HOME » NEWS » Entertainment » FIR REGISTERED AGAINST CAR DRIVER IN DIRECTOR RAJENDRA SINGH BABU RISHIKA SINGH AND ACTOR JAI JAGADISH DAUGHTERS CAR ACCIDENT CASE AE

ರಾಜೇಂದ್ರ ಸಿಂಗ್ ಬಾಬು, ಜೈ ಜಗದೀಶ್ ಮಕ್ಕಳ ಕಾರು ಅಪಘಾತ ಪ್ರಕರಣ: ಕಾರು ಚಾಲಕನ ವಿರುದ್ಧ ಎಫ್​ಐಆರ್​ ದಾಖಲು

ಸ್ಯಾಂಡಲ್​ವುಡ್ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಮತ್ತು ನಟ ಜೈ ಜಗದೀಶ್ ಅವರ ಮಕ್ಕಳ ಕಾರು ಅಪಘಾತ ಸಂಬಂಧ ನಟಿ ರೋಹಿಣಿ (ರಿಷಿಕಾ) ಸಿಂಗ್ ದೂರು ನೀಡಿದ್ದಾರೆ‌. ಕಾರು ಚಾಲಕನ ಅಜಾಗರೂಕತೆಯಿಂದಲೇ ಈ ಅಪಘಾತ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

news18-kannada
Updated:July 31, 2020, 8:31 PM IST
ರಾಜೇಂದ್ರ ಸಿಂಗ್ ಬಾಬು, ಜೈ ಜಗದೀಶ್ ಮಕ್ಕಳ ಕಾರು ಅಪಘಾತ ಪ್ರಕರಣ: ಕಾರು ಚಾಲಕನ ವಿರುದ್ಧ ಎಫ್​ಐಆರ್​ ದಾಖಲು
ಅರ್ಪಿತಾ- ರಿಷಿಕಾ ಸಿಂಗ್ ಮತ್ತು ಆ್ಯಕ್ಸಿಡೆಂಟ್ ಆದ ಕಾರು
  • Share this:
ಸ್ಯಾಂಡಲ್​ವುಡ್ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಮತ್ತು ನಟ ಜೈ ಜಗದೀಶ್ ಅವರ ಮಕ್ಕಳ ಕಾರು ಅಪಘಾತ ಸಂಬಂಧ ಎಫ್ಐಆರ್ ದಾಖಲಾಗಿದೆ. ಕಾರು ಚಾಲಕನ ಅಜಾಗರೂಕತೆಯಿಂದಾಗಿ ಅಪಘಾತವಾಗಿದ್ದು, ಆತನ ವಿರುದ್ಧ ಕ್ರಮ ಜರುಗಿಸಬೇಕೆಂದು ನಟಿ ರೋಹಿಣಿ ಸಿಂಗ್ ದೂರು ನೀಡಿದ್ದಾರೆ‌. ದೂರು ಪಡೆದ ಯಲಹಂಕ ಸಂಚಾರ ಪೊಲೀಸರು, ಕಾರು ಚಾಲಕ ಆರ್ಯ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರ ಮಗಳು ರೋಹಿಣಿ ಸಿಂಗ್ (ರಿಷಿಕಾ) ಮತ್ತು ಜೈ ಜಗದೀಶ್ ಮಗಳು ಅರ್ಪಿತಾ ಇಬ್ಬರೂ ಜುಲೈ 28 ರಂದು ಹೆಸರಘಟ್ಟದಲ್ಲಿರುವ ಸ್ನೇಹಿತರ ಮನೆಗೆ ಹೋಗಿದ್ದರಂತೆ.  ಅಲ್ಲಿ ತಡವಾದ ಕಾರಣ ರಾತ್ರಿ ಇಬ್ಬರೂ ಅಲ್ಲೇ ಉಳಿದುಕೊಂಡಿದ್ದರಂತೆ. ಮರುದಿನ ಅಂದ್ರೆ, ಜುಲೈ 29 ಮಂಗಳವಾರ ಬೆಳಗಿನ ಜಾವ ಫಾರ್ಚುನರ್ ಕಾರಿನಲ್ಲಿ ಮನೆಯತ್ತ ಹೊರಟಿದ್ದಾರೆ. ಆ ಕಾರನ್ನು ಆರ್ಯ ಎಂಬಾತ ಚಾಲನೆ ಮಾಡುತ್ತಿದ್ದರಂತೆ.

Fir registered against car driver in director rajendra singh babu rishika singh and actor jai jagadish daughters car accident case
ಅರ್ಪಿತಾ- ರಿಷಿಕಾ ಸಿಂಗ್ ಮತ್ತು ಆ್ಯಕ್ಸಿಡೆಂಟ್ ಆದ ಕಾರು


ಕಾರು ಯಲಹಂಕ ರಸ್ತೆಯ ಮಾವಳ್ಳಿಪುರ ಬಳಿ ಬರುತ್ತಿದ್ದಂತೆಯೇ ಚಾಲಕ ಕಾರಿನ ವೇಗ ಹೆಚ್ಚಿಸಿದ್ದರಂತೆ. ಅವರ ಅಜಾಗರೂಕತೆಯಿಂದಾಗಿಯೇ ತಿರುವಿನಲ್ಲಿ ಕಾರು ನೀಲಗಿರಿ ಮರಕ್ಕೆ ಡಿಕ್ಕಿ ಹೊಡೆದಿತ್ತಂತೆ. ಈ ವೇಳೆ ಕಾರಿನಲ್ಲಿದ್ದ ರೋಹಿಣಿ ಸಿಂಗ್ ಮತ್ತು ಅರ್ಪಿತಾ ಅವರಿಗೆ ಗಾಯಗಳಾಗಿದ್ದು, ಅಲ್ಲಿಗೆ ಬಂದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು ಎಂದು ರೋಹಿಣಿ ಸಿಂಗ್ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಇದನ್ನೂ ಓದಿ: ಎಫ್​ಐಆರ್​ ದಾಖಲಾದ ನಂತರ ಮೊದಲ ಬಾರಿಗೆ ಪ್ರತಿಕ್ರಿಯೆ ಕೊಟ್ಟ ರಿಯಾ ಚಕ್ರವರ್ತಿ: ಇಲ್ಲಿದೆ ವಿಡಿಯೋ..!

ಘಟನೆಯಲ್ಲಿ ರೋಹಿಣಿ ಸಿಂಗ್ ಎಡ ಭುಜ ಹಾಗೂ ಸೊಂಟಕ್ಕೆ ಪೆಟ್ಟು ಬಿದ್ದಿದೆಯಂತೆ. ಇನ್ನೂ ಜೊತೆಯಲ್ಲಿದ್ದ ಅರ್ಪಿತಾ ಅವರಿಗೂ ಗಾಯವಾಗಿದ್ದು, ಸದ್ಯ ಶೇಷಾದ್ರಿಪುರದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಕಾರಣನಾದ ಕಾರು ಚಾಲಕ ಆರ್ಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ರೋಹಿಣಿ ಸಿಂಗ್ ದೂರು ನೀಡಿದ್ದಾರೆ. ಕಾರು ಚಾಲಕ ಆರ್ಯ ವಿರುದ್ದ ಐಪಿಸಿ 279, 338 ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Published by: Anitha E
First published: July 31, 2020, 8:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories