ಗಟ್ಟಿಮೇಳ (Gattimela) ನಟ ರಕ್ಷಿತ್ ಆ್ಯಂಡ್ ಗ್ಯಾಂಗ್ (Rakshith And Gang) ಕೆಂಗೇರಿ ಬಳಿಯ ಹೋಟೆಲ್ವೊಂದರಲ್ಲಿ ಕುಡಿದು ಗಲಾಟೆ ಮಾಡಿದ್ದರು. ಅವರು ಮೇಲೆ ಎಫ್ಐಆರ್ (FIR) ಕೂಡ ದಾಖಲಾಗಿದೆ. ಈ ಬಗ್ಗೆ ನಿನ್ನೆ ಹೆಚ್ಚು ಸುದ್ದಿಯಾಗಿತ್ತು ಆದರೆ, ಸಂಜೆ ವೇಳೆಗೆ ನಟ ರಕ್ಷಿತ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ನಾವು ಡ್ರಿಂಕ್ಸ್ (Drinks) ಮಾಡಿರಲಿಲ್ಲ, ಊಟಕ್ಕೆ ಅಂತ ಹೋಗಿದ್ದು. ಗಲಾಟೆಯಲ್ಲ ಆಗಿಲ್ಲ, ಎಫ್ಐಆರ್ ಹಾಕಿಲ್ಲ, ಮೆಡಿಕಲ್ ಟೆಸ್ಟ್ (Medical Test) ಮಾಡಿಸಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಇದೀಗ ನಟ ರಕ್ಷಿತ್ ಆ್ಯಂಡ್ ಟೀಂ ವಿರುದ್ಧ ಎಫ್ಐಆರ್ ದಾಖಲಾಗಿರುವುದಕ್ಕೆ ಸಾಕ್ಷಿ ಸಿಕ್ಕಿದೆ. ನ್ಯೂಸ್ 18ಗೆ ಎಫ್ಐಆರ್ ಪ್ರತಿ (FIR Copy) ಕೂಡ ಸಿಕ್ಕಿದೆ. ರಕ್ಷಿತ್, ಅಭಿಷೇಕ್, ರಂಜನ್, ರಾಕೇಶ್ ಕುಮಾರ್, ರವಿಚಂದ್ರನ್, ಅನುಷ ಹಾಗೂ ಶರಣ್ಯ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇಬ್ಬರು ಯುವತಿಯರು ಜೊತೆಯಲ್ಲಿದ್ದರು ನಟ ರಕ್ಷಿತ್ ರಾತ್ರಿ 1:45ರ ಸಮಯದಲ್ಲಿ ಕೂಗಾಡಿ ಗಲಾಟೆ ಮಾಡಿದ್ದಾರೆ. ನೈಟ್ ಕರ್ಫ್ಯೂ(Night Curfew) ಇದ್ದರು ಜಿಂಜರ್ ಲೇಕ್ ವ್ಯೂ(Ginger Lake View) ತೆರಳಿದ್ದಾರೆ. ತಡರಾತ್ರಿವರೆಗೂ ಅಲ್ಲೇ ಪಾರ್ಟಿ ಮಾಡಿದ್ದಾರಂತೆ. ಇವರ ಕೂಗಾಟ ಕಂಡು ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇಷ್ಟೆಲ್ಲಾ ಆದರೂ ನಟ ರಕ್ಷಿತ್ ಮಾತ್ರ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದರು. ನಾವೇನು ತಪ್ಪು ಮಾಡಿಲ್ಲ ಎಂದು ಹೇಳಿದ್ದರು. ಆದರೆ, ಇವರ ಮೇಲೆ ಎಫ್ಐಆರ್ ದಾಖಲಾಗಿರುವುದು ಖಚಿತವಾಗಿದೆ.
ಜಿಂಜರ್ ಹೋಟೆಲ್ನಲ್ಲಿ ನಿಜಕ್ಕೂ ನಡೆದಿದ್ದೇನು?
ತಡರಾತ್ರಿ 1.30 ಸುಮಾರಿಗೆ ಜಿಂಜರ್ ಲೇಕ್ ವ್ಯೂವ್(Ginger Lake View) ಹೋಟೆಲ್ನಲ್ಲಿ ನಟ ರಕ್ಷಿತ್ ಆ್ಯಂಡ್ ಟೀಮ್ ಗಲಾಟೆ ಮಾಡಿದ್ದಾರೆ. ಈ ವಿಚಾರವಾಗಿ ರಕ್ಷಿತ್, ರಂಜನ್, ರವಿ ಚಂದ್ರನ್, ಅನುಷಾ, ಅಭಿಷೆಕ್, ಶರಣ್ಯ, ರಾಕೇಶ್ ಕುಮಾರ್ ಹೀಗೆ ಒಟ್ಟು ಏಳು ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಗಲಾಟೆ ವಿಚಾರ ತಿಳಿದು ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರ ಜೊತೆಗೆ ರಕ್ಷಿತ್ ಊಟ ಮಾಡುವುದಕ್ಕೆ ಬಂದಿದ್ದೆವು ಲೇಟ್ ಆಯಿತು ಎಂದು ಮಾತಿನ ಚಕಮಕಿ ನಡೆಸಿದ್ದಾರೆ. ಕುಡಿದ ಆರೋಪ ಹಿನ್ನೆಲೆ ಎಲ್ಲರಿಗೂ ಪೊಲೀಸರು ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದು, ರಕ್ಷಿತ್, ರಂಜನ್, ಸೇರಿದಂತೆ 7 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನು ಓದಿ : ನಾವ್ ಎಣ್ಣೆ ಹೊಡ್ದಿರಲಿಲ್ಲ ಊಟಕ್ಕೆ ಅಂತ ಹೋಗಿದ್ದು, FIR ಎಲ್ಲ ಹಾಕಿಲ್ಲ ಎಂದು ಗರಂ ಆದ ನಟ ರಕ್ಷಿತ್!
ಈ ಪ್ರಕರಣದ ಬಗ್ಗೆ ನಟ ರಕ್ಷಿತ್ ಹೇಳಿದ್ದೇನು?
ಹೋಟೆಲ್ನಲ್ಲಿ ಗಲಾಟೆ ಮಾಡಿದ್ದಾರೆ ಎಂಬ ಮಾತನ್ನು ನಟ ರಕ್ಷಿತ್ ಒಪ್ಪಿಕೊಂಡಿಲ್ಲ. ‘ನಾನು ನಿರ್ಮಾಪಕನಾಗಿ ಒಂದು ವರ್ಷ ಆಗುತ್ತೆ. ನಿನ್ನೆ ಸ್ವಲ್ಪ ಬೇಗ ಶೂಟಿಂಗ್ ಮುಗಿಸಿದ್ದೆ. ಹೀಗಾಗಿ 9:30ಗೆ ಸೀರಿಯಲ್ ಶೂಟಿಂಗ್ ಮುಗಿದಿತ್ತು. ನಮ್ಮ ಟೀಂ ಜಿಂಜರ್ ಎನ್ನುವ ಹೋಟೆಲ್ಗೆ ಹೋಗಿದ್ವಿ. ನಾವು ಬರುವುದು ಲೇಟ್ ಆಗುತ್ತೆ. ಊಟ ಎತ್ತಿಡಿ. ಕರ್ಫ್ಯೂ ಇದೆ ಅಂತ ನಮಗೆ ಗೊತ್ತಿದೆ. ತುಂಬಾ ಲೇಟ್ ಆದರೆ, ಬಂದು ಪಾರ್ಸೆಲ್ ತೆಗೆದುಕೊಂಡು ಹೋಗುತ್ತೇವೆ. ಇಲ್ಲವಾದರೆ ಅಲ್ಲೇ ತಿನ್ನುತ್ತೇವೆ ಅಂತ ಹೇಳಿದ್ದೆ. ನಾವು ಹೋಗುವಷ್ಟರಲ್ಲಿ 10.30 ಆಗಿತ್ತು. ಅದೇ ಸಮಯಕ್ಕೆ ಅಲ್ಲಿ ಪೊಲೀಸರು ಬಂದರು. ಇಷ್ಟೇ ನಡೆದಿದ್ದು’ ಎಂದು ನಟ ರಕ್ಷಿತ್ ಹೇಳಿದ್ದರು.
ಇದನ್ನು ಓದಿ: ಎಣ್ಣೆ ಏಟಲ್ಲಿ ಕಿರಿಕ್ ಮಾಡಿದ್ರಾ ನಟ ರಕ್ಷಿತ್? ಖಾಕಿಗೂ ಆವಾಜ್ ಹಾಕಿದ್ರಂತೆ ಗಟ್ಟಿಮೇಳ ಸೀರಿಯಲ್ ಟೀಂ!
ಎಲ್ಲಾ ಗೊತ್ತಿದ್ರೂ ಸುಳ್ಳು ಹೇಳಿದ್ರಾ ನಟ ರಕ್ಷಿತ್?
‘FIR ದಾಖಲಾಗಿಲ್ಲ, ವೈದ್ಯಕೀಯ ಪರೀಕ್ಷೆನೂ ಮಾಡಿಲ್ಲ, ಹಾಗೇನಾದರೂ ಆಗಿದ್ದರೆ, ದಾಖಲೆಗಳು ಇರಬೇಕಿತ್ತು. ಅದ್ಯಾವುದೂ ಇಲ್ಲ’ ಎಂದು ನಟ ರಕ್ಷಿತ್ ಸುಳ್ಳು ಹೇಳಿದರಾ ಎಂಬ ಪ್ರಶ್ನೆ ಕಾಡತೊಡಗಿದೆ, ತಮ್ಮ ಇಮೇಜ್ಗೆ ಯಾವುದೇ ಡ್ಯಾಮೇಜ್ ಆಗದಿರಲಿ ಎಂದು ಈ ರೀತಿ ಹೇಳಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ