ವಿಕ್ಕಿ ಕೌಶಲ್(Vicky Kaushal) ಇತ್ತೀಚೆಗೆ ಕತ್ರಿನಾ ಕೈಫ್(Katrina Kaif) ಜತೆ ಮದುವೆಯಾಗಿ ಆರಾಮಾಗಿದ್ದಾರೆ. ಕತ್ರಿನಾ ಕೈಫ್ ಕೂಡ ಆರಾಮಾಗಿ ಶೂಟಿಂಗ್ನಲ್ಲಿ ಭಾಗವಹಿಸುತ್ತಿದ್ದಾರೆ. ವಿಕ್ಕಿ ಕೌಶಲ್ ಕೂಡ ಸಿನಿಮಾ ಶೂಟಿಂಗ್(Shooting)ನಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಅವರ ಮೇಲೆ ಎಫ್ಐಆರ್(FIR) ದಾಖಲಾಗಿದೆ. ಅರೇ ಇದೆನಪ್ಪಾ.. ಮದುವೆಯಾಗಿ ಜುಮ್ ಅಂತ ಇರಬೇಕಿದ್ದವರು, ಹೀಗೆ ಸುಮ್ಮನೆ ಕೇಸ್-ಗೀಸ್ ಅಂತ ಅಲೆಯೋ ಹಾಗೇ ಆಯ್ತಲ್ಲಾ ಅಂತ ಇದ್ದೀರಾ..ಹೌದು, ಏನು ಮಾಡುವುದಕ್ಕೆ ಆಗಲ್ಲ. ಯಾರದ್ದೋ ತಪ್ಪಿಗೆ ಇದೀಗ ವಿಕ್ಕಿ ಕೌಶಲ್ ಮೇಲೆ ಕೇಸ್ ದಾಖಲಾಗಿದೆ. ತಮ್ಮ ಪಾಡಿಗೆ ಶೂಟಿಂಗ್ನಲ್ಲಿ ಭಾಗವಹಿಸಿದ್ದಕ್ಕೆ ವಿಕ್ಕಿ ವಿರುದ್ಧ ದೂರು ದಾಖಲಾಗಿದೆ. ನಿರ್ದೇಶಕ(Director)ರು ಹೇಳಿದ್ದನ್ನು ಮಾಡಿದ್ದಕ್ಕೆ ಕೇಸ್ ದಾಖಲಾಗಿದೆ. ಸಾರಾ ಜೊತೆ ಬೈಕ್(Bike) ಹತ್ತಿ ಗಲ್ಲಿ ಗಲ್ಲಿ ಸುತ್ತಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂದೋರ್(Indoor)ನಲ್ಲಿ ವಿಕ್ಕಿ ಕೌಶಲ್ ಅಕ್ರಮವಾಗಿ ತಮ್ಮ ನಂಬರ್ ಪ್ಲೇಟ್(Number Plate) ನಕಲಿಸಿದ್ದಾರೆ ಎಂದು ವ್ಯಕ್ತಿಯೋರ್ವರು ಪೊಲೀಸ್ ಕಂಪ್ಲೇಂಟ್ ನೀಡಿದ್ದಾರೆ. ಮೋಟಾರ್ ಸೈಕಲ್ ಆಕ್ಟ್(Motor Cycle Act) ಅನ್ವಯ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶೂಟಿಂಗ್ನಲ್ಲಿ ಬೈಕ್ ಓಡಿಸಿದ್ದಕ್ಕೆ ಎಫ್ಐಆರ್!
ವಿಕ್ಕಿ ಕೌಶಲ್ ಇಂದೋರ್ನ ಗಲ್ಲಿಗಳಲ್ಲಿ ಸಹ ನಟಿ ಸಾರಾ ಅಲಿ ಖಾನ್ ಜತೆ ಬೈಕ್ನಲ್ಲಿ ಸುತ್ತಾಡಿದ್ದರು. ಇದು ಚಿತ್ರೀಕರಣದ ಉದ್ದೇಶದಿಂದ ಮಾಡಿದ್ದಾಗಿತ್ತು. ಇದೇ ವೇಳೆ ಚಿತ್ರತಂಡ ಮಾಡಿದ ಎಡವಟ್ಟಿಗೆ ಈಗ ವಿಕ್ಕ ಕೌಶಲ್ ತಲೆದಂಡವಾಗಿದೆ. ವಿಕ್ಕಿ-ಕೌಶಲ್ ಹಾಗೂ ನಟಿ ಸಾರಾ ಅಲಿ ಖಾನ್ ಸಿನಿಮಾದ ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಬೈಕ್ ಚಲಾಯಿಸುವ ದೃಶ್ಯವಿತ್ತು. ಬೈಕ್ ಓಡಿಸಿಕೊಂಡು ವಿಕ್ಕಿ ಕೌಶಲ್ ಸಾರಾ ಅಲಿ ಖಾನ್ ಅವರ ಜೊತೆ ಮಾತನಾಡಿಕೊಂಡು ತೆರಳುವ ಸೀನ್ ಅದು. ಈ ದೃಶ್ಯ ಶೂಟಿಂಗ್ ಫೋಟೋಗಳು ಸಖತ್ ವೈರಲ್ ಕೂಡ ಆಗಿತ್ತು. ಆದರೆ, ಜೈಸಿಂಗ್ ಯಾದವ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದಾನೆ.
ಇದನ್ನು ಓದಿ: ಇದು ಸಿನಿಮಾ ಮಂದಿಯ ಫೆವರೇಟ್ ಸ್ಪಾಟ್: ಶೂಟಿಂಗ್ಗಂತೂ ಮಸ್ತ್ ಲೊಕೇಶನ್!
ಗಾಡಿ ನಂಬರ್ ಫೋರ್ಜರಿ ಮಾಡಿದ್ದಾರೆ ಅಂತ ದೂರು!
ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ಸಂಚರಿಸುತ್ತಿದ್ದ ಗಾಡಿಯ ನಂಬರ್ ಪ್ಲೇಟ್ ತಮ್ಮ ಗಾಡಿಯದ್ದಾಗಿದೆ ಎಂದು ದೂರುದಾರ ಜೈ ಸಿಂಗ್ ಯಾದವ್ ಹೇಳಿದ್ದಾರೆ. ಚಿತ್ರತಂಡಕ್ಕೆ ಈ ಕುರಿತು ಅರಿವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮತ್ತೊಬ್ಬರ ನಂಬರ್ ಪ್ಲೇಟ್ ಅನ್ನು ಅನುಮತಿಯಿಲ್ಲದೇ ಅಕ್ರಮವಾಗಿ ಬಳಸುವುದು ತಪ್ಪು ಎಂದು ಯಾದವ್ ಹೇಳಿದ್ದಾರೆ. ಅಲ್ಲದೇ ಈ ಕುರಿತು ಅವರು ಪೂರಕ ದಾಖಲೆಗಳನ್ನೂ ಒದಗಿಸಿದ್ದಾರೆ.ಈ ಕುರಿತು ಪೊಲೀಸರು ಪ್ರತಿಕ್ರಿಯಿಸಿದ್ದು, ದೂರು ದಾಖಲಾಗಿದ್ದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಮೊಟಾರ್ ಸೈಕಲ್ ಕಾಯ್ದೆಯ ಅನ್ವಯ ತನಿಖೆ ಮಾಡಲಾಗುವುದು. ಚಿತ್ರತಂಡ ಇಂದೋರ್ನಲ್ಲಿಯೇ ಇದ್ದರೆ ಅವರನ್ನು ಸಂಪರ್ಕಿಸಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಇದನ್ನು ಓದಿ : ಗುಡ್ ನ್ಯೂಸ್ ಕೊಟ್ಟ ಸಂಜನಾ ಗಲ್ರಾನಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ `ಗಂಡ-ಹೆಂಡತಿ’!
ತನ್ನದಲ್ಲ ತಪ್ಪಿಗೆ ವಿಕ್ಕಿ ಕೌಶಲ್ಗೂ ಸಂಕಷ್ಟ!
ವಿಕ್ಕಿ ಕೌಶಲ್ ಮದುವೆಯಾದ ಬಳಿಕ ಈ ಸಿನಿಮಾದ ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ಇದೀಗ ತಾನು ಮಾಡದ ತಪ್ಪಿಗೆ ಇದೀಗ ಶಿಕ್ಷೆ ಅನುಭವಿಸುತ್ತಿದ್ದಾರೆ. ಚಿತ್ರತಂಡದ ತಪ್ಪಿಗೆ ವಿಕ್ಕಿ ಮೇಲೆ ಕೇಸ್ ದಾಖಲಾಗಿದೆ. ಯಾರೋ ತಂದು ಕೊಟ್ಟ ಬೈಕ್ ಓಡಿಸಿ ಪೇಚಿಗೆ ಸಿಲುಕಿದ್ದಾರೆ. ಇನ್ನೂ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಬಗ್ಗೆ ಪರ, ವಿರೋಧದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ