ಸಾಮಾನ್ಯವಾಗಿ ಜನರು ತಮ್ಮ ಕೆಲಸ ಶುರು ಮಾಡಿಕೊಂಡಾಗ, ತಮ್ಮ ಸಂಪಾದನೆಯಲ್ಲಿ ಖರೀದಿಸಿದ ವಾಹನಗಳು (Vehicle) ಅವರಿಗೆ ಜೀವನದ್ದುದ್ದಕ್ಕೂ ನೆನಪಿನಲ್ಲಿ ಉಳಿಯುವಂತದ್ದು ಅಂತ ಹೇಳಿದರೆ ತಪ್ಪಾಗುವುದಿಲ್ಲ. ನಾವು ನಮ್ಮ ಸಂಪಾದನೆಯಲ್ಲಿ ಖರೀದಿಸಿದ ಮೊದಲ ಕಾರು ಅಥವಾ ಬೈಕ್ (Bike) ನಮಗೆ ತುಂಬಾನೇ ಸ್ಪೆಷಲ್ ಆಗಿರುತ್ತದೆ ಅಂತ ಹೇಳಬಹುದು. ಈ ಕ್ರಿಕೆಟ್ ಆಟಗಾರರ ಅಭಿಮಾನಿಗಳಿಗೆ ಮತ್ತು ಚಿತ್ರರಂಗದ ನಟ ಮತ್ತು ನಟಿಯರ ಅಭಿಮಾನಿಗಳಿಗೆ ಅವರ ಮೆಚ್ಚಿನ ತಾರೆಯರು (Stars) ಮೊದಲು ಖರೀದಿಸಿದ್ದ ಕಾರು ಯಾವುದು ಅಂತ ತಿಳಿದುಕೊಳ್ಳಲು ತುಂಬಾನೇ ಕಾತುರತೆ ಇರುತ್ತದೆ ಅಂತ ಹೇಳಬಹುದು.
ಬನ್ನಿ ಹಾಗಾದರೆ ನಮ್ಮ ಭಾರತ ದೇಶದಲ್ಲಿರುವ ಅನೇಕ ಮಂದಿ ಸೆಲೆಬ್ರಿಟಿಗಳು ಖರೀದಿಸಿದ ಮೊದಲ ಕಾರುಗಳು ಯಾವುವು ಅಂತ ತಿಳಿದುಕೊಂಡು ಬರೋಣ.
ಮೊದಲ ಬಾರಿಗೆ ತಮ್ಮ ಸಂಪಾದನೆಯ ಹಣದಲ್ಲಿ ಖರೀದಿಸಿದ ಕಾರುಗಳು ಯಾವಾಗಲೂ ಎಲ್ಲರಿಗೂ ವಿಶೇಷವಾಗಿರುತ್ತವೆ. ಕೆಲವು ಸೆಲೆಬ್ರಿಟಿಗಳು ತಮ್ಮ ಮೊದಲು ಖರೀದಿಸಿದ ಕಾರುಗಳನ್ನು ಹಾಗೆಯೇ ಯಾರಿಗೂ ಮಾರಾಟ ಮಾಡದೆ ತಮ್ಮ ಮನೆಯ ಗ್ಯಾರೆಜ್ ನಲ್ಲಿ ಹಳೆಯ ನೆನಪಿಗಾಗಿ ಅದನ್ನ ಉಳಿಸಿಕೊಂಡಿದ್ದಾರೆ ಅಂತ ಹೇಳಬಹುದು.
ಸೆಲೆಬ್ರಿಟಿಗಳ ಮೊದಲ ಕಾರುಗಳ ವಿವರ ಇಲ್ಲಿದೆ ನೋಡಿ:
ಸಚಿನ್ ತೆಂಡೂಲ್ಕರ್
ಮಾರುತಿ 800
ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಮಾಸ್ಟರ್ ಬ್ಲಾಸ್ಟರ್ ಅಂತ ಖ್ಯಾತಿ ಗಳಿಸಿರುವ ಮಾಜಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಮನೆಯ ಗ್ಯಾರೇಜ್ ಅನೇಕ ರೀತಿಯ ಐಷಾರಾಮಿ ಕಾರುಗಳಿಂದ ತುಂಬಿವೆ ಅಂತ ಹೇಳಬಹುದು.
ಅದರಲ್ಲಿ ಮಾರುತಿ ಕಾರಿನಿಂದ ಹಿಡಿದು ಬಿಎಂಡಬ್ಲ್ಯೂಗಳ ವರೆಗೆ ಎಲ್ಲಾ ರೀತಿಯ ಕಾರುಗಳು ಇವೆ ಅಂತ ಹೇಳಬಹುದು. "ಮಾಸ್ಟರ್ ಬ್ಲಾಸ್ಟರ್" ಸಹ ಆ ತಲೆಮಾರಿನ ಹೆಚ್ಚಿನ ಭಾರತೀಯರಂತೆ ವಿನಮ್ರ ಮಾರುತಿ 800 ನೊಂದಿಗೆ ಅವರ ಈ ಕಾರುಗಳ ಖರೀದಿಯ ಪ್ರಯಾಣ ಶುರು ಮಾಡಿದರು ಅಂತ ಹೇಳಬಹುದು.
ಸಚಿನ್ ತನ್ನ ಮೊದಲ ಕಾರನ್ನು ಖರೀದಿಸಿದ್ದಾಗ ಕ್ರಿಕೆಟ್ ನಲ್ಲಿ ಅವರು ಇನ್ನೂ ಅಷ್ಟೊಂದು ಯಶಸ್ವಿಯಾಗಿರಲಿಲ್ಲ ಅಂತ ಹೇಳಲಾಗುತ್ತದೆ.
ಇಮ್ತಿಯಾಜ್ ಅಲಿ
ಮಾರುತಿ 800
ಬಾಲಿವುಡ್ ಚಲನಚಿತ್ರ ನಿರ್ದೇಶಕ ಇಮ್ತಿಯಾಜ್ ಅಲಿ ಪ್ರಸ್ತುತ ಕೆಲವು ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ. ಆದಾಗ್ಯೂ, ಇಮ್ತಿಯಾಜ್ ತಮ್ಮ ಪ್ರಯಾಣವನ್ನು ವಿನಮ್ರ ಮಾರುತಿ ಎಸ್ಎಸ್ 800 ನೊಂದಿಗೆ ಪ್ರಾರಂಭಿಸಿದರು.
ಇಮ್ತಿಯಾಜ್ ತಮ್ಮ ಯೌವನದ ದಿನಗಳಲ್ಲಿ ಮಾರುತಿ 800 ನಲ್ಲಿ ಕುಳಿತುಕೊಂಡು ಹೋಗುತ್ತಿರುವ ಒಂದು ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.
ರಜನಿಕಾಂತ್
ಪ್ರೀಮಿಯರ್ ಪದ್ಮಿನಿ
ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಸರಳ ಜೀವನಶೈಲಿಗೆ ತುಂಬಾನೇ ಹೆಸರುವಾಸಿಯಾದವರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇತ್ತೀಚೆಗೆ ಅವರು ತಮ್ಮಲ್ಲಿದ್ದ ಇನ್ನೋವಾ ಕಾರನ್ನು ಬದಲಾಯಿಸಿ ಐಷಾರಾಮಿ ಎಸ್‌ಯುವಿಯನ್ನು ಖರೀದಿಸಿದ್ದಾರೆ.
ರಜನಿ ಕುಟುಂಬವು ಅವರ ಮೊದಲ ಕಾರಿನ ಚಿತ್ರವನ್ನು ಪೋಸ್ಟ್ ಮಾಡಿದೆ ನೋಡಿ. ಅದು ಪ್ರೀಮಿಯರ್ ಪದ್ಮಿನಿ ಕಾರು ಆಗಿದ್ದು, ತಮ್ಮ ನಿವಾಸದಲ್ಲಿ ನಿಲ್ಲಿಸಲಾಗಿದೆ. ಇದು ಸೂಪರ್ ಸ್ಟಾರ್ ಅವರ ಮೊದಲ ಕಾರು ಮತ್ತು ಇದು ಇನ್ನೂ ಚೆನ್ನಾಗಿಯೇ ಓಡುತ್ತದೆ ಅಂತ ಹೇಳಲಾಗುತ್ತದೆ.
ಇಟಾಲಿಯನ್ ಮೂಲದ ಫಿಯೆಟ್ ತಯಾರಕರು ಆರಂಭದಲ್ಲಿ ಭಾರತದಲ್ಲಿ ಬಹಳ ಜನಪ್ರಿಯರಾದರು. ಫಿಯೆಟ್ 1100 ಒಂದು ಕುಟುಂಬದ ಸ್ಟೇಟಸ್ ಸಿಂಬಲ್ ಆಯ್ತು ಮತ್ತು ಕಾರಿನ ವಿನ್ಯಾಸವು ಬಹಳಷ್ಟು ಜನರನ್ನು ತನ್ನೆಡೆಗೆ ಆಕರ್ಷಿಸಿತು. ಇಂದಿಗೂ, ಫಿಯೆಟ್ 1100 ಅನ್ನು ಪರಿಪೂರ್ಣ ಸ್ಥಿತಿಯಲ್ಲಿಟ್ಟಿರುವ ಅನೇಕ ಉತ್ಸಾಹಿಗಳು ಇದ್ದಾರೆ.
ಕಾಜೋಲ್
ಮಾರುತಿ 1000
ಬಾಲಿವುಡ್ ನಟಿ ಕಾಜೋಲ್ ಪ್ರಸ್ತುತ ಬಿಎಂಡಬ್ಲ್ಯು ಎಕ್ಸ್ 7 ಕಾರನ್ನು ಹೊಂದಿದ್ದಾರೆ ಮತ್ತು ಆಗಾಗ್ಗೆ ತಮ್ಮ ಕುಟುಂಬದೊಂದಿಗೆ ಎಸ್‌ಯುವಿಯಲ್ಲಿ ತಿರುಗಾಡುವುದನ್ನು ಫೋಟೋದಲ್ಲಿ ಅಥವಾ ವೀಡಿಯೋದಲ್ಲಿ ನೋಡಿರುತ್ತೇವೆ.
ಅವರ ಮೊದಲ ಕಾರು ಭಾರತದ ಮಾರುತಿಯ ಮೊದಲ ಸೆಡಾನ್ - 1000 ಆಗಿತ್ತು. ಮಾರುತಿ ಸುಜುಕಿ 1000 ಪ್ರೀಮಿಯಂ ಸೆಡಾನ್ ಆಗಿದ್ದು, 1990 ರ ದಶಕದಲ್ಲಿ 4 ಲಕ್ಷ ರೂಪಾಯಿ ಬೆಲೆಯನ್ನು ಹೊಂದಿತ್ತು.
ಆಗ ಇದನ್ನು ಪ್ರೀಮಿಯಂ ಮೊತ್ತವೆಂದು ಪರಿಗಣಿಸಲಾಗಿತ್ತು. ಶೀಘ್ರದಲ್ಲೇ ಮಾರುತಿ ಸುಜುಕಿ 1000 ಅನ್ನು ಎಸ್ಟೀಮ್ ನೊಂದಿಗೆ ಬದಲಾಯಿಸಲಾಯಿತು, ಇದು ಮತ್ತೆ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯವಾಯಿತು.
ಸಾರಾ ಅಲಿ ಖಾನ್
ಹೋಂಡಾ CR-V
ಸಾರಾ ಅಲಿ ಖಾನ್ ಯಾವಾಗಲೂ ಐಷಾರಾಮಿ ಬ್ರ್ಯಾಂಡ್ ಗಳಿಗಿಂತ ಸಿಂಪಲ್ ಆಗಿರುವಂತಹ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಾರಾ ಬಿಳಿ ಬಣ್ಣದ, ಹಳೆಯ ತಲೆಮಾರಿನ ಕಾರಾದ ಹೋಂಡಾ ಸಿಆರ್-ವಿ ಹೊಂದಿದ್ದು ಇದರಲ್ಲಿ 2.4 ಲೀಟರಿನ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.
ಇತ್ತೀಚೆಗೆ, ಸಾರಾ ಅಲಿ ಖಾನ್ ಹೊಚ್ಚ ಹೊಸ ಜೀಪ್ ಕಂಪಾಸ್ ಅನ್ನು ಸಹ ಖರೀದಿಸಿದ್ದಾರೆ, ಇದು ಈಗ ಅವರ ನೆಚ್ಚಿನ ಸವಾರಿಯಾಗಿದೆ.
ದೀಪಿಕಾ ಪಡುಕೋಣೆ
ಆಡಿ ಕ್ಯೂ7
ಬಾಲಿವುಡ್ ನ ಇನ್ನೊಬ್ಬ ಜನಪ್ರಿಯ ನಟಿ ದೀಪಿಕಾ ಪಡುಕೋಣೆ ಈಗ ಒಂದೆರಡು ಮೇಬ್ಯಾಚ್ ಕಾರುಗಳನ್ನು ಹೊಂದಿದ್ದರೆ, ಅವರು 2011 ರಲ್ಲಿ ಖರೀದಿಸಿದ ಆಡಿ ಕ್ಯೂ 7 ಅವರ ಮೊದಲ ಕಾರಾಗಿತ್ತು ಅಂತ ಹೇಳಬಹುದು.
ಈ ಕ್ಯೂ 7 ಸಹ ಹಿಂದಿನ ಪೀಳಿಗೆಗೆ ಸೇರಿದ್ದು, 3.0 ಲೀಟರಿನ ವಿ6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 240 ಬಿ ಹೆಚ್ ಪಿ ಪವರ್ ಹಾಗೂ 550 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ.
ಶ್ರದ್ಧಾ ಕಪೂರ್
ಮರ್ಸಿಡಿಸ್-ಬೆಂಝ್ ಎಂಎಲ್-ಕ್ಲಾಸ್
ನಟಿ ಶ್ರದ್ಧಾ ಕಪೂರ್ ತಮ್ಮ ಚಲನಚಿತ್ರಗಳ ಯಶಸ್ಸಿನ ನಂತರ ಮರ್ಸಿಡಿಸ್ ಎಂಎಲ್ 250 ಅನ್ನು ತಮಗೆ ಉಡುಗೊರೆಯಾಗಿ ಖರೀದಿಸಿಕೊಂಡರು.
ಎಂಎಲ್ 250 ಬೆಂಝ್ 2.2 ಲೀಟರಿನ ಎಂಜಿನ್ ಸಹಾಯದಿಂದ 203 ಬಿ ಹೆಚ್ ಪಿ ಪವರ್ ಮತ್ತು 500 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮಾದರಿಯನ್ನು ಈಗ ಸ್ಥಗಿತಗೊಳಿಸಲಾಗಿದೆ ಮತ್ತು ಜಿಎಲ್ಇಯಿಂದ ಬದಲಾಯಿಸಲಾಗಿದೆ.
ಇದು ಮೂಲತಃ ಅದರ ನವೀಕೃತವಾಗಿದೆ. ಕಂಪನಿಯು ಹೊಸ ಹೆಸರನ್ನು ಬದಲಾಯಿಸುವ ತಂತ್ರವನ್ನು ಅಳವಡಿಸಿಕೊಳ್ಳಬೇಕಾಗಿರುವುದರಿಂದ, ಕಾರನ್ನು ಜಿಎಲ್ಇ ಎಂದು ಕರೆಯಲಾಗುತ್ತದೆ.
ಆಲಿಯಾ ಭಟ್
ಆಡಿ ಕ್ಯೂ7
ಡಾರ್ಲಿಂಗ್ಸ್ ಚಿತ್ರದ ನಟಿ ಆಲಿಯಾ ಭಟ್ ಅವರು ಪ್ರಸ್ತುತ ರೇಂಜ್ ರೋವರ್ ಅನ್ನು ಹೊಂದಿದ್ದಾರೆ ಮತ್ತು ಪಟ್ಟಣವನ್ನು ಸುತ್ತಲು ಯಾವಾಗಲೂ ಬೃಹತ್ ಎಸ್‌ಯುವಿಯನ್ನು ಬಳಸುತ್ತಾರೆ. ಆಲಿಯಾ ಕೂಡ ಆಡಿ ಕ್ಯೂ 7 ಕಾರನ್ನು ತನ್ನ ಮೊದಲ ಕಾರಾಗಿ ಖರೀದಿಸಿದ್ದಾರೆ. ಅವರು ಅದನ್ನು ಮೊದಲು ಖರೀದಿಸಿದಾಗ ಅದರ ಫೋಟೋವೊಂದನ್ನು ಕ್ಲಿಕ್ಕಿಸಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು.
ಕ್ಯೂ 7 ಅವರ ಪರ್ಸನಲ್ ಕಾರು ಕೂಡ ಆಗಿತ್ತು ಮತ್ತು ದೈನಂದಿನ ಪ್ರಯಾಣಕ್ಕಾಗಿ ವ್ಯಾಪಕವಾಗಿ ಬಳಸಲಾಗುತ್ತಿತ್ತು. ಲ್ಯಾಂಡ್ ರೋವರ್ ರೇಂಜ್ ರೋವರ್ ಅವರ ಗ್ಯಾರೇಜ್ ಗೆ ಇತ್ತೀಚಿನ ಸೇರ್ಪಡೆಯಾಗಿದೆ.
ಕಂಗನಾ ರನೌತ್
ಬಿಎಂಡಬ್ಲ್ಯೂ 7-ಸೀರಿಸ್
ನಟಿ ಕಂಗನಾ ರನೌತ್ ಇತ್ತೀಚೆಗೆ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಅನ್ನು ಖರೀದಿಸಿದ್ದಾರೆ. ಅವರ ಮೊದಲ ಕಾರು ಬಿಎಂಡಬ್ಲ್ಯು 7-ಸೀರಿಸ್ ಐಷಾರಾಮಿ ಸೆಡಾನ್ ಆಗಿತ್ತು. ಇದನ್ನು ಅವರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಮತ್ತು ಪಾರ್ಟಿಗಳ ಸ್ಥಳಗಳನ್ನು ತಲುಪಲು ವ್ಯಾಪಕವಾಗಿ ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ, ಅವರು ಮರ್ಸಿಡಿಸ್ ಬೆಂಝ್ ಜಿಎಲ್ಇ ಮತ್ತು ಇತರ ಹೈ ಎಂಡ್ ಐಷಾರಾಮಿ ಕಾರುಗಳನ್ನು ಸಹ ಖರೀದಿಸಿದ್ದಾರೆ ಅಂತ ಹೇಳಲಾಗುತ್ತಿದೆ.
ಪ್ರಿಯಾಂಕಾ ಚೋಪ್ರಾ
ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್
ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಹೊಂದಿದ್ದ ಮೊದಲ ಬಾಲಿವುಡ್ ನಟಿ ಎಂಬ ಹೆಗ್ಗಳಿಕೆಗೆ ಹಾಲಿವುಡ್ ನ ದೇಸಿ ಹುಡುಗಿ ಪಾತ್ರರಾಗಿದ್ದಾರೆ. ನಿಕ್ ಜೊನಾಸ್ ಅವರೊಂದಿಗಿನ ಮದುವೆಯ ನಂತರ, ಅವರು ಶಾಶ್ವತವಾಗಿ ಯುಎಸ್ಎಗೆ ಸ್ಥಳಾಂತರಗೊಂಡಿದ್ದಾರೆ. ಯುಎಸ್ಎಯಲ್ಲಿ, ಅವರು ಮರ್ಸಿಡಿಸ್-ಮೇಬ್ಯಾಚ್ ಎಸ್ 600 ಲಿಮೋಸಿನ್ ಕಾರಿನಲ್ಲಿ ಓಡಾಡುತ್ತಾರೆ. ಅವರ ಮೊದಲ ಕಾರು ಬಿಳಿ ಬಣ್ಣದ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಸೆಡಾನ್ ಆಗಿತ್ತು.
ಇತರ ಹೈ ಎಂಡ್ ಕಾರುಗಳಿಗೆ ಅಪ್ಗ್ರೇಡ್ ಆಗುವ ಮೊದಲು ಅವರು ಅದನ್ನು ಹಲವಾರು ವರ್ಷಗಳ ಕಾಲ ಬಳಸಿದರು. ಯುಎಸ್ಎಯಲ್ಲಿ, ಅವರು ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.
ಕತ್ರಿನಾ ಕೈಫ್
ಆಡಿ ಕ್ಯೂ7
ಸುಂದರ ನಟಿ ಅಂತಾನೆ ಹೆಸರುವಾಸಿಯಾಗಿರುವ ಕತ್ರಿನಾ ಕೈಫ್ ತಾವು ಓಡಾಡುವ ಕಾರಿನ ಆಯ್ಕೆಯ ವಿಷಯಕ್ಕೆ ಬಂದಾಗ ಅವರ ಯಶಸ್ಸು ಮತ್ತು ಗೆಳೆಯರಿಗೆ ಹೋಲಿಸಿದರೆ ತುಂಬಾನೇ ಒಳ್ಳೆಯ ಆಯ್ಕೆಗಳನ್ನು ಹೊಂದಿದ್ದಾರೆ ಅಂತ ಹೇಳಬಹುದು.
ಅವರ ಮೊದಲ ಕಾರು ಆಡಿ ಕ್ಯೂ 7 ಆಗಿತ್ತು ಮತ್ತು ಅದನ್ನು ಯಾವಾಗಲೂ ಬಳಸುತ್ತಿದ್ದರು. ಸಲ್ಮಾನ್ ಖಾನ್ ಆಕೆಗೆ ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ