Jackky Bhagnani: ನಿಧಿ ಸುಬ್ಬಯ್ಯರ ಬಾಲಿವುಡ್​ ಸಿನಿಮಾ ನಾಯಕನ ವಿರುದ್ಧ ದಾಖಲಾಯ್ತು ಅತ್ಯಾಚಾರದ ದೂರು

ಖ್ಯಾತ ನಟ, ಮಾಡೆಲ್​ ಆಗಿರುವ ಜಾಕಿ ಭಗ್ನಾನಿ ಜೊತೆ ಕನ್ನಡ ನಟಿ ನಿಧಿ ಸುಬ್ಬಯ್ಯ ನಟಿಸಿದ್ದರು

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
   ಬಾಲಿವುಡ್​ನ ಮಾಡೆಲ್​ ಜಾಕಿ ಭಗ್ನಾನಿ ಸೇರಿದಂತೆ ಹಿಂದಿ ಚಿತ್ರರಂಗದ 9 ಜನರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಈ ಸಂಬಂಧ ಪೊಲೀಸರು ಎಫ್​ಐಆರ್​ ಕೂಡ ದಾಖಲಿಸಿದ್ದಾರೆ. ಗೀತಾ ರಚನೆಕಾರ ಹಾಗೂ ಮಾಜಿ ಮಾಡೆಲ್​ ಈ ಸಂಬಂಧ ದೂರು ದಾಖಲಿಸಿದ್ದಾರೆ. ಈ ದೂರಿನ ಪ್ರತಿ ಸಿಎನ್​ಎನ್​ ನ್ಯೂಸ್​ 18ಗೆ ಲಭ್ಯವಾಗಿದೆ. ಬಾಲಿವುಡ್​ನ ಖ್ಯಾತ ಪ್ರೋಟೋಗ್ರಾಫರ್​ ಆಗಿರುವ ಕೊಲ್ಸ್ಟನ್​ ಜೂಲಿಯನ್​, ಟಿ ಸೀರಿಸ್​ನ ಕಿಶನ್​ ಕುಮಾರ್​, ಕ್ವಾನ್​ನ ಸಹ ಸಂಸ್ಥಾಪಕರಾಗಿರುವ ಅನಿರ್ಬನ್​ ದಾಸ್​ ಬ್ಲಾಹ್​ ಹೆಸರು ಕೂಡ ಎಫ್​ಐಆರ್​ ಅಲ್ಲಿ ದಾಖಲಾಗಿದೆ. ಇದರ ಜೊತೆಗೆ ನಿಖಿಲ್​ ಕಾಮತ್​, ಶೀಲ್​ ಗುಪ್ತಾ, ಅಜಿತ್​ ಠಾಕೂರ್​, ಗುರುಜ್ಯೋತ್​ ಸಿಂಗ್​ ಹಾಗೂ ವಿಷ್ಣು ವಾರ್ಧನ್​ ಇಂದೂರಿ ಹೆಸರು ಕೂಡ ದಾಖಲಾಗಿದೆ.

  ಹಿಂದಿ ಚಿತ್ರರಂಗದ ಘಟಾನುಘಟಿಗಳ ವಿರುದ್ಧ ಪೊಲೀಸ್​ರು ದೂರು ದಾಖಲಿಸಿರುವ ಬಗ್ಗೆ ಬಾಂದ್ರಾ ಪೊಲೀಸ್​ ಠಾಣೆಯ ಹಿರಿಯ ಪೊಲೀಸ್​ ಇನ್ಸ್​ಪೆಕ್ಟರ್​ ಖಚಿತ ಪಡಿಸಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನೀಡಿಲ್ಲ. ಅಲ್ಲದೇ, ಪ್ರಕರಣ ಕುರಿತು ಯಾರನ್ನು ಇದುವರೆಗೂ ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.

  2015ರಲ್ಲಿ ಈ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಎಫ್​ಐಆರ್​ನಲ್ಲಿ ತಿಳಿಸಲಾಗಿದೆ. ಖ್ಯಾತ ಮಾಡೆಲ್​ ಜಾಕಿ ಭಗ್ನಾನಿ ಬಾಂದ್ರಾದಲ್ಲಿ ಸಂತ್ರಸ್ತೆಗೆ ಕಿರುಕುಳ ನೀಡಿದ್ದರೆ, ನಿಖಿಲ್​ ಕಾಮತ್​ ಸ್ಯಾಂಟಾ ಕ್ರೂಜ್​ನ ಐಷಾರಾಶಿ ಹೋಲೆನಲ್ಲಿ ದೌರ್ಜನ್ಯ ಎಸಗಿದ್ದಾರೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ, 2014 ರಿಂದ 2018ರಲ್ಲಿ ಫೋಟೋಗ್ರಾಫರ್​ ಕೋಲ್ಸ್ಟಮ್​ ಜೂಲಿಯನ್​ ಹಲವು ಬಾರಿ ಅತ್ಯಾಚಾ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
  ದೂರಿನ ಕುರಿತು ಐಪಿಸಿ ಸೆಕ್ಷನ್​ 378 (ಎನ್​), 354 ಮತ್ತು 378 ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಶೀಘ್ರದಲ್ಲಿಯೇ ಆರಂಭಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

  ನಿಧಿ ಸುಬ್ಬಯ್ಯ ಜೊತೆ ನಟಿಸಿದ್ದ ಜಾಕಿ ಭಗ್ನಾನಿ

  ಖ್ಯಾತ ನಟ, ಮಾಡೆಲ್​ ಆಗಿರುವ ಜಾಕಿ ಭಗ್ನಾನಿ ಜೊತೆ ಕನ್ನಡ ನಟಿ ನಿಧಿ ಸುಬ್ಬಯ್ಯ ನಟಿಸಿದ್ದರು. ನಿಧಿ ಸುಬ್ಬಯ್ಯ ಅವರ ಬಾಲಿವುಡ್​ ಸಿನಿಮಾ 'ಅಜಬ್​ ಗಜಬ್​ ಲವ್​' ಸಿನಿಮಾದಲ್ಲಿ  ಜಾಕಿ ಭಗ್ನಾನಿ ಹೀರೋ ಆಗಿ ನಟಿಸಿದ್ದರು.2012 ರಲ್ಲಿ ಈ ಚಿತ್ರ ತೆರೆಗೆ ಬಂದಿತು. ಇದಾದ ಬಳಿಕ ಇಬ್ಬರ ನಡುವೆ ಗಾಢ ಸ್ನೇಹ ಉಂಟಾಗಿತ್ತು.  ಅಷ್ಟೇ ಅಲ್ಲದೇ ಇವರಿಬ್ಬರು ಡೇಟಿಂಗ್​ ನಡೆಸುತ್ತಿದ್ದರು ಎಂಬ ಸುದ್ದಿ ಕೂಡ ಬಿ ಟೌನ್​ನಲ್ಲಿ ಹರಡಿತ್ತು. ಆದರೆ, ಇಬ್ಬರ ನಡುವೆ ಹೊಂದಾಣಿಕೆ ಸಮಸ್ಯೆಯಿಂದಾಗಿ ಇವರು ಬ್ರೇಕ್​ ಅಪ್​ ಆದರು ಎನ್ನುವ ಮಾತು ಬಿ ಟೌನ್​ ಮಂದಿ ಇಂದ ಬಂದಿತ್ತು. ಇದಾದ ಬಳಿಕ ನಿಧಿ ತಮ್ಮ ಗೆಳೆಯನ ಜೊತೆ ಸಪ್ತಪದಿ ತುಳಿದಿದ್ದುರು. ಇತ್ತೀಚೆಗೆ ಅವರು ಬಿಗ್​ ಬಾಸ್​ ಕನ್ನಡದಲ್ಲಿಯೂ ಭಾಗಿಯಾಗಿ ಎಲ್ಲರ ಮನಗೆದ್ದಿದ್ದರು.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
  Published by:Seema R
  First published: