• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bhajarangi 2 Teaser: ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದ ಭಜರಂಗಿ-2 ಟೀಸರ್​; ಎಷ್ಟು ವೀಕ್ಷಣೆ ಕಂಡಿದೆ?

Bhajarangi 2 Teaser: ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದ ಭಜರಂಗಿ-2 ಟೀಸರ್​; ಎಷ್ಟು ವೀಕ್ಷಣೆ ಕಂಡಿದೆ?

ಶಿವರಾಜ್ ಕುಮಾರ್

ಶಿವರಾಜ್ ಕುಮಾರ್

Bhajarangi 2 Teaser: 24 ಗಂಟೆಗಳ ಒಳಗೆ ಅತಿ ಹೆಚ್ಚು ವೀಕ್ಷಣೆಕಂಡ ಕೆಲವೇ ಕೆಲವು ಕನ್ನಡ ಸಿನಿಮಾ ಟೀಸರ್​ಗಳ ಪೈಕಿ ಭಜರಂಗಿ-2 ಕೂಡ ಒಂದಾಗಿದೆ.

  • Share this:

ನಟ ಶಿವ ರಾಜ್​ಕುಮಾರ್​ ಜು.12 ರಂದು 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಭಜರಂಗಿ-2 ಚಿತ್ರತಂಡ ಟೀಸರ್​ ಅನ್ನು ಬಿಡುಗಡೆ ಮಾಡಿದೆ. ಆ ಮೂಲಕ ಶಿವಣ್ಣನ ಕಡೆಯಿಂದ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದೆ. ಇದೀಗ ಬಿಡುಗಡೆಗೊಂಡ ಟೀಸರ್​ ಯ್ಯೂಟೂಬ್​ನಲ್ಲಿ ಅಧಿಕ ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ.


ಎ ಹರ್ಷ ನಿರ್ದೇಶನದಲ್ಲಿ ಭಜರಂಗಿ 2 ಸಿನಿಮಾ ಮೂಡಿ ಬರುತ್ತಿದೆ. ಶಿವಣ್ಣ ಭಜರಂಗಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಮಲಯಾಳಂ ನಟಿ ಭಾವನಾ ನಟಿಸಿದ್ದಾರೆ. ಬಿಡುಗಡೆಗೊಂಡ ಟೀಸರ್​ ವಿಭಿನ್ನವಾಗಿದ್ದು, ಎ2 ಮ್ಯೂಸಿಕ್​ ಯ್ಯೂಟೂಬ್​ ಖಾತೆಯಲ್ಲಿ ಬಿಡುಗಡೆಗೊಂಡಿದೆ. ಈಗಾಗಲೇ 11 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. 24 ಗಂಟೆಗಳ ಒಳಗೆ ಅತಿ ಹೆಚ್ಚು ವೀಕ್ಷಣೆಕಂಡ ಕೆಲವೇ ಕೆಲವು ಕನ್ನಡ ಸಿನಿಮಾ ಟೀಸರ್​ಗಳ ಪೈಕಿ ಭಜರಂಗಿ-2 ಕೂಡ ಒಂದಾಗಿದೆ.


ಭಜರಂಗಿ 2 ಸಿನಿಮಾ ಜಯಣ್ಣ, ಭೋಗೇಂದ್ರ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್​ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕೊರೋನಾ ಎಲ್ಲವೂ ಮುಗಿದ ನಂತರ ಭಜರಂಗಿ 2 ಸಿನಿಮಾ ತೆರೆಮೇಲೆ ಬರಲಿದೆ.


ಶಿವ ರಾಜ್​ಕುಮಾರ್​ ಸ್ಯಾಂಡಲ್​ವುಡ್​​ನ ಎನರ್ಜಿಟಿಕ್​ ನಟ ಎಂದು ಗುರುತಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ, ಹ್ಯಾಟ್ರಿಕ್​ ಹೀರೋ, ಸೆಂಚುರಿ ಸ್ಟಾರ್​ ಎಂಬ ಬಿರುದುಗಳಿಂದ ಅಭಿಮಾನಿಗಳು ಶಿವ ರಾಜ್​ಕುಮಾರ್​ ಅವರನ್ನು ಕರೆಯುತ್ತಾರೆ. ತಮ್ಮ ನಟನೆಯಿಂದ ಪ್ರೇಕ್ಷಕರನ್ನು ಸೆಳೆಯುವ ಶಿವ ರಾಜ್​ಕುಮಾರ್​ ಕೈಯಲ್ಲಿ ಸಾಕಷ್ಟು ಸಿನಿಮಾಗಳಿದ್ದು, ಮುಂದಿನ ದಿನಗಳಲ್ಲಿ ಆ ಸಿನಿಮಾಗಳ ಮೂಲಕ ತೆರೆಮೇಲೆ ಮೋಡಿ ಮಾಡಲಿದ್ದಾರೆ.
ಭಜರಂಗಿ ಸಿನಿಮಾದಲ್ಲಿ ಯಶಸ್ಸು ಕಂಡ ನಂತರ ನಿರ್ದೇಶಕ ಎ ಹರ್ಷ ಭಜರಂಗಿ 2 ಸಿನಿಮಾವನ್ನು ಮಾಡಲು ಹೊರಟಿದ್ದಾರೆ. ಈ ಸಿನಿಮಾದಲ್ಲಿ ಶಿವ ರಾಜ್​ಕುಮಾರ್ ಅವರನ್ನು ವಿಭಿನ್ನವಾಗಿ ತೋರಿಸಲಾಗಿದೆ. ಮತ್ತೊಮ್ಮೆ ಶಿವಣ್ಣ ತೆರೆ ಮೇಲೆ ಧೂಳೆಬ್ಬಿಸಲ್ಲಿದ್ದಾರೆ ಎಂಬುದು ಟೀಸರ್​ ನೋಡಿದ ಅಭಿಮಾನಿಗಳು ಮಾತನಾಡುತ್ತಿದ್ದಾರೆ.


ಸ್ಯಾಂಡಲ್​ವುಡ್​ ಖ್ಯಾತ ನಟನ ತಾಯಿಗೆ ಕೊರೋನಾ ಪಾಸಿಟಿವ್​!

First published: