ಕೂ ಹೆಚ್ಚು ತೆರೆಗಳಲ್ಲಿ ರಂಜಿಸುತ್ತಿರೋ ರಾಮಾಚಾರಿ ಮೊದಲ ದಿನದ ಕಲೆಕ್ಷನ್ ಎಷ್ಟು..? ಹೇಗಿದೆ ಹೆಡೆ ಎತ್ತಿದ ಹಾವಿನ ಹವಾ ಅನ್ನೋದ ಸಂಪೂರ್ಣ ವಿವರ ಇಲ್ಲಿದೆ ಓದಿ...

ರಾಜ್ಯಾದ್ಯಂತ ರಾಮಾಚಾರಿ ಎಂಟ್ರಿಯನ್ನು ಬಹುತೇಕ ಸಿನಿರಸಿಕರು ಎದ್ದು ನಿಂತೇ ಸ್ವಾಗತಿಸಿದ್ದಾರೆ. ಯಾಕಂದರೆ ರಾಮಾಚಾರಿ ಎಂಟ್ರಿ ಅಂದ್ರೇನೇ ಹಾಗೇ. ಅದಕ್ಕೊಂದು ಪವರ್ ಮತ್ತು ಖದರ್ ತಾನಾಗಿಯೇ ಬಂದುಬಿಡುತ್ತದೆ. ನಿನ್ನೆ ಆಗಿದ್ದೂ ಅದೇ. ಚಿತ್ರಮಂದಿರದಲ್ಲೆಲ್ಲ ಪಟಾಕಿಗಳ ಸಿಡಿತ... ಅಭಿಮಾನಿಗಳ ಕುಣಿತ... ಜೈಕಾರದ ಸಂಭ್ರಮ...

ಮತ್ತೆ ರಾಮಾಜಾರಿ ಮ್ಯಾಜಿಕ್ ಶುರುವಾಗಿದೆ. ತಮ್ಮ ನೆಚ್ಚಿನ ನಟನ ಸಿನಿಮಾ ನೋಡಿದ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಈ ಸಿನಿಮಾ ಮೊದಲ ದಿನ ಹೌಸ್‍ಫುಲ್ ಪ್ರದರ್ಶನ ಕಂಡಿದ್ದು, ಜೊತೆಗೆ ಮೊದಲ ದಿನವೇ ಒಂದು ಕೋಟಿ ಕಲೆಕ್ಷನ್ ಮಾಡಿದೆ. ರಾಜ್ಯದ ಹಲವೆಡೆ ಬೆಳಗ್ಗೆ 6 ಗಂಟೆಗೇ ಪ್ರದರ್ಶನ ಆರಂಭವಾಗಿದ್ದು ನಾಲ್ಕೂ ಶೋಗಳಿಗೂ ಹೌಸ್​ಫುಲ್ ಬೋರ್ಡ್‍ಗಳು ರಾರಾಜಿಸಿವೆ.

ಮಾಸ್ಟರ್​ಪೀಸ್​ 'ನಾಗರಹಾವು' ಸಿನಿಮಾವನ್ನು ಮತ್ತೊಮ್ಮೆ ಮಗದೊಮ್ಮೆ ನೋಡಿದಷ್ಟೂ ಚಂದ. ಮತ್ತೆ ಮತ್ತೆ ಸಿಗುವ ಆನಂದ. ಇದನ್ನು ಅನುಭವಿಸೋಕೆ ತಾರೆಯರೂ ಕೂಡ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ನಾಳೆ ಮಧ್ಯಾಹ್ನ ನಾಗರಹಾವಿನ ಹೊಸ ಅವತಾರವನ್ನು ನೋಡೋಕೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ನರ್ತಕಿ ಚಿತ್ರಮಂದಿರಕ್ಕೆ ಬರಲಿದ್ದಾರೆ.

ಬರುವ ದಿನಗಳಲ್ಲಿ ಸ್ಯಾಂಡಲ್‍ವುಡ್‍ನ ಎಲ್ಲ ಸ್ಟಾರ್ ನಟರೂ ಒಬ್ಬೊಬ್ಬರಾಗಿ ರಾಮಾಚಾರಿಯನ್ನು ನೋಡಲಿದ್ದು ಈ ವಾರಾಂತ್ಯದಲ್ಲಿ ಸರಣಿ ಸೆಲೆಬ್ರಿಟಿ ಶೋಗೆ ಓಪನಿಂಗ್ ಕೊಡಲಿದ್ದಾರೆ. ಚಿತ್ರ ನೋಡುವವರ ಸಾಲಿನಲ್ಲಿ ಕಿಚ್ಚ ಸುದೀಪ್, ದಾಸ ದರ್ಶನ್, ರಾಕಿಂಗ್‍ಸ್ಟಾರ್ ಯಶ್, ರೆಬೆಲ್‍ಸ್ಟಾರ್ ಅಂಬಿ ಕೂಡ ಇದ್ದಾರೆ. ಒಟ್ಟಾರೆ ಹೊಸರೂಪದಲ್ಲಿ ಮರುಹುಟ್ಟು ಪಡೆದ ರಾಮಾಚಾರಿ ಮುಂದಿನ ದಿನಗಳಲ್ಲಿ ಇನ್ಯಾವ ದಾಖಲೆ ಬರೆಯುತ್ತೋ ಕಾದು ನೋಡಬೇಕು.
Loading...

 
First published:July 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...