Actress Sreeleela Mother: ಸ್ಯಾಂಡಲ್​​ವುಡ್ ಖ್ಯಾತ ನಟಿಯ ತಾಯಿ ವಿರುದ್ಧ FIR ದಾಖಲು, ಬಂಧನ ಭೀತಿ

ಖ್ಯಾತ ನಟಿ ನಟಿ ಶ್ರೀಲೀಲಾ (Sreeleela) ತಾಯಿ ಸ್ವರ್ಣಲತಾ (Swarnalatha) ವಿರುದ್ಧ ಎಫ್​ಐಆರ್ (FIR) ದಾಖಲಾಗಿದ್ದು ಅವರ ಬಂಧನಕ್ಕೆ ಪೊಲೀಸರು (Police) ಬಲೆ ಬೀಸಿದ್ದಾರೆ.

ಸ್ವರ್ಣಲತಾ

ಸ್ವರ್ಣಲತಾ

  • Share this:
ಸ್ಯಾಂಡಲ್​ವುಡ್ ಖ್ಯಾತ ನಟಿ ನಟಿ ಶ್ರೀಲೀಲಾ (Sreeleela) ತಾಯಿ ಸ್ವರ್ಣಲತಾ (Swarnalatha) ವಿರುದ್ಧ ಎಫ್​ಐಆರ್ (FIR) ದಾಖಲಾಗಿದ್ದು ಅವರ ಬಂಧನಕ್ಕೆ ಪೊಲೀಸರು (Police) ಬಲೆ ಬೀಸಿದ್ದಾರೆ. ವಿವಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದ್ದು ವಿವಿಗೆ ನುಗ್ಗಿ ಗಲಾಟೆ, ರಂಪಾಟ ಮಾಡಿದ್ದಾರೆ. ಗಲಾಟೆಗೆ ತಂದಿದ್ದ ಮಾರಕಾಸ್ತ್ರಗಳೂ ಪತ್ತೆಯಾಗಿವೆ. ಅಲಯನ್ಸ್ ಯೂನಿವರ್ಸಿಟಿ (Alliance University) ಬಳಿ ಮತ್ತೆ ಹೈಡ್ರಾಮ ನಡೆದಿದ್ದು ಬೆಂಗಳೂರು (Bengaluru) ಹೊರವಲಯ ಆನೇಕಲ್ (Anekal) ಸಮೀಪದ ಯೂನಿವರ್ಸಿಟಿ ಬಳಿ ಈ ಬೆಳವಣಿಗೆಗಳು ನಡೆದಿವೆ. ನಾಲ್ಕೈದು ದಿನಗಳ ಹಿಂದೆ ನಡೆದಿರುವ ಹೈಡ್ರಾಮ ತಡವಾಗಿ ಬೆಳಕಿಗೆ ಬಂದಿದ್ದು ಶ್ರೀಲೀಲಾ ಅವರ ತಾಯಿಗೆ ಬಂಧನದ ಭೀತಿ ಎದುರಾಗಿದೆ.  ಸುಧೀರ್ ಅಂಗೂರ್ ಸುಪರ್ದಿಯಲ್ಲಿರುವ ಅಲಯನ್ಸ್ ವಿವಿಗೆ
ಮಧುಕರ್ ಅಂಗೂರ್ ಟೀಮ್ ಅಕ್ರಮ ಪ್ರವೇಶ ಮಾಡಿರುವ ಆರೋಪ ಕೇಳಿ ಬಂದಿದ್ದು ಬೌನ್ಸರ್​ಗಳೊಂದಿಗೆ ವಿವಿ ಒಳ ನುಗ್ಗಿದ ಆರೋಪ ಮಧುಕರ್ ಮೇಲಿದೆ.

ಕೋರ್ಟ್ ಆದೇಶವಿದೆ ಎಂದು ಮಧುಕರ್ ತಂಡ ಯೂನಿವರ್ಸಿಟಿಗೆ ನುಗ್ಗಿತ್ತು.
ಪೊಲೀಸರ ಮಧ್ಯಸ್ಥಿಕೆಯಲ್ಲಿ ಮಧುಕರ್ ಅಂಗೂರ್ ಪಡೆ ಹೊರಕ್ಕೆ ಬಂದಿದ್ದು
ಮಧುಕರ್ ಜೊತೆ ಆಗಮಿಸಿದ್ದ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಅವರೂ ಘಟನೆಯ ಸಂದರ್ಭ ಅಲ್ಲಿದ್ದರು.

ನಾನೇ ಚಾನ್ಸಲರ್ ಆಗ್ಬೇಕು

ನಾನೇ ಯೂನಿವರ್ಸಿಟಿ ಚಾನ್ಸಲರ್ ಎಂದು ಪಟ್ಟು ಹಿಡಿದಿದ್ದ ಸ್ವರ್ಣಲತಾ ಅವರು
ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದ್ದರು. ಕೊನೆಗೂ ಹರಸಾಹಸಪಟ್ಟು ಅವರನ್ನು ಹೊರ ಹಾಕುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

50ಕ್ಕೂ ಹೆಚ್ಚು ಜನರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಸೇರಿ ಹಲವು ಸೆಕ್ಷನ್​​ಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು
ವಿವಿ ರಿಜಿಸ್ಟ್ರಾರ್ ನಿವೇದಿತಾ ಮಿಶ್ರಾ ನೀಡಿದ ದೂರಿನನ್ವಯ ಎಫ್​ಐಆರ್ ದಾಖಲಿಸಲಾಗಿದೆ. ದೂರಿನಲ್ಲಿ ಘಟನೆ ಬಗ್ಗೆ ವಿವರಿಸಲಾಗಿದ್ದು ಬಂದೂಕು ಹಿಡಿದು ಹೊರ ಬಂದಿದ್ದಾರೆ ಎಂದು ಎಫ್​ಐಆರ್​ ನಲ್ಲಿ ಉಲ್ಲೇಖಿಸಲಾಗಿದೆ.

ಅಲಯನ್ಸ್ ವಿವಿ ಹೈಡ್ರಾಮಾ

ಸುಧೀರ್ ಅಂಗೂರ್ ಸುಪರ್ದಿಯಲ್ಲಿರುವ ಅಲಯನ್ಸ್ ವಿವಿಯಲ್ಲಿ ಈ ಬೆಳವಣಿಗೆಗಳು ನಡೆದಿದ್ದು ಮಧುಕರ್ ಅಂಗೂರ್ ಟೀಮ್ ಬೌನ್ಸರ್​ಗಳೊಂದಿಗೆ ಅಕ್ರಮ ಪ್ರವೇಶ ಮಾಡಿದ್ದಾರೆ. ಪೊಲೀಸರ ಮಧ್ಯಸ್ಥಿಕೆಯಲ್ಲಿ ಮಧುಕರ್ ಅಂಗೂರ್ ಪಡೆ ಹೊರಕ್ಕೆ ಹೋಗಿದ್ದು ಮಧುಕರ್ ಜೊತೆ ಆಗಮಿಸಿದ್ದ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ
ನಾನೇ ಯೂನಿವರ್ಸಿಟಿ ಚಾನ್ಸಲರ್ ಎಂದು ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾರೆ.

ಇದನ್ನೂ ಓದಿ: Lakshana: ಮೌರ್ಯ ಆಯ್ತು, ಈಗ ಶೌರ್ಯನ ಕಾಟ; ನಕ್ಷತ್ರಾ ಕಿಡ್ನ್ಯಾಪ್

50ಕ್ಕೂ ಹೆಚ್ಚು ಜನರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿ ಕೇಸ್ ದಾಖಲಿಸಿದ್ದು ವಿವಿ ರಿಜಿಸ್ಟ್ರಾರ್ ನಿವೇದಿತಾ ಮಿಶ್ರಾ ನೀಡಿದ ದೂರಿನನ್ವಯ ಎಫ್​ಐಆರ್ ದಾಖಲಿಸಲಾಗಿದ್ದು
ಇಂಡಿಯನ್ ಆರ್ಮ್ಸ್ ಆ್ಯಕ್ಟ್ 1959(25)ರ ಅಡಿ ಪ್ರಕರಣ ದಾಖಲಾಗಿದೆ.
ಮಧುಕರ್ ಅಂಗೂರ್, ಸ್ವರ್ಣಲತಾ, ರವಿಕುಮಾರ್ ಮನ್ನವ್
ಪದ್ಮನಾಭ್, ಮೋಹನ್, ಪೊಣಚ್ಚ ಸೇರಿ 50 ಮಂದಿ ಮೇಲೆ FIR ದಾಖಲಾಗಿದೆ. ಮಧುಕರ್ ಸೇರಿ 15 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ಮಾಡುತ್ತಿದ್ದಾರೆ.
Published by:Divya D
First published: