• Home
  • »
  • News
  • »
  • entertainment
  • »
  • Actor Snehith: ನಟ ಸ್ನೇಹಿತ್ ವಿರುದ್ಧ ಎಫ್ಐಆರ್, ಉಪ್ಪಿ ಹೇಳಿದ್ದೇನು?

Actor Snehith: ನಟ ಸ್ನೇಹಿತ್ ವಿರುದ್ಧ ಎಫ್ಐಆರ್, ಉಪ್ಪಿ ಹೇಳಿದ್ದೇನು?

ಸ್ಯಾಂಡಲ್​ವುಡ್ ನಟ ಸ್ನೇಹಿತ್ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ನಟ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.

ಸ್ಯಾಂಡಲ್​ವುಡ್ ನಟ ಸ್ನೇಹಿತ್ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ನಟ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.

ಸ್ಯಾಂಡಲ್​ವುಡ್ ನಟ ಸ್ನೇಹಿತ್ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ನಟ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.

  • Share this:

ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಹಾಗೂ ಅಪ್ಪು ಪಪ್ಪು ಖ್ಯಾತಿಯ ನಟ ಸ್ನೇಹಿತ್ (Snehith) ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಎದುರು ಮನೆ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಅನ್ನಪೂರ್ಣ ಎಂಬುವರು ದೂರು ನೀಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು  (Police) ದೂರು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ನಟ (Actor) ಸ್ನೇಹಿತ್ ಕಡೆಯಿಂದಲೂ ಪ್ರತಿದೂರು ದಾಖಲಾಗಿದ್ದು, ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಕಾರು ಚಾಲಕ ರಕ್ಷಿತ್ ಜಾತಿ ನಿಂದನೆ ದೂರು ದಾಖಲು ಮಾಡಿದ್ದಾರೆ. ದೂರುದಾರ ರಕ್ಷಿತ್ ಸೌಂದರ್ಯ ಜಗದೀಶ್ ಕಾರು ಚಾಲಕನಾಗಿದ್ದು, ಮನೆ ಬಳಿ ಕಾರು ಸ್ವಚ್ಛಗೊಳಿಸುವಾಗ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.


ಈಗ ಈ ಘಟನೆಯ ಬಗ್ಗೆ ಸ್ಯಾಂಡಲ್​ವುಡ್ ನಟ ಉಪೇಂದ್ರ ಅವರೂ ಪ್ರತಿಕ್ರಿಯಿಸಿದ್ದಾರೆ. ಸ್ನೇಹಿತ್ ವಿರುದ್ಧ ದಾಖಲಾದ ಎಫ್​ಐಆರ್ ಬಗ್ಗೆ ಮಾತನಾಡಿದ್ದಾರೆ.


ಸೌಂದರ್ಯ ಜಗದೀಶ್ ಹಾಗೂ ನನ್ನ ಪರಿಚಯ, ಸ್ನೇಹ ಸುಮಾರು 25 ವರ್ಷಗಳಷ್ಟು ಹಳೆಯದು. ಅಂದಿನಿಂದ ಇಂದಿನವರೆಗೂ ನಾನು ಕಂಡಂತೆ ಜಗದೀಶ್ ತುಂಬಾ ಮೃದು ಸ್ವಭಾವದವರು. ಸ್ನೇಹ ಜೀವಿ ಅವರ ಶ್ರೀಮತಿ ರೇಖಾ ಮಗ ಸ್ನೇಹಿತ್, ಮಗಳು ಸೌಂದರ್ಯ ಕೂಡಾ ನಮ್ಮ ಕುಟುಂಬಕ್ಕೆ ಪರಿಚಯ. ಇತ್ತೀಚೆಗೆ ಸ್ನೇಹಿತ್ ಬಗ್ಗೆ ಕೇಳಿಬರುತ್ತಿರುವ ಆರೋಪಗಳನ್ನು ಕೇಳಿ ಧಿಗ್ಭ್ರಮೆಯಾಯಿತು. ನಾನು ಕಂಡಂತೆ ಈತ ತುಂಬಾ ವಿನಯವಂತ, ಬೆಳೆಯುತ್ತಿರುವ ಹುಡುಗ, ಏಕೆ ಈ ರೀತಿ ಆರೋಪ ಮಾಡಿದ್ದಾರೆ ಎಂದು ನನಗೆ ತಿಳಿಯದು ಎಂದಿದ್ದಾರೆ.


ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದ ಉಪ್ಪಿ


ಏನಾದರೂ ಭಿನ್ನಾಬಿಪ್ರಾಯಗಳಿದ್ದರೆ ಸಮಾದಾನದಿಂದ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಒಂದಂತೂ ಎಲ್ಲರಿಗೂ ಅನ್ವಯಿಸುವ ಸತ್ಯ.
ಅಜ್ಞಾನದ ಫಲ ಅಹಂಕಾರ, ಅಹಂಕಾರದ ಫಲ ದ್ವೇಶ, ದ್ವೇಶದ ಫಲ ಸರ್ವನಾಶ ಎಂದಿದ್ದಾರೆ.




ಇದನ್ನೂ ಓದಿ: Kantara: ಕಾಂತಾರ ಸಿನಿಮಾ ವೀಕ್ಷಿಸಿ ಪ್ರತಿಕ್ರಿಯಿಸಿದ ಪ್ರಭಾಸ್! ಏನಂದ್ರು?


ದೂರಿನಲ್ಲಿ ಹೇಳಿದ್ದೇನು?


ಪತಿ ಮತ್ತು ನಾನು ಸೆ.24ರಂದು ಮಗಳ ಶಾಲೆಯಲ್ಲಿ ಪೋಷಕರ ಸಭೆ ಮುಗಿಸಿಕೊಂಡು ಕಾರಿನಲ್ಲಿ ಮನೆಗೆ ಬರುತ್ತಿದ್ದಾಗ ಸ್ನೇಹಿತ್‌, ರಕ್ಷಿತ್‌ ಮತ್ತು ಸಹಚರರು ಕಾರಿನಲ್ಲಿ ಹಿಂಬಾಲಿಸಿ ಬಂದು ಮಲ್ಲೇಶ್ವರ 17ನೇ ಅಡ್ಡರಸ್ತೆಯಲ್ಲಿಅಡ್ಡಗಟ್ಟಿದ್ದರು. ನಂತರ ಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನನಗೂ ಅಶ್ಲೀಲವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದರು. ಅಲ್ಲದೆ, ಕಾರಿನಿಂದ ಕೆಳಗಿಳೆದು ಹಲ್ಲೆ ನಡೆಸಿದ್ದಾರೆ. ಬಳಿಕ ಮನೆವರೆಗೆ ಹಿಂಬಾಲಿಸಿಕೊಂಡು ಬಂದು ಜಗಳವಾಡಿ ನಮ್ಮ ಮನೆಗೆಲಸದ ಮಹಿಳೆಯರ ಮೇಲೆ ಅತ್ಯಾಚಾರ ಎಸಗುವುದಾಗಿ ಬೆದರಿಸಿದರು ಎಂದು ಅನ್ನಪೂರ್ಣ ದೂರಿನಲ್ಲಿ ಆರೋಪಿಸಿದ್ದಾರೆ.


ಇದನ್ನೂ ಓದಿ: Kantara: ಕಾಂತಾರ ಸಿನಿಮಾ ವೀಕ್ಷಿಸಿ ಪ್ರತಿಕ್ರಿಯಿಸಿದ ಪ್ರಭಾಸ್! ಏನಂದ್ರು?


ಪೋಷಕರು ಹೇಳಿದ್ದೇನು?


ನಿನ್ನೆಯಷ್ಟೇ ಸೌಂದರ್ಯ ಜಗದೀಶ್ ಮತ್ತು ಪತ್ನಿ ರೇಖಾ ಅವರು ಮಾಧ್ಯಮ ಗೋಷ್ಠಿ ಕರೆದು, ಮಗನ ಬಗ್ಗೆ ಮಾತನಾಡಿದ್ದರು. ಅವನು ಆ ರೀತಿಯ ಹುಡುಗನಲ್ಲ, ಅಂತಹ ಮಕ್ಕಳನ್ನು ಪಡೆಯುವುದಕ್ಕಾಗಿ ನಾವು ಪುಣ್ಯ ಮಾಡಿದ್ದೆವು ಎಂದು ಹೇಳಿದ್ದರು. ಮಗನ ಮೇಲೆ ಯಾಕೆ ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದೂ ಹೇಳಿದ್ದರು. ಇದೀಗ ಸ್ನೇಹಿತ್ ಪರ ರಿಯಲ್ ಸ್ಟಾರ್ ಉಪೇಂದ್ರ ಕೂಡ ಬ್ಯಾಟ್ ಮಾಡಿದ್ದಾರೆ. ಸ್ನೇಹಿತ್ ನ ಒಳ್ಳೆತನವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Published by:Divya D
First published: